ರೋಮಂಥಕ
ರೋಮಂಥಕಗಳು ಜೀರ್ಣಕ್ರಿಯೆಗೆ ಮುನ್ನ ಒಂದು ವಿಶೇಷೀಕೃತ ಹೊಟ್ಟೆಯಲ್ಲಿ ಆಹಾರವನ್ನು (ಪ್ರಧಾನವಾಗಿ ಸೂಕ್ಷ್ಮಜೀವಿಕ ಕ್ರಿಯೆಗಳಿಂದ) ಕಿಣ್ವನಕ್ಕೆ ಗುರಿಪಡಿಸುವ ಮೂಲಕ, ಸಸ್ಯಾಧಾರಿತ ಆಹಾರದಿಂದ ಪೋಷಕಾಂಶಗಳನ್ನು ಪಡೆಯಬಲ್ಲ ಸಸ್ತನಿಗಳು. ಈ ಪ್ರಕ್ರಿಯೆಯು ಜೀರ್ಣಾಂಗ ವ್ಯವಸ್ಥೆಯ ಮುಂಭಾಗದಲ್ಲಿ ನಡೆಯುತ್ತದೆ ಮತ್ತು ಹಾಗಾಗಿ ಇದನ್ನು ಮುಂಗರುಳು ಕಿಣ್ವನ ಎಂದು ಕರೆಯಲಾಗುತ್ತದೆ. ಇದಕ್ಕೆ ಸಾಮಾನ್ಯವಾಗಿ ಕಿಣ್ವನಕ್ಕೆ ಗುರಿಯಾದ ಸೇವಿಸಿದ ವಸ್ತುವನ್ನು (ಮೆಲುಕು/ರೋಮಂಥ ಎಂದು ಕರೆಯಲ್ಪಡುತ್ತದೆ) ಕಕ್ಕಿ ಮತ್ತೊಮ್ಮೆ ಅಗಿಯುವ ಅಗತ್ಯವಿರುತ್ತದೆ. ಸಸ್ಯ ವಸ್ತುವನ್ನು ಮತ್ತಷ್ಟು ಜೀರ್ಣ ಮಾಡಿ ಜೀರ್ಣಕ್ರಿಯೆಯನ್ನು ಕೆರಳಿಸುವ ಸಲುವಾಗಿ ರೋಮಂಥವನ್ನು ಮತ್ತೊಮ್ಮೆ ಅಗಿಯುವ ಪ್ರಕ್ರಿಯೆಯನ್ನು ರೋಮಂಥನ ಎಂದು ಕರೆಯಲಾಗುತ್ತದೆ.[೧]
ಅಸ್ತಿತ್ವದಲ್ಲಿರುವ ರೋಮಂಥಕಗಳ ಸರಿಸುಮಾರು ೨೦೦ ಪ್ರಜಾತಿಗಳಲ್ಲಿ ಪಳಗಿಸಿದ ಮತ್ತು ಕಾಡು ಪ್ರಜಾತಿಗಳು ಎರಡೂ ಸೇರಿವೆ. ರೋಮಂಥಕ ಸಸ್ತನಿಗಳಲ್ಲಿ ದನಗಳು, ಎಲ್ಲ ಪಳಗಿಸಿದ ಹಾಗೂ ಕಾಡು ಗೋಜಾತಿ ಪ್ರಾಣಿಗಳು, ಮೇಕೆಗಳು, ಕುರಿಗಳು, ಜಿರಾಫೆಗಳು, ಜಿಂಕೆಗಳು, ಗೆಜೆಲ್‍ಗಳು ಮತ್ತು ಎರಳೆಗಳು ಸೇರಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ "Rumination: The process of foregut fermentation". Archived from the original on 2013-07-19. Retrieved 2019-02-13.