ಕಾರ್ಲ್ ಮಾರ್ಕ್ಸ್
Wikipedia ಇಂದ
ಕಾರ್ಲ್ ಹಾಯ್ನ್‌ರಿಕ್ ಮಾರ್ಕ್ಸ್ (ಮೇ ೫, ೧೮೧೮ – ಮಾರ್ಚ್ ೧೪, ೧೮೮೩) ಜರ್ಮನಿಯ ಒಬ್ಬ ತತ್ವಜ್ಞಾನಿ, ರಾಜಕೀಯ ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಸಿದ್ಧಾಂತ ಪರಿಣತ, ಸಮಾಜಶಾಸ್ತ್ರಜ್ಞ, ಸಮತಾವಾದಿ ಮತ್ತು ಕ್ರಾಂತಿಕಾರಿಯಾಗಿದ್ದರು. ಇವರ ವಿಚಾರಗಳೇ ಸಮತಾವಾದದ ತಳಹದಿಗಳೆಂದು ನಂಬಲಾಗಿದೆ. ಮಾರ್ಕ್ಸ್, ತಮ್ಮ ಕಾರ್ಯವಿಧಾನವನ್ನು ೧೮೪೮ರಲ್ಲಿ ಪ್ರಕಟನೆಗೊಂಡ ದ ಕಾಮ್ಯನಿಸ್ಟ್ ಮ್ಯಾನಫೆಸ್ಟೊದ ಮೊದಲನೆಯ ಅಧ್ಯಾಯದ ಮೊದಲ ಪಂಕ್ತಿಯಲ್ಲಿ ಸಂಕ್ಷೇಪಿಸಿದರು: “ಇಲ್ಲಿಯವರೆಗಿನ ಅಸ್ತಿತ್ವದಲ್ಲಿದ್ದ ಎಲ್ಲ ಸಮಾಜದ ಇತಿಹಾಸವು ವರ್ಗ ಹೋರಾಟಗಳ ಇತಿಹಾಸವಾಗಿದೆ.”