ಮಾರ್ಸ್ ಆರ್ಬಿಟರ್ ಮಿಷನ್

ವಿಕಿಪೀಡಿಯ ಇಂದ
(ಮಂಗಳಯಾನ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಲಾವಿದನ ಕಲ್ಪನೆಯಲ್ಲಿ ಮಂಗಳಗ್ರಹವನ್ನು ಸುತ್ತುತ್ತಿರುವ ಮಂಗಳಯಾನ ಉಪಗ್ರಹ

ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ ಎಂದು ಕರೆಯಲ್ಪಡುವ ಕಾರ್ಯಕ್ರಮವು ಭಾರತವು ಮಂಗಳಗ್ರಹದ ಅನ್ವೇಷಣೆಗೆ ಕಳುಹಿಸುತ್ತಿರುವ ಉಪಗ್ರಹ. ಇದನ್ನು ನವಂಬರ್ ೫,೨೦೧೩ರಂದು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ) ಯಶಸ್ವಿಯಾಗಿ ಉಡ್ಡಯನ ಮಾಡಿತು. ಈ ರೀತಿಯ ಕಾರ್ಯಾಚರಣೆಗೆ ಬೇಕಿರುವ ವಿನ್ಯಾಸ, ಯೋಜನೆ, ನಿರ್ವಹಣೆ, ಮತ್ತು ಕಾರ್ಯಾಚರಣಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಈ 'ತಾಂತ್ರಿಕ ಸಾಮರ್ಥ್ಯ ಪ್ರದರ್ಶಕ' ಯೋಜನೆಯು ಉದ್ದೇಶವಾಗಿದೆ.

ಈ ಉಪಗ್ರಹವನ್ನು ಇಸ್ರೋ ಸಂಸ್ಥೆಯು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡ್ಡಯನ ಕೇಂದ್ರದಿಂದ ಪಿ.ಎಸ್.ಎಲ್.ವಿ ರಾಕೆಟ್ ಸಿ೨೫ ಅನ್ನು ಬಳಸಿ ೫ನೇ ನವೆಂಬರ್ ೨೦೧೩ರಂದು ೦೯:೦೮ UTC (ಭಾರತೀಯ ಕಾಲಮಾನ ೧೪:೩೮)ರ ಸಮಯದಲ್ಲಿ ಉಡ್ಡಯನ ಮಾಡಿತು. ಇದು ಭೂಕಕ್ಷೆಯಲ್ಲಿ ಸುಮಾರು ಒಂದು ತಿಂಗಳಿದ್ದು, ಡಿಸೆಂಬರ್ ೧,೨೦೧೩ರಂದು ಹೆಲಿಯೋಸೆಂಟ್ರಿಕ್ ಮಾರ್ಸ್ ಟ್ರಾನ್ಸ್‍ಫರ್ ಆರ್ಬಿಟ್ {ಮಂಗಳಗ್ರಹದ ದಾರಿಯ ಕಕ್ಷೆ}ಯಲ್ಲಿ ಯಶಸ್ವಿಯಾಗಿ ಇಡಲ್ಪಟ್ಟಿದೆ. ಮುಂದೆ ಸುಮಾರು ಒಂಭತ್ತು ತಿಂಗಳ ಕಾಲ ಮಂಗಳ ಗ್ರಹದತ್ತ ಚಲಿಸುವ ಉಪಗ್ರಹವನ್ನು ಸೆಪ್ಟೆಂಬರ್ ೨೪,೨೦೧೪ರಂದು ಮಂಗಳಗ್ರಹದ ಕಕ್ಷೆಗೆ ಸೇರಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.ಮಾರ್ಸ್ ಆರ್ಬಿಟರ್ ಪ್ರಸ್ತುತ ಭೂಮಿಯಿಂದ ಸುಮಾರು ೭೮೦,೦೦೦ ಮಿಲ್ಲಿಯನ್ ಕಿಲೋಮೀಟರ್(೪೮೦ ಮಿಲ್ಲಿಯನ್ ಮೈಲಿ) ದೂರದಲ್ಲಿದೆ.

ಮಂಗಳಗ್ರಹದಲ್ಲಿ ಜೀವಿಗಳು ವಾಸಿಸುತ್ತಿರುವುದಕ್ಕೆ ಕುರುಹಾಗಿ ಮಿಥೇನ್ ಅನಿಲದ ಇರುವಿಕೆಯನ್ನು ಪತ್ತೆ ಹಚ್ಚುವುದು ಮತ್ತು ಅಲ್ಲಿನ ವಾತಾವರಣವನ್ನು ಅಧ್ಯಯನ ಮಾಡುವುದು ಇದರ ಮುಖ್ಯ ಉದ್ದೇಶಗಳಲ್ಲೊಂದು.(ನೋಡಿ: "ಅಂಗಾರಕನತ್ತ ಅಭಿಯಾನ ಆರಂಭ". )

ಪಿ.ಎಸ್.ಎಲ್.ವಿ ವಿವರ[ಬದಲಾಯಿಸಿ]

PSLV Rocket with satellite To Mars 5-11-2013.jpg .(ಮಂಗಳಯಾನದ ವಿವರ ಸುಲಭವಾಗಿ ಸಿಗಲಿ ಎಂದು ಚಿತ್ರವನ್ನು ಚಿಕ್ಕದುಮಾಡಿಲ್ಲ .ಚಿತ್ರವನ್ನು ಚಿಕ್ಕದು ಮಾಡಿದರೆ ಇದರಲ್ಲಿರುವ ವಿವರಗಳನ್ನು ಪುನಃ ಪಠ್ಯವಾಗಿ ಬರೆಯಬೇಕಾಗುವುದು. ಈಗ ಅದರ ಅಗತ್ಯವಿಲ್ಲ.)

 • ಆಧಾರ : ಇಸ್ರೋ ಫೋಟೋ ಗ್ಯಾಲರಿ -ಗೂಗಲ್


ಸೂರ್ಯ ಕಕ್ಷೆಗೆ ನೌಕೆ[ಬದಲಾಯಿಸಿ]

•Sun, 12/01/2013 (ಐಎಎನ್‌ಎಸ್‌-ಸುದ್ದಿ)ಬೆಂಗಳೂರು

ರಾಷ್ಟ್ರದ ಪ್ರಪ್ರಥಮ ಮಂಗಳ ನೌಕೆಯು ಶನಿವಾರ ಮಧ್ಯರಾತ್ರಿ ಭೂಮಿಯ ಗುರುತ್ವಾಕರ್ಷಣೆಯ ಬಂಧನದಿಂದ ಕಳಚಿಕೊಂಡು ಸೂರ್ಯನ ಪ್ರಭಾವಲಯವನ್ನು ಯಶಸ್ವಿಯಾಗಿ ಪ್ರವೇಶಿಸಿತು.
ರಾತ್ರಿ ೧೨.೪೯ಕ್ಕೆ ಭೂಮಿಯ ಕಕ್ಷೆಯಿಂದ ಹೊರಹೋಗಲು ಆರಂಭಿಸಿದ ಇಸ್ರೋ ನೌಕೆಯು ೨೩ ನಿಮಿಷಗಳ ನಂತರ ಸೌರ ಕಕ್ಷೆಯನ್ನು ಯಶಸ್ವಿಯಾಗಿ ಸೇರಿತು.

ಚೆನ್ನೈ: ಭಾರತದ ಮಹತ್ವಾಕಾಂಕ್ಷಿ ಮಂಗಳ ಕಕ್ಷೆಗಾಮಿ (ಮಾರ್ಸ್ ಆರ್ಬಿಟರ್) ಉತ್ತಮ ಸ್ಥಿತಿಯಲ್ಲಿದ್ದು, ಈ ತಿಂಗಳ ಅಂತ್ಯದಲ್ಲಿ ಅಂಗಾರಕನ ವಾತಾವರಣ ಪ್ರವೇಶಿಸಲು ಸಜ್ಜಾಗಿದೆ ಎಂದು ಇಸ್ರೊ ವಿಜ್ಞಾನಿಗಳು ತಿಳಿಸಿದ್ದಾರೆ.

ಮಂಗಳ ಕಕ್ಷೆಗೆ ನೌಕೆ[ಬದಲಾಯಿಸಿ]

 • ಮಂಗಳ ಕಕ್ಷೆಗಾಮಿ ತನ್ನ ಶೇ.95ರಷ್ಟು ಪ್ರಯಾಣವನ್ನು ಮುಗಿಸಿದೆ. ಅಂದರೆ ಇದುವರೆಗೂ ಇದು 21.1 ಕೋಟಿ ಕಿ.ಮೀ.ದೂರ ಕ್ರಮಿಸಿದೆ. ಮಂಗಳನ ಕಕ್ಷೆ ತಲುಪಲು ಇನ್ನು ಬರೀ 40 ಲಕ್ಷ ಕಿ.ಮೀ. ಪಯಣವಷ್ಟೇ ಬಾಕಿಯಿದೆ. ಕಕ್ಷೆಗಾಮಿ ತನ್ನಲ್ಲಿರುವ ಹಲವು ಉಪಕರಣಗಳು ಉತ್ತಮ ಸ್ಥಿತಿಯಲ್ಲಿವೆ ಎಂಬ ಮಹತ್ವದ ಸಂದೇಶವನ್ನು ಕಳುಹಿಸಿದೆ. ಕಕ್ಷೆಗಾಮಿ ಮತ್ತು ಅದರಲ್ಲಿರುವ ಉಪಕರಣಗಳು ಸುರಕ್ಷಿತವಾಗಿವೆ, ಎಂದು ವಿಜ್ಞಾನಿಗಳು ಇಸ್ರೊ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. 2.2 ಎಂ ಹೈ ಗೇನ್ ಆಂಟೆನಾದ ಮೂಲಕ 21.1 ಕೋಟಿ ಕಿ.ಮೀ.ದೂರದಿಂದ ಈ ಸಂದೇಶವನ್ನು ಕಕ್ಷೆಗಾಮಿ ಕಳುಹಿಸಿದೆ. ಕಕ್ಷೆಗಾಮಿಯಲ್ಲಿ ಇರುವ ಲಿಕ್ವಿಡ್ ಎಂಜಿನ್ ಕಳೆದ 10 ತಿಂಗಳಿನಿಂದ ಬಳಕೆಯಾಗದೆ ಉಳಿದಿದ್ದು, ಸೆ.24ರಂದು ಇದನ್ನು ಹೊತ್ತಿಸುವ ಮೂಲಕ ಮಂಗಳನ ಕಕ್ಷೆಗೆ ಕಕ್ಷೆಗಾಮಿಯನ್ನು ಅಂತಿಮವಾಗಿ ತಳ್ಳಲಾಗುತ್ತದೆ.
 • ಭಾರತದ ಮೊದಲ ಮಂಗಳಯಾನ 450 ಕೋಟಿ ವೆಚ್ಚದ ಯೋಜನೆಯಾಗಿದ್ದು, ಕಳೆದ ವರ್ಷದ ನ.5ರಂದು ಇದನ್ನು ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಉಡಾವಣೆ ಮಾಡಿ ಯಶಸ್ವಿಯಾಗಿ ಭೂ ಕಕ್ಷೆ ಸೇರಿಸಲಾಗಿತ್ತು. ಭೂ ಕಕ್ಷೆಯಲ್ಲಿ ಸುತ್ತಾಡಿಕೊಂಡಿದ್ದ ಕಕ್ಷೆಗಾಮಿಯನ್ನು ಡಿ.1ರಂದು ಮಂಗಳನ ಪಥಕ್ಕೆ ತಿರುಗಿಸಲಾಗಿತ್ತು. ಅವತ್ತಿನಿಂದ ಹಲವಾರು ಬಾರಿ ಕಕ್ಷೆಗಾಮಿಯ ಪಥವನ್ನು ತಿರುಗಿಸಲಾಗಿದೆ ಮತ್ತು ವೇಗವನ್ನು ಉತ್ಕರ್ಷ ಮಾಡಲಾಗಿದೆ. ಅಂತರ ಗ್ರಹ ಸಂಶೋಧನೆಗೆ ಉಪಗ್ರಹ ವಿನ್ಯಾಸದಲ್ಲಿ ಸ್ವಾವಲಂಬನೆ ಸಾಧಿಸುವುದು ಮತ್ತು ಮಂಗಳನ ವಾತಾವರಣ, ಅಲ್ಲಿರಬಹುದಾದ ಖನಿಜಗಳ ಅಧ್ಯಯನ ಈ ಯೋಜನೆಯ ಉದ್ದೇಶ.


ದಿ.16 ಸೆಪ್ಟಂಬರ್, 2014-ಮಂಗಳ ನೌಕೆ[ಬದಲಾಯಿಸಿ]

ಮಂಗಳಯಾನದ ಯೋಜನೆ-(ಇಸ್ರೋದಿಂದ ಬಿಡುಗಡೆ)ಪ್ರಜಾವಾಣಿ ವರದಿ/೧೬-೯-೨೦೧೪
 • ಭಾರತದ ಮೊತ್ತಮೊದಲ ಅಂತರ ಗ್ರಹ ಕಾರ್ಯಕ್ರಮ ‘ಮಂಗಳಯಾನ’ (ಮಾರ್ಸ್ ಆರ್ಬಿಟರ್ ಮಿಷನ್) ನಿಗದಿತ ಯೋಜನೆಯಂತೆ ಸಾಗು­ತ್ತಿದೆ.
 • ‘ನೌಕೆ ಈಗ ಭೂಮಿಯಿಂದ 21.5 ಕೋಟಿ ಕಿ.ಮೀ. ದೂರ ಕ್ರಮಿಸಿದೆ. ಇಸ್ರೊ ಕೇಂದ್ರದಿಂದ ನೌಕೆಗೆ ಸಂಕೇತ ತಲುಪಲು 12 ನಿಮಿಷ ಹಿಡಿಯುತ್ತದೆ. ಇದೇ 24ಕ್ಕೆ 22.4 ಕೋಟಿ ಕಿ.ಮೀ. ದೂರ ತಲುಪಲಿದೆ. ಸದ್ಯ ನೌಕೆಯ ವೇಗ ಸೆಕೆಂಡ್‌ಗೆ 5.2 ಕಿ.ಮೀ. ಅಂದು ಈ ವೇಗವನ್ನು 4.1 ಕಿ.ಮೀ.ಗೆ ತಗ್ಗಿಸಿ ಮಂಗಳನ ಕಕ್ಷೆಗೆ ಸೇರಿಸಲಾಗುವುದು. ಈ ಕಾರ್ಯಾಚರಣೆಗೆ ಇಸ್ರೊ ಬ್ಯಾಲಾಳು ಕೇಂದ್ರ, ಅಮೆರಿಕದ ಗೋಲ್ಡ್ ಸ್ಟೋನ್‌, ಸ್ಪೇನ್‌ನ ಮ್ಯಾಡ್ರಿಡ್‌, ಆಸ್ಟ್ರೇಲಿಯದ ಕ್ಯಾನ್‌ಬೆರಾ ಕೇಂದ್ರಗಳ ಮೂಲಕ ಅಗತ್ಯ ನೆರವು ನೀಡ­ಲಾಗುವುದು’ ಇಸ್ರೊ) ವೈಜ್ಞಾನಿಕ ಸಲಹೆಗಾರ ವಿ. ಕೋಟೇಶ್ವರ ರಾವ್‌ ಎಂದರು.
 • ಸಂಕೇತಗಳ ಏಕಮುಖದ ಪ್ರಯಾಣಕ್ಕೇ ತಗಲುವ ಅವಧಿ 12 ನಿಮಿಷ.
ಇಸ್ರೊ ನಡೆ...
 • ಯೋಜನಾ ವೆಚ್ಚ ₨450 ಕೋಟಿ
 • 300 ದಿನಗಳ ಸಂಚಾರ
 • 2013ರ ನವೆಂಬರ್‌ 5ಕ್ಕೆ ಉಡಾವಣೆ
 • ನ.7,8,9,11,12,16: ನೌಕೆಯನ್ನು ಕಕ್ಷೆಗೆ ಏರಿಸಲು ಆರು ಹಂತದ ಪೂರಕ ಪ್ರಕ್ರಿಯೆ
 • ಡಿಸೆಂಬರ್‌ 4: ಸೂರ್ಯನ ಪ್ರಭಾವಲಯಕ್ಕೆ ನೌಕೆ
 • ಡಿಸೆಂಬರ್‌ 11: ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯ (ಟಿಸಿಎಂ–1)
 • ಫೆ.2: 100 ದಿನದ ಯಶಸ್ವಿ ಪಯಣ
 • ಏಪ್ರಿಲ್‌9: ಅರ್ಧ ಹಾದಿ ಕ್ರಮಿಸಿದ ನೌಕೆ
 • ಜೂನ್‌ 12: ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯ (ಟಿಸಿಎಂ–2)
 • ಜುಲೈ 4: ಶೇ 75ರಷ್ಟು ದೂರ ಕ್ರಮಿಸಿದ ನೌಕೆ
 • ಆಗಸ್ಟ್‌ 28: ಶೇ 98ರಷ್ಟು ಯಾನ ಪೂರ್ಣ
 • ಸೆಪ್ಟೆಂಬರ್‌ 22: ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯ (ಟಿಸಿಎಂ–2)
 • ಸೆಪ್ಟೆಂಬರ್‌ 24: ಮಂಗಳನ ಕಕ್ಷೆಗೆ ನೌಕೆ ಪ್ರವೇಶ
ಜತೆಗಿದೆ ಸಾಧನ ಸಲಕರಣೆ
 • ‘ಮಂಗಳನ ಅನ್ವೇಷಣೆಗಾಗಿ ನೌಕೆಯು ಒಟ್ಟು ೧೫ ಕೆ.ಜಿ ತೂಕದ 5 ಸಾಧನಗ­ಳನ್ನು ಕೊಂಡೊಯ್ದಿದೆ. ಇದರಲ್ಲಿ ‘ಲೈಮನ್ ಆಲ್ಫಾ ಫೋಟೋ­ಮೀಟರ್’­(ಎಲ್‌ಎಪಿ) ಅನಿಲಗಳ ಆವಿ ಬಗ್ಗೆ ಬೆಳಕು ಚೆಲ್ಲಲಿದೆ. ಮಾರ್ಸ್ ಮಿಥೇನ್ ಸಂವೇದ­ಕವು (ಎಂಎಸ್‌ಎಂ) ಜೀವಕಣಗಳು ಎಂದಾದರೊಮ್ಮೆ ಅಲ್ಲಿ ಇದ್ದವೇ ಅಥವಾ ಈಗಲೂ ಇವೆಯೇ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನ ಮಾಡಲಿದೆ’ ಎಂದರು.
ಆರು ತಿಂಗಳು ಕಾರ್ಯ’
 • ‘ಒಟ್ಟಾರೆ ಅಂಗಾರಕನ ವಾತಾವರಣ, ಮೇಲ್ಮೈ ಲಕ್ಷಣ, ಗ್ರಹದ ವಿಕಾಸ, ಜೀವಕಣಗಳ ಸಂಭಾವ್ಯ ಅಸ್ತಿತ್ವ ಮತ್ತಿತರ ಪ್ರಶ್ನೆಗಳಿಗೆ ಉತ್ತರ ದೊರೆಯುವ ನಿರೀಕ್ಷೆ ಇದೆ. ಮಂಗಳನ ಕಕ್ಷೆ ಸೇರಿದ ನಂತರ ನೌಕೆಯು ೬ ತಿಂಗಳ ಕಾಲ ಕಾರ್ಯ ನಿರ್ವಹಿಸಲಿದೆ’ ಎಂದು ಸೋಮವಾರ(೧೫-೯-೨೦೧೪) ಕೋಟೇಶ್ವರ ರಾವ್‌ ತಿಳಿಸಿದರು.

((ಇಸ್ರೋದಿಂದ ಬಿಡುಗಡೆ)ಪ್ರಜಾವಾಣಿ ವರದಿ/೧೬-೯-೨೦೧೪--[[೧]])

ನೋಡಿ[ಬದಲಾಯಿಸಿ]