ವಿಷಯಕ್ಕೆ ಹೋಗು

ಶಾರದಾ ದ್ವಿವೇದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾರದಾ ದ್ವಿವೇದಿ. शारदा द्विवेदी
ಜನನ
Sharda

c. 1942
ಮರಣ6 February 2012 (aged 69-70)
ಮುಂಬಯಿ, ಭಾರತ
ರಾಷ್ಟ್ರೀಯತೆಭಾರತಿಯ
ನಾಗರಿಕತೆಭಾರತೀಯ
ಶಿಕ್ಷಣ ಸಂಸ್ಥೆಸಿಂಡೆನ್ಹಾಮ್ ಕಾಲೇಜ್
ವೃತ್ತಿಇತಿಹಾಸಕಾರ್ತಿ.
ಗಮನಾರ್ಹ ಕೆಲಸಗಳುಐತಿಹಾಸಿಕ ಪುಸ್ತಕಗಳು; ಮುಂಬಯಿನಗರದ ಸುದೀರ್ಘ ಕಾಲದ ಬೆಳವಣಿಗೆಗಳ ಬಗ್ಗೆ ಸಚಿತ್ರ ಪುಸ್ತಕವನ್ನು ಶ್ರೀ ಮೆಹ್ರೋತ್ರರವರ ಜೊತೆ ಸೇರಿ ರಚಿಸಿದ್ದಾರೆ.
partnerಭಗಿರತ್ ದ್ವಿವೇದಿ
ಮಕ್ಕಳುರಾಧಿಕಾ ದ್ವಿವೇದಿ

ಶಾರದಾ ದ್ವಿವೇದಿ,[] ಮುಂಬಯಿನಗರದ ಐತಿಹಾಸಿಕ ವಿವರಣೆಗಳನ್ನು ಅತ್ಯಂತ ಕಾಳಜಿವಹಿಸಿ ಅಧ್ಯಯನ ಮಾಡಿ, ಅವನ್ನು ಸಚಿತ್ರರೂಪದಲ್ಲಿ ಪ್ರಸ್ತುತಪಡಿಸಿದ ಸುಪ್ರಸಿದ್ಧ ಭಾರತೀಯ ಇತಿಹಾಸಕಾರರಲ್ಲಿ ಮೊದಲಿಗರು. ಅವರು ನಗರದ ಅತ್ಯಂತ ಪುರಾತನ ಇತಿಹಾಸವನ್ನು ತಮ್ಮ ಜೀವನದುದ್ದಕ್ಕೂ ವ್ಯಾಸಂಗಮಾಡಿ ಸನ್ನಿವೇಶಗಳನ್ನು ಸತತವಾಗಿ ಪರಿಷ್ಕರಿಸುತ್ತಲೇ ಇದ್ದರು. ಅವರು ಬರೆದ ಹಲವಾರು ಪುಸ್ತಗಳು ಜನರ ಮನ್ನಣೆ ಗಳಿಸಿವೆ. 'ರಾಹುಲ್ ಮೆಹ್ರೋತ್ರ'ಜೊತೆ ಸೇರಿ ರಚಿಸಿದ 'ಪೆನೊರಮಿಕ್ ಕಾಫಿ ಟೇಬಲ್ ಬುಕ್,' ಜನರಿಗೆ ಬಹಳ ಪ್ರಿಯವಾಯಿತು. ತಮ್ಮ ಜೀವನದುದ್ದಕ್ಕೂ ಮುಂಬಯಿನಗರದ ವಿಸ್ಮಯ,ಮತ್ತು ಸಿಕ್ಕ ಹೊಸಹೊಸ ಮಾಹಿತಿಗಳನ್ನು ಪರಿಷ್ಕರಿಸುತ್ತಲೇ ಮುಂದುವರೆದರು. ಇಂಟರ್ನೆಟ್ ಮಾಧ್ಯಮದಲ್ಲಿ ಮುಂಬಯಿನಗರದ ಬಹುತೇಕ ಸಚಿತ್ರ ವಿವರಣೆಗಳನ್ನು ಒಟ್ಟಾರೆ ಕಾಣಬಹುದು.

ವಿದ್ಯಾಭ್ಯಾಸ

[ಬದಲಾಯಿಸಿ]

ದಕ್ಷಿಣ ಮುಂಬಯಿನಗರದ 'ಕ್ವೀನ್ಸ್ ಮೇರಿಸ್ ಸ್ಕೂಲ್', ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದು, ಮುಂಬಯಿ ವಿಶ್ವವಿದ್ಯಾಲಯದ ಅಡಿಯಲ್ಲಿದ್ದ, ಸಿಡೆನ್ಹಮ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕೊನಾಮಿಕ್ಸ್ ನಲ್ಲಿ ಲೈಬ್ರೆರಿ ಸೈನ್ಸ್ ವಿಷಯದಲ್ಲಿ ಪದವಿ ಗಳಿಸಿದರು. ಮುಂಬಯಿ ವಿಶ್ವವಿದ್ಯಾಲಯ್ದ ನೆರವಿನಿಂದ ಪ್ಯಾರಿಸ್ ನಲ್ಲಿ ರೆಫ಼ರೆನ್ಸ್ ವರ್ಕ್ಸ್ ನಲ್ಲಿ ತರಪೇತಿಪಡೆದರು. ಶಾರದ ಒಬ್ಬ ಸಮರ್ಥ ಸಂಶೋಧಕಿ. ಅವರು ಮುಂಬಯಿನಗರದ ಇತಿಹಾಸ ಮತ್ತು ಪರಿಸರಗಳ ಬಗ್ಗೆ ಪ್ರಖ್ಯಾತ ಛಾಯಾಗ್ರಾಹಕ ರಾಹುಲ್ ಮೆಹ್ರೋತ್ರ, ಜೊತೆಸೇರಿ ಒಟ್ಟಾರೆ ೬ ಪ್ರಮುಖ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.

  1. ಮುಂಬಯಿ, ದಿ ಸಿಟೀಸ್ - ವಿತಿನ್(೧೯೯೫, ೨೦೦೧) []
  2. ಬಂಗನ್ಗ, ಸೇಕ್ರೆಡ್ ಟ್ಯಾಂಕ್ (೧೯೯೬),
  3. ಫೋರ್ಟ್ ವಾಕ್ಸ್ (೧೯೯೯)
  4. ಅಂಚಾರಿಂಗ್ ಆಫ್ ಸಿಟಿ ಲೈನ್ ದಿ ಹಿಸ್ಟರಿ ಆಫ್ ದಿ ವೆಸ್ಟೆರ್ನ್ ಸಬರ್ಬನ್ ರೈಲ್ವೆ ಅಂಡ್ ಇಟ್ಸ್ ಹೆಡ್ಕ್ವಾರ್ಟರ್ಸ್ ಇನ್ ಮುಂಬಯಿ .
  5. ಜಹಂಗೀರ್ ಆರ್ಟ್ ಗ್ಯಾಲರಿ, ೧೯೫೨ ಸ್ಥಾಪಿಸಲಾಯಿತು
  6. ವಿಕ್ಟೋರಿಯಾ ಮೆಮೋರಿಯಲ್ ಸ್ಕೂಲ್ ಬ್ಲೈಂಡ್, ೧೯೦೨ ಸ್ಥಾಪನೆ (೨೦೦೨).

ತಮ್ಮ ಜೀವನದುದ್ದಕ್ಕೂ ತಮ್ಮ ಮರಣದವರೆಗೆ, ಹಲವಾರು ಜನಪ್ರಿಯ ಲೇಖನಗಳನ್ನು ಬರೆಯುತ್ತಾ ಬಂದಿದ್ದರು. ಮುಂಬಯಿನಗರದ ಕನ್ಸರ್ವೇಶನ್ ಮತ್ತು (UDRI) ನಗರ ಸಮಸ್ಯೆಗಳ ಬಗ್ಗೆ. ತಮ್ಮ ಪ್ರಿಯವಾದ ಇತಿಹಾಸವಿಷಯಗಳಲ್ಲದೇ ಹಲವಾರು ವಿಶಯಗಳ ಬಗ್ಗೆ ಬರೆದಿದ್ದಾರೆ.

  • ಕಲೆ,
  • ಕಟ್ಟಡ ಶಿಲ್ಪ ವಿನ್ಯಾಸ,
  • ಮನೆಯೊಳಗೆ ಅಲಂಕಾರ ನಿರ್ವಹಣೆಗಳು,
  • ಸಂಪ್ರದಾಯ ಸಂರಕ್ಷಣೆ,
  • ಭಾರತೀಯ ಸಾಂಪ್ರದಾಯಿಕ, ಮತ್ತು ಹೊಸಹೊಸ ಅಡುಗೆಗಳು. ಮೊದಲಾದವುಗಳನ್ನೊಳಗೊಂಡಿದವೆ.

ಮತ್ತಿತರ ಪುಸ್ತಗಳು

[ಬದಲಾಯಿಸಿ]
  1. ಲೈವ್ಸ್ ಆ ದಿ ಇಂಡಿಯನ್ ಪ್ರಿನ್ಸಸ್ (೧೯೮೪),
  2. ರೀಚ್ ಫಾರ್ ದಿ ಸ್ಟಾರ್ಸ್ (೧೯೯೩),
  3. ಆ ಕಾರ್ಪೊರೇಟ್ ಹಿಸ್ಟರಿ ಆ ಬ್ಲೂ ಸ್ಟಾರ್ ಲ್ತ್ದ್
  4. ದಿ ಬ್ರೋಕನ್ ಫ್ಲ್ಯೂಟ್ (೧೯೯೪, ಆ ಚಿಲ್ಡ್ರನ್'ಸ್ ನಾವೆಲ್),
  5. ದಿ ಮಹಾರಾಜಾ (೧೯೯೯)
  6. ಅಬು ಜನಿ-ಸಂದೀಪ್ ಖೋಷ್ಯಾ, ಆ ಸೆಲೆಬ್ರೇಶನ್ ಆ -ಸ್ಟೈಲ್ (೨೦೦೦).

ಮುಂಬಯಿನಗರದ ಹಲವು ಅಭಿವೃದ್ಧಿ ಸಮಿತಿಗಳಲ್ಲಿ

[ಬದಲಾಯಿಸಿ]
  • ಸಹ ಆಯ್ಕೆಯಾದಸದಸ್ಯೆ, ಮುಂಬಯಿ ಪರಂಪರೆ, ಮತ್ತು ಸಂರಕ್ಷಣ ಸಮಿತಿ.
  • ಕಾರ್ಯ ನಿರ್ವಾಹಕ ಸಮಿತಿ, ನಗರ ವಿನ್ಯಾಸ ಮತ್ತು ಸಂಶೋಧೆನ,ಸಂಸ್ಥಾನ (UDRI) ಮತ್ತು ಕಾಲಾಘೋಡ ಅಸೋಸಿಯೇಶನ್
  • ಸಲಹೆಗಾರ್ತಿ, ಮುಂಬಯಿನಗರದ ಸಹಕಾರಿ ಯೋಜನೆಗಳು.

ಪರಿವಾರ

[ಬದಲಾಯಿಸಿ]

ಪತಿ,ಭಗಿರಥ್ ದ್ವಿವೇದಿ, ಮತ್ತು ಮಗಳು, ರಾಧಿಕ.

೬೯ ವರ್ಷ ಪ್ರಾಯದ ಶಾರದಾ ದ್ವಿವೇದಿಯವರು ಮುಂಬಯಿನಗರದ ತಮ್ಮ ನಿವಾಸದಲ್ಲಿ ೭, ಫೆಬ್ರವರಿ,೨೦೧೨ ರಲ್ಲಿ ನಿಧನರಾದರು.[]

ಉಲ್ಲೇಖಗಳು

[ಬದಲಾಯಿಸಿ]
  1. 'Sharada dwivedi, Open Book Library
  2. Bombay: The Cities Within-Sharada Dwivedi, Rahul Mehrotra
  3. FEBRUARY 7, 2012 9:40 AM BY MICHAEL EDISON HAYDEN Sharada Dwivedi: Death of a Chronicler