ವಿಷಯಕ್ಕೆ ಹೋಗು

ಲಂಟಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಂಟಾನ ಒಂದು ಹೂಬಿಡುವ ಸಸ್ಯ ಪ್ರಜಾತಿಯಾಗಿದೆ, ಮತ್ತು ಅಮೇರಿಕದ ಉಷ್ಣವಲಯಗಳಿಗೆ ಸ್ಥಳೀಯವಾಗಿದೆ.[]

ಲಂಟಾನ ಗಿಡವನ್ನು ಹಲವುವೇಳೆ ಒಳಾಂಗಣದಲ್ಲಿ ಅಥವಾ ಸಂರಕ್ಷಣಾಲಯದಲ್ಲಿ ನೆಡಲಾಗುತ್ತದೆ ಆದರೆ ಸಾಕಷ್ಟು ಆಶ್ರಯವಿದ್ದರೆ ಉದ್ಯಾನದಲ್ಲಿಯೂ ಬಳಸಬಹುದು. ಇದು ತನ್ನ ತವರಾದ ಮಧ್ಯ ಹಾಗೂ ದಕ್ಷಿಣ ಅಮೇರಿಕಾದಿಂದ ಸುಮಾರು ೫೦ ವಿಭಿನ್ನ ದೇಶಗಳಿಗೆ ಹರಡಿದೆ, ಮತ್ತು ಅಲ್ಲಿ ಇದು ಆಕ್ರಮಣಶೀಲ ಪ್ರಜಾತಿಯಾಗಿದೆ. ಡಚ್ ಅನ್ವೇಷಕರು ಇದನ್ನು ಯೂರೋಪ್‍ಗೆ ತಂದು ವ್ಯಾಪಕವಾಗಿ ಕೃಷಿಮಾಡಿದಾಗ, ಇದು ಅಮೇರಿಕಾ ಖಂಡಗಳಿಂದ ವಿಶ್ವದ ಉಳಿದೆಡೆ ಹರಡಿತು. ಬೇಗನೇ ಇದು ಏಷ್ಯಾ ಹಾಗೂ ಓಷಿಯಾನಿಯಾದೊಳಗೆ ಹರಡಿತು, ಮತ್ತು ಈ ಭಾಗಗಳಲ್ಲಿ ಇದು ಕುಪ್ರಸಿದ್ಧ ಕಳೆಸಸ್ಯವಾಗಿ ಸ್ಥಾಪನೆಗೊಂಡಿತು.

ಲಂಟಾನ ಗಿಡವು ಹಲವುವೇಳೆ ಇತರ ಹೆಚ್ಚು ಅಪೇಕ್ಷಣೀಯ ಪ್ರಜಾತಿಗಳನ್ನು ಹಿಂದಿಕ್ಕಿ ಬೆಳೆದು ಜೀವವೈವಿಧ್ಯವನ್ನು ಕಡಿಮೆಮಾಡುತ್ತದೆ. ಇದು ಕೃಷಿ ಪ್ರದೇಶಗಳಲ್ಲಿ ನುಗ್ಗಿದರೆ ಎರಡು ಕಾರಣಗಳಿಂದ ಸಮಸ್ಯೆಗಳನ್ನೂ ಉಂಟುಮಾಡಬಹುದು. ಮೊದಲನೆಯದಾಗಿ ಇದು ಜಾನುವಾರುಗಳಿಗೆ ವಿಷಕಾರಿಯಾಗಿದೆ. ಎರಡನೆಯದಾಗಿ, ಇದು ದಟ್ಟ ಪೊದೆಗಳನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ, ಇದನ್ನು ಅನಿಯಂತ್ರಿತವಾಗಿ ಬಿಟ್ಟರೆ, ಕೃಷಿಭೂಮಿಯ ಉತ್ಪಾದಕತೆಯನ್ನು ಬಹಳವಾಗಿ ಕಡಿಮೆ ಮಾಡಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Floridata LC (2007). "Lantana camara". Floridata LC. Retrieved March 24, 2014.
"https://kn.wikipedia.org/w/index.php?title=ಲಂಟಾನ&oldid=903440" ಇಂದ ಪಡೆಯಲ್ಪಟ್ಟಿದೆ