ವಿಷಯಕ್ಕೆ ಹೋಗು

ಹೇಮಚಂದ್ರ ಬೋಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Henry Classification System of fingerprint.[][][]ಫಿಂಗರ್ ಪ್ರಿಂಟ್ ಬ್ಯೂರೊ ಎಂದು ಹೆಸರು ಬದಲಾಗುವ ಮುಂಚೆ ಕಲ್ಕತ್ತಾ ಆಂಥ್ರೊಪೊಮೆಟ್ರಿಕ್ ಬ್ಯೂರೋ ಎಂಬ ಹೆಸರಿನಲ್ಲಿದ್ದ ಸಂಸ್ಥೆಯಲ್ಲಿ ರಾಯ್ ಬಹದ್ದೂರ್ ಹೇಮ್ ಚಂದ್ರ ಬೋಸ್ ಮತ್ತು ಅವರೊಂದಿಗೆಅಜೀಜುಲ್ ಹಕ್ ಎಂಬ ಇಬ್ಬರು ಭಾರತೀಯ ಉದ್ಯೋಗಿಗಳು ಎಡ್ವರ್ಡ್ ಹೆನ್ರಿಯ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಿದ್ದರು. ಬೆರಳಚ್ಚು ವರ್ಗೀಕರಣ ವ್ಯವಸ್ಥೆಯ ಪ್ರಾರಂಭಿಕ ಅಭಿವೃದ್ಧಿಯ ಕೊಡುಗೆಯನ್ನು ಇವರಿಬ್ಬರಿಗೆ ಸಮರ್ಪಿಸಲಾಗಿದ್ದು, ಕಾಲಾನಂತರದಲ್ಲಿ ಈ ವರ್ಗೀಕರಣಕ್ಕೆ ಅವರಿಬ್ಬರ ಮೇಲ್ವಿಚಾರಕರಾಗಿದ್ದ ಹೆನ್ರಿಯವರ ಹೆಸರನ್ನು ನೀಡಲಾಗಿದೆ. ಈ ವರ್ಗೀಕರಣವನ್ನು ಹೆನ್ರಿ ಬೆರಳಚ್ಚಿನ ವರ್ಗೀಕರಣ ವ್ಯವಸ್ಥೆ ಎಂದು ಕರೆಯಲಾಗಿದೆ. (Henry Classification System of fingerprint.

ಜೀವನ ಮತ್ತು ವೃತ್ತಿ

[ಬದಲಾಯಿಸಿ]

ಬೋಸ್ ಅವರು ೧೮೬೭ ರಲ್ಲಿ ಆಗಿನ ಬಂಗಾಳ ಪ್ರೆಸಿಡೆನ್ಸಿಯ ನಾಡಿಯಾ ಜಿಲ್ಲೆಯ ದಮುರ್ಹುದಾ ಉಪಜಿಲ್ಲೆಯಲ್ಲಿ, ಪ್ರಸ್ತುತ ಬಾಂಗ್ಲಾದೇಶದ ಚುವಾದಂಗಾ ಜಿಲ್ಲೆಯ, ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಪೋಸ್ಟ್‌ಮ್ಯಾನ್. ೧೮೮೩ ರಲ್ಲಿ ಜೆಸ್ಸೋರ್ ಜಿಲ್ಲಾ ಶಾಲೆಯಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದರು. ನಂತರ, ಅವರು ಕಲ್ಕತ್ತಾದ ಸಂಸ್ಕೃತ ಕಾಲೇಜಿನಲ್ಲಿ ನ್ಯಾಟೋರ್ ರಾಜ್ ವಿದ್ಯಾರ್ಥಿವೇತನ ಪಡೆದು ಗಣಿತವನ್ನು ಅಧ್ಯಯನ ಮಾಡಿದರು ಮತ್ತು ೧೮೮೮ರಲ್ಲಿ ವಿಜ್ಞಾನದಲ್ಲಿ ಸ್ನಾತಕ ಪದವಿ ಪಡೆದರು. ೧೮೮೯ರಲ್ಲಿ ಅವರು ಬಂಗಾಳ ಪೊಲೀಸ್ ಸೇವೆಗೆ ಸಬ್ ಇನ್ಸ್‌ಪೆಕ್ಟರ್ ಆಗಿ ಸೇರಿದರು. ೧೮೮೯ ಮತ್ತು ೧೮೯೪ ರ ನಡುವೆ ಅವರು ಮಧುಬನಿ, Saharsa, Pabna ಮತ್ತು Narail (ಆಗಿನ ಸಂಯುಕ್ತ ಬಂಗಾಳ.) ಮುಂತಾದ ಜಿಲ್ಲೆಗಳ ಪೊಲೀಸ ಕಚೇರಿಗಳಲ್ಲಿ ತನಿಖಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.ಈ ಅವಧಿಯಲ್ಲಿ ಅವರ ತೀವ್ರ ಪತ್ತೇದಾರಿ ಕೌಶಲ್ಯವನ್ನು ಗಮನಿಸಿ ೧೮೯೪ ರಲ್ಲಿ ಅವರನ್ನು ಕಲ್ಕತ್ತಾದ ಬಂಗಾಳ ಪೊಲೀಸರ ಅಪರಾಧ ತನಿಖಾ ವಿಭಾಗ ಅಥವಾ ಸಿಐಡಿಯ ನಿರ್ದೇಶನಾಲಯದಲ್ಲಿ ನೇಮಿಸಲಾಯಿತು. ಅಲ್ಲಿ ಅವರು ಬೆರಳಚ್ಚು ವ್ಯವಸ್ಥೆಯಲ್ಲಿ ಕೆಲಸ ಮಾಡಿದರು. ಅವರು ೧೯೧೪-೧೯೧೭ರಲ್ಲಿ ಸರ್ದಾ ಪೊಲೀಸ್ ತರಬೇತಿ ಶಾಲೆಯಲ್ಲಿ ಬೋಧಕರಾಗಿದ್ದ ಅಲ್ಪಾವಧಿಯನ್ನು ಹೊರತುಪಡಿಸಿ ೧೯೨೫ರಲ್ಲಿ ಡಿವೈಎಸ್‌ಪಿಯಾಗಿ ನಿವೃತ್ತರಾಗುವವರೆಗೂ ಸಿಐಡಿ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡಿದರು. ಅವರ ನಿವೃತ್ತಿಯ ನಂತರ ಅವರು ತಮ್ಮ ಕುಟುಂಬದೊಂದಿಗೆ ಕಲ್ಕತ್ತಾದ ಮಾಣಿಕ್ತಾಲಾದಲ್ಲಿ ೧೯೪೯ನೇ ಇಸವಿಯ ಏಪ್ರಿಲ್ ತಿಂಗಳ ೩೧ನೇ ತಾರೀಕಿನಅಂದು ಸಹಜ ಕಾರಣಗಳಿಂದಾಗಿ ನಿಧನರಾಗುವವರೆಗೂ ಅವರು ಒಂದು ಸಣ್ಣ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದರು. ಅವರ ಮೊಮ್ಮಗ ಅಮಿಯ ಭೂಸನ್‌ ಬೋಸ್‌ ಪಶ್ಚಿಮ ಬಂಗಾಳದ ಪೊಲೀಸ್ ಸೇವೆಗೆ ೧೯೫೨ನೇ ತಂಡದ ಪಶ್ಚಿಮ ಬಂಗಾಳದ ನಾಗರಿಕ ಸೇವೆಯಡಿ ಸೇರಿದರು. ಮತ್ತು 1988 ರಲ್ಲಿ ಪಶ್ಚಿಮ ಬಂಗಾಳ ಪೊಲೀಸ್‌ ಡಿಐಜಿಯಾಗಿ ನಿವೃತ್ತರಾದರು. [] [] []

ಹಕ್ ಮತ್ತು ಬೋಸ್ (1897)

[ಬದಲಾಯಿಸಿ]

12 ಜೂನ್ 1897 ರಂದು, ಗವರ್ನರ್ ಜನರಲ್ ಆಫ್ ಇಂಡಿಯಾ ಕೌನ್ಸಿಲ್ ಕ್ರಿಮಿನಲ್ ದಾಖಲೆಗಳ ವರ್ಗೀಕರಣಕ್ಕೆ ಬೆರಳಚ್ಚುಗಳನ್ನು ಬಳಸಬೇಕೆಂಬ ಸಮಿತಿಯ ವರದಿಯನ್ನು ಅನುಮೋದಿಸಿತು. ಆ ವರ್ಷದ ನಂತರ, ಕೋಲ್ಕತ್ತಾ ಆಂಥ್ರೊಪೊಮೆಟ್ರಿಕ್ ಬ್ಯೂರೋ ವಿಶ್ವದ ಮೊದಲ ಬೆರಳಚ್ಚು ಬ್ಯೂರೋ ಎಂದಾಯಿತು. ಬೋಸ್ ಅವರು ಅಜಿಜುಲ್ ಹಕ್ ಅವರೊಂದಿಗೆ ಕಲ್ಕತ್ತಾ ಆಂಥ್ರೊಪೊಮೆಟ್ರಿಕ್ ಬ್ಯೂರೋದಲ್ಲಿ (ಫಿಂಗರ್ ಪ್ರಿಂಟ್ ಬ್ಯೂರೋ ಆಗುವ ಮೊದಲು) ಕೆಲಸ ಮಾಡುತ್ತಿದ್ದರು. ಅವರು ಮತ್ತು ಹಕ್ ಹೆನ್ರಿ ವರ್ಗೀಕರಣ ವ್ಯವಸ್ಥೆಯ ಪ್ರಾಥಮಿಕ ಅಭಿವೃದ್ಧಿಗೆ ಮನ್ನಣೆ ಪಡೆದಿರುವ ಇಬ್ಬರು ಭಾರತೀಯ ಬೆರಳಚ್ಚು ತಜ್ಞರು (ಈ ವರ್ಗೀಕರಣ ವ್ಯವಸ್ಥೆಗೆ ಅವರ ಮೇಲ್ವಿಚಾರಕರಾದ ಎಡ್ವರ್ಡ್ ರಿಚರ್ಡ್ ಹೆನ್ರಿ ಅವರಹೆಸರನ್ನಿಡಲಾಗಿದೆ). ಹೆನ್ರಿ ವರ್ಗೀಕರಣ ವ್ಯವಸ್ಥೆಯನ್ನು ಈಗಲೂ ಕೂಡ ಇಂಗ್ಲಿಷ್ ಮಾತನಾಡುವ ಎಲ್ಲ ದೇಶಗಳಲ್ಲಿ ಬಳಸಲಾಗುತ್ತದೆ (ಪ್ರಮುಖವಾಗಿ ಸ್ಕ್ಯಾನ್ ಮಾಡಿರದ ಮತ್ತು ಗಣಕೀಕೃತಗೊಳಿಸಿರದ ಕಾಗದದ ಕಡತಗಳನ್ನು ವೀಕ್ಷಿಸಲು ಮಾನವಚಾಲಿತ ಕಡತ ವ್ಯವಸ್ಥೆಯಲ್ಲಿ ಇದನ್ನು ಬಳಸಲಾಗುತ್ತದೆ.)

ಗ್ರಂಥಸೂಚಿ

[ಬದಲಾಯಿಸಿ]
  • ಫಿಂಗರ್ ಪ್ರಿಂಟ್ ಕಂಪ್ಯಾನಿಯನ್ (೧೯೨೭) []
  • ಅಜೀಜುಲ್ ಹಕ್
  • ಎಡ್ವರ್ಡ್ ಹೆನ್ರಿ
  • ಹೆನ್ರಿ ವರ್ಗೀಕರಣ ವ್ಯವಸ್ಥೆ

ಉಲ್ಲೇಖಗಳು

[ಬದಲಾಯಿಸಿ]
  1. Karlekar, Malavika (28 October 2007). "MAPS AND MUGSHOTS- How visual aids became an essential tool of imperial control". www.telegraphindia.com. Retrieved 26 February 2009.
  2. "NCRB - Empowering Indian Police with IT". ncrb.nic.in. Archived from the original on 9 April 2009. Retrieved 26 February 2009.
  3. "Finger Print Bureau - CID, West Bengal, India". cidwestbengal.gov.in. Archived from the original on 12 March 2009. Retrieved 26 February 2009.
  4. Karlekar, Malavika (28 October 2007). "MAPS AND MUGSHOTS – How visual aids became an essential tool of imperial control". www.telegraphindia.com. Retrieved 26 February 2009.
  5. "NCRB – Empowering Indian Police with IT". ncrb.nic.in. Archived from the original on 9 April 2009. Retrieved 26 February 2009.
  6. "Finger Print Bureau – CID, West Bengal, India". cidwestbengal.gov.in. Archived from the original on 12 March 2009. Retrieved 26 February 2009.
  7. Bose, Hem Chandra (1927). Finger Print Companion: [a Practical Handbook]. Retrieved 26 February 2009.