ವಿಷಯಕ್ಕೆ ಹೋಗು

ವಿಲ್ಸನ್ ಕಾಲೇಜ್, ಮುಂಬಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'೧೮೯೩ ರಲ್ಲಿ ವಿಲ್ಸನ್ ಕಾಲೇಜ್'
'ಮುಂಬಯಿನಗರದ ವಿಲ್ಸನ್ ಕಾಲೇಜ್',(೨೦ ನೆಯ ಶತಮಾನದಲ್ಲಿ)

ದ ವಿಲ್ಸನ್ ಕಾಲೇಜ್,[] ೧೮೩೨ ರಲ್ಲಿ ದಕ್ಷಿಣ ಮುಂಬಯಿನ ಚೌಪಾತಿಯಲ್ಲಿ ಸ್ಥಾಪಿಸಲ್ಪಟ್ಟಿತು. 'ವಿಲ್ಸನ್ ಕಾಲೇಜ್', ಭಾರತದಲ್ಲಿ ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟ ಅತಿ ಪುರಾತನ ಕಾಲೇಜ್ ಗಳಲ್ಲೊಂದು. ಮುಂಬಯಿ ವಿಶ್ವವಿದ್ಯಾಲಯ ಅಸ್ಥಿತ್ವಕ್ಕೆ ಬರುವ ಎರಡೂವರೆ ದಶಕಗಳ ಮೊದಲೇ ಈ ಕಾಲೇಜ್ ಕೆಲಸಮಾಡುತ್ತಿತ್ತು. ೨೦೦೫ ರಲ್ಲಿ ಈ ಕಾಲೇಜಿಗೆ ಸರ್ಟಿಫಿಕೇಟ್ ದೊರೆಯಿತು. (National Assessment and Accreditation Council, NAAC) ಈ ಕಾಲೇಜ್, ಮುಂಬಯಿ ಉಪನಗರದ ಗಿರ್ಗಾಮ್ ಚೌಪಾತಿಯಲ್ಲಿದೆ. ೧೮೮೯ ರಲ್ಲಿ ಕಾಲೇಜ್ ಕಟ್ಟಡವನ್ನು ಜಾನ್ ಆಡಮ್ಸ್ ಎಂಬ ಕಟ್ಟಡ ಶಿಲ್ಪಿ ವಿಕ್ಟೋರಿಯನ್ ಗಾಥಿಕ್ ಶೈಲಿಯಲ್ಲಿ ನಿರ್ಮಿಸಿದರು. ಸ್ಥಾನೀಯವಾಗಿ (Grade III Heritage) ಹೆರಿಟೇಜ್ ಕಟ್ಟಡವೆಂದು ಗುರುತಿಸಲಾಗುತ್ತದೆ. 'ವಿಲ್ಸನ್ ಕಾಲೇಜ್',[] ನಗರದಲ್ಲಿ ೨೦೧೧ ರಲ್ಲಿ, ಕಾಲೇಜ್ ಹೈಯರ್ ಸೆಕೆಂಡರಿ ಮತ್ತು ಪದವಿಪೂರ್ವ ತರಗತಿಗಳಿಗೆ ಗೆ ಹಲವಾರು ವಿಷಯಗಳನ್ನು ಒದಗಿಸಿತ್ತು. ವಿಶ್ವವಿದ್ಯಾಲಯದ ಸಹಾಯಕ ವಿಷಯಗಳು ಸೇರಿದ್ದವು. ಕಲೆ ಮತ್ತು ವಿಜ್ಞಾನವಲ್ಲದೆ ಸ್ವತಃ ಹಣ ಒದಗಿಸಿದ ಪಠ್ಯಕ್ರಮಗಳು.

  • Mass Media,
  • Information Technology,
  • Management Studies,
  • Biotechnology
  • Computer Science.

ಜಾನ್ ವಿಲ್ಸನ್ ಮುಂಬಯಿನಲ್ಲಿ

[ಬದಲಾಯಿಸಿ]

ಭಾರತದಲ್ಲಿ ಪಾದ್ರಿ,ಜಾನ್ ವಿಲ್ಸನ್,[] ೧೮೩೨ ರಲ್ಲಿ ಮುಂಬಯಿಗೆ ಫೆಬ್ರವರಿ, ೧೮೨೯ ರಲ್ಲಿ ಬಂದನಂತರ, ಅವರು ಮತ್ತು ಅವರ ಪತ್ನಿ ಮಾರ್ಗರೆಟ್ ವಿಲ್ಸನ್,[] ಸ್ಥಾನೀಯ ಭಾಷೆಗಳಲ್ಲಿ ಪ್ರಮುಖವಾದ ಮರಾಠಿ ಕಲಿಯಲು ಆರಂಭಿಸಿದರು. ೧೮೨೯ ರಲ್ಲಿ ಮಾರ್ಗರೆಟ್ ಒಂದು ಶಾಲೆಯನ್ನು ಅಮ್ರೋಲಿ ಹೌಸ್ ಗಿರ್ಗಾಮ್ ನಲ್ಲಿ ಸ್ಥಾಪಿಸಿದಳು. ಮರಾಠಿಕಲಿಯಲು ಹಾಗೂ ಕಲಿಸಲು ಪ್ರಮುಖ ಮಾಧ್ಯಮ ಭಾಷೆಯಾಗಿತ್ತು. ೧೮೩೩ ರಲ್ಲಿ ಇಂಗ್ಲೀಷ್ ಮಾಧ್ಯಮ ದಲ್ಲಿ ಬೋರ್ಡಿಂಗ್ ಶಾಲೆ ಆರಂಭವಾಯಿತು. ಅದನ್ನೇ ಸೇಂಟ್ ಕೊಲಂಬಿಯ ಸ್ಕೂಲ್ ಎಂದು ಕರೆದರು. ಅಮ್ರೋಲಿ ಇಂಗ್ಲೀಷ್ ಸ್ಕೂಲ್ ಈಗಿನ ಕಾಲೇಜಿಗೆ ಪ್ರೇರಣೆಯಾಗಿ ಮೊದಲು ಆರಂಭಿಸಲ್ಪಟ್ಟಿತ್ತು.

೧೮೭೫ ರಲ್ಲಿ ರೆವೆರೆಂಡ್ ಡಾ.ವಿಲ್ಸನ್, ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]
  1. "Wilson College, Mumbai, The Telegraph, December 08, 2004". Archived from the original on ಜೂನ್ 6, 2015. Retrieved ಏಪ್ರಿಲ್ 16, 2015.
  2. "'Wilson College, Girgaum, Mumbai'". Archived from the original on 2015-04-16. Retrieved 2015-04-16.
  3. Life of John Wilson; DDFRS, For fifty years philanthropist and scholar in the East, by George Smith, LL.D. 1878
  4. Memoir of Mrs. Margaret Wilson of the Scottish Mission, Bombay includes Extracts from her letters and Journals, by John Wilson, D.D; M.R.A.S, 1837

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]