ಸದಸ್ಯ:Soundaryar.5301/ನನ್ನ ಪ್ರಯೋಗಪುಟ/2
ಇಂಟರ್ನೆಟ್ ವಿಷಯಗಳ ಇಂಟರ್ನೆಟ್ ಆಫ್ ಥಿಂಗ್ಸ್ (ಐ ಓ ಟಿ )
[ಬದಲಾಯಿಸಿ]ಇಂಟರ್ನೆಟ್ ವಿಷಯಗಳ ಇಂಟರ್ನೆಟ್ ಆಫ್ ಥಿಂಗ್ಸ್ (ಐ ಓ ಟಿ )-ಎಲೆಕ್ಟ್ರಾನಿಕ್ಸ್ , ಸಾಫ್ಟ್ವೇರ್ಸ್, ಸೆನ್ಸರ್ಸ್ , ಆಕ್ಟಿವಾಟ್ರ್ಸ್ ಗಳನ್ನ ಒಳಗೊಂಡಿರುವ ವಾಹನಗಳು, ಮನೆ ಉಪಕರಣಗಳ ಒಂದು ಜಾಲವೇ ( ಐ ಓ ಟಿ ). ಇದು ಮೇಲಿನ ಭೌತಿಕ ವಸ್ತುಗಳ ನಡುವೆ ವಿಷಯ ಹಂಚುವಿಕೆಗೆ (data exchange) ( ಡೇಟಾ ಎಕ್ಸ್ಚೇಂಜ್ ) ಸಹಾಯ ಮಾಡುತ್ತದೆ. ಪ್ರತಿ ವಸ್ತುವು ಅದರ ಅನನ್ಯವಾದ ಕಂಪ್ಯೂಟಿಂಗ್ ಸಿಸ್ಟಮ್ ಮೂಲಕ ಗುರಿತಿಸಲ್ಪಡುತ್ತದೆ ಮತ್ತು ಅಂತರ ಕಾರ್ಯನಿರ್ವಾಹಣೆಯನ್ನು ಅಸ್ತಿತ್ವದಲ್ಲಿರುವ ಇಂಟರ್ನೆಟ್ ಅಡಿವ್ಯವಸ್ತೆಯ ಮೂಲಕ ಮಾಡುತ್ತದೆ. ತಜ್ಞರು ೨೦೨೦ ರ ಒಳಗೆ ಐಓಟಿ ಯು ೩೦ ಬಿಲಿಯನ್ ವಸ್ತುಗಳನ್ನು ಹೊಂದಿರುತ್ತದೆ ಎಂದು ಊಹಿಸಿದ್ದಾರೆ.
ಐಓಟಿ ಯು ಈಗಾಗಲೇ ಅಸ್ತಿತ್ವದಲ್ಲಿರುವ ಜಾಲದಲ್ಲಿ ವಸ್ತುಗಳನ್ನು ಗ್ರಹಿಸಲು ಮತ್ತು ನಿಯಂತ್ರಿಸಲು ಅನುಮತಿಸುತ್ತದೆ. ಇದರಿಂದ ಭೌತಿಕ ಜಗತ್ತನ್ನು ನೇರವಾಗಿ ಏಕೀಕರಣಗೊಳಿಸಿ , ಕಂಪ್ಯೂಟರ್ ಆಧಾರಿತ ವ್ಯವಸ್ಥೆಯಾಗಿ ಪರಿವರ್ತಿಸಬಹುದು. ಇದರಿಂದ ಫಲಕಾರಿತ್ವ,ನಿಖರತೆ, ಆರ್ಥಿಕ ಪ್ರಯೋಜನ ಹೆಚ್ಚಾಗಿ , ಮನುಷ್ಯನ ಹಸ್ತಕ್ಷೇಪ ಕಡಿಮೆಯಾಗುತ್ತದೆ. ಐಓಟಿ ಯನ್ನು ಸೆನ್ಸರ್ಸ್ , ಆಕ್ಟಿವಾಟ್ರ್ ಜೊತೆ ಒಳಗೂಡಿಸಿದಾಗ, ತಂತ್ರಜ್ಞಾನವು ಸಾಮಾನ್ಯವರ್ಗದ ನಿದರ್ಶನವಾಗಿ ಸೈಬರ್ - ಭೌತಿಕ ಲೋಕದಾಗುತ್ತದೆ ಮತ್ತು ಸ್ಮಾರ್ಟ್ ಗ್ರೀಡ್ಸ್, ವರ್ಚುಯಲ್ ಪವರ್ ಪ್ಲಾಂಟ್ಸ್ , ಸ್ಮಾರ್ಟ್ ಹೋಮ್ಸ್ , ಬುದ್ದಿವಂತ ಸಾರಿಗೆ ಮತ್ತು ಸ್ಮಾರ್ಟ್ ನಗರಗಳಲ್ಲಿ ಉಪಯೋಗಕ್ಕೆ ಬರುತ್ತವೆ.
"Things " ( ವಸ್ತು ) ವಿವಿಧ ಸಾದನೆಗಳನ್ನು ಉಲ್ಲೇಖಿಸಬಹುದಾಗಿದೆ. ಉದಾಹರಣೆಗೆ - ಹಾರ್ಟ್ ಮಾನಿಟರಿಂಗ್ ಇಂಪ್ಲಾಂಟ್ಸ್ , ಬಿಒಚಿಪ್ ಟ್ರಾನ್ಸ್ಪೋನ್ಡರ್ಸ್, ಕರಾವಳಿ ನೀರಿನಲ್ಲಿ ಕಾಡು ಪ್ರಾಣಿಗಳ ನೇರ ಪ್ರಸಾರ ಮಾಡುವ ಕ್ಯಾಮೆರಾಗಳು , ಸೆನ್ಸಾರ್ ಒಳಗೊಂಡಿರುವ ವಾಹನಗಳು , ಡಿಎನ್ಎ ವಿಶ್ಲೇಷಣೆ ಉಪಕರಣಗಳು , ಬೆಂಕಿ ಹೋರಾಟಗಾರರಿಗೆ ಹುಡುಕಾಟ ಕಾರ್ಯದಲ್ಲಿ ಸಹಾಯ ಮಾಡುವ ಕ್ಷೇತ್ರ ಕಾರ್ಯಾಚರಣೆ ಉಪಕರಣಗಳು. ಕಾನೂನು ವಿದ್ವಾಂಸರು " things " ಅನ್ನುವ ಪದಕ್ಕೆ ಆಂಗ್ಲದಲ್ಲಿ ಹೀಗೆ ಹೇಳಿದ್ದಾರೆ - "It is an inextricable mixture of hardware, software, data and service".
ಈ ಉಪಕರಣಗಳು ಉಪಯುಕ್ತ ವಿಷಯಗಳನ್ನು ಸಂಗ್ರಹಿಸುತ್ತದೆ. ಇದಕ್ಕಾಗಿ ಅಸ್ತಿತ್ವದಲ್ಲಿರುವ ತಂತ್ರಜ್ಞಾನದ ಸಹಾಯ ಪಡಿಯುತ್ತದೆ ಮತ್ತು ಬೇರೆ ಉಪಕರಣಗಳಿಗೆ ಈ ವಿಷಯಗಳನ್ನು ಕಲಿಸುತ್ತದೆ. ಇವು ಹಲವಾರು ವಿಷಯಗಳನ್ನು ಬಹಳ ಪ್ರದೇಶದಿಂದ ಸಂಗ್ರಹಿಸುತ್ತದೆ ಮತ್ತು ನಿರಂತರವಾಗಿ ಸಂಯೋಜಿಸುತ್ತದೆ ಮತ್ತು ಈ ವಿಷಯವನ್ನು ಪರಿಣಾಮಕಾರಿಯಾಗಿ ಪ್ರಾರ್ತಿಯೆಗೊಳಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಸೈಬರ್ ಬೆದರಿಕೆಯ ಬೃಹತ್ ಬೆಳವಣಿಗೆಯೊಂದಿಗೆ , ಸೈಬರ್ ಭಯೋತ್ಪಾದನೆಯ ಅಪರಾಧಗಳಿಗೆ ಸಂಬಂಧಿಸಿದಂತೆ ಐಓಟಿ ತಂತ್ರಜ್ಞಾನಗಳ ಶೋಷಣೆಯ ಗಮನಾರ್ಹ ಏರಿಕೆ ಕಂಡು ಬಂದಿದೆ.
ಅನ್ವಯಗಳು (ಅಪ್ಪ್ಲಿಕೆಶನ್ಸ್):
[ಬದಲಾಯಿಸಿ]ಅಂತರಜಾಲ ಸಂಪರ್ಕ ಸಾಧನಗಳಿಗೆ ಅನ್ವಯಗಳು ವಿಸ್ತಾರವಾಗಿವೆ. ಗ್ರಾಹಕ , ಉದ್ಯಮ ಮತ್ತು ಮೂಲಸೌಕರ್ಯ ಅನ್ವಯಿಕೆಗಳ ನಡುವೆ ಪ್ರತ್ಯೇಕತೆಯನ್ನು ಬಹು ವರ್ಗಿಕರಣಗಳು ಸೂಚಿಸುತ್ತದೆ. ಮಾಜಿ ಬ್ರಿಟಿಷ್ ಚಾನ್ಸಲರ್ ಜಾರ್ಜ್ ಒರ್ಬೋರ್ನೆ. ಹೀಗೆ ನುಡಿದಿದ್ದಾರೆ " ".
ಸಿಇಮಿತ ಸಿಪಿಯು , ಮೆಮೊರಿ ಮತ್ತು ಪವರ್ ಸಂಪನ್ಮೂಲಗಳನ್ನು ಸಾಧಿಸಬಹುದಾದಿರುವುದರಿಂದ ಐಓಟಿ ಯು ಪ್ರತಿಯೊಂದು ಕ್ಷೇತ್ರದಲ್ಲಿಯೂ ಉಪಯೋಗವಾಗುತ್ತದೆ. ಅಂತಹ ವ್ಯವಸ್ಥೆಗಳು ನೈಸರ್ಗಿಕ ಪರಿಸರದಿಂದ ಹಿಡಿದು ತಟ್ಟದ ಕಾರ್ಖಾನೆಗಳವರೆಗೂ ವಿಷಯವನ್ನು ಸಂಗ್ರಹಿಸುತ್ತದೆ. ಆದ್ದರಿಂದ ಪರಿಸರ ಸಂವೇದನೆ ಮತ್ತು ನಗರ ಯೋಜನೆಗಳ ಕ್ಷೀತ್ರಗಳಲ್ಲಿ ಅನ್ವಯಿಕೆಯನ್ನು ಪಡೆಯುತ್ತದೆ.
ಬುದ್ದಿವಂತ ಮಾರಾಟ ವ್ಯವಸ್ಥೆಗಳೆಂದರೆ ಬಳಕೆದಾರರು ಕೊಳ್ಳುವ ಪದ್ದತಿಗಳನ್ನು ಟ್ರ್ಯಾಕ್ ಮಾಡಿ ತಮ್ಮ ಮೊಬೈಲುಗಳ ಮೂಲಕ ವಿಷಯ ಸಂಗ್ರಹಿಸುತ್ತದೆ. ನಂತರ ಅವರಿಗೆ ಬೇಕಾದ ವಸ್ತುಗಳ ಮೇಲೆ ರಿಯಾಯಿತಿಯನ್ನು ಕೊಟ್ಟು ಹೆಚ್ಚು ಲಾಭದಾಯಕ ಮಾರಾಟ ಮಾಡಬಹುದು. ಸೆನ್ಸಾರ್ , ಆಕ್ಟಿವೇಟರ್ ಗಳನ್ನುಉಪಯೋಗಿಸುವ ಉದಾಹರಣೆಗಳೆಂದರೆ ಶಾಖ, ನೀರು , ವಿದ್ಯುತ್ ಮತ್ತು ಇಂಧನ ನಿರ್ವಾಹಣೆ, ಕ್ರೂಸ್ - ಸಹಾಯಸಾರಿಗೆಗಳಾಗಿವೆ.
ಐಓಟಿ ಯ ಮತ್ತೊಂದು ಅನ್ವಯವೆಂದರೆ ಗೃಹ ಭದ್ರತಾ ಲಕ್ಷಣಗಳು ಮತ್ತು ಮನೆ ಯಾಂತ್ರೀಕರಣ ಸಕ್ರಿಯಗಳಾಗಿವೆ ಡಿಎನ್ಎ ಅಥವಾ ಇತರ ಅಣುಗಳನ್ನು ಅಧ್ಯಯನ ಮಾಡಲು ಸಹಾಯವಾಗುವಂತಹ ಕ್ಲೌಡ್ ಆಧಾರಿತ ವಿಶಲೀಷಣೆಯನ್ನು ಉಪಯೋಗಿಸುವ ಜೈವಿಕ ಸಂವೇದಕಗಳ ಗಲಗಳನ್ನು " ಜೇವಂತ ವಸ್ತುಗಳ ಇಂಟರ್ನೆಟ್ " ಎಂಬ ಪರಿಕಲ್ಪನೆಯನ್ನು ಪ್ರಸ್ತಾಪಿಸಲಾಗಿದೆ.
ರೆಫ಼ರೆನ್ಸ್ಗಳು
[ಬದಲಾಯಿಸಿ]೧. https://en.wikipedia.org/wiki/Internet_of_things ೨. https://www.sap.com/india/trends/internet-of-things.html ೩. https://www.sap.com/india/trends/internet-of-things.html ೪. https://www.microsoft.com/en-in/internet-of-things/