ಉಪಗ್ರಹ ವಾಹಕ
ಉಪಗ್ರಹ ವಾಹಕವೆಂದರೆ ರಾಕೆಟ್/ ಉಡ್ಡಯಣ ವಾಹಕ ಎಂದರ್ಥ. ಪ್ರಪಂಚದಲ್ಲಿ ಅಮೇರಿಕ, ರಷ್ಯಾ, ಫ್ರಾನ್ಸ್,ಚೀಣಾ, ಜಪಾನ್ ಮತ್ತು ಭಾರತ ದೇಶಗಳು ಮಾತ್ರ ಉಪಗ್ರಹ ಉಡ್ಡಯಣ ವಾಹಕಗಳನ್ನು ಹೊಂದಿವೆ. ಇವುಗಳ ಸಾಮರ್ಥ್ಯ ಹೆಚ್ಚು-ಕಮ್ಮಿ ಯಿರುತ್ತವೆ. ಸಾಮರ್ಥ್ಯವೆಂದರೆ ಕೊಂಡೊಯ್ಯಬಲ್ಲ ಉಪಗ್ರಹದ ತೂಕ ಮತ್ತು ಕಕ್ಷೆ .ಸಾಮರ್ಥ್ಯದ ಆಧಾರದ ಮೇಲೆ ಉಡ್ಡಯಣ ವಾಹಕಗಳನ್ನು ವಿಂಗಡಿಸಬಹುದು. ಭಾರತದ ಉಡ್ಡಯಣ ವಾಹಕ ಗಳಾವುವೆಂದರೆ
೧. ಎಸ್.ಎಲ್.ವಿ., (SLV) ೨. ಎ.ಎಸ್.ಎಲ್.ವಿ., (ASLV) ೩. ಪಿ.ಎಸ್.ಎಲ್.ವಿ.,(PSLV) ೪. ಜಿ.ಎಸ್.ಎಲ್.ವಿ.,(GSLV) ೫. ಜಿ.ಎಸ್.ಎಲ್.ವಿ.- ಮಾರ್ಕ್-೩ (GSLV-Mark-3)
ಈಗ ಎಸ್.ಎಲ್.ವಿ., ಮತ್ತು ಎ.ಎಸ್.ಎಲ್.ವಿ., ಉಡ್ಡಯಣ ವಾಹಕಗಳು ಚಾಲ್ತಿಯಲ್ಲಿಲ್ಲ. ಇಸ್ರೋ ಸಂಸ್ಥೆಯು ಜಿ.ಎಸ್.ಎಲ್.ವಿ.- ಮಾರ್ಕ್-೩ ಉಡ್ಡಯಣ ವಾಹಕವನ್ನು ಇನ್ನೂ ಅಭಿವೃದ್ದಿಪಡಿಸುತ್ತಲಿದೆ.
ಇಸ್ರೋ ಸಂಸ್ಥೆಯು ಅಭಿವೃದ್ದಿಪಡಿಸಿರುವ ಉಡ್ಡಯಣ ವಾಹಕಗಳಲ್ಲಿ ಘನ ಮತ್ತು ದ್ರವ ಇಂಧನಗಳನ್ನು ಬಳಸುವ ವಿವಿಧ ತಂತ್ರಜ್ಞಾನಗಳನ್ನೊಳಗೊಂಡಿವೆ. ತಾನು ಅಭಿವೃದ್ದಿಪಡಿಸಿರುವ ದ್ರವ ಇಂಧನ ಬಳಸುವ ಇಂಜಿನ್ ಗೆ (ಯಂತ್ರಕ್ಕೆ) ವಿಕಾಸ್ ಇಂಜಿನ್ ಎಂದು ಹೆಸರಿಸಿದೆ. ಇದು UDMH/UH-25 ಇಂದನವನ್ನು ಮತ್ತು N2O4 (ಸಾರಜನಕದ ಟೆಟ್ರಾ ಆಕ್ಸ್ಯ್ ಡ್) ದಹಕ (ಆಮ್ಲಜನಕವನ್ನು ಹೊಂದಿರುವ ವಸ್ತು) ವನ್ನು ಉಪಯೋಗಿಸುತ್ತದೆ. ಈ ಎರಡೂ ಇಂಧನಗಳು ವಿಷಯುಕ್ತ ರಾಸಾಯನಿಕಗಳಾಗಿವೆ. ಇವುಗಳನ್ನು ಬಹಳ ಜಾಗರುಕತೆಯಿಂದ ಉಪಯೋಗಿಸಲಾಗುತ್ತದೆ.
ಪ್ರಪಂಚದಲ್ಲಿ ಚಾಲ್ತಿಯಲ್ಲಿರು ಪ್ರಮುಖ ರಾಕೇಟ್ ಗಳು [ಬದಲಾಯಿಸಿ]
| ದೇಶ | ರಾಕೇಟ್ |
|---|---|
| ಪ್ರಾನ್ಸ್ | ಏರಿಯನ್-೫ |
| ಅಮೇರಿಕ | ಡೆಲ್ಟಾ |
| ಚೀನಾ | ಲಾಂಗ್ ಮಾರ್ಚ್ |
| ರಷ್ಯಾ | ಪ್ರೋಟಾನ್ |