ವಿಷಯಕ್ಕೆ ಹೋಗು

ಸಂಜೀವಿನಿ (ಹಿಂದೂ ಪುರಾಣ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹನುಮಂತನು ಸಂಜೀವಿನಿ ಸಸ್ಯವನ್ನು ತರಲು ಇಡೀ ಪರ್ವತವನ್ನೇ ಎತ್ತಿಕೊಂಡು ಬರುತ್ತಾನೆ

ಹಿಂದೂ ಪುರಾಣದಲ್ಲಿ, ಸಂಜೀವಿನಿಯು ಗಂಭೀರ ನರಮಂಡಲ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯಿರುವ ಒಂದು ಮಾಯಾಶಕ್ತಿಯುಳ್ಳ ಮೂಲಿಕೆ. ಈ ಮೂಲಿಕೆಯಿಂದ ತಯಾರಿಸಿದ ಔಷಧಿಗಳು ಮರಣವು ಬಹುತೇಕ ನಿಶ್ಚಿತವಾದ ಪರಿಸ್ಥಿತಿಗಳಿಂದ ಪುನಶ್ಚೇತನಗೊಳಿಸಬಲ್ಲವು ಎಂದು ನಂಬಲಾಗಿತ್ತು. ಈ ಮೂಲಿಕೆಯನ್ನು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ರಾವಣನ ಮಗನಾದ ಇಂದ್ರಜಿತನು ಲಕ್ಷ್ಮಣನ ಮೇಲೆ ಒಂದು ಪ್ರಬಲ ಅಸ್ತ್ರವನ್ನು ಎಸೆದಾಗ, ಲಕ್ಷ್ಮಣನು ಗಂಭೀರವಾಗಿ ಗಾಯಗೊಳ್ಳುತ್ತಾನೆ ಮತ್ತು ಇಂದ್ರಜಿತನಿಂದ ಹೆಚ್ಚು ಕಡಿಮೆ ಹತನಾಗುತ್ತಾನೆ. ಹಿಮಾಲಯದಲ್ಲಿನ ದ್ರೋಣಗಿರಿ (ಮಹೋದಯ) ಪರ್ವತದಿಂದ ಈ ಮೂಲಿಕೆಯನ್ನು ತರಲು ಹನುಮಂತನಿಗೆ ಹೇಳಲಾಗುತ್ತದೆ. ದ್ರೋಣಗಿರಿ ಪರ್ವತವನ್ನು ತಲುಪಿದಾಗ, ಹನುಮಂತನು ಆ ಮೂಲಿಕೆಯನ್ನು ಗುರುತಿಸಲಾಗದೇ ಆ ಇಡೀ ಪರ್ವತವನ್ನು ಎತ್ತಿಕೊಂಡು ರಣರಂಗಕ್ಕೆ ತರುತ್ತಾನೆ.[]

ಉಲ್ಲೇಖಗಳು

[ಬದಲಾಯಿಸಿ]
  1. D. Balasubramaniam (11 September 2009). "In search of the Sanjeevani plant of Ramayana". The Hindu. Retrieved 29 July 2016.