ಹುಂಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಂಹ / Tigon
ಹುಂಹ National Zoo & Fish Aquarium in ಕ್ಯಾನ್ಬೆರ, ಆಸ್ಟ್ರೇಲಿಯಾ
Scientific classification edit
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಕಾರ್ನಿವೋರಾ
ಉಪಗಣ: ಫ಼ೆಲಿಫ಼ಾರ್ಮಿಯಾ
ಕುಟುಂಬ: ಫ಼ೆಲಿಡೀ
ಉಪಕುಟುಂಬ: ಪ್ಯಾಂಥರಿನೀ
ಕುಲ: Panthera
ಪ್ರಜಾತಿ:

ಹುಂಹ (ಆಂಗ್ಲಾ:‌Tigon) ಒಂದು ಗಂಡು ಹುಲಿ ಮತ್ತು ಸಿಂಹಿಣಿಯ ಮಿಶ್ರಸಂತತಿಯಾಗಿದೆ. ಇದು ಒಂದೇ ಜಾತಿಯ ಆದರೆ ಬೇರೆ ಬೇರೆ ಪ್ರಭೇದಗಳ ಸಂತತಿಯಾಗಿದೆ . ಹೆಣ್ಣು ಹುಲಿ ಮತ್ತು ಗಂಡು ಸಿಂಹಕ್ಕೆ ಜನಿಸುವ ಮರಿಗೆ ಸಿಂಹುಲಿ (Liger) ಎಂದು ಕರೆಯಲಾಗುತ್ತದೆ, ಇದನ್ನು ಪೋರ್ಟ್ ಮಾಂಟೋ ಎಂದೂ ಸಹ ಕರೆಯುತ್ತಾರೆ.

ಹುಂಹನ ಜೀನೋಮ್ ಎರಡೂ ಪೋಷಕರ ಅನುವಂಶಿಕ ಗುಣಗಳನ್ನು ಒಳಗೊಂಡಿರುತ್ತದೆ. ಹೀಗಾಗಿ, ಅದು ಎರಡೂ ಪೋಷಕರಿಂದ ಗೋಚರಿಸುವ ಗುಣಲಕ್ಷಣಗಳನ್ನು ಪ್ರದರ್ಶಿಸಬಹುದು. ಅವು ತಾಯಿಯ ಕಲೆಗಳನ್ನು ಹೊಂದಿರುತ್ತವೆ (ಸಿಂಹಗಳು ಕಲೆಗಳಿಗಾಗಿ ವಂಶವಾಹಿಗಳನ್ನು ಒಯ್ಯುತ್ತವೆ - ಸಿಂಹದ ಮರಿಗಳಿಗೆ ಕಲೆಗಳಿರುತ್ತವೆ ಮತ್ತು ಕೆಲವು ವಯಸ್ಕ ಮರಿಗಳು ಮಸುಕಾದ ಗುರುತುಗಳನ್ನು ಉಳಿಸಿಕೊಂಡಿರುತ್ತವೆ) ಮತ್ತು ತಂದೆಯ ಪಟ್ಟೆಗಳನ್ನು ಹೊಂದಿರುತ್ತವೆ. ಗಂಡು ಟೈಗಾನ್ ಹೊಂದಿರಬಹುದಾದ ಯಾವುದೇ ಕೇಸರವು ಸಿಂಹದ ಕೇಸರಕ್ಕಿಂತ ಗಿಡ್ಡದಾಗಿ ಗೋಚರಿಸುತ್ತದೆ. ಟೈಗನ್‌ಗಳು ಸಿಂಹ ಅಥವಾ ಹುಲಿಗಳಿಗಿಂತ ಚಿಕ್ಕದಾಗಿರುತ್ತವೆ ಎಂಬುದೊಂದು ತಪ್ಪು ಕಲ್ಪನೆಯಾಗಿದೆ. ಅವು ತಮ್ಮ ಪೋಷಕರ ಪ್ರಭೇದಗಳ ಗಾತ್ರಕ್ಕಿಂತ ದೊಡ್ಡದಾಗಿರುವುದಿಲ್ಲ, ಏಕೆಂದರೆ ಅವು ಎರಡೂ ಪೋಷಕರಿಂದ ಬೆಳವಣಿಗೆ-ಪ್ರತಿಬಂಧಕ ವಂಶವಾಹಿಗಳನ್ನು ಆನುವಂಶಿಕವಾಗಿ ಪಡೆಯುತ್ತವೆ, ಆದರೆ ಅವು ಯಾವುದೇ ರೀತಿಯ ಕುಬ್ಜತೆ ಅಥವಾ ಅತ್ಯಂತ ಸಣ್ಣದಾಗಿ ಕಾಣುವುದಿಲ್ಲ. ಅವು ಸಾಮಾನ್ಯವಾಗಿ 180 ಕಿಲೋಗ್ರಾಂಗಳಷ್ಟು ತೂಕ ಹೊಂದಿರುತ್ತವೆ.

ಫಲವತ್ತತೆ[ಬದಲಾಯಿಸಿ]

ಸಿಂಹುಲಿ ಮತ್ತು ಹುಂಹಗಳು ಸಂತಾನೋತ್ಪತ್ತಿ ಮಾಡಲಾರವೆಂದು ಗುಗ್ಗಿಸ್‌ಬರ್ಗ್ ಬರೆದದ್ದನ್ನು ಬಹಳ ಕಾಲದ ವರೆಗೆ ನಂಬಲಾಗಿತ್ತು; ಆದಾಗ್ಯೂ, 1943 ರಲ್ಲಿ, ಸಿಂಹ ಮತ್ತು "ದ್ವೀಪ" ಹುಲಿಯ ನಡುವಿನ 15 ವರ್ಷದ ಮಿಶ್ರತಳಿಯನ್ನು ಮ್ಯೂನಿಕ್ ಹೆಲಾಬ್ರನ್ ಮೃಗಾಲಯದಲ್ಲಿ ಸಿಂಹದೊಂದಿಗೆ ಯಶಸ್ವಿಯಾಗಿ ಸಂಯೋಜನೆಗೊಳಿಸಲಾಯಿತು. ಹೆಣ್ಣು ಮರಿಯ ಆರೋಗ್ಯ ಸೂಕ್ಷ್ಮ ವಾಗಿದ್ದರೂ, ಪ್ರೌಢಾವಸ್ಥೆಯವರೆಗೂ ಬೆಳೆಯಿತು.

ಭಾರತದ ಅಲಿಪೋರ್ ಮೃಗಾಲಯದಲ್ಲಿ, 1971 ರಲ್ಲಿ ಜನಿಸಿದ ರುದ್ರಾನಿ ಎಂಬ ಹೆಣ್ಣು ಹುಂಹವನ್ನು ಸೆಕ್ಯುಲರಾಬ್ರತಾ ಎಂಬ ಏಷ್ಯಾದ ಗಂಡು ಸಿಂಹದೊಂದಿಗೆ ಯಶಸ್ವಿಯಾಗಿ ಸಂಯೋಜಿಸಲಾಯಿತು. ಎರಡನೇ ತಲೆಮಾರಿನ ಅಪರೂಪದ, ಮಿಶ್ರತಳಿಯನ್ನು ಲಿಟಿಗಾನ್ ಎಂದು ಕರೆಯಲಾಯಿತು. ರುದ್ರಾನಿ ತನ್ನ ಜೀವಿತಾವಧಿಯಲ್ಲಿ ಏಳು ಲಿಟಿಗನ್‌ಗಳಿಗೆ ಜನ್ಮ ಕೊಟ್ಟಿತು. ಇವುಗಳಲ್ಲಿ ಕೆಲವು ಭಾರೀ ಗಾತ್ರಗಳನ್ನು ತಲುಪಿದವು - ಕ್ಯೂಬನಾಕನ ಎಂಬ ಲಿಟಿಗಾನ್ ಕನಿಷ್ಠ 363 ಕಿಲೋಗ್ರಾಂಗಳಷ್ಟು (800 ಪೌಂಡು) ತೂಕವಿತ್ತು, ನಿಂತಾಗ ಅದರ ಭುಜದ ಬಳಿಯ ಎತ್ತರ 1.32 ಮೀಟರ್ (4.3 ಅಡಿ) ಮತ್ತು ಅದರ ಒಟ್ಟು ಉದ್ದ 3.5 ಮೀಟರ್ (11 ಅಡಿ) ಇತ್ತು.

ಹೆಣ್ಣು ಹುಂಹ ಮತ್ತು ಗಂಡು ಹುಲಿಯ ನಡುವಿನ ಮಿಶ್ರಜಾತಿಯಿಂದಾಗಿ ಈ ರೀತಿಯ ಟೈಟಿಗಾನ್ ನ ವರದಿಗಳು ಅಸ್ತಿತ್ವದಲ್ಲಿವೆ. ಟೈಟಿಗಾನ್ ಗಳು ಚಿನ್ನದ ಹುಲಿಗಳನ್ನು ಹೋಲುತ್ತವೆ, ಆದರೆ ಅವುಗಳ ಗುರುತುಗಳಲ್ಲಿ ಕಡಿಮೆ ವ್ಯತಿರಿಕ್ತತೆಯನ್ನು ಹೊಂದಿರುತ್ತವೆ. 1978 ರಲ್ಲಿ ಜನಿಸಿದ ನೋಯೆಲ್ ಎಂಬ ಹುಲಿಯನ್ನು ಶಂಬಲಾ ಸಂರಕ್ಷಣೆಯಲ್ಲಿ ಆಂಟನ್ ಎಂಬ ಸೈಬೀರಿಯನ್ ಗಂಡು ಹುಲಿಯೊಂದಿಗೆ ಇಡಲಾಗಿತ್ತು. ಆದರೆ ಅದು ಬಂಜೆ ಎಂಬುದು ಅದನ್ನು ರಕ್ಷಿಸುವವರ ನಂಬಿಕೆಯಾಗಿತ್ತು. 1983 ರಲ್ಲಿ ನೊಯೆಲ್ ಗೆ, ನಥಾನಿಯಲ್ ಎಂಬ ಟಿಟಿಗಾನ್ ಜನಿಸಿತು. ನಥಾನಿಯಲ್ ಮುಕ್ಕಾಲು ಭಾಗ ಹುಲಿಯಂತೆ ಇದ್ದುದರಿಂದ, ಅದು ನೋಯೆಲ್‌ಗಿಂತ ಕಪ್ಪಾದ ಪಟ್ಟೆಗಳನ್ನು ಹೊಂದಿತ್ತು. ಮತ್ತು ಅದು ತಾಯಿ ಬಳಸುವ ಮಿಶ್ರಶಬ್ದಗಳಿಗಿಂತ ಹೆಚ್ಚಾಗಿ ಹುಲಿಯಂತೆ ಕೂಗುತ್ತಿತ್ತು. ಕೇವಲ ಕಾಲುಭಾಗ ಮಾತ್ರ ಸಿಂಹದಂತಿತ್ತು. ನಥಾನಿಯಲ್ ನಲ್ಲಿ ಕೇಸರ ಬೆಳೆಯಲಿಲ್ಲ. ನಥಾನಿಯಲ್ ಕ್ಯಾನ್ಸರ್ ನಿಂದ ಎಂಟು ಅಥವಾ ಒಂಬತ್ತು ವರ್ಷ ವಯಸ್ಸಿನಲ್ಲಿ ಸತ್ತು ಹೋಯಿತು. ನೋಯೆಲ್ ನಲ್ಲೂ ಸಹ ಭಯಾನಕ ಕ್ಯಾನ್ಸರ್ ಅಭಿವೃದ್ಧಿಗೊಂಡು, ಅದು ರೋಗನಿರ್ಣಯವಾದ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿತು.

ಪೋಷಕ ಜಾತಿಗಳ ಸಹಬಾಳ್ವೆ[ಬದಲಾಯಿಸಿ]

ಸಿಂಹುಲಿಗಳಂತೆ, ಹುಂಹಗಳು ಸೆರೆಯಲ್ಲಿ ಮಾತ್ರ ಕಂಡುಬರುತ್ತದೆ., ಏಕೆಂದರೆ ಸಿಂಹ ಮತ್ತು ಹುಲಿಯ ವಾಸಸ್ಥಾನಗಳು ಅಕ್ಕ ಪಕ್ಕದಲ್ಲಿರುವುದಿಲ್ಲ. ಆದಾಗ್ಯೂ, ಹಿಂದೆ, ಏಷ್ಯಾದ ಸಿಂಹವು ಭಾರತದ ಅರಣ್ಯದಲ್ಲಿ ಬಂಗಾಳದ ಹುಲಿಯೊಂದಿಗೆ ಸಹಬಾಳ್ವೆ ನಡೆಸಿತು, ಅಲ್ಲದೆ ಕ್ಯಾಸ್ಪಿಯನ್ ಹುಲಿ, ಇರಾನ್ ಮತ್ತು ಟರ್ಕಿಯಂತಹ ದೇಶಗಳಲ್ಲಿ ಇದು ಸಂಭವಿಸಿತು. ಭಾರತದಲ್ಲಿ, ಕೆಲವು ಸಿಂಹಗಳನ್ನು ಪ್ರಸ್ತುತ ಅರಣ್ಯದಿಂದ ಕುನೊ ವನ್ಯಜೀವಿ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಯೋಜನೆ ಇದೆ, ಅದರಲ್ಲಿ ಕೆಲವು ಹುಲಿಗಳಿವೆ, ಆದರೆ ಇದನ್ನು ಡಿಸೆಂಬರ್ 2017 ರವರೆಗೆ ಜಾರಿಗೆ ತರಲಾಗಿಲ್ಲ.

"https://kn.wikipedia.org/w/index.php?title=ಹುಂಹ&oldid=1030773" ಇಂದ ಪಡೆಯಲ್ಪಟ್ಟಿದೆ