ವಿಷಯಕ್ಕೆ ಹೋಗು

ರಾಬರ್ಟ್ ಮ್ಯಾಕ್ಸ್ ವೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Infobox MP

ಇಯಾನ್ ರಾಬರ್ಟ್ ಮ್ಯಾಕ್ಸ್ ವೆಲ್ (1989)

ಇಯಾನ್ ರಾಬರ್ಟ್ ಮ್ಯಾಕ್ಸ್ ವೆಲ್ MC (೧೦ ಜೂನ್ ೧೯೨೩ – ೫ ನಚೆಂಬರ್ ೧೯೯೧) ಒಬ್ಬ ಝೆಕೊಸ್ಲೋವಾಕಿಯಾ ದಲ್ಲಿ ಜನಿಸಿದ ಬ್ರಿಟಿಷ್ ಮಾಧ್ಯಮ ಮಾಲಿಕ ಹಾಗೂ ಮಾಜಿ ಸಂಸತ್ ಸದಸ್ಯ (MP)ರಾಗಿದ್ದರು; ಅವರು ಬಡತನದ ಆಳದಿಂದ ಹಂತ ಹಂತವಾಗಿ ಮೇಲೇರಿ ಒಂದು ಬೃಹತ್ ಪ್ರಕಾಶನ ಸಾಮ್ರಾಜ್ಯವನ್ನೇ ಸ್ಥಾಪಿಸಿದರು. ಅವರ ಮರಣದ ನಂತರ ಅವರ ಕಂಪನಿಯ ಆರ್ಥಿಕ ವ್ಯವಸ್ಥೆಯಲ್ಲಿ ಕರಾಳವಾದ ಕಂದರಗಳಿರುವುದು ಗೋಚರವಾಯಿತು; ಆ ಕಂದರಗಳ ಪೈಕಿ ಮಿರರ್ ತಂಡದವರ ನಿವೃತ್ತಿವೇತನದ ಹಣವನ್ನೂ ಮ್ಯಾಕ್ಸ್ ವೆಲ್ ಅಕ್ರಮವಾಗಿ ಬಳಸಿಕೊಂಡಿರುವುದು ಕಂಡುಬಂದದ್ದೂ ಒಂದು.

ಆರಂಭಿಕ ಜೀವನ

[ಬದಲಾಯಿಸಿ]

ರಾಬರ್ಟ್ ಮ್ಯಾಕ್ಸ್ ವೆಲ್ ಯಿಡ್ಡಿಷ್ ಭಾಷೆ ಮಾತನಾಡುವ ಯಹೂದಿಗಳ ಒಂದು ಬಡ [][] ಕುಟುಂಬದಲ್ಲಿ ಜನಿಸಿದರು. ಇವರ ಯಿಡ್ಡಿಷ್ ನಾಮಧೇಯ ಜಾನ್ ಲುಡ್ವಿಕ್ ಹಾಚ್ ಎಂದು. ಎರಡನೆಯ ಮಹಾಯುದ್ಧಕ್ಕೂ ಮುಂಚಿನ ಝೆಕೊಸ್ಲೋವಾಕಿಯಾದ ಪೂರ್ವದ ತುತ್ತತುದಿಯಲ್ಲಿದ್ದ ಪ್ರದೇಶವಾದ ಸ್ಲಾಟಿನ್ ಸ್ಕೆ ಡೋಲಿಯ ಸಣ್ಣ ಪಟ್ಟಣ(ಈಗಿನ ಯುಕ್ರೇನ್ ನ ಸೋಲೋವಿನೋ)ದಲ್ಲಿ ಇವರು ಜನಿಸಿದರು. ಇವರ ತಂದೆಯ ಹೆಸರು ಮೆಷೆಲ್ ಹಾಚ್, ತಾಯಿ ಹನ್ನಾ ಸ್ಲೋಮೋವಿಟ್ಝ್. ಅವರಿಗೆ ೧೬ ಜನ ಸಹೋದರ/ಸಹೋದರಿಯರಿದ್ದರು. ೧೯೩೯ ರಲ್ಲಿ ಈ ಪ್ರದೇಶವನ್ನು ಹಂಗೇರಿ ಮತ್ತೆ ತನ್ನದಾಗಿಸಿಕೊಂಡಿತು. ೧೯೪೪ ರಲ್ಲಿ ಹಂಗೇರಿಯನ್ನು ಒಮ್ಮೆ ಮಿತ್ರರಾಷ್ಟ್ರವಾಗಿದ್ದ ನಾಝಿ ಜರ್ಮನಿಯು ಆಕ್ರಮಿಸಿಕೊಂಡಾಗ ಈ ಕುಟುಂಬದ ಬಹುತೇಕ ಸದಸ್ಯರು ಆಷ್ವಿಟ್ಝ್ ನಲ್ಲಿ ಹಿಟ್ಲರ್ ನ ಗ್ಯಾಸ್ ಛೇಂಬರ್ ನಲ್ಲಿ ಕೊಲ್ಲಲ್ಪಟ್ಟು, ಆದರೆ ಅಷ್ಟು ಹೊತ್ತಿಗಾಗಲೇ ಮ್ಯಾಕ್ಸ್ ವೆಲ್ ಅಲ್ಲಿಂದ ತಪ್ಪಿಸಿಕೊಂಡು ಬಹಳ ಕಾಲವಾಗಿತ್ತು; ಮ್ಯಾಕ್ಸ್ ವೆಲ್ ೧೭ ರ ಹರೆಯದ ನಿರಾಶ್ರಿತರಾಗಿ ೧೯೪೦ ರಲ್ಲೇ ಬ್ರಿಟನ್ ಸೇರಿಬಿಟ್ಟಿದ್ದರು.[]. ೧೯೪೧ ರಲ್ಲಿ ಮ್ಯಾಕ್ಸ್ ವೆಲ್ ಬ್ರಿಟಿಷ್ ಸೇನೆಯ ಪಯನಿಯರ್ ಕಾರ್ಪ್ಸ್ ತುಕಡಿಯನ್ನು ಸೇರಿದರು ಹಾಗೂ ೧೯೪೩ ರಲ್ಲಿ ಅವರನ್ನು ಉತ್ತರ ಸ್ಟಾಫರ್ಡ್ ಷೈರ್ ರೆಜಿಮೆಂಟ್ ಗೆ ವರ್ಗಾಯಿಸಲಾಯಿತು. ಅವರು ಸರ್ಜೆಂಟ್ ಆಗಿ ಯೂರೋಪಿನ ನಾರ್ಮಂಡಿ ಬೀಚ್ ನಿಂದ ಹಿಡಿದು ಬರ್ಲಿನ್‌ವರೆಗಿನ ಕಾರ್ಯಚಟುವಟಿಕೆಗಳಲ್ಲಿ ನಿರತರಾಗಿದ್ದರು.[]. ೧೯೪೫ ರಲ್ಲಿ ಅವರಿಗೆ ಒಂದು ಆದೇಶಾಧಿಕಾರವು ಒದಗಿಬಂದಿತು ಹಾಗೂ ಅವರಿಗೆ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಲಾಯಿತು; ಜನವರಿ ೧೯೪೫ ರಲ್ಲಿ ಫೀಲ್ಡ್ ಮಾರ್ಷಲ್ ಮಾಟ್ಗೋಮೆರಿಯವರಿಂದ ಮಿಲಿಟರಿ ಕ್ರಾಸ್ ಅನ್ನು ಪಡೆದರು. ಈ ಅವಧಿಯಲ್ಲಿಯೇ ಬ್ರಿಟಿಷ್ ಬೇಹುಗಾರ ಸಂಸ್ಥೆಯು ಇವರ ಹೆಸರನ್ನು ಹಲವಾರು ಬದಲಾಯಿಸಿತು ಮತ್ತು ಕಡೆಗೆ ಇಯಾನ್ ರಾಬರ್ಟ್ ಮ್ಯಾಕ್ಸ್ ವೆಲ್ ಎಂಬ ಹೆಸರನ್ನೇ ಖಾಯಂ ಆಗಿಸಿತು.[ಸೂಕ್ತ ಉಲ್ಲೇಖನ ಬೇಕು] ೧೯೪೫ ರಲ್ಲಿ ಅವರು ಎಲಿಝಬೆತ್ "ಬೆಟ್ಟಿ" ಮೇಯ್ನಾರ್ಡ್ ಎಂಬ ಫ್ರೆಂಚ್ ಪ್ರೊಟೆಸ್ಟೆಂಟ್ ಹುಡುಗಿಯನ್ನು ಮದುವೆಯಾದರು; "ಹೋಲೋಕಾಸ್ಟ್ ನಲ್ಲಿ ಕಳೆದುಕೊಂಡ ತನ್ನ ಎಲ್ಲಾ ಕುಟುಂಬದ ಸದಸ್ಯರನ್ನು ಮರುಸೃಷ್ಟಿಸುವ ಸಲುವಾಗಿ" ಈ ದಂಪತಿಗಳು ಒಂಬತ್ತು ಮಕ್ಕಳಿಗೆ ಜನ್ಮವಿತ್ತರು.[] ಆ ಪೈಕಿ ಐದು ಮಕ್ಕಳು ಮ್ಯಾಕ್ಸ್ ವೆಲ್ ರ ಕಂಪನಿಯಲ್ಲೇ ಉದ್ಯೋಗದಲ್ಲಿ ತೊಡಗಿಕೊಂಡರು. ಇಬ್ಬರು ದುರಂತಕ್ಕೀಡಾದರು; ಮೂರು ವರ್ಷದ ಹಸುಳೆ ಕರೀನ್ ಲ್ಯೂಕೇಮಿಯಾಗೆ ತುತ್ತಾದಳು ಮತ್ತು ಹಿರಿಯ ಮಗ ಮೈಕೆಲ್ (೧೫ ವರ್ಷದವನಾಗಿದ್ದಾಗ)ಗೆ ೧೯೬೧ ರಲ್ಲಿ ಕ್ರಿಸ್ ಮಸ್ ಪಾರ್ಟಿಯಿಂದ ಮರಳುತ್ತಿದ್ದಾಗ ಕಾರ್ ಓಡಿಸುತ್ತದ್ದವನು ಸ್ಟೀರಿಂಗ್ ವೀಲ್ ಹಿಂದೆ ಕುಳಿತಿರುವಾಗಲೇ ನಿದ್ರೆ ಮಾಡಿದ ಕಾರಣದಿಂದ ಉಂಟಾದ ಅಪಘಾತದಿಂದ ತೀವ್ರವಾದ ಗಾಯಗಳಾದವು. ಮೈಕೆಲ್ ಗೆ ಪ್ರಜ್ಞೆ ಮರಳಲೇ ಇಲ್ಲ ಹಾಗೂ ಏಳು ವರ್ಷಗಳ ನಂತರ ಅದೇ ಪ್ರಜ್ಞಾಹೀನಸ್ಥಿತಿಯಿಂದ ಚಿರನಿದ್ರೆಗೆ ಜಾರಿದನು.[][][][] ಯುದ್ಧದ ನಂತರ ಮ್ಯಾಕ್ಸ್ ವೆಲ್ ಮೊದಲಿಗೆ ಒಂದು ವೃತ್ತಪತ್ರಿಕೆಯ ಸೆನ್ಸಾರ್ ಮಾಡುವ ಕೆಲಸದಲ್ಲಿ ಬ್ರಿಟಿಷ್ ಸೇನಾ ಕಮ್ಯಾಂಡ್ ರ ಪರವಾಗಿ ಮಿತ್ರರಾಷ್ಟ್ರಗಳು ಆಕ್ರಮಿಸಿದ್ದ ಜರ್ಮನಿಯ ಬರ್ಲಿನ್ ನಲ್ಲಿ ಉದ್ಯೋಗಕ್ಕೆ ಸೇರಿದರು[ಸೂಕ್ತ ಉಲ್ಲೇಖನ ಬೇಕು]. ನಂತರ ಮ್ಯಾಕ್ಸ್ ವೆಲ್ ಮಿತ್ರರಾಷ್ಟ್ರಗಳು ಆಕ್ರಮಿಸಿದ್ದ ಕ್ಷೇತ್ರದಲ್ಲಿನ ಹಲವಾರು ಅಧಿಕಾರಿಗಳ ಸಂಪರ್ಕವನ್ನು ಬಳಸಿಕೊಂಡು, ವೈಜ್ಞಾನಿಕ ಪುಸ್ತಕಗಳನ್ನು ಪ್ರಕಾಶಿಸುವ ಸಂಸ್ಥೆಯಾದ ಸ್ಪ್ರಿಂಗರ್ ವೆರ್ಲಾಗ್ ಪ್ರಕಾಶನದ ಪುಸ್ತಗಳನ್ನು, ಬ್ರಿಟಿಷ್ ಮತ್ತು ಯುನೈಟೆಡ್ ಸ್ಟೇಟ್ಸ್ ಗಳಿಗೆ ವಿತರಿಸುವ ವ್ಯವಹಾರ ನಡೆಸತೊಡಗಿದರು. ೧೯೫೧ ರಲ್ಲಿ ಅವರು ಬಟರ್ ವರ್ತ್-ಸ್ಪ್ರಿಂಗರ್ ಎಂಬ ಸಣ್ಣ ಪ್ರಕಾಶನ ಸಂಸ್ಥೆಯ ಮುಕ್ಕಾಲು[] ಭಾಗವನ್ನು ಖರೀದಿಸಿದರು, ಉಳಿದ ಕಾಲು ಭಾಗವು ನುರಿತ ವೈಜ್ಞಾನಿಕ ಸಂಪಾದಕ ಪಾಲ್ ರಾಸ್ ಬಾಡ್ ರವರದಾಗಿತ್ತು. ಅವರು ಕಂಪನಿಯ ಹೆಸರನ್ನು ಪರ್ಗಾಮನ್ ಪ್ರೆಸ್ ಎಂದು ಬದಲಾಯಿಸಿದರು ಹಾಗೂ ಕ್ಷಿಪ್ರಗತಿಯಲ್ಲಿ ಅದನ್ನು ಒಂದು ಪ್ರಮುಖ ಪ್ರಕಾಶನ ಸಂಸ್ಥೆಯಾಗಿ ನಿರ್ಮಿಸಿದರು.

ಸಂಸತ್‌ ಸದಸ್ಯ

[ಬದಲಾಯಿಸಿ]

೧೯೬೪ ರಲ್ಲಿ ಅವರನ್ನು ಲೇಬರ್ ಪಾರ್ಟಿಯಿಂದ ಹೌಸ್ ಆಫ್ ಕಾಮನ್ಸ್ ಗೆ ಚುನಾಯಿಸಲಾಯಿತು}, ೧೯೬೬ ರಲ್ಲಿ ಅವರು ಮರು ಚುನಾಯಿತರಾದರು ಹಾಗೂ ೧೯೭೦ ರಲ್ಲಿ ಕನ್ಸರ್ವೇಟಿವ್ ಪಕ್ಷದ ವಿಲಿಯಂ ಬೆನ್ಯಾನ್ ರಿಂದ ಪರಾಭವಗೊಂಡರು. ಅವರು ಬಕಿಂಗ್ ಹ್ಯಾಂ ಉತ್ತರದ ಕ್ಷೇತ್ರದ ಸಂಸತ್ ಸದಸ್ಯರಾಗಿದ್ದರು.

ವ್ಯವಹಾರ ಚಟುವಟಿಕೆಗಳು

[ಬದಲಾಯಿಸಿ]

೧೯೭೦ ರಲ್ಲಿ ಮ್ಯಾಕ್ಸ್ ವೆಲ್ ಮ್ಯಾಕ್ಸ್ ವೆಲ್ ಫೌಂಡೇಷನ್ ಅನ್ನು ಲೇಷ್ಟೆನ್ ಸ್ಟೀನ್ ನಲ್ಲಿ ಸ್ಥಾಪಿಸಿದರು. ೧೯೭೪ ಅವರು PPL[clarification needed] ಅನ್ನು ಮತ್ತೆ ಸಂಪಾದಿಸಿದರು. ಮ್ಯಾಕ್ಸ್ ವೆಲ್ ಬ್ರಿಟಿಷ್ ಪ್ರಿಂಟಿಂಗ್ ಕಾರ್ಪೊರೇಷನ್ (BPC) ಅನ್ನು ೧೯೮೧ ರಲ್ಲಿ ಪಡೆದುಕೊಂಡರು ಹಾಗೂ ಅದರ ಹೆಸರನ್ನು ಮೊದಲಿಗೆ ಬ್ರಿಟಿಷ್ ಪ್ರಿಂಟಿಂಗ್ ಎಂಡ್ ಕಮ್ಯುನಿಕೇಷನ್ ಕಾರ್ಪೊರೇಷನ್ (BPCC) ಎಂದೂ, ನಂತರದ ದಿನಗಳಲ್ಲಿ ಮ್ಯಾಕ್ಸ್ ವೆಲ್ ಕಮ್ಯುನಿಕೇಷನ್ ಕಾರ್ಪೊರೇಷನ್ ಎಂದೂ ಬದಲಾಯಿಸಿದರು. ಈ ಕಂಪನಿಯನ್ನು ನಂತರ ವ್ಯವಸ್ಥಾಪಕರಿಗೇ ಮಾರಲಾಯಿತು ಹಾಗೂ ಈಗ ಅದನ್ನು ಪೋಲ್ ಸ್ಟಾರ್ ಎಂದು ಕರೆಯಲಾಗುತ್ತಿದೆ. ಜುಲೈ ೧೯೮೪ ರಲ್ಲಿ ಮ್ಯಾಕ್ಸ್ ವೆಲ್ ಮಿರರ್ ಗ್ರೂಪ್ ನ್ಯೂಸ್ ಪೇಪರ್ಸ್ ಅನ್ನು ರೀಡ್ ಇಂಟರ್ನ್ಯಾಷನಲ್l ಪಿಕ್ ರಿಂದ ಖರೀದಿಸಿದರು. MGN ಡೈಲಿ ಮಿರರ್ ಎಂಬ ಲೇಬರ್ ಪಾರ್ಟಿ ಪರವಾದ ವೃತ್ತಪತ್ರಿಕೆಯನ್ನು ಪ್ರಕಾಶಿಸಿತು; ಇದು ವರ್ಣಮುದ್ರಣದಲ್ಲಿ ಮುದ್ರಿತವಾದ ಮೊದಲ ರಾಷ್ಟ್ರೀಯ ವೃತ್ತಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಮ್ಯಾಕ್ಮಿಲಾನ್ ಪಬ್ಲಿಷಿಂಗ್ ಹೌಸ್ ನ ಅಮೆರಿಕನ್ ಭಾಗಗಳನ್ನೂ ಸಹ ಅವರು ಖರೀದಿಸಿದರು. ೧೯೮೦ ರ ದಶಕದಲ್ಲಿ ಮ್ಯಾಕ್ಸ್ ವೆಲ್ ರ ಹಲವಾರು ಕಂಪನಿಗಳು ಈ ಕೆಳಕಂಡ ಕಂಪನಿಗಳ ಸ್ವಾಮ್ಯ ಪಡೆದಿದ್ದವು: ಡೈಲಿ ಮಿರರ್ , ಸಂಡೇ ಮಿರರ್ , ಸ್ಕಾಟಿಷ್ ಡೈಲಿ ರೆಕಾರ್ಡ್ ಮತ್ತು ಸಂಡೇ ಮೇಯ್ಲ್ ಹಾಗೂ ಇನ್ನೂ ಕೆಲವು ವೃತ್ತಪತ್ರಿಕೆಗಳು, ಪರ್ಗಾಮನ್ ಪ್ರೆಸ್, ನಿಂಬಸ್ ರೆಕಾರ್ಡ್ಸ್, ಕಾಲಿಯರ್ ಬುಕ್ಸ್, ಮ್ಯಾಕ್ಸ್ ವೆಲ್ ಡೈರೆಕ್ಟರೀಸ್, ಪ್ರೆಂಟೈಸ್ ಹಾಲ್ ಇಂಫರ್ಮೇಷನ್ ಸರ್ವೀಸಸ್, ಮ್ಯಾಕ್ಮಿಲನ್ (US) ಪಬ್ಲಿಷಿಂಗ್, ಮತ್ತು ಬರ್ಲಿಟ್ಝ್ ಲಾಂಗ್ವೇಜ್ ಸ್ಕೂಲ್ಸ್. ಇವಲ್ಲದೆ ಯೂರೋಪ್ ನ MTVಯ ಅರ್ಧಭಾಗ ಮತ್ತು ಇತರ ಯೂರೋಪಿಯನ್ ಟೆಲಿವಿಷನ್ ಹಕ್ಕುಗಳು, ಮ್ಯಾಕ್ಸ್ ವೆಲ್ ಕೇಬಲ್ TV ಮತ್ತು ಮ್ಯಾಕ್ಸ್ ವೆಲ್ ಎಂಟರ್ಟೈನ್ ಮೆಂಟ್. ೧೯೮೭ ರಲ್ಲಿ ಮ್ಯಾಕ್ಸ್ ವೆಲ್ IPC ಮೀಡಿಯಾವನ್ನು ಭಾಗಶಃ ಖರೀದಿಸಿ ಫ್ಲೀಟ್ ವೇ ಪಬ್ಲಿಕೇಷನ್ಸ್ ಸಂಸ್ಥೆಯನ್ನು ಸ್ಥಾಪಿಸಿದರು. ಜೂನ್ ೧೯೮೫ ರಲ್ಲಿ ಮ್ಯಾಕ್ಸ್ ವೆಲ್ ಸರ್ ಕ್ಲೈವ್ ಸಿಂಕ್ಲೇಯ್ರ್ ರ ದುರ್ಬಲವಾಗಿದ್ದ ಹೋಂ ಕಂಪ್ಯೂಟರ್ ಕಂನಿಯಾದ ಸಿಂಕ್ಲೇಯ್ರ್ ರಿಸರ್ಚ್ ಅನ್ನು, ಹಾಲಿಸ್ ಬ್ರದರ್ಸ್ ಎಂಬ ಪರ್ಗಾಮನ್ ಪ್ರೆಸ್ ನ ಉಪಾಂಗದ ಮೂಲಕ ಖರೀದಿಸಿರುವುದಾಗಿ ಘೋಷಿಸಿದರು.[] ಆದರೆ ಈ ವ್ಯವಹಾರವನ್ನು ಆಗಸ್ಟ್ ೧೯೮೫ ರಲ್ಲಿ ಕೈಬಿಡಲಾಯಿತು.[೧೦] ಮ್ಯಾಕ್ಸ್ ವೆಲ್ಉನ್ನತಮಟ್ಟದ ವಿಶೇಷವಾದ ವೈಜ್ಞಾನಿಕ ಮಾಹಿತಿಗಳನ್ನು ಪಸರಿಸಲು ರೂಪರೇಷೆಗಳನ್ನು ನಿರ್ಮಿಸಿದರು; ಶೈಕ್ಷಣಿಕ ಸಂಶೋಧನಾ ಕ್ಷೆತ್ರದಲ್ಲಿ ಬುಗಿಲೆದ್ದ ಬೃಹತ್ ಬೆಳವಣಿಗೆಗೆ ಇದು ಪೂರಕವಾಯಿತು.[ಸೂಕ್ತ ಉಲ್ಲೇಖನ ಬೇಕು]. ಪೂರ್ವ ಯೂರೋಪ್ ನ ನಿರಂಕುಶಪ್ರಭುತ್ವದ ಆಳ್ವಿಕೆಗಳೊಡನೆ ಮ್ಯಾಕ್ಸ್ ವೆಲ್ ಹೊಂದಿದ್ದ ಸಂಪರ್ಕಗಳ ದೆಸೆಯಿಂದ ಆ ದೇಶಗಳ ಅಂದಿನ ಮುಖಂಡರ, ಅರಸರ ಆತ್ಮಚರಿತ್ರೆಗಳನ್ನು (ಸಾಮಾನ್ಯವಾಗಿ ಅವುಗಳನ್ನು ಆತ್ಮಸಂತೋಷಗೊಳಿಸುವ ಚರಿತ್ರೆ) ಎನ್ನಲಾಗುತ್ತಿತ್ತು[೧೧]), ಸಂದರ್ಶನಗಳನ್ನು ಮ್ಯಾಕ್ಸ್ ವೆಲ್ ನಡೆಸಿಕೊಸಬಾಕಾಗುತ್ತಿತ್ತು ಹಾಗೂ ತತ್ಕಾರಣವಾಗಿ ಮ್ಯಾಕ್ಸ್ ವೆಲ್ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತಿತ್ತು.[೧೨]

ಮ್ಯಾಕ್ಸ್ ವೆಲ್ ಆಕ್ಸ್ ಫರ್ಡ್ ಯುನೈಟೆಡ್ ಫುಟ್ ಬಾಲ್ ಕ್ಲಬ್ ನ ಅಧ್ಯಕ್ಷನೆಂದೂ ಹೆಸರು ಪಡೆದಿದ್ದರು; ಆ ಕ್ಲಬ್ ಪಾಪರ್ ಆಗುವುದರಿಂದ ಪಾರು ಮಾಡಿಸಿ, ಅದನ್ನು ಇಂಗ್ಲಿಪ್ ಫುಟ್ ಬಾಲ್ ನ ಉತ್ತುಂಗ ಶ್ರೇಣಿಗೆ ಏರಿಸಿದರು; ೧೯೮೬ ರಲ್ಲಿ ಈ ಕ್ಲಬ್ ಲೀಗ್ ಕಪ್ ಅನ್ನು ಗೆದ್ದುಕೊಂಡಿತು. ೧೯೮೭ ರಲ್ಲಿ ಮ್ಯಾಕ್ಸ್ ವೆಲ್ ಡರ್ಬಿ ಕೌಂಟಿty F.C.ಯನ್ನು ಖರೀದಿಸಿದರು. ಅವರು ಮ್ಯಾಂಚೆಸ್ಟರ್ ಯುನೈಟೆಡ್ ಅನ್ನೂ ೧೯೮೪ ರಲ್ಲಿ ಖರೀದಿಸಲು ಯತ್ನಿಸಿದರು, ಆದರೆ ಅದರ ಮಾಲಿಕರಾದ ಮಾರ್ಟಿನ್ ಎಡ್ವರ್ಡ್ಸ್' ಕೇಳಿದ ಬೆಲೆಯನ್ನು ಇವರು ಕೊಡಲು ಒಪ್ಪಲಿಲ್ಲ.

ವಿವಾದ

[ಬದಲಾಯಿಸಿ]

೧೯೬೯ ರಲ್ಲಿ "ಲೆಸ್ಸೋ ಡಾಟಾ ಪ್ರೋಸೆಸಿಂಗ್ ಕಾರ್ಪೊರೇಷನ್" ನ ಮುಖ್ಯಸ್ಥರಾದ ಸಾಲ್ ಸ್ಟೀನ್ ಬರ್ಗ್ , ಪರ್ಗಾಮನ್ ಅನ್ನು ಕುಶಲತೆಯಿಂದ ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದರು. ತತ್ಸಂಬಂಧಿತವಾದ ಮಾತುಕತೆಗಳು ನಡೆಯುವಾಗ ಆ ಕಂಪನಿಯ, ಎನ್ ಸೈಕ್ಲೋಪೀಡಿಯಾಗಳನ್ನು ಪ್ರಕಾಶಗೊಳಿಸುವ ಉಪಾಂಗವು ಬಹಳ ಲಾಭದಾಯಕವಾದುದೆಂದು ಮ್ಯಾಕ್ಸ್ ವೆಲ್ ಹೇಳಿದರೆಂದು ಸ್ಟೀನ್ ಬರ್ಗ್ ಆರೋಪಿಸಿದರು.[೧೩] ಅಂದಿನ ಹಸ್ತಾಂತರ ಕಾಯಿದೆಯನ್ವಯ ಈ ಸಂಬಂಧವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ತನಿಖೆ ಕೈಗೊಂಡಿತು; ಅದೇ ಸಮಯದಲ್ಲಿ ಯು.ಎಸ್. ಕಾಂಗ್ರೆಸ್ ಲೀಸ್ಕೋದ ಹಸ್ತಾಂತರ ಕ್ರಮದ ಬಗ್ಗೆ ತನಿಖೆ ನಡೆಸುತ್ತಿತ್ತು. ಇಲಾಖೆಯ ತನಿಖಾವರದಿ ಇಂತಿದೆ: "ಮ್ಯಾಕ್ಸ್ ವೆಲ್ ರ ಶಕ್ತಿ, ಸಾಮರ್ಥ್ಯಗಳ ಬಗ್ಗೆ ಎರಡು ಮಾತಿಲ್ಲವಾದರೂ, ಸಾರ್ವಜನಿಕವಾಗಿ ಉಲ್ಲೇಖಿಸಲ್ಪಟ್ಟ ಕಂಪನಿಯ ಚುಕ್ಕಾಣಿಯನ್ನು ಹಿಡಿದು ಅದನ್ನು ಸಮರ್ಪಕವಾಗಿ ನಡೆಸಲು ಅವರು ನಂಬಲರ್ಹವಾದ ವ್ಯಕ್ತಿಯಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿರುತ್ತದೆ ಎಂದು ತೀರ್ಮಾನ ಕೈಗೊಂಡಿರುವುದಾಗಿ ಹೇಳಲು ವಿಷಾದಿಸುತ್ತೇವೆ. ಮ್ಯಾಕ್ಸ್ ವೆಲ್ ಪರ್ಗಾಮನ್ ಕಂಪನಿಯ ಷೇರುಗಳ ಬೆಲೆಯನ್ನು ಏರಿಸುವ ಸಲುವಾಗಿ ತನ್ನ ಖಾಸಗಿ ಕುಟುಂಬದ ಕಂಪನಿಗಳ ಮೂಲಕ ವ್ಯವಹಾರ ಮಾಡಿದ್ದುದು ಬೆಳಕಿಗೆ ಬಂದಿತು.[೧೩] ತತ್ಕಾರಣ ಮ್ಯಾಕ್ಸ್ ವೆಲ್ ಯುನೈಟೆಡ್ ಕಿಂಗ್ಡಂನಲ್ಲಿದ್ದ ಪರ್ಗಾಮನ್ ಕಂಪನಿಯ ಮೇಲಿನ ಹತೋಟಿಯನ್ನು ಕಳೆದುಕೊಂಡರು — ಆದರೆ ಯುನೈಡೆಡ್ ಸ್ಟೇಟ್ಸ್ ನಲ್ಲಿ ಹತೋಟಿ ಕಳೆದುಕೊಳ್ಳಲಿಲ್ಲ, ಅಲ್ಲಿ ಸ್ಟೀನ್ ಬರ್ಗ್ ಪರ್ಗಾಮನ್ ಅನ್ನು ಕೊಂಡುಕೊಂಡರು. ೧೯೭೧ ರ ಸೆಪ್ಟೆಂಬರ್ ನಲ್ಲಿ ನ್ಯಾಯಾಧೀಶ ಫೋರ್ಬ್ಸ್ ಈ ತನಿಖೆಯ ಬಗ್ಗೆ ಕಟುವಾಗಿ ಟೀಕಿಸುತ್ತಾ "ಅವರು ಪ್ರಶ್ನಿಸುವ ಪಾತ್ರದಿಂದ ಆರೋಪಹೊರಿಸುವ ಪಾತ್ರದತ್ತ ಸಾಗಿದ್ದರು ಮತ್ತು ನಿಜಕ್ಕೂ ಮ್ಯಾಕ್ಸ್ ವೆಲ್ ರ ವ್ಯವಹಾರದ ಕೊಲೆ ಮಾಡಿದರು" ಎಂದರು. ಅವರ ಟೀಕಾಪ್ರಹಾರವನ್ನು ಮುಂದುವರಿಸುತ್ತಾ ಮೊಕದ್ದಮೆಯನ್ನು ನಡೆಸುವ ನ್ಯಾಯಾಧೀಶರು "ತನಿಖಾಧಿಕಾರಿಗಳು ರಾಷ್ಟ್ರೀಯ ನ್ಯಾಯದ ಕಟ್ಟಳೆಗಳಿಗೆ ವಿರುದ್ಧವಾದ ರೀತಿಯಲ್ಲಿ ನಡೆದುಕೊಂಡುದನ್ನು" ಪ್ರಾಯಶಃ ಕಾಣುವರು ಎಂದು ಹೇಳಿದರು.[೧೪] ಕಂಪನಿಯು ಸ್ಟೀನ್ ಬರ್ಗ್ ರ ಕೈಕೆಳಗೆ ಸಮಂಜಸವಾಗಿ ಕಾರ್ಯನಿರ್ವಹಿಸಲಿಲ್ಲ; ಮ್ಯಾಕ್ಸ್ ವೆಲ್ ಮತ್ತೆ ಪರ್ಗಾಮನ್ ನ ಹತೋಟಿಯನ್ನು ಕೈಗೆತ್ತಿಕೊಂಡರು, ಅದನ್ನು ಮತ್ತೆ ಲಾಭದಾಯಕ ಸಂಸ್ಥೆಯಾಗಿ ಪರಿವರ್ತಿಸಿದರು, ಹಾಗೂ ಕಡೆಗೆ, ೧೯೯೧ ರಲ್ಲಿ, ಕಂಪನಿಯನ್ನು ರೀಡ್ ಎಲ್ಸೆವಿಯರ್ ಗೆ ಮಾರಿದರು. ಮ್ಯಾಕ್ಸ್ ವೆಲ್ ತನ್ನ ವಿರುದ್ಧ ಮಾತನಾಡಿದವರ ಅಥವಾ ಬರೆದವರ ವಿರುದ್ಧ ಮೊಕದ್ದಮೆ ಹೂಡುವುದರಲ್ಲಿ ಖ್ಯಾತರಾಗಿದ್ದರು. ವಿಡಂಬನಾತ್ಮಕ ಪತ್ರಿಕೆಯಾದ ಪ್ರೈವೇಟ್ ಐ ಅವರನ್ನು "ಕ್ಯಾಪ್ಟನ್ ಬಾಬ್" ಮತ್ತು "ಬೌನ್ಸಿಂಗ್ ಝೆಕ್" ಎಂದು ಲೇವಡಿ ಮಾಡಿತು. ಮ್ಯಾಕ್ಸ್ ವೆಲ್ ಆ ಮಾನಹಾನಿಕರ ಲೇಖನಗಳ ವಿರುದ್ಧ ಹಲವಾರು ಮೊಕದ್ದಮೆಗಳನ್ನು ಪ್ರೈವೇಟ್ ಐ ವಿರುದ್ಧ ಹೂಡಿದರು, ಒಂದು ಕೇಸಿನಲ್ಲಿ ಆ ಮ್ಯಾಗಝೀನ್ ಸುಮಾರು £೨೨೫,೦೦೦ ಕಳೆದುಕೊಂಡಿತು ಹಾಗೂ ಮ್ಯಾಕ್ಸ್ ವೆಲ್ ತನ್ನ ಆರ್ಥಿಕ ಶಕ್ತಿಯನ್ನು ಬಳಸಿ ನಾಟ್ ಪ್ರೈವೇಟ್ ಐ ಮೂಲಕ ಸೇಡು ತೀರಿಸಿಕೊಂಡರು.[೧೫] ೧೯೮೮ ರಲ್ಲಿ ಮ್ಯಾಕ್ಸ್ ವೆಲ್ ಮ್ಯಾಕ್ಮಿಲಾನ್, ಇಂಕ್ ಅನ್ನು ಖರೀದಿಸಿದರು; ಈ ಅಮೆರಿಕನ್ ಪ್ರಕಾಶನ ಸಂಸ್ಥೆಯನ್ನು ಅವರು USD $೨.೬ ಬಿಲಿಯನ್ ಡಾಲರ್ ಗಳಿಗೆ ಖರೀದಿಸಿದರು. ಕೆಲವರ ಅಭಿಪ್ರಾಯದ ಪ್ರಕಾರ ಇದು ಆ ಸಂಸ್ಥೆಯ ಬೆಲೆಗಿಂತಲೂ ಮೂರು ಪಟ್ಟಿನಷ್ಟಾಗಿತ್ತು.[ಸೂಕ್ತ ಉಲ್ಲೇಖನ ಬೇಕು]. ಅದೇ ವರ್ಷ ಅವರು ಮತ್ತೊಂದು ಹೊಸ ಯೋಜನೆಯನ್ನು ಆರಂಭಿಸಿದರು - ದ ಯೂರೋಪಿಯನ್ ಎಂಬ ಅಂತರರಾಷ್ಟ್ರೀಯ ಮಟ್ಟದ ವಾರ್ತಾಪತ್ರಿಕೆ. ಆದರೆ, ಮರುವರ್ಷ, ತಮ್ಮ ಬೃಹತ್ ಸಾಲಗಳಿಂದ ಹೊರಬರುವ ಸಲುವಾಗಿ, ಮ್ಯಾಕ್ಸ್ ವೆಲ್ ತಮ್ಮ ಯಶಸ್ವಿಯಾಗಿ ನಡೆಯುತ್ತಿದ್ದ ಪರ್ಗಾಮನ್ ಮುದ್ರಣಾಲು ಮತ್ತು ಮ್ಯಾಕ್ಸ್ ವೆಲ್ ಡೈರೆಕ್ಟರೀಸ್ ಅನ್ನು ಎಲ್ಸೆಲ್ವಿಯರ್ ಗೆ £೪೪೦ ಮಿಲಿಯನ್ ಗೆ ಮಾರಬೇಕಾಯಿತು, ಹಾಗೆ ಮಾರಿ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ಬಳಸಿ ಅವರು ಸಂಕಷ್ಟದಲ್ಲಿದ್ದ ನ್ಯೂಯಾರ್ಕ್ ಡೈಲಿ ನ್ಯೂಸ್ ಅನ್ನು ಖರೀದಿಸಿದರು.

ಆ ಸಮಯದಲ್ಲಿ ಮ್ಯಾಕ್ಸ್ ವೆಲ್ ರನ್ನು ನ್ಯೂ ಯಾರ್ಕ್ ನ ನಾಗರಿಕರು "ಡೈಲಿ ನ್ಯೂಸ್ ಅನ್ನು ಉಳಿಸಿದ" ವ್ಯಕ್ತಿ ಎಂದು ಮೆಚ್ಚುಗೆಯಿಂದ  ಕರೆಯುತ್ತಿದ್ದರು.[ಸೂಕ್ತ ಉಲ್ಲೇಖನ ಬೇಕು]

೫ ನವೆಂಬರ್ ೧೯೯೧ ರಂದು, ತಮ್ಮ ೬೮ ರ ಹರೆಯದಲ್ಲಿ, ಕ್ಯಾನರೀ ದ್ವೀಪಗಳ ಸಮೀಪದಲ್ಲಿ ಸಾಗುತ್ತಿದ್ದ ಲೇಡಿ ಘಿಸ್ಲೇಯ್ನ್ ಎಂಬ ತಮ್ಮ ಸ್ವಂತ ಐಷಾರಾಮಿ ಹಡಗಿನಿಂದ ಉರುಳಿಬಿದ್ದು ಮ್ಯಾಕ್ಸ್ ವೆಲ್ ಸಾವಿಗೀಡಾದರೆಂದು ನಂಬಲಾಗಿದೆ; ನಂತರ ನೀರಿನಲ್ಲಿ ತೇಲುತ್ತಿದ್ದ ಅವರ ದೇಹವು ಅಟ್ಲಾಂಟಿಕ್ ಸಾಗರದಲ್ಲಿ ದೊರಕಿತು.[೧೬] ಅವರ ದೇಹವನ್ನು ಜೆರೂಸೆಲಂನ ಮೌಂಟ್ ಆಫ್ ಒಲಿವ್ಸ್ ನಲ್ಲಿ ಹೂಳಲಾಯಿತು. ಅಧಿಕೃತ ವರದಿಯ ಪ್ರಕಾರ ಅದು ಆಕಸ್ಮಿಕವಾಗಿ ಮುಳುಗಿದುದರಿಂದ ಸಂಭವಿಸಿದ ಸಾವು. ಕೆಲವು ವಿಶ್ಲೇಷಕರು ಅದನ್ನು ಆತ್ಮಹತ್ಯೆ ಎಂದರೆ, ಇನ್ನು ಕೆಲವರು ಅದನ್ನು ಕೊಲೆ ಎಂದರು. ಅಂದಿನ ಪ್ರಧಾನಿ ಜಾನ್ ಮೇಜರ್ ಸೋವಿಯತ್ ಯೂನಿಯನ್ ನಲ್ಲಿ ನಡೆದ ಅಧಿಕಾರಕ್ಕಾಗಿ ನಡೆದ ಕುಟಿಲೋಪಾಯಗಳ ಬಗ್ಗೆ ಮ್ಯಾಕ್ಸ್ ವೆಲ್ ತಮಗೆ ಕೆಲವು ಸೂಕ್ಷ್ಮ ವಿಷಯಗಳನ್ನು ತಿಳಿಸಿದ್ದರೆಂದು ಹೇಳಿದರು. 'ಅವರು ಮಹಾನ್ ವ್ಯಕ್ತಿಯಾಗಿದ್ದರು' ಎಂದರು ಮೇಜರ್. ಅಂದಿನ ಲೇಬರ್ ಪಾರ್ಟಿಯ ಮುಖಂಡರಾಗಿದ್ದ ನೀಲ್ ಕಿನ್ನಾಕ್ ಮ್ಯಾಕ್ಸ್ ವೆಲ್ ಬಗ್ಗೆ ಮಾತನಾಡುತ್ತಾ "ಜೀವನದ ಬಗ್ಗೆ ಬಹಳ ಉತ್ಸಾಹವಿದ್ದವರು, ಅವರು ವಿವಾದ, ಅಸೂಯೆ, ಮತ್ತು ನಿಷ್ಠೆಯನ್ನು ತಮ್ಮ ಉತ್ಸಾಹಭರಿತ ಜೀವನದುದ್ದಕ್ಕೂ ಬೃಹತ್ ಪ್ರಮಾಣದಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಎಲ್ಲರಲ್ಲೂ ಉಂಟುಮಾಡುವ ಜಾಯಮಾನದವರಾಗಿದ್ದರು" ಎಂದರು. ನಂತರದ ದಿನಗಳಲ್ಲಿ ಮ್ಯಾಕ್ಸ್ ವೆಲ್ ಆ ಲೇಬರ್ ಪಾರ್ಟಿ ಮುಖಂಡನ ಖಾಸಗಿ ಕಚೇರಿಗೆ ಧನಸಹಾಯ ಮಾಡಿದ್ದರೆಂದೂ, ಹಾಗೂ ಮ್ಯಾಕ್ಸ್ ವೆಲ್ ಯುನೈಟೆಡ್ ಕಿಂಗ್ಡಂನ ರಹಸ್ಯ ಬೇಹುಗಾರಿಕಾ ಸಂಸ್ಥೆಯಾದ MI೬ ನ ಏಜೆಂಟ್ ಎಂದೂ ಆರೋಪಿಸಲಾಯಿತು.

ಇಸ್ರೇಲಿ ಸಂಪರ್ಕ

[ಬದಲಾಯಿಸಿ]

ಮ್ಯಾಕ್ಸ್ ವೆಲ್ ನಿಧನರಾಗುವುದಕ್ಕೆ ಸ್ವಲ್ಪ ಮುಂಚೆ ಮೊಸಾದ್ ನ ಮಾಜಿ ಅಧಿಕಾರಿಗಳಲ್ಲೊಬ್ಬರಾದ ಆರಿ-ಬೆನ್-ಮೆನಾಷೆ ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸ್ ನ ಹಲವಾರು ಸಂಘಟನೆಗಳನ್ನು ಸಂಪರ್ಕಿಸಿ ಮ್ಯಾಕ್ಸ್ ವೆಲ್ ಹಾಗೂ ಡೈಲಿ ಮಿರರ್ ನ ವಿದೇಶಿ ಸಂಪಾದಕ ನಿಕ್ ಡೇವೀಸ್ ಇಬ್ಬರೂ ಬಹಳ ಕಾಲದಿಂದಲೂ ಇಸ್ರೇಲ್ ನ ಬೇಹುಗಾರಿಕಾ ಸಂಸ್ಥೆಯಾದ ಮೊಸಾದ್ ನ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು. ಮಾಡ್ರೆಚಾಯ್ ವೆನುನು ಇಸ್ರೇಲ್ ನ ಅಣುಶಕ್ತಿಯ ಬಗ್ಗೆ ಮಾಹಿತಿಗಳನ್ನು ಮೊದಲು ಸಂಡೇ ಟೈಮ್ಸ್ ಗೂ, ನಂತರ ಡೈಲಿ ಮಿರರ್ ಗೂ ನೀಡಿದ್ದನೆಂದು ಮ್ಯಾಕ್ಸ್ ವೆಲ್ ಲಂಡನ್ನಿನ ಇಸ್ರೇಲಿ ರಾಯಭಾರಿ ಕಚೇರಿಗೆ ೧೯೮೬ ರಲ್ಲಿ ಸುಳಿವು ನೀಡಿದ್ದರು ಎಂದೂ ಬೆನ್-ಮೆನಾಷೆ ಆರೋಪಿಸಿದರು. ನಂತರ ವೆನುನುವನ್ನು ಉಪಾಯವಾಗಿ ಲಂಡನ್ ನಿಂದ ರೋಂಗೆ ಕರೆಯಿಸಿಕೊಂಡು, ಅಲ್ಲಿಂದ ಅವರನ್ನು ಅಪಹರಿಸಿ ಇಸ್ರೇಲ್ ಗೆ ಹಿಂದಿರುಗಿಸಲಾಯಿತು ಹಾಗೂ ಇಸ್ರೇಲ್ ನಲ್ಲಿ ಅವರನ್ನು ದೇಶದ್ರೋಹಿ ಎಂದು ತೀರ್ಮಾನಿಸಿ ೧೮ ವರ್ಷಗಳ ಕಾಲ ಸೆರೆಮನೆಗೆ ತಳ್ಳಲಾಯಿತು. ಮೊದಮೊದಲು ಯಾವ ವಾರ್ತಾ ಸಂಸ್ಥೆಯೂ ಬೆನ್-ಮೆನಾಷೆಯ ಕತೆಯನ್ನು ಪ್ರಕಟಿಸಲು ತಯಾರಿರಲಿಲ್ಲ;ಆದರೆ, ಕಡೆಗೆ,ಲಂಡನ್ನಿನಲ್ಲಿ, ಹೆರ್ಷ್ ರ ಇಸ್ರೇಲಿ ಅಣ್ವಸ್ತ್ರಗಳ ಬಗ್ಗೆ ಬರೆದ ದ ಸ್ಯಾಮ್ಸನ್ ಆಪ್ಷನ್ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನ್ಯೂ ಯಾರ್ಕರ್ ನ ಬಾತ್ಮೀದಾರರಾದ ಸೈಮೋರ್ ಹೆರ್ಷ್ ಮೆನಾಷೆಯವರ ಕೆಲವು ಆರೋಪಗಳನ್ನು ಪುನರುಚ್ಚರಿಸಿದರು. ೨೧ ಅಕ್ಟೋಬರ್ ೧೯೯೧ ರಂದು, ಇಬ್ಬರು ಸಂಸತ್ ಸದಸ್ಯರು/೦}, ಲೇಬರ್ MP ಜಾರ್ಜ್ ಗ್ಯಾಲೋವೇ ಮತ್ತು ಕನ್ಸರ್ವೇಟಿವ್ MP ರೂಪರ್ಟ್ ಅಲ್ಲಾಸನ್ (ಇವರು ಬೇಹುಗಾರಿಕಾ ಪ್ರಪಂಚದ ಬಗ್ಗೆ ನಿಗೆಲ್ ವೆಸ್ಟ್ ಎಂಬ ಕಾವ್ಯನಾಮದಲ್ಲಿ ಪುಸ್ತಕಗಳನ್ನು ಬರೆಯುತ್ತಾರೆ) ಹೌಸ್ ಆಫ್ ಕಾಮನ್ಸ್ ನಲ್ಲಿ ಈ ವಿಚಾರವನ್ನು ಎತ್ತಲು ಒಪ್ಪಿಕೊಂಡರು(ಸಂವಿಧಾನಾತ್ಮಕ ಹಕ್ಕು ರಕ್ಣಣೆ[೧೭] ಯ ಅಡಿಯಲ್ಲಿ): ಹೀಗಾಗಿ ಬ್ರಿಟಿಷ್ ವಾರ್ತಾಪತ್ರಿಕೆಗಳು ಮಾನಹಾನಿ ಮೊಕದ್ದಮೆಯ ಯಾವುದೇ ಭಯವಿಲ್ಲದೆ ಘಟನೆಗಳನ್ನು ವರದಿ ಮಾಡುವುದಕ್ಕೆ ಅವಕಾಶ ದೊರಕಿತು. ಮ್ಯಾಕ್ಸ್ ವೆಲ್ ಈ ಆರೋಪಗಳನ್ನು "ಹಾಸ್ಯಾಸ್ಪದ, ಸಂಪೂರ್ಣ ಕಟ್ಟುಕಥೆ," ಎಂದು ತಳ್ಳಿಹಾಕಿದರಲ್ಲದೆ ನಿಕ್ ಡೇವೀಸ್ ರನ್ನು ಕೆಲಸದಿಂದ ವಜಾ ಮಾಡಿದರು.[೧೮] ಇದಾದ ಕೆಲವೇ ದಿನಗಳಲ್ಲಿ ಅವರು ಸಾವನ್ನಪ್ಪಿದ್ದರಿಂದ ಮ್ಯಾಕ್ಸ್ ವೆಲ್ ಇಸ್ರೇಲ್ ನೊಂದಿಗೆ ಹೊಂದಿದ್ದ ಸಂಬಂಧದ ಬಗ್ಗೆ ಹೆಚ್ಚಿನ ಕತೂಹಲ ಮೂಡಿತು ಹಾಗೂ ಡೈಲಿ ಮಿರರ್ ಮ್ಯಾಕ್ಸ್ ವೆಲ್ ಮೊಸಾದ್ ಅನ್ನು ಬ್ಲ್ಯಾಕ್ ಮೇಯ್ಲ್ ಮಾಡಲು ಯತ್ನಿಸಿದುದರಿಂದ ಮೊಸಾದ್ ಅವರನ್ನು ಕೊಂದಿತು ಎಂಬ ಆರೋಪಗಳನ್ನು ಪ್ರಕಟಿಸಿತು.[೧೯] ಇಸ್ರೇಲ್ ನಲ್ಲಿನ ಮ್ಯಾಕ್ಸ್ ವೆಲ್ ರ ಅಂತಿಮ ಸಂಸ್ಕಾರವು ಒಬ್ಬ ಪ್ರಕಾಶಕರ ಅಂತಿಮ ಸಂಸ್ಕಾರದಂತಿರದೆ ಒಬ್ಬ ರಾಜ್ಯ ಪ್ರಮುಖರ ಅಂತಿಮ ಸಂಸ್ಕಾರದಂತಿದ್ದಿತು; ಆ ಅಂತಿಮಸಂಸ್ಕಾರವನ್ನು ಲೇಖಕ ಗಾರ್ಡನ್ ಥಾಮಸ್ ಹೀಗೆ ಬಣ್ಣಿಸಿದ್ದಾರೆ:

೧೦ ನವೆಂಬರ್ ೧೯೯೧ರಂದು ಮ್ಯಾಕ್ಸ್ ವೆಲ್ ರ ಅಂತಿಮಸಂಸ್ಕಾರವು ಜೆರೂಸೆಲಂನಲ್ಲಿ, ಟೆಂಪಲ್ ಮೌಂಟ್ ಎದುರಿಗಿರುವ ಮೌಂಟ್ ಆಫ್ ಒಲಿವ್ಸ್ ಹರ್ ಝೀಟಿಮ್ ನಲ್ಲಿ ನಡೆಯಿತು. ಆ ಅಂತಿಮಸಂಸ್ಕಾರವು ರಾಜ್ಯಪರಮುಖರ ಅಂತಿಮಸಂಸ್ಕಾರದ ಎಲ್ಲಾ ಲಕ್ಷಣಗಳನ್ನೂ ಹೊಂದಿದ್ದಿತು, ಸರ್ಕಾರದ ಮತ್ತು ವಿರೋಧಪಕ್ಷದ ನೇತಾರರೆಲ್ಲರೂ ಈ ಸಂದರ್ಭದಲ್ಲಿ ಹಾಜರಿದ್ದರು. ಪ್ರಧಾನಿ ಶಮೀರ್ ರವರು "ಮ್ಯಾಕ್ಸ್ ವೆಲ್ ನಾವು ಇಂದು ಹೇಳಲು ಸಾಧ್ಯವಾಗುವುದಕ್ಕಿಂತಲೂ ಬಹಳ ಹೆಚ್ಚಿನ ಕಾರ್ಯಗಳನ್ನು ಇಸ್ರೇಲ್ ಗಾಗಿ ಮಾಡಿದ್ದಾರೆ" ಎಂದು ಹೊಗಳಿದುದನ್ನು ಅಲ್ಲಿ ಹಾಜರಿದ್ದ ಕಡಿಮೆಯೆಂದರೆ ಆರು ಮಾಜಿ ಇಸ್ರೇಲಿ ಹಾಲಿ ಮತ್ತು ಮಾಜಿ ಬೇಹುಗಾರಿಕಾ ಸಂಸ್ಥೆಯ ಪ್ರಮುಖರು ಕೇಳಿಸಿಕೊಂಡರು.(ಗಿಡಿಯನ್ಸ್ ಸ್ಪೈಸ್: ದ ಸೀಕ್ರೆಟ್ ಹಿಸ್ಟರಿ ಆಫ್ ದ ಮೊಸಾದ್ , ಸೇಂಟ್ ಮಾರ್ಟಿನ್ಸ್ ಪ್ರೆಸ್, ೧೯೯೯).[೨೦]

ಮ್ಯಾಕ್ಸ್ ವೆಲ್ ಇಸ್ರೇಲ್ ದೇಶಕ್ಕೆ ಸಲ್ಲಿಸಿದ ಸೇವೆಯ ಸುಳಿವನ್ನು ಲಾಫ್ಟಸ್ ಮತ್ತು ಆರನ್ಸ್ ನೀಡುತ್ತಾರೆ: ಇಸ್ರೇಲ್ ತನ್ನ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ೧೯೪೮ ರಲ್ಲಿ ಶಸ್ತ್ರಸಜ್ಜಿತಗೊಳ್ಳಲು ಝೆಕ್ ನೆರವು ನೀಡಲು ಮುಂದೆ ಬಂದುದಕ್ಕೆ ಕಾರಣ ಮ್ಯಾಕ್ಸ್ ವೆಲ್ ಝೆಕ್ ನ ಸ್ಟಾಲಿನ್ ವಿರೋಧಿ ಕಮ್ಯುನಿಸ್ಟ್ ಸಂಘಗಳೊಡನೆ ಹೊಂದಿದ್ದ ಸಂಪರ್ಕವೇ ಎಂದು ಈ ಲೇಖಕದ್ವಯರು ಸ್ಪಷ್ಟಪಡಿಸಿದ್ದಾರೆ. ಆಗತಾನೇ ಕಣ್ಣುಬಿಡುತ್ತಿದ್ದ ಇಸ್ರೇಲ್ ಗೆ ತನ್ನ ಹೋರಾಟಕ್ಕೆ ಝೆಕ್ ನ ಬೆಂಬಲವು ಅದ್ವಿತೀಯವೂ, ಅತ್ಯವಶ್ಯಕವೂ ಆಗಿದ್ದಿತು. ಮ್ಯಾಕ್ಸ್ ವೆಲ್ ರಹಸ್ಯವಾಗಿ ವಿಮಾನದ ಭಾಗಗಳನ್ನು ಇಸ್ರೇಲ್ ಗೆ ಕಳ್ಳಸಾಗಣಿಕೆಯ ಮೂಲಕ ಸಾಗಿಸಿದುದರ ಫಲವಾಗಿ ಆ ಯಹೂದಿ ರಾಜ್ಯವು ೧೯೪೮ ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೈಮಾನಿಕ ಕ್ಷೇತ್ರದಲ್ಲೂ ಮೇಲುಗೈ ಸಾಧಿಸಲು ಸಾಧ್ಯವಾಯಿತು.[೨೧] ಮ್ಯಾಕ್ಸ್ ವೆಲ್ ಮಿಖೈಲ್ ಗೊರ್ಬಚೇವ್ ರೊಡನೆ ಹೊಂದಿದ್ದ ಸ್ನೇಹದ ಫಲವಾಗಿ ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನ ರಷ್ಯನ್ ಯಹೂದಿಗಳನ್ನು ೧೯೮೮ ರಿಂದ ೧೯೯೧ ರ ಅವಧಿಯಲ್ಲಿ ಕರೆದುಕೊಂಡು ಬರಲು ಸಹಾಯ ಒದಗಿಸಿದುದಕ್ಕಾಗಿ ಮತ್ತು ಮಧ್ಯವರ್ತಿಯಾಗಿ ಈ ಎಲ್ಲಾ ಕಾರ್ಯಗಳನ್ನು ಮಾಡಿಕೊಟ್ಟ ಕಾರಣಗಳಿಗಾಗಿ ಯಹೂದಿ ಮುಖಂಡರು ಮ್ಯಾಕ್ಸ್ ವೆಲ್ ಗೆ ಬಹಳವೇ ಋಣಿಯಾಗಿದ್ದರು. ಏಳು ಲಕ್ಷಕ್ಕಿಂತಲೂ ಹೆಚ್ಚು ರಷ್ಯನ್ ಯಹೂದಿಗಳು ಇಸ್ರೇಲ್ ಗೆ ವಲಸೆ ಬಂದರು[ಸೂಕ್ತ ಉಲ್ಲೇಖನ ಬೇಕು].

ಒಂದು ಪ್ರಕಾಶನ ಸಾಮ್ರಾಜ್ಯದ ಪತನ

[ಬದಲಾಯಿಸಿ]

ಮ್ಯಾಕ್ಸ್ ವೆಲ್ ರ ಅಕಾಲಿಕ ಮರಣವು ಅಸ್ಥಿರತೆಯ ಮಹಾಪೂರವನ್ನೇ ಉಂಟುಮಾಡಿತು, ಬ್ಯಾಂಕ್ ಗಳು ತಮ್ಮ ಹಣವನ್ನು ಕೂಡಲೆ ಹಿಂತಿರುಗಿಸಲು ಒತ್ತಡ ಹೇರಲಾರಂಭಿಸಿದವು. ಅವರ ಇಬ್ಬರು ಮಕ್ಕಳಾದ ಕೆವಿನ್ ಮತ್ತು ಇಯಾನ್ ಈ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಹೆಣಗಾಡಿದರು, ಆದರೆ ಅದರ ಪತನವನ್ನು ಅವರಿಗೆ ತಪ್ಪಿಸಲಾಗಲಿಲ್ಲ. ಮ್ಯಾಕ್ಸ್ ವೆಲ್ ಅನಧಿಕೃತವಾಗಿ ನೂರಾರು ಮಿಲಿಯನ್ ಪೌಂಡ್ ಗಳಷ್ಟು ಹಣವನ್ನು ಕಂಪನಿಯ ನಿವೃತ್ತಿವೇತನ ಖಾತೆಯಿಂದ ತೆಗೆದು ಮಿರರ್ ಗ್ರೂಪ್ ನ ಷೇರುಗಳು ಕುಸಿಯದಂತೆ ನೋಡಿಕೊಳ್ಳಲು, ಹಾಗೂ ತನ್ಮೂಲಕ ತನ್ನ ಕಂಪನಿಯು ಪಾಪರ್ ಆಗದಂತೆ ಕಾಪಾಡಲು ಅಕ್ರಮವಾಗಿ ಬಳಸಿರುವುದು ಅವರ ಸಾವಿನ ನಂತರ ಗೋಚರವಾಯಿತು. ಕಡೆಗೆ ಆ ನಿವೃತ್ತಿವೇತನದ ಖಾತೆಗೆ ಬಂಡವಾಳ ಹೂಡುವ ಬ್ಯಾಂಕ್ ಗಳಾದ ಷಿಯರ್ಸನ್ ಲೆಹ್ಮನ್ ಮತ್ತು ಗೋಲ್ಡ್ ಮನ್ ಸ್ಯಾಕ್ಸ್ ಹಾಗೂ ಬ್ರಿಟಿಷ್ ಸರ್ಕಾರದಿಂದ ಹಣವನ್ನು ಪಡೆದು ತುಂಬಲಾಯಿತು. ೧೯೯೨ ರಲ್ಲಿ ಮ್ಯಾಕ್ಸ್ ವೆಲ್ ಕಂಪನಿಗಳು ಪಾಪರ್ ಚೀಟಿಗಾಗಿ ಅರ್ಜಿ ಸಲ್ಲಿಸಿದವು. ಮ್ಯಾಕ್ಸ್ ವೆಲ್ ರ ಮಗ, ಕೆವಿನ್ ಮ್ಯಾಕ್ಸ್ ವೆಲ್ ಪಾಪರ್ ಎಂದು ಘೋಷಿಸಲಾದಾಗ ಅವರ ತಲೆಯ ಮೇಲೆ ಇದ್ದ ಸಾಲದ ಮೊತ್ತ £೪೦೦ ಮಿಲಿಯನ್.

೧೯೯೫ ರಲ್ಲಿ ಮ್ಯಾಕ್ಸ್ ವೆಲ್ ರ ಮಕ್ಕಳಾದ ಕೆವಿನ್ ಮತ್ತು ಇಯಾನ್ ಹಾಗೂ ಇಬ್ಬರು ಮಾಜಿ ನಿರ್ದೇಶಕರ ಮೇಲೆ ವಂಚಿಸಲು ಸಂಚು ಹೂಡಿರುವ ಆರೋಪ ಹೊರಿಸಿ ಮೊಕದ್ದಮೆ ಹೂಡಲಾಯಿತು, ಆದರೆ ೧೯೯೬ ರಲ್ಲಿ ಹನ್ನೆರಡು ಜನರ ಜ್ಯೂರಿಯು ಇವರೆಲ್ಲರೂ ನಿರಪರಾಧಿಗಳೆಂದು ಘೋಷಿಸಿ ಆರೋಪಮುಕ್ತಗೊಳಿಸಿತು. 

ಸಾಹಿತ್ಯಿಕ ಉಲ್ಲೇಖಗಳು

[ಬದಲಾಯಿಸಿ]

೨೦೦೮ ರಲ್ಲಿ ಮ್ಯಾಕ್ಸ್ ವೆಲ್ ರ ಪತ್ನಿ ತಮ್ಮ ವೃತ್ತಾಂತಗಳನ್ನು ಎ ಮೈಂಡ್ ಆಫ್ ಹರ್ ಓನ್, ಎಂಬ ಶೀರ್ಷಿಕೆಯಡಿಲ್ಲಿ ಬಿಡುಗಡೆ ಮಾಡಿದರು; ಮ್ಯಾಕ್ಸ್ ವೆಲ್ ಪ್ರಪಂಚದ ಅತ್ಯಂತ ಶ್ರೀಮಂತ ಪ್ರಕಾಶಕರಲ್ಲೊಬ್ಬರಾಗಿದ್ದ ಕಾಲದಲ್ಲಿ ಅವರೊಡನೆ ಈಕೆ ಕಳೆದ ಜೀವನದ ಮೇಲೆ ಈ ಕೃತಿಯು ಬೆಳಕು ಚೆಲ್ಲುತ್ತದೆ.[೨೨] ಮ್ಯಾಕ್ಸ್ ವೆಲ್ ನಿಧನರಾಗುವುದಕ್ಕೆ ಸ್ವಲ್ಪ ಮುಂಚೆ ಬಿಬಿಸಿ ವಾಹಿನಿಯು ಮ್ಯಾಕ್ಸ್ ವೆಲ್ ಎಂಬ, ಮ್ಯಾಕ್ಸ್ ವೆಲ್ ರ ಜೀವನವನ್ನು ಬಿಂಬಿಸುವ ನಾಟಕವೊಂದನ್ನು ಬಿತ್ತರಿಸಿತು; ಡೇವಿಡ್ ಸುಚೇತ್ ಮುಖ್ಯಪಾತ್ರದಲ್ಲಿದ್ದ ಈ ನಾಟಕವು ೪ ಮೇ ೨೦೦೭ ರಂದು ಬಿತ್ತರವಾಯಿತು.[೨೩]

ತನ್ನ ಸಾಫ್ಟ್ ವೇರ್ ಕಂಪನಿಯಾದ ಮಿರರ್ ಸಾಫ್ಟ್ ಮೂಲಕ ಮ್ಯಾಕ್ಸ್ ವೆಲ್ ಟೆಟ್ರಿಸ್ ಎಂಬ ವಿಡಿಯೋ ಆಟವನ್ನು ಅದನ್ನು ಅಭಿವೃದ್ಧಿಗೊಳಿಸಿದವರಿಂದ ಪಡೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು; ಸೋವಿಯತ್ ಯೂನಿಯನ್ ನವರು ಅಭಿವೃದ್ಧಿಗೊಳಿಸಿದ್ದ ಈ ಆಟವನ್ನು ಪಶ್ಚಿಮದ ದೇಶಗಳಲ್ಲಿ ವಿತರಿಸುವ ಮತ್ತು ಮಾರುವ ಸ್ವಾಮ್ಯವನ್ನು ಈ ಕಂಪನಿ ಪಡೆಯಿತು.[೨೪]

ಇತರ ಮಾಧ್ಯಮದ ಉಲ್ಲೇಖಗಳಲ್ಲಿ, ಬಿಬಿಸಿ ಧಾರವಾಹಿ ಟು ದ ಮೇನರ್ ಬಾರ್ನ್ ನಲ್ಲಿನ ರಿಚರ್ಡ್ ಡಿ ವೆರೆಯವರ ಪಾತ್ರವು ಮ್ಯಾಕ್ಸ್ ವೆಲ್ ರ ವ್ಯಕ್ತಿತ್ವದ ಮೇಲೆಯೇ ಆಧಾರವಾದುದು ಎನ್ನಲಾಗಿದೆ: ಡೆ ವೆರೆ ಒಬ್ಬ ಝೆಕ್ ವಲಸೆಗಾರನಾಗಿದ್ದು ಗ್ರೇಟ್ ಬ್ರಿಟನ್ ಗೆ ಬಂದು ನೆಲಸಿ ಸ್ವಸಾಮರ್ಥ್ಯದಿಂದ ದೊಡ್ಡ ಶ್ರೀಮಂತನಾಗುತ್ತಾನೆ. ಆಲ್ ಫ್ರೆಡ್ ಮಾರ್ಕ್ಸ್ ಸಹ೧೯೯೦ ರ ದಶಕದಲ್ಲಿ radio play for ಬಿಬಿಸಿ ರೇಡಿಯೋ ೪ ಕ್ಕಾಗಿ ಆಡಿದ ರೇಡಿಯೋ ನಾಟಕದಲ್ಲಿ ಮ್ಯಾಕ್ಸ್ ವೆಲ್ ರ ಪಾತ್ರ ವಹಿಸಿದ್ದಾರೆ; ಆ ನಾಟಕದ ಹೆಸರು ಮ್ಯಾಕ್ಸ್ ವೆಲ್: ದ ಲಾಸ್ಟ್ ಡೇಸ್ . ರಾಬರ್ಟ್ ಮ್ಯಾಕ್ಸ್ ವೆಲ್ ರನ್ನು ಕಾಲ್ಪನಿಕ ರೂಪಕ್ಕೆ ಅಳವಡಿಸಿದುದು ಎಂಬ ಮಾಜಿ ಸಂಸತ್ ಸದಸ್ಯ ಹಾಗೂ ಬ್ರಿಟಿಷ್ ಕಾದಂಬರಿಕಾರರಾದ ಜೆಫ್ರಿ ಆರ್ಚರ್ ರ ಕಾದಂಬರಿಯಾದ ದ ಫೋರ್ತ್ ಎಸ್ಟೇಟ್ ನಲ್ಲಿ ಕಂಡುಬರುತ್ತದೆ; ಆ ಕಾದಂಬರಿಯಲ್ಲಿನ "ರಿಚರ್ಡ್ ಆರ್ಮ್ ಸ್ಟ್ರಾಂಗ್" ಪಾತ್ರವು ಮ್ಯಾಕ್ಸ್ ವೆಲ್ ರನ್ನೇ ಹೋಲುತ್ತದೆ; ಆ ಕಾದಂಬರಿಯಲ್ಲಿ ರೂಪರ್ಟ್ ಮರ್ಡೋಚ್ "ಕೀತ್ ಟೌನ್ ಸೆಂಡ್" ಆಗಿ ಕಾಣಿಸಿಕೊಳ್ಳುತ್ತಾರೆ. ಈ ಕಾದಂಬರಿಯು ಎರಡು ಜೀವನಗಳು ಮತ್ತು ಎರಡು ವಾರ್ತಾಪತ್ರಿಕಾ ಸಾಮ್ಯಾಜ್ಯಗಳನ್ನು ಸಮಾನಾಂತರವಾಗಿ ನಿರೂಪಿಸುತ್ತದೆ. ಎವೆಲಿನ್ ವಾ ರವರ ಎರಡನೆಯ ಮಹಾಯುದ್ಧದ ಕಾದಂಬರಿ ಸ್ವೋರ್ಡ್ ಆಫ್ ಆನರ್ ನಲ್ಲಿ ಅಷ್ಟೇನೂ ಬಿಗಿಯಿಲ್ಲದೆ ಶೀತಲ-ನೆತ್ತರಿನ ಕೊಲೆಪಾತಕನಾದ ಸಾರ್ಜೆಂಟ್ ಲುಡೋವಿಕ್ ಪಾತ್ರದಲ್ಲಿ ಮ್ಯಾಕ್ಸ್ ವೆಲ್ ರ ಹೋಲಿಕೆಯನ್ನು ಕಾಣಬಹುದು.

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಹೆಡಿಂಗ್ಟನ್ ಹಿಲ್ ಹಾಲ್, ಆಕ್ಸ್ ಫರ್ಡ್
  • ಸ್ಕಾಟಿಷ್ ಡೈಲಿ ನ್ಯೂಸ್
  • ಪರ್ಥ್ ಡೈಲಿ ನ್ಯೂಸ್, ಆಸ್ಟ್ರೇಲಿಯಾ

ಉಲ್ಲೇಖಗಳು‌‌

[ಬದಲಾಯಿಸಿ]
  1. ೧.೦ ೧.೧ ೧.೨ Марк Штейнберг. Евреи в войнах тысячелетий. ಪುಟ. ೨೨೭. ISBN ೫-೯೩೨೭-೩೧೫೪-೦ (Russian)
  2. Иван Мащенко (September 7–13, 2002). "Медиа-олигарх из Солотвина". Зеркало недели (in ರಷ್ಯಾದ ಭಾಷೆ) (#34 (409)). Archived from the original on 2012-12-22. {{cite journal}}: Cite has empty unknown parameters: |laydate=, |separator=, |trans_title=, |month=, |laysource=, and |laysummary= (help)CS1 maint: unrecognized language (link)
  3. ಎಲಿಝಬೆತ್ ಮ್ಯಾಕ್ಸ್ ವೆಲ್ ರೊಡನೆ ಸಂದರ್ಶನ
  4. ಮ್ಯಾಕ್ಸ್ ವೆಲ್ : ಅಂತಿಮ ತೀರ್ಪು
  5. "ಎ ಮೈಂಡ್ ಆಫ್ ಮೈ ಓನ್" ಲೇಖಕಿ ಎಲಿಝಬೆತ್ ಮ್ಯಾಕ್ಸ್ ವೆಲ್
  6. ಫ್ರೀ ರಿಸರ್ಚ್ ಪೇಪರ್ಸ್ – ಇಂಫರ್ಮೇಷನ್ ಇಂಟೆಲಿಜೆನ್ಸ್, 1991
  7. ಡೈಲಿ ಟೆಲಿಗ್ರಾಫ್, 2007/04 ಮ್ಯಾಕ್ಸ್ ವೆಲ್ ಒಬ್ಬ ದೈತ್ಯನಂತಿದ್ದರು – ಆದರೆ ದೈತ್ಯನಿಗಿಂತಲೂ ಬಹಳ ಹೆಚ್ಚು ಸಹ [ಶಾಶ್ವತವಾಗಿ ಮಡಿದ ಕೊಂಡಿ]
  8. ಹೇಯ್ನ್ಸ್(೧೯೮೮) ೧೩೫
  9. "Sinclair to Sell British Unit". ದ ನ್ಯೂ ಯಾರ್ಕ್ ಟೈಮ್ಸ್. 1985-06-18. Retrieved 4 December 2009.
  10. "Sinclair: A Corporate History". Planet Sinclair. Retrieved 4 December 2009.
  11. ಡೇವಿಡ್ ಎಲ್ಲಿಸ್ ಮತ್ತು ಸಿಡ್ನಿ ಉರ್ಕ್ ಹಾರ್ಟ್ t "ಮ್ಯಾಕ್ಸ್ ವೆಲ್ಸ್ ಹಾಲ್ ಆಫ್ ಷೇಮ್" Archived 2013-08-13 ವೇಬ್ಯಾಕ್ ಮೆಷಿನ್ ನಲ್ಲಿ., ಟೈಂ , ೮ ಏಪ್ರಿಲ್ ೧೯೯೧
  12. ಕ್ರೈಗ್ ಆರ್. ವಿಟ್ನಿ "ರಾಬರ್ಟ್ ಮ್ಯಾಕ್ಸ್ ವೆಲ್, 68: ಫ್ರಂ ರೆಫ್ಯೂಜೀ ಟು ದ ರಥ್ಲೆಸ್ ಬ್ಯುಲ್ಡರ್ ಆಫ್ ಎ ಪಬ್ಲಿಷಿಂಗ್ ಎಂಪೈರ್", ನ್ಯೂ ಯಾರ್ಕ್ ಟೈಮ್ಸ್ , ೬ ನವೆಂಬರ್ ೧೯೯೧, [ಪುಟ.5]
  13. ೧೩.೦ ೧೩.೧ ಡೆನಿಸ್ ಬಾರ್ಕರ್ ಮತ್ತು ಕ್ರಿಸ್ಟೋಫರ್ ಸಿಲ್ವೆಸ್ಟರ್ "ದ ಗ್ರಾಸ್ ಹಾಪರ್", – ಮ್ಯಾಕ್ಸ್ ವೆಲ್ ರ ಶ್ರದ್ಧಾಂಜಲಿ, ದ ಗಾರ್ಡಿಯನ್ , ೬ ನವೆಂಬರ್ ೧೯೯೧. ೨೦೦೭ ರ ಜುಲೈ ೨೯ ರಂದು ಪುನಃ ಸಂಪಾದಿಸಲಾಯಿತು.
  14. ಬೆಟ್ಟಿ ಮ್ಯಾಕ್ಸ್ ವೆಲ್, ಪುಟ. ೫೪೨
  15. "ನಾಟ್ ಪ್ರೈವೇಟ್ ಐ", ಟೋನಿ ಕ್ವಿನ್, Magforum.com , ೬ ಮಾರ್ಚ್ ೨೦೦೭
  16. "Robert Maxwell: A Profile". BBC News. 29 March 2001. Retrieved 4 April 2009.
  17. ಇದರಿಂದ ಮಾನನಷ್ಟಮೊಕದ್ದಮೆ ಎದುರಿಸುವ ಭಯವಿಲ್ಲದೆ ಸಂಸತ್ ಸದಸ್ಯರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕೆ ಅನುವಾಯಿತು
  18. "ಮ್ಯಾಕ್ಸ್ ವೆಲ್'ಸ್ ಬಾಡಿ ಫೌಂಡ್ ಇನ್ ಸೀ", ಬೆನ್ ಲಾರೆನ್ಸ್, ಜಾನ್ ಹೂಪರ್, ಡೇವಿಡ್ ಷರ್ರಾಕ್, ಮತ್ತು ಜಾರ್ಜಿನಾ ಹೆನ್ರಿ, ದ ಗಾರ್ಡಿಯನ್ , ೬ ನವೆಂಬರ್ ೧೯೯೧
  19. "ರಾಬರ್ಟ್ ಮ್ಯಾಕ್ಸ್ ವೆಲ್ ವಾಸ್ ಎ ಮೊಸಾದ್ ಸ್ಪೈ : ನ್ಯೂ ಕ್ಲೈಮ್ ಆನ್ ಟೈಕೂನ್ಸ್ ಮಿಸ್ಟರಿ ಡೆತ್" Archived 2002-12-04 ವೇಬ್ಯಾಕ್ ಮೆಷಿನ್ ನಲ್ಲಿ., ಗಾರ್ಡನ್ ಥಾಮಸ್ ಮತ್ತು ಮಾರ್ಟಿನ್ ಡಿಲನ್, ಡೈಲಿ ಮಿರರ್ , ೨ ಡಿಸೆಂಬರ್ ೨೦೦೨.
  20. "ರಿವ್ಯೂ : ಗಿಡಿಯಾನ್ಸ್ ಸ್ಪೈಸ್: ದ ಸೀಕ್ರೆಟ್ ಹಿಸ್ಟರಿ ಆಫ್ ದ ಮೊಸಾದ್", Freedomwriter.com
  21. ಜಾನ್ ಲಾಫ್ಟಸ್ ಮತ್ತು ಮಾರ್ಕ್ ಆರನ್ಸ್, ದ ಸೀಕ್ರೆಟ್ ವಾರ್ ಎಗೇನೆಸ್ಟ್ ದ ಜ್ಯೂಸ್ .
  22. MacIntyre, Ben (1 January 1995). "A Match for Robert Maxwell". The New York Times. Retrieved 22 May 2010.
  23. ಸುಚೇತ್ ಇನ್ ಟೈಟಲ್ ರೋಲ್ ಆನ್ ಬಿಬಿಸಿ ಟೂ'ಸ್ ಮ್ಯಾಕ್ಸ್ ವೆಲ್
  24. ಟೆಲ್ಟ್ರಿಸ್: ಎ ಚಿಪ್ ಆಫ್ ದ ಓಲ್ಡ್ ಬ್ಲಾಕ್

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
ದ ಸ್ಯಾಂಪ್ಸನ್ ಆಪ್ಷನ್  
  • ಥಾಮಸ್, ಗಾರ್ಡನ್ ಮತ್ತು ಡಿಲ್ಲನ್, ಮಾರ್ಟಿನ್. (೨೦೦೨).
ರಾಬರ್ಟ್ ಮ್ಯಾಕ್ಸ್ ವೆಲ್: ಇಸ್ರೇಲ್ಸ್ ಸೂಪರ್ ಸ್ಪೈ : ದ ಲೈಫ್ ಎಂಡ್ ಮರ್ಡರ್ ಆಫ್ ಎ ಮೀಡಿಯಾ ಮೊಘಲ್ , ಕೆರಾಲ್ ಮತ್ತು ಗ್ರಾಫ್, ISBN ೦-೭೮೬೭-೧೦೭೮-೦

ಬೋವರ್ ಟಾಮ್| ಮ್ಯಾಕ್ಸ್ ವೆಲ್ | ದ ಫೈನಲ್ ವರ್ಡಿಕ್ಟ್ | ಹಾರ್ಪರ್ ಕಾಲಿನ್ಸ್ ೧೯೯೬ ISBN ೦-೦೦-೬೩೮೪೨೪-೨ ಬೋವರ್ ಟಾಮ್ ಮ್ಯಾಕ್ಸ್ ವೆಲ್ ದ ಔಟ್ ಸೈಡರ್

  • ರಾಯ್ ಗ್ರೀನ್ ಸ್ಲೇಡ್ (೧೯೯೨) "ಮ್ಯಾಕ್ಸ್ ವೆಲ್: ದ ರೈಸ್ ಎಂಡ್ ಫಾಲ್ ಆಫ್ ರಾಬರ್ಟ್ ಮ್ಯಾಕ್ಸ್ ವೆಲ್ ಎಂಡ್ ಹಿಸ್ ಎಂಪೈರ್," ISBN ೧-೫೫೯೭೨-೧೨೩-೫

ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]
Parliament of the United Kingdom
ಪೂರ್ವಾಧಿಕಾರಿ
Frank Markham
Member of Parliament for Buckingham
1964–1970
ಉತ್ತರಾಧಿಕಾರಿ
William Benyon