ಹುಕ್‌ನ ನಿಯಮ
ಭೌತಶಾಸ್ತ್ರದಲ್ಲಿ, ಹುಕ್‌ನ ನಿಯಮವು ಪ್ರಾಯೋಗಿಕ ನಿಯಮವಾಗಿದೆ. ಇದರ ಪ್ರಕಾರ, ಒಂದು ಸ್ಪ್ರಿಂಗ್ ಅನ್ನು ರೇಖೀಯವಾಗಿ ಕೆಲವು (x) ಮಾಪಕಗಳಷ್ಟು ದೂರದವರೆಗೆ ಹಿಗ್ಗಿಸಲು ಅಥವಾ ಸಂಕುಚಿತಗೊಳಿಸಲು ಅಗತ್ಯವಿರುವ ಬಲವು (F) Fs = kx, ಎಂದು ಹೇಳುತ್ತದೆ. ಇಲ್ಲಿ,k ಎನ್ನುವುದು ಸ್ಪ್ರಿಂಗ್‍ನ ಗುಣ ಹೇಳುವ ಒಂದು ಸ್ಥಿರಾಂಕ ವಾಗಿರುತ್ತದೆ ಮತ್ತು ಇಲ್ಲಿ x ಎನ್ನುವುದು ಒಟ್ಟು ಸಂಭವನೀಯ ವಿರೂಪಕ್ಕೆ ಹೋಲಿಸಿದರೆ ಬಹಳ ಚಿಕ್ಕದಾಗಿದೆ. ಈ ನಿಯಮಕ್ಕೆ 17ನೇ ಶತಮಾನದ ಬ್ರಿಟಿಷ್ ಭೌತಶಾಸ್ತ್ರಜ್ಞ ರಾಬರ್ಟ್ ಹುಕ್ ಅವರ ಹೆಸರಿಡಲಾಗಿದೆ. ಅವರು ಇದಕ್ಕೆ ಮೊದಲು 1676 ರಲ್ಲಿ ಈ ನಿಯಮವನ್ನು ಲ್ಯಾಟಿನ್ ಅಕ್ಷರಪಲ್ಲಟ(ಅನಗ್ರಾಮ್)ದಂತೆ ಹೇಳಿದ್ದಾರೆ.[೧][೨] ಅವನು ತನ್ನ ಅನಗ್ರಾಮ್‌ನ ಪರಿಹಾರವನ್ನು 1678ರಲ್ಲಿ("ಹಿಗ್ಗಿದಂತೆ ಬಲ" ಅಥವಾ "ಹಿಗ್ಗುವಕೆಯು ಬಲಕ್ಕೆ ಅನುಪಾತದಲ್ಲಿರುತ್ತದೆ"). 1660 ರಿಂದ ಈ ನಿಯಮದ ಬಗ್ಗೆ ತನಗೆ ಅರಿವಿತ್ತು ಎಂದು 1678 ರ ಕೃತಿಯಲ್ಲಿ ಹುಕ್ ಹೇಳುತ್ತಾರೆ.
ಸ್ವಲ್ಪ ಮಟ್ಟಿಗೆ, ಎತ್ತರದ ಕಟ್ಟಡದ ಮೇಲೆ ಗಾಳಿ ಬೀಸುವುದು ಮತ್ತು ಸಂಗೀತಗಾರ ಗಿಟಾರ್‌ನ ಸ್ಟ್ರಿಂಗ್ ಅನ್ನು ಎಳೆಯುವುದು ಮುಂತಾದ ಸ್ಥಿತಿಸ್ಥಾಪಕ ವಸ್ತುವು ವಿರೂಪಗೊಂಡ ಅನೇಕ ಇತರ ಸಂದರ್ಭಗಳಲ್ಲಿ ಹುಕ್‌ನ ಸಮೀಕರಣವು ಹೊಂದಿಕೊಳ್ಳುವುದು. ಈ ಸಮೀಕರಣವನ್ನು, ಊಹಿಸಬಹುದಾದ ಸ್ಥಿತಿಸ್ಥಾಪಕ ವಸ್ತು ಅಥವಾ ವಸ್ತುವನ್ನು ರೇಖೀಯ-ಸ್ಥಿತಿಸ್ಥಾಪಕ ಅಥವಾ ಹುಕಿಯನ್ ಎಂದು ಹೇಳಲಾಗುತ್ತದೆ.
ಹುಕ್‌ನ ನಿಯಮವು ಬಲವನ್ನು ಹಾಕಿದಾಗ, ಸ್ಪ್ರಿಂಗ್‌ಗಳು ಮತ್ತು ಇತರ ಸ್ಥಿತಿಸ್ಥಾಪಕ ಕಾಯಗಳ ನೈಜ ಪ್ರತಿಕ್ರಿಯೆಗೆ ಮೊದಲ-ವರ್ಗದ ರೇಖೀಯ ಅಂದಾಜು ಮಾತ್ರ.
ಇವುಗಳನ್ನೂ ಓದಿ
[ಬದಲಾಯಿಸಿ]*ಯಂಗ್ ಮಾಪಾಂಕ(ಯಂಗ್ಸ್ ಮಾಡ್ಯುಲಸ್)
*ಪೀಡನ-ವಿಕೃತಿ ನಕ್ಷೆ(ಸ್ತ್ರೆಸ್-ಸ್ಟೈನ್ ಡಯಾಗ್ರಂ)
ಹೊರಗಿನ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ The anagram was given in alphabetical order, ceiiinosssttuu, representing Ut tensio, sic vis – "As the extension, so the force": Petroski, Henry (1996). Invention by Design: How Engineers Get from Thought to Thing. Cambridge, MA: Harvard University Press. p. 11. ISBN 978-0674463684.
- ↑ See http://civil.lindahall.org/design.shtml Archived 2016-03-08 ವೇಬ್ಯಾಕ್ ಮೆಷಿನ್ ನಲ್ಲಿ., where one can find also an anagram for catenary.