ವಿಷಯಕ್ಕೆ ಹೋಗು

ಸಂಗ್ಯಾ ಬಾಳ್ಯಾ(ನಾಟಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಗ್ಯಾಬಾಳ್ಯಾ ಕರ್ನಾಟಕ ಜನಪದ ರಂಗಭೂಮಿಯ ಒಂದು ಮಹತ್ವದ ರಂಗ ಕೃತಿ. ಆಧುನಿಕ ಕನ್ನಡ ರಂಗಭೂಮಿಯಲ್ಲಿ ಜನಪ್ರಿಯತೆ ಪಡೆದಿರುವ ಒಂದು ಸಣ್ಣಾಟದ ಪ್ರಕಾರವಾಗಿದೆ. ಇದನ್ನು ಬರೆದವರು ಬೈಲಾರದ ಪತ್ತಾರ ಎಂದು ಸಂಪಾದಕರಾದ ಚಂದ್ರಶೇಖರ ಕಂಬಾರರು ಆಭಿಪ್ರಾಯ ಪಡುತ್ತಾರೆ.

ಹಿನ್ನೆಲೆ

[ಬದಲಾಯಿಸಿ]

೧೯ನೆ ಶತಮಾನದಲ್ಲಿ ಉತ್ತರ ಕರ್ನಾಟಕದ ಬೈಲಹೋಮಗಲದ ಬೈಲವಾಡಿಯ ಸುತ್ತಮುತ್ತ ನಡೆದಿರುವ ನೈಜ ಘಟನೆಯೊಂದನ್ನು‌ ಆಧಾರವಾಗಿಟ್ಟುಕೊಂಡು ಈ‌ ನಾಟಕದ‌ ಕಥೆ ಹುಟ್ಟಿ ಬಂದಿದೆ.‌ ಅದೇ ಕಾರಣವಾಗಿ ಈ ನಾಟಕ ಲೋಕಪ್ರಿಯತೆಯನ್ನು ಪಡೆಯಿತು. ಬ್ರಿಟಿಷ್ ಸರ್ಕಾರದ ಅವಕೃಪೆಗೂ ಪಾತ್ರವಾಗಿ ಕೆಲವೊಂದು ಊರುಗಳಲ್ಲಿ ಈ ನಾಟಕದ‌ ಪ್ರದರ್ಶನ ನಿರ್ಬಂಧನೆಗೆ ಒಳಗಾಗಿತ್ತು.[]

ನಾಟಕದ ವಸ್ತು

[ಬದಲಾಯಿಸಿ]

ಸಂಗ್ಯಾ ಬಾಳ್ಯಾ ಒಂದು ಸಾಮಾಜಿಕ ನಾಟಕ. ಸಂಪ್ರದಾಯ ಮತ್ತು ಆಧುನಿಕತೆಯನ್ನು ಮೇಳೈಸಿಕೊಂಡಿದೆ. ಅನೈತಿಕ ಸಂಬಂಧ ಮತ್ತು ಕೊಲೆ ಸಂಗ್ಯಾಬಾಳ್ಯಾ ನಾಟಕದ ಪ್ರಮುಖ ಘಟನೆಗಳು. ಇವುಗಳಲ್ಲಿ ಮೊದಲನೆಯದು ನಾಟಕದ ಶಿಖರವಾಗಿದ್ದು ಎರಡನೆಯದ್ದು ಮೊದಲನೆಯದರ ಅನಿವಾರ್ಯ ಫಲವಾಗಿದೆ.

ಪಾತ್ರಗಳು

[ಬದಲಾಯಿಸಿ]
  • ಸಂಗಣ್ಣ
  • ಬಾಳಣ್ಣ
  • ಈರಣ್ಣ - ಮುತ್ತಿನ ವ್ಯಾಪಾರಿ
  • ಗಂಗಿ - ಈರಣ್ಣನ ಹೆಂಡತಿ
  • ಪರಮ್ಮ - ಈರಣ್ಣನ ಮೇಲು ಮನೆಯ ಹೆಂಗಸು ಹಾಗೂ ಸಂಗಣ್ಣನ ಸೊಸರತ್ತೆ
  • ವಿರೂಪಾಕ್ಷ - ಈರಣ್ಣನ
  • ಬಸವಂತ - ಈರಣ್ಣನ

ಸಂಗ್ಯಾ ಊರ ಶ್ರೀಮಂತರ ಮಗ. ಗಂಗಾ ಸಜ್ಜನ ಮನೆತನಸ್ಥದ ಹೆಣ್ಣು. ವೀರಭದ್ರ ಊರಿನ ಗಣ್ಯ ನಾಗರಿಕ. ನಾಟಕದ ಪ್ರಾರಂಭದಲ್ಲಿ ಬಾಳಣ್ಣನೊಡನೆ ಪೇಟೆಗೆ ಬಂದಾಗ ಸಂಗ್ಯಾ ಮರ್ಯಾದೆಯಿಂದ ವರ್ತಿಸುತ್ತಾನೆ. ಮರಡಿ ಬಸವಣ್ಣನ ಜಾತ್ರೆಗೆ ಹೋಗುವ ತನಕ ಗಂಗಾ ವಿನಯದಿಂದ ವರ್ತಿಸುತ್ತಾಳೆ. ಜಾತ್ರೆಯಲ್ಲಿ ಗಂಗಾಳ ರೂಪಕ್ಕೆ ಮರುಳಾಗುವ ಸಂಗ್ಯಾ ಅವಳನ್ನು ಮೋಹಿಸುವ ಆಸೆಯನ್ನು ಗೆಳೆಯ ಬಾಳ್ಯನ ಬಳಿ ಹೇಳಿಕೊಳ್ಳುತ್ತಾನೆ. ಗಂಡ ದೂರದೂರಿಗೆ ವ್ಯಾಪರಕ್ಕೆ ಹೋದ ಕಾರಣ ಉಂಟಾದ ಶೂನ್ಯ ಮತ್ತು ಪರಮ್ಮನ ಕುಟಿಲ ಬುದ್ಧಿಯ ಫಲವಾಗಿ ಗಂಗಾ ಸಂಗ್ಯಾನಿಗೆ ವಶವಾಗುತ್ತಾಳೆ. ಗಂಡುಳ್ಳ ಗರತಿಯನ್ನು ಮೋಹಿಸಬಾರದೆಂದು ಗೊತ್ತಿದ್ದೂ ಸಂಗ್ಯಾ ಅವಳನ್ನು ಕೂಡಲು ಮನಸ್ಸು ಮಾಡುತ್ತಾನೆ. ಕೊನೆಯವರೆಗೆ ಅವನಲ್ಲಿರುವ ಗುಣವೆಂದರೆ ಧೈರ್ಯವೊಂದೇ.[]

ಅನೈತಿಕ ಸಂಬಂಧಕ್ಕೆ ಕೊಲೆಯೇ ಶಿಕ್ಷೆಯಾಗಿರುವುದು ನಾಟಕದಲ್ಲಿ ಪಾತ್ರಗಳು ನಂಬಿರುವ ನೀತಿಗೆ ಉಚಿತವಾಗಿದೆ. ಸಂಗ್ಯಾನಿಗೆ ವಶಳಾಗುವ ಮೊದಲು ಗಂಗೆ ಅವನಿಗೆ ವ್ಯಭಿಚಾರದ ಪಾಪದ ಕುರಿತು ಉಪದೇಶ ಮಾಡುತ್ತಾಳೆ. ನಾಟಕದಲ್ಲಿನ ನೈತಿಕ ಮತ್ತು ಅನೈತಿಕ ಸಂಬಂಧಕ್ಕೆ ಪಾತ್ರಗಳೇ ಹೊಣೆಗಾರರಾಗುತ್ತವೆ. ಆ ಅನುಭವವನ್ನು ಅದರ ಸಮಗ್ರತೆಯೊಂದಿಗೆ ನಾಟಕೀಯವಾಗಿ ರಂಗದ ಮೇಲೆ ಸೃಷ್ಟಿಸಿ ಅದರ ಅನುಭವವನ್ನು ಪ್ರೇಕ್ಷಕರಲ್ಲಿ ಮೂಡಿಸುವುದೇ ನಿರ್ದೇಶಕರ ನಿಲುವಾಗಿದೆ. []

ಉಲ್ಲೇಖಗಳು

[ಬದಲಾಯಿಸಿ]
  1. ವಾರ್ತೆ, ​ಪ್ರಜಾವಾಣಿ. "'ಸಂಗ್ಯಾ–ಬಾಳ್ಯಾ' ಪ್ರದರ್ಶನ". Prajavani. {{cite web}}: zero width space character in |first1= at position 1 (help)
  2. "ಸಂಗ್ಯಾ-ಬಾಳ್ಯಾ".
  3. ಅಂಗಡಿ ಎಸ್. ಎಸ್ (೧೯೯೬). ಸಂಗ್ಯಾ ಬಾಳ್ಯಾ ಗೀತರೂಪಕದ ಅಧ್ಯಯನ. ವಿದ್ಯಾನಿಧಿ ಪ್ರಕಾಶನ ಗದಗ.