ವ್ಯೂಹ
ಗೋಚರ
ವ್ಯೂಹ ಎಂದರೆ - 'ಒಂದು ಯುದ್ಧ ರಚನೆಯಲ್ಲಿ ಸೇನಾಪಡೆಗಳನ್ನು ವ್ಯವಸ್ಥೆಗೊಳಿಸುವುದು', 'ವ್ಯವಸ್ಥೆಗೊಳಿಸುವುದು, ಕ್ರಮಗೊಳಿಸುವುದು, ಸರಿಯಾಗಿ ಜೋಡಿಸುವುದು, ಪ್ರತ್ಯೇಕಿಸುವುದು, ವಿಭಜಿಸುವುದು, ಮಾರ್ಪಡಿಸುವುದು, ಸ್ಥಳಾಂತರಿಸುವುದು, ಕ್ರಮಗೆಡಿಸುವುದು, (ಸ್ವರಗಳು, ಉಚ್ಚಾರಾಂಶಗಳು, ಇತ್ಯಾದಿಗಳನ್ನು) ತೀರ್ಮಾನಿಸುವುದು'. व्यः ಇದರ ಮೂಲವಾಗಿದೆ, ಇದರರ್ಥ 'ಹೊದಿಕೆ' ಅಥವಾ 'ಮುಸುಕು'. ಈ ಶಬ್ದವು ಹೊಮ್ಮುವಿಕೆ ಮತ್ತು ವಿಷ್ಣುವಿನ ವ್ಯಕ್ತ ಶಕ್ತಿಯನ್ನು ಕೂಡ ಸೂಚಿಸುತ್ತದೆ.[೧] ಶಾಸ್ತ್ರಗ್ರಂಥದ ಸಿದ್ಧಾಂತ ಮತ್ತು ಸಂದರ್ಭವನ್ನು ಅವಲಂಬಿಸಿ ಇದರ ಭಿನ್ನ ಅರ್ಥಗಳಿವೆ, ಉದಾಹರಣೆಗೆ ವೇದಗಳ ಜ್ಞಾನವನ್ನು ಬಹಿರಂಗಗೊಳಿಸುವುದು, ವಿಷ್ಣು ಅಥವಾ ಬುದ್ಧನ ಅಭಿವ್ಯಕ್ತಿ, ಮತ್ತು ಮಹಾಭಾರತದ ಯುದ್ಧ ರಚನೆಗಳು.
ಮಹಾಭಾರತದಲ್ಲಿ ವ್ಯೂಹದ ಪರಿಕಲ್ಪನೆ: ಯುದ್ಧ ರಚನೆಗಳು
[ಬದಲಾಯಿಸಿ]ಮಹಾಭಾರತ ಮತ್ತು ಮನುಸಂಹಿತೆಯು ಅನೇಕ ವ್ಯೂಹಗಳನ್ನು ಪಟ್ಟಿಮಾಡುತ್ತದೆ, ಕೆಲವು ಚಿಕ್ಕದಾಗಿದ್ದವು ಮತ್ತು ಬೇರೆಯವು ಭಾರಿ ದೊಡ್ಡದಾಗಿದ್ದವು, ಉದಾಹರಣೆಗೆ :[೨]
- ಅರ್ಧಚಂದ್ರವ್ಯೂಹ .
- ಚಕ್ರವ್ಯೂಹ .
- ಗರ್ಭವ್ಯೂಹ .
- ಮಕರವ್ಯೂಹ .
- ಮಂಡಲವ್ಯೂಹ .
- ಊರ್ಮಿವ್ಯೂಹ .
- ಶಕಟವ್ಯೂಹ .
- ಸರ್ವತೋಭದ್ರವ್ಯೂಹ .
- ಸುಚಿವ್ಯೂಹ .
- ಶ್ಯೇನವ್ಯೂಹ.
- ವಜ್ರವ್ಯೂಹ.
ಉಲ್ಲೇಖಗಳು
[ಬದಲಾಯಿಸಿ]- ↑ V.S.Apte. the Practical Sanskrit-English Dictionary. Digital Dictionaries of South Asia. pp. 157, 1522.
- ↑ Science, Technology, Imperialism and War. Pearson publication. pp. 295–296.