ವಿಷಯಕ್ಕೆ ಹೋಗು

ಮೂಡುಗಟ್ಟಿನ ಗಿಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂಡುಗಟ್ಟಿನ ಗಿಡ
ಸ್ಪಿರಾಂಥಸ್ ಇಂಡಿಕಸ್
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
S. indicus
Binomial name
Sphaeranthus indicus

ವೈಜ್ಞಾನಿಕ ಹೆಸರು:ಸ್ಪಿರಾಂಥಸ್ ಇಂಡಿಕಸ್

ಸಸ್ಯದ ಕುಟುಂಬ:ಆಸ್ಟಿರೇಸಿ

ಕನ್ನಡದ ಇತರ ಹೆಸರುಗಳು

[ಬದಲಾಯಿಸಿ]
  • ಕರಂಡ
  • ಬೋಡುಕಡಲೆ
  • ಮುಂಡಿಕಸ

ಇತರ ಭಾಷೆಯ ಹೆಸರುಗಳು

[ಬದಲಾಯಿಸಿ]
  • ಸಂಸ್ಕೃತ-ಮುಂಡರಿಕ,ಮುಂಡಿ,ಬಿಕ್ಷುಗಪರಿವ್ರಾಜ್.
  • ಹಿಂದಿ-ಮುಂಡಿ,ಗೋರಕ್ ಮುಂಡಿ.
  • ತಮಿಳು-ಕೊಟ್ಟಕ್ಕಾರಂಡೈ,ವಿಷ್ಣುಕರಂಡೈ.
  • ತೆಲುಗು-ಬೊಡಸವಮು,ಬೊಡಸೊರಂ,ಬೋಡತರಪು ಚೆಟ್ಟು.
  • ಇಂಗ್ಲೀಷ್-ಇಂಡಿಯನ್ ಸ್ವೀರಾಂತಸ್,
  • ಈಸ್ಟ್-ಇಂಡಿಯನ್-ಗ್ಲೋಬ್-ತಿಸಲ್.

ಪರಿಚಯ

[ಬದಲಾಯಿಸಿ]

ಈ ಮೂಲಿಕೆಯು ಭತ್ತ ಕೊಯ್ಲಾದ ಮೇಲೆ ಗದ್ದೆಯಲ್ಲಿ ಕಳೆಯಾಗಿ ಬೆಳೆಯುತ್ತದೆ.ಇದು ಕೆರೆಯಂಗಳದಲ್ಲಿ, ಕಾಲುವೆಯಂಚಿನಲಿ ಮತ್ತು ಒದ್ದೆ ಭೂಮಿಯಲ್ಲಿ ಹುಲುಸಾಗಿ ಬೆಳೆಯುತ್ತದೆ.ಮೂಲಿಕೆಯ ಮೇಲೆ ಗ್ರಂಥಿ ರೋಮಗಳಿರುವುದರಿಂದ ಮುಟ್ಟಲು ಅಂಟು ಅಂಟಾಗಿರುತ್ತದೆ.ಜೊತೆಗೆ ವಾಸನೆಯೂ ಇರುತ್ತದೆ.ಕಾಂಡವು ಹರಡಿಕೊಂಡು ಬೆಳೆಯುತ್ತದೆ.ಚಿಕ್ಕ ತೊಟ್ಟಿನ ಎಲೆಗಳು ಅಂಡಾಕಾರವಾಗಿರುತ್ತವೆ ಮತ್ತು ಕಾಂಡದ ಮೇಲೆ ಪರ್ಯಾಯವಾಗಿ ಜೋಡಣೆಯಾಗಿರುತ್ತವೆ.ಎಲೆಗಳ ಅಂಚು ಹಲ್ಲಿನಂತೆ ಇಲ್ಲವೆ ಗರಗಸದ ಹಲ್ಲಿನಂತಿರುತ್ತದೆ.ಎಲೆಯ ಕಂಕುಳದಲ್ಲಿ ಅಥವಾ ಅಭಿಮುಖವಾಗಿ ಹೂವಿನ ಚೆಂಡಿರುತ್ತದೆ.ಹೂವಿನ ಚೆಂಡಿನಲ್ಲಿ ನೀಲಿ ಮಿಶ್ರಿತ ಕೆಂಪು ಹೂಗಳಿರುತ್ತವೆ.

ಉಪಯೋಗಗಳು

[ಬದಲಾಯಿಸಿ]
  1. ಬೇರಿನ ತೊಗಟೆಯನ್ನು ಅರೆದು ಮಜ್ಜಿಗೆಯೊಡನೆ ಕುಡಿಸುವುದರಿಂದ ರಕ್ತ ಮೂಲವ್ಯಾಧಿ ಗುಣವಾಗುತ್ತದೆ.ಇದೇ ಗಂಧವನ್ನು ಮೂಲವ್ಯಾಧಿಯ ಮೊಳಕೆಗಳ ಮೇಲೆ ಹೊರಲೇಪನವಾಗಿ ಸಹ ಉಪಯೋಗಿಸಬಹುದು.
  2. ಬೇರನ್ನು ನೀರಿನೊಡನೆ ಚೆನ್ನಾಗಿ ಅರೆದು ರಸ ಹಿಂಡಿಕೊಳ್ಳಬೇಕು ಈ ರಸದ ೧/೨ ಭಾಗದಷ್ಟು ಎಳ್ಳೆಣ್ಣೆ ಸೇರಿಸಿ ಕಾಯಿಸಿ ಎಣ್ಣೆ ಉಳಿಸಿಕೊಂಡು ಸಂಗ್ರಹಿಸಿಟ್ಟುಕೊಳ್ಳಬೇಕು.೨ಡ್ರಾಂ (೧೦ ಮಿ.ಲೀ.ನಷ್ಟು) ಎಣ್ಣೆಯನ್ನು ಬರಿಹೊಟ್ಟೆಗೆ ಪ್ರತಿದಿವಸ ಬೆಳಗ್ಗೆ ೪೧ ದಿವಸ ಸೇವಿಸುವುದರಿಂದ ಪುರಷತ್ವ ವೃದ್ಧಿಯಾಗುತ್ತದೆ.
  3. ಬೇರನ್ನು ಒಣಗಿಸಿ ಚೂರ್ಣ ಮಾಡಿಕೊಂಡು ದಿವಸಕ್ಕೆ ಸುಮಾರು ೨-೫ಗ್ರಾಂನಷ್ಟು ಸೇವಿಸುವುದರಿಂದ ಹೊಟ್ಟೆನೋವು ವಾಸಿಯಾಗುತ್ತದೆ.ಹೊಟ್ಟೆಯಲ್ಲಿ ಜಂತುಹುಳುಗಳಿದ್ದರೆ ಬಿದ್ದುಹೋಗುತ್ತವೆ.ಬೀಜವನ್ನು ಸೇವಿಸಿದರೂ ಇದೇ ಗುಣ ಕಂಡುಬರುತ್ತದೆ.
  4. ಪಾತಾಳಯಂತ್ರದ ಸಹಾಯದಿಂದ ಮೂಡುಗಟ್ಟಿನ ಬೇರಿನ ತೈಲವನ್ನು ತಯಾರಿಸಿಕೊಂಡು ಕೆಲವು ಕಾಲ ಸೇವಿಸುವುದರಿಂದ ಬಲವೀರ್ಯ ವೃದ್ಧಿಯಾಗುತ್ತದೆ.
  5. ಮೂಡುಗಟ್ಟಿನ ಗಿಡದ ಸಮೂಲದ ಚೂರ್ಣವನ್ನು ಜೇನುತುಪ್ಪ ಮತ್ತು ತುಪ್ಪದೊಡನೆ ಸೇವಿಸುವುದರಿಂದ ಅಂಗುಲಿವಾತ ಗುಣವಾಗುತ್ತದೆ.
  6. ಮೂಡುಗಟ್ಟಿನ ಗಿಡದ ಸಮೂಲದ ಚೂರ್ಣವನ್ನು ಹಾಲಿನಲ್ಲಿ ಸೇವಿಸಿದರೆ ಮಂದದೃಷ್ಟಿ ನಿವಾರಣೆಯಾಗುತ್ತದೆ.
  7. ಗಿಡದ ಸ್ವರಸ ಸೇವನೆಯಿಂದ ಕಾಮಾಲೆ,ಅಜೀರ್ಣ,ಹೊಟ್ಟೆನೋವು,ಪಿತ್ತಕೋಶ ಮತ್ತು ಮೇದೋಜೀರಕ ಗ್ರಂಥಿಗಳ ಊತ ಗುಣವಾಗುತ್ತದೆ.
  8. ಗಿಡದ ಸಮೂಲವನ್ನು ನೆರಳಿನಲ್ಲಿ ಒಣಗಿಸಿ ಚೂರ್ಣಮಾಡಿಟ್ಟುಕೊಂಡು ಹಸುವಿನ ಹಾಲಿನೊಡನೆ ಸುಮಾರು ೧೦ಗ್ರಾಂನಷ್ಟು ಸೇವಿಸುವುದರಿಂದ ಸರ್ವರೋಗಗಳು ಗುಣವಾಗುತ್ತವೆ.
  9. ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಚೂರ್ಣಮಾಡಿ ೨೦ಗ್ರಾಂನಷ್ಟು ಚೂರ್ಣವನ್ನು ದಿವಸಕ್ಕೆರೆಡು ಬಾರಿ ಸೇವಿಸುವುದರಿಂದ ಚರ್ಮದ ಕಾಯಿಲೆಗಳು ವಾಸಿಯಾಗುತ್ತವೆ.ಜೊತೆಗೆ ನರಗಳಿಗೆ ಬಲವುಂಟಾಗುತ್ತದೆ.
  10. ಎಲೆಯ ರಸಕ್ಕೆ ಕರಿ ಮೆಣಸಿನಪುಡಿ ಸೇರಿಸಿ ಸೇವಿಸುವುದರಿಂದ ಸೂರ್ಯಾವರ್ತ ತಲೆನೋವು (Hemicrania-day time headache) ಮತ್ತು ಅಪಸ್ಮಾರ ಗುಣವಾಗುತ್ತದೆ.[]
  11. ಹೂವಿನ ಚೆಂಡನ್ನು ಸೇವಿಸುವುದರಿಂದ ರಕ್ತ ಶುದ್ಧಿಯಾಗಿತ್ತದೆ ಮತ್ತು ಚರ್ಮವ್ಯಾಧಿಗಳು ದೂರವಾಗುತ್ತವೆ.

ಪಶುರೋಗ ಚಿಕಿತ್ಸೆಯಲ್ಲಿ

[ಬದಲಾಯಿಸಿ]

ಮೂಡುಗಟ್ಟಿನ ಗಿಡದ ಚಿಗುರೆಲೆಯನ್ನು ಹಿಂಡಿ ರಸ ತೆಗೆದು ಕಣ್ಣಿಗೆ ಹಾಕುವುದರಿಂದ ಕಣ್ಣಿನ ಪೊರೆ ನಾಶವಾಗುತ್ತದೆ.

ಉಲ್ಲೇಖ

[ಬದಲಾಯಿಸಿ]
  1. ಔಷಧಿಯ ಸಸ್ಯಗಳು ಡಾ.ಮಾಗಡಿ ಆರ್. ಗುರುದೇವ,ದಿವ್ಯಚಂದ್ರ ಪ್ರಕಾಶನ-ಬೆಂಗಳೂರು,ಮುದ್ರಣ:೨೦೧೦,ಪುಟ ಸಂಖ್ಯೆ-೨೯೯


<Reference/>