ವಿಷಯಕ್ಕೆ ಹೋಗು

ಮೈಲುತುತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಪರ್ ಸಲ್ಫೇಟ್ ಸ್ಫಟಿಕಗಳು

ಮೈಲುತುತ್ತ (ಕಾಪರ್ ಸಲ್ಫೇಟ್) CuSO<sub id="mwCw">4</sub>(H2O)x (x ೦ ಇಂದ ೫ ರವರೆಗಿನ ವ್ಯಾಪ್ತಿಯಲ್ಲಿರಬಹುದು) ರಾಸಾಯನಿಕ ಸೂತ್ರದ ಅಕಾರ್ಬನಿಕ ಸಂಯುಕ್ತವಾಗಿದೆ. ಪೆಂಟಾಹೈಡ್ರೇಟ್ (x = 5) ಅತ್ಯಂತ ಸಾಮಾನ್ಯ ರೂಪವಾಗಿದೆ.[]

ಇದರ ಪೆಂಟಾಹೈಡ್ರೇಟ್ (CuSO4·5H2O) ಅತ್ಯಂತ ಸಾಮಾನ್ಯವಾಗಿ ಕಾಣಲಾದ ಲವಣವಾಗಿದ್ದು, ಕಡು ನೀಲಿ ಬಣ್ಣದ್ದಾಗಿರುತ್ತದೆ. ಇದು ಶಾಖವನ್ನು ಹೊರಹಾಕುತ್ತ ನೀರಿನಲ್ಲಿ ಕರಗುತ್ತದೆ. ಜಲವಿಹೀನ ಕಾಪರ್ ಸಲ್ಫೇಟ್ ಬಿಳಿ ಪುಡಿಯಾಗಿರುತ್ತದೆ.

ಉಪಯೋಗಗಳು

[ಬದಲಾಯಿಸಿ]

ಕಾಪರ್ ಸಲ್ಫೇಟ್ ಪೆಂಟಾಹೈಡ್ರೇಟನ್ನು ಶಿಲೀಂಧ್ರನಾಶಕವಾಗಿ ಬಳಸಲಾಗುತ್ತದೆ.

ಕಾಪರ್ ಸಲ್ಫೇಟ್ (CuSO4) ಮತ್ತು ಕ್ಯಾಲ್ಷಿಯಂ ಹೈಡ್ರಾಕ್ಸೈಡ್ (Ca(OH)2) ಸಸ್ಪೆಂಷನ್ನಾಗಿರುವ ಬಾರ್ಡೋ ಮಿಶ್ರಣವನ್ನು ದ್ರಾಕ್ಷಿ, ಮೆಲನ್‍ಗಳು ಮತ್ತು ಇತರ ಬೆರಿಗಳ ಮೇಲಿನ ಶಿಲಿಂಧ್ರವನ್ನು ನಿಯಂತ್ರಿಸಲು ಬಳಸಲಾಗುತ್ತದೆ.[] ಕಾಪರ್ ಸಲ್ಫೇಟ್‍ನ ನೀರಿನ ದ್ರಾವಣ ಮತ್ತು ನೀರೂಡಿಸಿದ ಸುಣ್ಣದ ಸಸ್ಪೆಂಷನ್ನನ್ನು ಮಿಶ್ರಣಮಾಡಿ ಇದನ್ನು ತಯಾರಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Copper (II) sulfate MSDS". Oxford University. Archived from the original on 2007-10-11. Retrieved 2007-12-31.
  2. Martin, Hubert (1933). "Uses of Copper Compounds: Copper Sulfate's Role in Agriculture". Annals of Applied Biology. 20 (2): 342–363. doi:10.1111/j.1744-7348.1933.tb07770.x. Archived from the original on 2013-09-07. Retrieved 2007-12-31.