ಅಜ್ಮೇರ್ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಜ್ಮೇರ್ ಸಿಂಗ್
Bornಫ಼ೆಬ್ರವರಿ ೧,೧೯೪೦
ಕುಪ್ ಕಲಾನ್ ಗ್ರಾಮ, ಸಂಗ್ರೂರ್ ಜಿಲ್ಲೆ
Diedಜನವರಿ ೨೬, ೨೦೧೦
ಚಾಂಡಿಗಢ್
Resting placeಪಂಜಾಬ್
Nationalityಭಾರತೀಯ
Occupation(s)ಓಟಗಾರ, ಶೈಕ್ಶಣಿಕ
Spouseಸರ್ದರ್ನಿ ಜಸ್ವನ್ತ್ ಕೌರ್
Awardsಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅರ್ಜುನ ಪ್ರಶಸ್ತಿ
Websitehttps://en.wikipedia.org/wiki/Ajmer_Singh
ಒಲಂಪಿಕ್ ಪದಕ ಪಟ್ಟಿ
ಪುರುಷರ ಅಥ್ಲೆಟಿಕ್ಸ್
Representing  ಭಾರತ
೧೯೬೬ ರ ಏಷ್ಯನ್ ಗೇಮ್ಸ್
Gold medal – first place ೧೯೬೬ ಬ್ಯಾಂಕಾಕ್ ೪೦೦ ಮೀ
Silver medal – second place ೧೯೬೬ ಬ್ಯಾಂಕಾಕ್ ೨೦೦ ಮೀ


ಅಜ್ಮೇರ್ ಸಿಂಗ್ (೧ ಫೆಬ್ರವರಿ ೧೯೪೦ - ೨೬ ಜನವರಿ ೨೦೧೦) ೧೯೬೪ ರ ಬೇಸಿಗೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಿದ ಭಾರತೀಯ ಓಟಗಾರರಾಗಿದ್ದರು, ಬ್ಯಾಂಕಾಕ್ನಲ್ಲಿ ನಡೆದ ೧೯೬೬ ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ವಿಜೇತರಾಗಿದ್ದರು, ನಂತರ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.[೧]


ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಅವರು ೧೯೪೨ ರಲ್ಲಿ ಪಂಜಾಬ್‍ನ ಸಂಗ್ರೂರ್ ಜಿಲ್ಲೆಯ ಕುಪ್ ಕಲಾನ್ ಗ್ರಾಮದಲ್ಲಿ ಕಾರ್ಟರ್ ಸಿಂಗ್ ಔಲಾಕ್ ಮತ್ತು ಬಚಾನ್ ಕೌರ್ ಔಲಾಖ್ನ ಜಾಟ್ ಸಿಖ್ ರೈತ ಕುಟುಂಬದಲ್ಲಿ ಜನಿಸಿದರು.[೨] ಅವರು ಮಲೇರ್‌ಕೋಟ್ಲಾ ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು ನಂತರ ಭೌತಿಕ ಶಿಕ್ಷಣದ ಪದವಿ(ಬಿ.ಪಿ.ಇ) ಲಕ್ಷ್ಮೀಬಾಯಿ ನ್ಯಾಷನಲ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್, ಗ್ವಾಲಿಯರ್‌ನಲ್ಲಿ ಮಾಡಿದರು. ಇದರ ನಂತರ ಪಂಜಾಬ್ ವಿಶ್ವವಿದ್ಯಾಲಯದಿಂದ ಎಮ್.ಎ ಮತ್ತು ಅಂತಿಮವಾಗಿ, ಅವರು ಪಂಜಾಬ್ ವಿಶ್ವವಿದ್ಯಾನಿಲಯ ಚಂಡೀಗಢದಲ್ಲಿ ತಮ್ಮ ಪಿಎಚ್‌ಡಿ ಮಾಡಿದರು.[೧]ಅಜ್ಮೀರ್ ಸಿಂಗ್ ಅವರು ದೈಹಿಕ ಶಿಕ್ಷಣದಲ್ಲಿ ಪಿಎಚ್‌ಡಿ ಪದವಿಯನ್ನು ಹೊಂದಿರುವ ಏಕೈಕ ಭಾರತೀಯ ವ್ಯಕ್ತಿಯಾಗಿದ್ದಾರೆ. ಇದಕ್ಕಾಗಿ ಅವರಿಗೆ ಭಾರತ ಸರ್ಕಾರದ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವೃತ್ತಿ ಜೀವನ[ಬದಲಾಯಿಸಿ]

೧೯೬೪ ರ ಟೋಕಿಯೋ ಒಲಿಂಪಕ್ಸ್ ನಲ್ಲಿ ಭಾಗವಹಿಸಿದರು ಮತ್ತು ಬ್ಯಾಂಕಾಕ್ನಲ್ಲಿ ನಡೆದ ೧೯೬೬ ರ ಏಷ್ಯನ್ ಕ್ರೀಡಾಕೂಟದಲ್ಲಿ, ಇವರು ೪೦೦ ಮೀಟರ್ ಓಟದಲ್ಲಿ ಚಿನ್ನವನ್ನು ಮತ್ತು ೨೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ಗಳಿಸಿದರು.[೩] ಫೆಡರಲ್ ಸರ್ಕಾರಕ್ಕೆ ವಿಶೇಷ ಶಿಕ್ಷಣ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರರ. ಅವರು ಲಕ್ಷ್ಮೀಬಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜುಕೇಶನ್, ಗ್ವಾಲಿಯರ್ ಮತ್ತು ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢನಲ್ಲಿ ಮೌಲಾನಾ ಅಬುಲ್ ಕಲಾಂ ಅಧ್ಯಕ್ಷರೊಂದಿಗೆ ಕ್ರೀಡಾ ನಿರ್ದೇಶಕರಾಗಿಯೂ ಇದ್ದರು.[೩][೪]

ಅವರು ೨೬ ಜನವರಿ ೨೦೧೦ ರ ಬೆಳಿಗ್ಗೆ, ತಮ್ಮ ೭೦ ನೇ ವಯಸ್ಸಿನಲ್ಲಿ ಚಂಡೀಗಢದಲ್ಲಿ ನಿಧನರಾದರು.[೫] ಮತ್ತು ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.[೧]ಅವರಿಗೆ ೧೯೬೬ ರಲ್ಲಿ ಭಾರತ ಸರ್ಕಾರದ ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿ, ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.[೬]

ಸಾಯುವ ಎರಡು ವರ್ಷಗಳ ಮೊದಲು, ಅಜ್ಮೇರ್ ಚಂಡೀಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಗೆ ವೈದ್ಯಕೀಯ ಸಂಶೋಧನೆಗಾಗಿ ತನ್ನ ದೇಹವನ್ನು ದಾನ ಮಾಡುವುದಾಗಿ ಘೋಷಿಸಿದ್ದರು. ಅಲ್ಲದೆ, ಅಜ್ಮೀರ್ ಅವರ ನೆನಪಿಗಾಗಿ ಯಾವುದೇ ಸ್ಮಾರಕಗಳನ್ನು ನಿರ್ಮಿಸಬಾರದು ಎಂದು ಘೋಷಿಸಿದ್ದರು. ಅವರ ಎರಡೂ ಆಸೆಗಳನ್ನು ಅವರ ಕುಟುಂಬ ಪೂರೈಸಿದೆ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ಟೆಂಪ್ಲೇಟು:Cite Sports-Reference
  2. Olympian athlete Prof Ajmer Singh is dead sports wire, 26 January 2010.
  3. ೩.೦ ೩.೧ "Olympian athlete Ajmer Singh passed away". The Times of India. 27 January 2010. Archived from the original on 28 September 2013.
  4. "Olympian athlete Ajmer Singh dead". Indian Express. 28 January 2010. Retrieved 16 May 2012.
  5. "Olympian athlete's body donated for research". CNN-IBN. 28 January 2010. Archived from the original on 13 July 2012.
  6. "List of Award winners up to 2004". Archived from the original on 25 December 2007. Retrieved 1 June 2008.{{cite web}}: CS1 maint: bot: original URL status unknown (link)