ಸಂಗೀತ ಜಿಂದಾಲ್
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ಸಂಗೀತ ಜಿಂದಾಲ್ | |
---|---|
ಚಿತ್ರ:Ms. Sangita Jindal .jpg ಮಿಸ್.ಸಂಗೀತ ಜಿಂದಾಲ್.ಜೇಪಿಜಿ | |
ಜನನ | 1962 ಕಲ್ಕತ್ತಾ (ಈಗಿನ ಕೊಲ್ಕತ್ತ), ವೆಸ್ಟ್ ಬೆಂಗಾಲ್, ಭಾರತ |
ವೃತ್ತಿ | ಅಧ್ಯಕ್ಷರು - ಜೆ ಎಸ್ ಡಬ್ಲ್ಯೂ ಫೌಂಡೇಶನ್ |
ಸಂಗಾತಿ | ಸಜ್ಜನ್ ಜಿಂದಾಲ್ |
ಮಕ್ಕಳು | 3, ಒಳಗೊಂಡ ಪಾರ್ಥ ಜಿಂದಾಲ್ |
ಸಂಗೀತ ಜಿಂದಾಲ್ ರವರು ಒಬ್ಬ ಭಾರತೀಯ ಮಹಿಳಾ ಉದ್ಯಮಿ ಮತ್ತು ಜೆಎಸ್‌ಡಬ್ಲ್ಯೂ ಫೌಂಡೇಶನ್‌ನ ಅಧ್ಯಕ್ಷರಾಗಿದ್ದಾರೆ, [೧] ಜೆಎಸ್ಡಬ್ಲ್ಯೂ ಫೌಂಡೇಶನ್ ,ಜೆ,ಎಸ್,ಡಬ್ಲ್ಯೂ ಸಮೂಹ ಕಂಪನಿಗಳ ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ನಡೆಸುತ್ತದೆ. ಪ್ರಸ್ತುತದಲ್ಲಿ ಅವರುಜಿಂದಾಲ್ ಆರ್ಟ್ಸ್ ಸೆಂಟರ್ ಅನ್ನು ಸಹ ಮುನ್ನಡೆಸುತ್ತಾರೆ ಮತ್ತು ಸಮಕಾಲೀನ ಕಲಾ ಅಭ್ಯಾಸಗಳು ಮತ್ತು ವಿಮರ್ಶಾತ್ಮಕ ಸಿದ್ಧಾಂತವನ್ನು ಕೇಂದ್ರೀಕರಿಸುವ ಪ್ರಮುಖ ಕಲಾ ನಿಯತಕಾಲಿಕವಾದ ಹಾಗೂ ಅಂತರಶಿಕ್ಷಣ ಕಲೆಗಳ ಚಟುವಟಿಕೆಯನ್ನು ಉತ್ತೇಜಿಸುವ ಆರ್ಟ್ ಇಂಡಿಯಾ ನಿಯತಕಾಲಿಕದ ಅಧ್ಯಕ್ಷರಾಗಿದ್ದಾರೆ. [೨] . ಜೆಎಸ್ಡಬ್ಲ್ಯೂ ಫೌಂಡೇಶನ್ ಸಿಎಸ್‌ಆರ್‌ಗಾಗಿ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನೂ 2009 ಮತ್ತು 2019 ರಲ್ಲಿ ಗೆದ್ದಿದೆ [೩]
ಸಂಗೀತ ಜಿಂದಾಲ್ ರವರು 1962 ರ ಆಗಸ್ಟ್ 30 ರಂದು ಕಲ್ಕತ್ತಾದಲ್ಲಿ (ಈಗ ಕೋಲ್ಕತಾ ) ಕೈಲಾಶ್ ಕುಮಾರ್ ಕನೋರಿಯಾ ಮತ್ತು ಎಂ ಊರ್ಮೀಳಾ ಕನೋರಿಯಾ ದಂಪತಿಗೆ ಜನಿಸಿದರು. [೪] . [೫] ಅಹಮದಾಬಾದ್‌ನ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು. [೬] ಸಂಗೀತ ಜಿಂದಾಲ್‌ರವರು ಜೆಎಸ್‌ಡಬ್ಲ್ಯು ಸಮೂಹ ಕಂಪನಿಗಳ ಅಧ್ಯಕ್ಷರಾಗಿರುವ ಸಜ್ಜನ್ ಜಿಂದಾಲ್ ಅವರನ್ನು ವಿವಾಹವಾದರು. ದಂಪತಿಗೆ ತಾರಿಣಿ ಜಿಂದಾಲ್ ಮತ್ತು ತನ್ವಿ ಜಿಂದಾಲ್ (ತಾರ ಎಂಬ ಮಗಳಿದ್ದಾಳೆ) ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಪಾರ್ತ್ ಜಿಂದಾಲ್ ಎಂಬ ಮಗನಿದ್ದಾರೆ.
ಜೆಎಸ್ಡಬ್ಲ್ಯೂ ಫೌಂಡೇಶನ್ನಲ್ಲಿ ಇವರು ಜನರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಾರೆ. ವೃತ್ತಿಪರ ತರಬೇತಿ ಮತ್ತು ಸಹಭಾಗಿತ್ವ ಮತ್ತು ಸಂಸ್ಥೆಗಳೊಂದಿಗೆ ಮೈತ್ರಿ, ಮಾನಸಿಕ ವಿಕಲಚೇತನರಿಗೆ ಸಮಗ್ರ ಅಭಿವೃದ್ಧಿ, ಮತ್ತು ಗ್ರಾಮೀಣ ಬಿಪಿಒ ಮೂಲಕ ಮಹಿಳೆಯರ ಸಬಲೀಕರಣ ಸೇರಿದಂತೆ ಲೋಕೋಪಕಾರಿ ಕೆಲಸಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. [೭] "ಬೇಟಿ ಪಡಾವೊ, ಬೇಟಿ ಬಚಾವೊ" ಅಭಿಯಾನದ ಅಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಅಳವಡಿಸಿಕೊಂಡ ಮಿಷನ್ ಹಜಾರ್ ಅಭಿಯಾನ ಎಂಬ ಶಿಶು ಮತ್ತು ತಾಯಿಯ ಆರೋಗ್ಯ ಉಪಕ್ರಮ. [೮]
ಅವರು ಪರಿಸರ ಸಂರಕ್ಷಣೆಗಾಗಿ ಮತ್ತು ಅರ್ಥ್ ಕೇರ್ ಪ್ರಶಸ್ತಿಗಳ ಸಾಂಸ್ಥಿಕರಣಗೊಳಿಸುವ ಕೆಲಸ ಮಾಡುತ್ತಿದ್ದಾರೆ. [೯]
ಜೆಎಸ್ಡಬ್ಲ್ಯೂ ಫೌಂಡೇಶನ್ ಮೂಲಕ ಅವರು ಸರ್ ಜೆಜೆ ಸ್ಕೂಲ್ ಆಫ್ ಆರ್ಟ್ಸ್ನ ಒಳಾಂಗಣಗಳ ಸಂರಕ್ಷಣೆ ಮತ್ತು ಪುನಃಸ್ಥಾಪನೆಗೆ ಕೊಡುಗೆ ನೀಡಿದ್ದಾರೆ. [೧೦]
ಐಸೆನ್‌ಹೋವರ್ ಫೆಲೋ, ಅವರು ಟಿಇಡಿಎಕ್ಸ್ ಗೇಟ್‌ವೇಗೆ ಸಲಹೆಗಾರರಾಗಿದ್ದಾರೆ. [೧೧] ಭಾರತದಲ್ಲಿ ಯುಎನ್ ಮಹಿಳಾ ಸಬಲೀಕರಣ ತತ್ವಗಳ ಉಪಕ್ರಮದ ಅಧ್ಯಕ್ಷರಾಗಲು ಅವರನ್ನು ಆಹ್ವಾನಿಸಲಾಯಿತು. [೧೨]
ಎಫ್‌ಐಸಿಸಿಐ ಅವರಿಂದ ಮಹಿಳಾ ಲೋಕೋಪಕಾರಿ ಪ್ರಶಸ್ತಿಯನ್ನು ಸಹ ಅವರಿಗೆ ನೀಡಲಾಗಿದೆ. [೧೩]
ಅವರು 2000 ರಿಂದ 2003 ರವರೆಗೆ ಕಲಾ ಘೋಡಾ ಉತ್ಸವದ ಅಧ್ಯಕ್ಷರಾಗಿದ್ದರು. [೧೪]
ಹಂಪಿಯ ಮೂರು ದೇವಾಲಯಗಳಲ್ಲಿ ಸಂರಕ್ಷಣಾ ಕಾರ್ಯವನ್ನು ಕೈಗೊಂಡ ಹಂಪಿ ಫೌಂಡೇಶನ್ ಅನ್ನು ಅವರು ರಚಿಸಿದ್ದಾರೆ. [೧೫] [೧೬]
ಉಲ್ಲೇಖಗಳು
[ಬದಲಾಯಿಸಿ]- ↑ "Archived copy". Archived from the original on 11 December 2015. Retrieved 2 November 2015.
{{cite web}}
: CS1 maint: archived copy as title (link) - ↑ "The Fabulous Five".
- ↑ "ROLL OF HONOUR". goldenpeacockaward.com. Archived from the original on 4 ಮಾರ್ಚ್ 2021. Retrieved 27 January 2021.
- ↑ Menon, Rashmi (14 January 2015). "Mum's the word for JSW Steel's first lady Sangita Jindal". The Economic Times. Retrieved 8 November 2019.
- ↑ "The big, fat, Indian wedding: Sangita Jindal's nephew Akshay Kanoria ties the knot with Shreya Seksaria". The Economic Times. 8 March 2018. Retrieved 5 January 2021.
- ↑ Subramanyam, Chitra (6 August 2009). "The memory keeper". India Today (in ಇಂಗ್ಲಿಷ್). Retrieved 5 January 2021.
- ↑ "Latest News: India News | Latest Business News | BSE | IPO News". Moneycontrol.
- ↑ "Like mother, like daughter: The breakthrough Mission Hazaar campaign". The Economic Times. 15 October 2015. Retrieved 15 March 2021.
- ↑ "Earth care awards 2012: Celebrating the green champs". The Times of India. 16 September 2012. Retrieved 15 March 2021.
- ↑ "Kipling house to become museum". The Times of India. 5 October 2007. Retrieved 15 March 2021.
- ↑ "Sangita Jindal". Retrieved 15 March 2021.[permanent dead link]
- ↑ "Indian companies come together for the first time to champion gender equality". asiapacific.unwomen.org. March 8, 2013. Retrieved 15 March 2021.
- ↑ [೧][permanent dead link]
- ↑ "ಆರ್ಕೈವ್ ನಕಲು". Archived from the original on 2012-11-14. Retrieved 2021-06-19.
- ↑ "JSW Foundation chairperson Sangita Jindal is a patron of arts". The Economic Times. 27 November 2014. Retrieved 4 February 2021.
- ↑ Seth, Suhel (4 October 2014). "THE POLITICS OF CULTURE". Pune Mirror (in ಇಂಗ್ಲಿಷ್). Retrieved 4 February 2021.[permanent dead link]
- Pages using the JsonConfig extension
- CS1 maint: archived copy as title
- CS1 ಇಂಗ್ಲಿಷ್-language sources (en)
- All articles with dead external links
- Articles with dead external links from ಫೆಬ್ರವರಿ 2023
- Articles with invalid date parameter in template
- Articles with permanently dead external links
- Articles with dead external links from ಆಗಸ್ಟ್ 2021
- Articles with dead external links from ಜನವರಿ 2023
- Wikipedia articles needing style editing
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hCards
- ಜೀವಂತ ವ್ಯಕ್ತಿಗಳು
- ೧೯೬೨ ಜನನ