ವಿಷ್ಣುಪಾದ ಮಂದಿರ
ಗೋಚರ
ವಿಷ್ಣುಪಾದ ಮಂದಿರವು ಭಾರತದ ಬಿಹಾರ ರಾಜ್ಯದ ಗಯಾದಲ್ಲಿರುವ ಒಂದು ಪ್ರಾಚೀನ ದೇವಾಲಯವಾಗಿದೆ. ಇದು ವಿಷ್ಣುವಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ.
ಈ ದೇವಾಲಯವು ಫ಼ಲ್ಗು ನದಿಯ ಬದಿಯಲ್ಲಿ ಸ್ಥಿತವಾಗಿದೆ. ಇದು ಧರ್ಮಶಿಲೆ ಎಂದು ಕರೆಯಲ್ಪಡುವ ವಿಷ್ಣುವಿನ ಒಂದು ಹೆಜ್ಜೆಗುರುತಿನಿಂದ ಗುರುತಿಸಲ್ಪಟ್ಟಿದೆ. ಇದು ಬ್ಯಾಸಾಲ್ಟ್‌ನ ಒಂದು ಖಂಡದಲ್ಲಿ ಕೆತ್ತಲ್ಪಟ್ಟಿದೆ. ಈ ರಚನೆಯ ತುದಿಯಲ್ಲಿ ಗಯಾಪಾಲ್ ಪಾಂಡಾ ಬಾಲ್ ಗೋವಿಂದ್ ಸೇನ್ ಎಂಬ ಒಬ್ಬ ಭಕ್ತನು ದಾನಮಾಡಿದ ೫೦ ಕಿಲೊ ತೂಕದ ಚಿನ್ನದ ಬಾವುಟವಿದೆ.
ದೇವಾಲಯದ ನಿರ್ಮಾಣದ ದಿನಾಂಕವು ಅಪರಿಚಿತವಾಗಿದೆ ಮತ್ತು ರಾಮನು ಸೀತೆಯ ಜೊತೆಗೆ ಈ ಸ್ಥಳಕ್ಕೆ ಭೇಟಿನೀಡಿದ್ದನೆಂದು ನಂಬಲಾಗಿದೆ.[೧] ಇಂದಿನ ದಿನದ ರಚನೆಯನ್ನು ಇಂದೋರ್‌ನ ರಾಣಿ ದೇವಿ ಅಹಲ್ಯಾ ಬಾಯಿ ಹೋಳ್ಕರ ೧೭೮೭ರಲ್ಲಿ ಫಲ್ಗು ನದಿಯ ತಟದ ಮೇಲೆ ಮರು ನಿರ್ಮಿಸಿದಳು. ಭೇಟಿಕಾರರು ಮೇಲಿನಿಂದ ದೇವಾಲಯದ ನೋಟ ನೋಡಲು ಬ್ರಹ್ಮಜುನಿ ಗುಡ್ಡದ ಶಿಖರದ ಮೇಳೆ ಹೋಗಲು ಇಷ್ಟಪಡುತ್ತಾರೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ "History of Vishnupad". Department of Tourism, Government of Bihar. Archived from the original on 2 April 2009. Retrieved 2 March 2017.
- ↑ "Vishnupad Temple Gaya | Location | History | Best Time to Visit". Travel News India (in ಅಮೆರಿಕನ್ ಇಂಗ್ಲಿಷ್). 2016-09-25. Archived from the original on 2017-03-08. Retrieved 2017-03-08.