ಮೌರಿಸ್ ಮೇಟರ್ಲಿಂಕ್
ಜನನ: | |
---|---|
ಜನನ ಸ್ಥಳ: | ಘೆಂಟ್, ಬೆಲ್ಜಿಯಂ |
ನಿಧನ: | 6 May 1949 ನೀಸ್, ಫ್ರಾನ್ಸ್ | (aged 86)
ವೃತ್ತಿ: | ನಾಟಕಕಾರ · ಕವಿ · Essayist |
ರಾಷ್ಟ್ರೀಯತೆ: | ಬೆಲ್ಜಿಯಂ |
ಸಾಹಿತ್ಯ ಶೈಲಿ: | Symbolism |
ಪ್ರಮುಖ ರಚನೆಗಳು: | Intruder (1890) The Blind (1890) Interior (1895) The Blue Bird (1908) |
ಬಾಳ ಸಂಗಾತಿ: | ರೆನೇ ದಹೊನ್ |
ಪ್ರಭಾವಿತರು: | ಕಾಂನ್ಸ್ಟಾಂಟಿನ್ ಸ್ಟಾನಿಸ್ಲಾವ್ಸ್ಕಿ · ವ್ಸೆವೊಲೊಡ್ ಮೆಯರ್ಹೊಲ್ಡ್ |
ಪ್ರಶಸ್ತಿಗಳು: | ಸಾಹಿತ್ಯದ ನೊಬೆಲ್ ಪ್ರಶಸ್ತಿ (೧೯೧೧) |
(೧೮೬೨-೧೯೪೯)
ಬೆಲ್ಜಿಯಂ ದೇಶದ ನಾಟಕಕಾರ, ಮೌರಿಸ್ ಮೇಟರ್ಲಿಂಕ್, ೧೯೧೧ ರಲ್ಲಿ 'ನೋಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ,' ರಾದರು. ಕವಿ, ' ಮೌರಿಸ್ ಮೇಟರ್ಲಿಂಕ್,' ತಮ್ಮ ಮಾತೃಭಾಷೆ ಫ್ರೆಂಚ್ ನಲ್ಲೇ ಸಾಹಿತ್ಯ ಕೃಷಿ ಆರಂಭಿಸಿದರು. ' ಅವರ ಮುಖ್ಯ ಕೊಡುಗೆ, 'ಸಂಕೇತವಾದಿ' [Symbolist] ಸಾಹಿತ್ಯ ಪಂಥಕ್ಕೆ ಸಂದಿದೆ.
ವಿದ್ಯಾಭ್ಯಾಸ
[ಬದಲಾಯಿಸಿ]ಮೊದಲು ’ಮೌರಿಸ್ ಮೇಟರ್ಲಿಂಕ್,’ ರವರು ತಮ್ಮ ವಿದ್ಯಾಭ್ಯಾಸವನ್ನು 'ಜೆಸ್ಸುಯಿಟರು' ನಡೆಸುತ್ತಿದ್ದ ಕಾಲೇಜ್ ಒಂದರಲ್ಲಿ ಆರಂಭಿಸಿದರು. ಆ ಕಾಲೇಜ್ ನ ಗ್ರಂಥಾಲಯದಲ್ಲಿ ಕೇವಲ ಧಾರ್ಮಿಕ ಗ್ರಂಥಗಳನ್ನು ಮಾತ್ರ ಇಟ್ಟಿದ್ದರು. ಉತ್ಕೃಷ್ಟ ಫ್ರೆಂಚ್ ಸಾಹಿತ್ಯವನ್ನು ನಿಷೇದಿಸಿ, ಬದಿಯಲ್ಲಿಟ್ಟಿದ್ದರು. ಈ ಎಲ್ಲಾ ವಿದ್ಯಮಾನಗಳು ಅವರಿಗೆ ಚರ್ಚ್ ಬಗ್ಗೆ ಪೂರ್ವಾಗ್ರವನ್ನು ಬೆಳೆಸಿಕೊಳ್ಳಲು ಪ್ರೇರೇಪಿಸಿತು. ಮುಂದೆ ' ಮೌರಿಸ್ ಮೇಟರ್ಲಿಂಕ್ ' ರವರು 'ಘೆಂಟ್ ವಿಶ್ವವಿದ್ಯಾಲಯ,' ದಲ್ಲಿ ಕಾನೂನು ಶಿಕ್ಷಣದ ನಂತರ, 'ಕಾನೂನು ಪದವಿ' ಪಡೆದರು. ಕೆಲವು ಸಮಯ ಫ್ರಾನ್ಸ್ ನಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಅಲ್ಲಿನ ’ಸಂಕೇತವಾದಿ ಲೇಖಕರ ಸಮಾಗಮ,’ ದಿಂದ ಪ್ರಭಾವಿತರಾದರು. ಅದೇ ಮಾದರಿಯ ಕವಿತೆಗಳನ್ನು ರಚಿಸಿದರು.
ಕೃತಿ ರಚನೆಗಳು
[ಬದಲಾಯಿಸಿ]ಮೊಟ್ಟಮೊದಲು ಮೌರಿಸ್ ಮೇಟರ್ಲಿಂಕ್ ರಚಿಸಿದ ನಾಟಕ 'ಪ್ರಿನ್ಸೆಸ್ ಮಲೀನ್,' ದಿಢೀರನೆ ಎಲ್ಲರ ಮೆಚ್ಚುಗೆಗಳಿಸಿ ಹೆಸರುವಾಸಿಯಾಯಿತು. [೧೮೯೦] ಅದೇ ವರ್ಷದಲ್ಲಿ 'ಇಂಟ್ರೂಡರ್' ಮತ್ತು ' ದ ಬ್ಲೈಂಡ್' ನಾಟಕಗಳೂ ಪ್ರಸಿದ್ಧಿಪಡೆದವು. ಪ್ಯಾರಿಸ್ ನಲ್ಲಿ 'ಜಾರ್ಜೆಟ್ ಲೆಬ್ಲಾಂಕ್,' ಎಂಬ ವಿವಾಹಿತ ನಟಿಯೊಡನೆ ವಾಸಿಸುತ್ತಿದ್ದರು. ಅವರ ತಂದೆ, ತಾಯಿ, ಮತ್ತು ಚರ್ಚ್ ಬಹಳವಾಗಿ ವಿರೋಧಿಸಿದರು. ಈ ಸಂಬಂಧಕ್ಕೆ ಒಪ್ಪಿಗೆ ನೀಡಲಿಲ್ಲ. ಬಹಳ ವರ್ಷಗಳ ಕಾಲ ಆಕೆಯಜೊತೆ ವಾಸಿಸಿದರು, ಹಾಗೂ ಬೇರೆ ನಗರಗಳಲ್ಲೂ ಹೋಗಿ ಆಕೆಯೊಡನೆ ಸಂಬಂಧ ವಿಟ್ಟುಕೊಂಡಿದ್ದರು. ಇದಲ್ಲದೆ ಒಬ್ಬ ಸಣ್ಣ ಪ್ರಾಯದ ನಟಿಯೊಡನೆಯೂ ಪ್ರೇಮ-ಸಂಬಂಧವಿತ್ತು. ಕೊನೆಗೆ ೧೯೧೯ ನಲ್ಲಿ ಮದುವೆ ಮಾಡಿಕೊಂಡರು.
'ಕೃತಿ ಚರ್ಯೆಯ ಅಪವಾದ' ಅವರಿಗೆ ಅಂಟಿಕೊಂಡಿತ್ತು
[ಬದಲಾಯಿಸಿ]ನೋಬೆಲ್ ಪ್ರಶಸ್ತಿ ದೊರೆತನಂತರ, ಮೌರಿಸ್ ಮೇಟರ್ಲಿಂಕ್ ರಅವರು ರಚಿಸುತ್ತಿದ್ದ ನಾಟಕಗಳು ಅಷ್ಟೇನೂ ಯಶಸ್ವಿಯಾಗಲಿಲ್ಲ. ಅಮೆರಿಕದಲ್ಲಿ ಅವರು ಬರೆದ ಕಥಾವಸ್ತುವನ್ನು ಇಟ್ಟುಕೊಂಡು ಚಲನಚಿತ್ರವನ್ನು ತಯಾರಿಸುವ ಉತ್ಸಾಹತೋರಿಸಿದ ಒಬ್ಬರು, ನಂತರ ಕೆಲವು ಕಾರಣಗಳಿಂದ ಆ ಯೋಜನೆಯನ್ನೇ ಕೈಬಿಟ್ಟರು. ಕೃತಿಚೌರ್ಯದ ಅಪಾದನೆಯೊಂದು ಮೌರಿಸ್ ಮೇಟರ್ಲಿಂಕ್ ರವರಿಗೆ ಅಂಟಿಕೊಂಡಿತು. ದಕ್ಷಿಣ ಆಫ್ರಿಕದ ವಿಜ್ಞಾನಿ-ಕವಿ, ಯೂಜೀನ್ ಮರಾಯಿಸ್ ಬರೆದ ' ದ ಸೋಲ್ ಆಫ್ ದ ವೈಟ್ ಆಯಾಂಟ್, ' ಎಂಬುದನ್ನು ಆಧಾರವಾಗಿಟ್ಟುಕೊಂಡು ಮೌರಿಸ್ ಮೇಟರ್ಲಿಂಕ್ ' ದ ಲೈಫ್ ಆಫ್ ದ ಟರ್ಮೈಟ್' ಎಂಬ ಕೃತಿರಚನೆಮಾಡಿ ಪ್ರಕಟಿಸಿದರು. ೧೯೨೬ ರಲ್ಲಿ ಇದು ಕೃತಿಚೌರ್ಯವೆಂದು ಕೆಲವರು ನಿಂದಿಸಿ, ತೀವ್ರ ನಿಂದೆ, ಟೀಕೆಗಳನ್ನು ಅವರು ಮತ್ತೆ ಎದುರಿಸಬೇಕಾಗಿ ಬಂತು.
'ಮೌರಿಸ್ ಮೇಟರ್ಲಿಂಕ್,' ತಾಯ್ನಾಡಿನಲ್ಲಿ ಮರಣಿಸಿದರು
[ಬದಲಾಯಿಸಿ]೧೯೩೨ ರಲ್ಲಿ, ಬೆಲ್ಜಿಯಮ್ ನ ದೊರೆ, ಮೌರಿಸ್ ಮೇಟರ್ಲಿಂಕ್ ರವರಿಗೆ 'ಕೌಂಟ್ ಪದವಿ,' ನೀಡಿ ಗೌರವಿಸಿದರು. ಎರಡನೆಯ ವಿಶ್ವ ಮಹಾಯುದ್ಧದಸಮಯದಲ್ಲಿ ರವರು ಅಮೆರಿಕದ ಆಶ್ರಯದಲ್ಲಿದ್ದರು. ೧೯೪೭ ರಲ್ಲಿ ವಾಪಸ್ ಬಂದು ಫ್ರಾನ್ಸ್ ನಲ್ಲಿಯೇ ತೀರಿಕೊಂಡರು. 'ಫ್ರೆಂಚ್ ಸಾಹಿತ್ಯ ಆಕ್ಯಾಡಮಿ' ಯ ವತಿಯಿಂದ ಮೌರಿಸ್ ಮೇಟರ್ಲಿಂಕ್ ರಿಗೆ, ' ಫ್ರೆಂಚ್ ಭಾಷಾ ಪದಕಪ್ರಶಸ್ತಿ,' ಯನ್ನಿತ್ತು ಗೌರವ ಸಲ್ಲಿಸಿತ್ತು.