ಸಂಸದೀಯ ವ್ಯವಸ್ಥೆ
ಕಾರ್ಯಾಂಗ ವಿಭಾಗದ ಮಂತ್ರಿಗಳನ್ನು ಶಾಸಕಾಂಗದಿಂದ ಆಯ್ಕೆಮಾಡಲಾಗುವಂಥ, ಮತ್ತು ಕಾರ್ಯಾಂಗ ಹಾಗೂ ಶಾಸಕಾಂಗ ವಿಭಾಗಗಳು ಪರಸ್ಪರವಾಗಿ ಸೇರಿಕೊಂಡು ಆ ಸಂಸ್ಥೆಗೆ ಜವಾಬ್ದಾರವಾಗಿರುವಂಥ ಸರ್ಕಾರಿ ವ್ಯವಸ್ಥೆಯು ಸಂಸದೀಯ ವ್ಯವಸ್ಥೆ. ಅಂತಹ ವ್ಯವಸ್ಥೆಯಲ್ಲಿ, ಸರ್ಕಾರದ ನಾಯಕನು ವಾಸ್ತವವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಮುಖ್ಯ ಶಾಸನಾಧಿಕಾರಿ ಎರಡೂ ಆಗಿರುತ್ತಾನೆ.
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ.ರಾಜಕೀಯ ಪಕ್ಷಗಳಿಲ್ಲದೆ ಪ್ರಜಾಪ್ರಭುತ್ವ ಅಸಾಧ್ಯ. ಅದು ಕೇವಲ ಕಾಲ್ಪನಿಕ. ಆದುದರಿಂದ ರಾಜಕೀಯ ಪಕ್ಷಗಳನ್ನು ಪ್ರಜಾಪ್ರಭುತ್ವದ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ.ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವ ಸರಕಾರವು ಒಂದು ರಾಜಕೀಯ ಪಕ್ಷದ ಸರಕಾರವಾಗಿದೆ.ರಾಜಕೀಯ ಪಕ್ಷಗಳು ಸರಕಾರ ಮತ್ತು ಮತದಾರರ ನಡುವಿನ ಸೇತುವೆ ಇದ್ದಂತೆ. ರಾಜಕೀಯ ಪಕ್ಷಗಳಿಲ್ಲದ ಪ್ರಜಾಪ್ರಭುತ್ವ ಎಂದರೆ ನಾವಿಕನಿಲ್ಲದ ದೋಣಿಯಂತೆ.ಚುಕ್ಕಾಣಿ ಇಲ್ಲದ ಹಡಗು ಇದ್ದಂತೆ ಎಂದು ಮುಂತಾಗಿ ಹೇಳಲಾಗಿದೆ. ಇಂದು ರಾಜಕೀಯ ಪಕ್ಷಗಳು ಹಾಗೂ ಪ್ರಜಾಪ್ರಭುತ್ವ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.
ಬ್ರಿಟನ್ನಿನಲ್ಲಿ ಜನ್ಮ ತಾಳಿದ ಸಂಸದೀಯ ಸರ್ಕಾರದ ಪದ್ಧತಿಯನ್ನು ಇಂದು ಅನೇಕ ದೇಶಗಳು ಅಳವಡಿಸಿಕೊಂಡಿವೆ.ಭಾರತವು ಸಂಸದೀಯ ಪದ್ಧತಿಯನ್ನು ಅಳವಡಿಸಿಕೊಂಡು ಮುಂದುವರೆಸಿಕೊಂಡು ಹೋಗುತ್ತಿರುವ ದೇಶಗಳಲ್ಲಿ ಪ್ರಮುಖವಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |