ವಿಷಯಕ್ಕೆ ಹೋಗು

ಸಂಕಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಕಲ್ಪ ಒಂದು ಸಂಸ್ಕೃತ ಪದವಾಗಿದೆ. ಇದರರ್ಥ ಹೃದಯ ಮತ್ತು ಮನಸ್ಸಿನಿಂದ ರೂಪಗೊಂಡ ಉದ್ದೇಶ -- ದೃಢ ಪ್ರತಿಜ್ಞೆ, ನಿಶ್ಚಯ, ಅಥವಾ ಇಚ್ಛೆ. ವ್ಯಾವಹಾರಿಕವಾಗಿ/ಆಚರಣೆಯಲ್ಲಿ, ಸಂಕಲ್ಪ ಎಂದರೆ ಒಂದು ನಿರ್ದಿಷ್ಟ ಗುರಿಯ ಮೇಲೆ ಮಾನಸಿಕವಾಗಿ ಹಾಗೂ ತಾತ್ವಿಕವಾಗಿ ಕೇಂದ್ರೀಕರಿಸುವೆನೆಂಬ ಏಕಬಿಂದು ನಿರ್ಧಾರ. ಸಂಕಲ್ಪವು ಇಚ್ಛಾಶಕ್ತಿಯನ್ನು ಬಳಸಿಕೊಳ್ಳುವ, ಮತ್ತು ದೇಹ ಹಾಗೂ ಮನಸ್ಸನ್ನು ಕೇಂದ್ರೀಕರಿಸಿ ಸಮನ್ವಯಗೊಳಿಸುವ ಸಾಧನವಾಗಿದೆ. ಸಂಕಲ್ಪದ ಪರಿಕಲ್ಪನೆಯು ವೈದಿಕ ಋಷಿಗಳಿಗೆ ತಿಳಿದಿತ್ತು. ಸಂಧ್ಯಾವಂದನೆಯು ಅದರ ಕ್ರಿಯಾವಿಧಿಯ ಭಾಗಗಳಾಗಿ ಸಂಕಲ್ಪ ಮತ್ತು ಜಪ ಸಂಕಲ್ಪವನ್ನು ಒಳಗೊಂಡಿರುತ್ತದೆ.[] ಋಗ್ವೇದದಲ್ಲಿ, ಮಾಯೆ ಎಂದರೆ ದೇವತೆಗಳು ಅದ್ಭುತ ವಿಶ್ವಗಳ ವೈಭವವನ್ನು ಸೃಷ್ಟಿಸುವಂತೆ ಮಾಡುವ ಇಚ್ಛೆಯ ನಿಗೂಢ ಶಕ್ತಿಯ ಜ್ಞಾನ (ಸಂಕಲ್ಪ ಶಕ್ತಿ), ನಿರ್ದಿಷ್ಟ ಪ್ರಮಾಣದ ವಾಸ್ತವಿಕತೆಯ ಕೊರತೆಯಿರುವ ವಾಸ್ತವಿಕತೆಗಳನ್ನು ತರುವ ವಂಚನೆ ಅಥವಾ ಭ್ರಮೆ ಎರಡೂ ಆಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Sandhyaavandanam" (PDF). Archived from the original (PDF) on 2016-01-22. Retrieved 2019-01-28.


"https://kn.wikipedia.org/w/index.php?title=ಸಂಕಲ್ಪ&oldid=1058618" ಇಂದ ಪಡೆಯಲ್ಪಟ್ಟಿದೆ