ಸುಬ್ರಹ್ಮಣ್ಯ ಧಾರೇಶ್ವರ
ಗೋಚರ
ಸುಬ್ರಹ್ಮಣ್ಯ ಧಾರೇಶ್ವರ (ಸಪ್ಟೆಂಬರ್ ೦೫, ೧೯೫೭ - ಏಪ್ರಿಲ್ ೨೫, ೨೦೨೪) ಅವರು ಯಕ್ಷಗಾನ ಕ್ಷೇತ್ರದ ಪ್ರಖ್ಯಾತ ಭಾಗವತರಲ್ಲಿ ಒಬ್ಬರಾಗಿದ್ದರು. ಸುಮಾರು ೪೭ ವರ್ಷಗಳ ಕಾಲ ಬಡಗು ತಿಟ್ಟಿನ ಯಕ್ಷಗಾನ ಮೇಳಗಳಲ್ಲಿ ಸೇವೆಯನ್ನು ಸಲ್ಲಿಸಿದ್ದರು. ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರ ಅವರಿಗಿದೆ. ಪುರಂದರದಾಸ, ಕನಕದಾಸ, ಬಸವಣ್ಣ, ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಅವರು ಹಾಡಿದ್ದಾರೆ. ಕುವೆಂಪು, ಬೇಂದ್ರೆಯವರ ಹಾಡುಗಳೂ ಯಕ್ಷಗಾನದ ಹಾಡುಗಳಾಗಿದ್ದು ಧಾರೇಶ್ವರರ ಕಂಠದಲ್ಲಿ. ಅಮೃತ ವರ್ಷಿಣಿ, ಸಿಂಧೂರ ಭಾಗ್ಯ, ರಕ್ತ ತಿಲಕ, ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಗಗನ ಗಾಮಿನಿ, ವಸಂತ ಸೇನೆ ನಿರ್ದೇಶಿಸಿದ ಎಲ್ಲ ಪ್ರಸಂಗಗಳೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.
ನಿಧನ
[ಬದಲಾಯಿಸಿ]ಬೆಂಗಳೂರಿನ ತಮ್ಮ ಪುತ್ರನ ಮನೆಯಲ್ಲಿದ್ದ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಗುರುವಾರ, ಏಪ್ರಿಲ್ ೨೫, ೨೦೨೪ರ ಬೆಳಗ್ಗೆ ೪:೩೦ ರ ಸುಮಾರಿಗೆ ಇಹಲೋಕ ತ್ಯಜಿಸಿದರು.[೧][೨][೩][೪][೫]
ಉಲ್ಲೇಖಗಳ ಪಟ್ಟಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಬಡಗು ತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ". ವಿಜಯ ಕರ್ನಾಟಕ. ವಿಜಯ ಕರ್ನಾಟಕ. 2024-04-25.
- ↑ "ಬಡಗುತಿಟ್ಟಿನ ಶ್ರೇಷ್ಠ ಹಾಗೂ ಪ್ರಸಿದ್ಧ ಭಾಗವತ, ಯಕ್ಷಗಾನದ ಮಧುರ ಧ್ವನಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ". ಹಿಂದೂಸ್ತಾನ್ ಟೈಮ್ಸ್ ಕನ್ನಡ. 2024-04-25.
- ↑ "ಯಕ್ಷಗಾನ ಲೋಕದ ಗಾನಮಂತ್ರಿಕ, ಕರಾವಳಿ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ನಿಧನ". ವಿಜಯವಾಣಿ. ವಿಜಯವಾಣಿ. 2024-04-25. Retrieved 2024-04-25.
- ↑ "ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ". ಟಿವಿ9 ಕನ್ನಡ. ಟಿವಿ9 ಕನ್ನಡ. 2024-04-25.
- ↑ "ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ನಿಧನ". ಪ್ರಜಾವಾಣಿ. ಪ್ರಜಾವಾಣಿ. 2024-04-25. Retrieved 2024-04-25.