ಮಲಬಾರ್ ತೇಲುವ ಕಪ್ಪೆ
ಮಲಬಾರ್ ತೇಲುವ ಕಪ್ಪೆ | |
---|---|
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ಉಪವಿಭಾಗ: | |
ವರ್ಗ: | |
Subclass: | |
ಗಣ: | |
ಉಪಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | |
ಪ್ರಜಾತಿ: | R. malabaricus
|
Binomial name | |
Rhacophorus malabaricus Jerdon, 1870
| |
ಮಲಬಾರ್ ತೇಲುವ ಕಪ್ಪೆ ಅಥವಾ ಮಲಬಾರ್ ಹಾರುವ ಕಪ್ಪೆ ಭಾರತದ ಪಶ್ಚಿಮಘಟ್ಟಗಳ ಬಹುತೇಕ ಪ್ರದೇಶಗಳಲ್ಲಿ, ಸಮುದ್ರಮಟ್ಟದಿಂದ ಸುಮಾರು ೩೦೦ - ೧೨೦೦ ಮೀ. ಎತ್ತರವಿರುವ ಪ್ರದೇಶಗಳಲ್ಲಿ ಕಂಡುಬರುವ ರಾಕೊಫೋರಿಡೆ ಕುಟುಂಬದ ಒಂದು ಮರಗಪ್ಪೆಯ ಪ್ರಭೇದ.
ವಿವರಣೆ
[ಬದಲಾಯಿಸಿ]ಮಲಬಾರ್ ತೇಲುವ ಕಪ್ಪೆಯನ್ನು Malabar gliding frog ಎಂದು ಆಂಗ್ಲ ಭಾಷೆಯಲ್ಲಿ ಕರೆಯುತ್ತಾರೆ. ಇದರ ವೈಜ್ಞಾನಿಕ ನಾಮ Rhacophorus malabaricus. ಇದನ್ನು ಮೊದಲ ಬಾರಿಗೆ ಜೆರ್ಡನ್ ಅವರು 1870ರಲ್ಲಿ ವರ್ಣಿಸಿದರು. ಇದು ಉಭಯಜೀವಿಗಳ ಶ್ರೇಣಿಯ, ಹಾಗೂ ರಾಕೊಫೋರಿಡೆ ಕುಟುಂಬದ ಸದಸ್ಯ. ಇದು ಪಶ್ಚಿಮಘಟ್ಟಗಳ ನಿತ್ಯ ಹರಿದ್ವರ್ಣ, ಎಲೆ ಉದುರುವ ಕಾಡುಗಳಲ್ಲಿ, ಮರಗಳ ಮೇಲ್ಭಾಗದಲ್ಲಿ, ಕಾಂಡಗಳ ಮೇಲೆ ಹಾಗು ಕಾಫಿ, ಅಡಿಕೆ ತೋಟಗಳಲ್ಲಿಯೂ ಇದನ್ನು ಕಾಣಬಹುದು[೧]. ಇದು ಸುಮಾರು ೧೦ ಸೆ.ಮೀ.ಗಳವರೆಗೆ (೪ ಇಂಚು) ಬೆಳೆಯುತ್ತದೆ[೨]. ದೇಹವು ಹಚ್ಚ ಹಸಿರು ಬಣ್ಣವಿರುತ್ತದೆ, ಹಾಗೂ ಕಪ್ಪು ಹಾಗೂ ಬಿಳಿ ಚುಕ್ಕೆಗಳಿರುತ್ತವೆ. ಇದರ ಹಿಂಭಾಗದ ಅಂಗಗಳು ಸ್ವಲ್ಪ ದೂರದ ಮಟ್ಟಿಗೆ ತೇಲಲು ನೂಲ್ಗೊಂಡಿವೆ. ಇವು ಉದ್ದವಾಗಿರುತ್ತವೆ ಹಾಗೂ ರಾಕೊಪೋರಿಡೆಯ ವೈಶಿಷ್ಟ್ಯ. ಇದರ ಅಂಗಗಳಲ್ಲಿ, ಬೆರಳುಗಳ ಮಧ್ಯ ಕೆಂಪು ಜಾಲಪೊರೆ ಇರುತ್ತದೆ. ಇದರ ಹಿಮ್ಮಡಿಯ ಮೇಲೆ ಒಂದು ರೀತಿಯ ಗಾಢ ಚರ್ಮವಿರುತ್ತದೆ. ಮರಗಳ ಹಾಗೂ ಪೊದೆಗಳ ಮೇಲೆ ಗಟ್ಟಿಯಾಗಿ ತಳವೂರಲು ಈ ಚರ್ಮ ವೈಶಿಷ್ಟ್ಯಗಳು ಸಹಾಯ ಮಾಡುತ್ತವೆ. ಇದು ಸ್ವಲ್ಪ ದೂರದವರೆಗೆ, ಅಂದರೆ, ೯-೧೨ ಮೀ. ವರೆಗೆ, ತೇಲಾಡುತ್ತಾ, ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಯ ಮೇಲೆ ಸಲೀಸಾಗಿ ತಳವೂರುತ್ತದೆ. ಇದರ ಕೂಗು "ಕಟ್ ಕಟ್ ಕಟ್ ಕಟಾ ಕಟಾ ಕರ್ ಕರ್ ... " ಎನ್ನುವಂತೆ ಇರುತ್ತದೆ. ಗಂಡು ಕಪ್ಪೆಗಳು ಹೆಣ್ಣು ಕಪ್ಪೆಗಳಿಗಿಂತ ಗಾತ್ರದಲ್ಲಿ ಚಿಕ್ಕದಿರುತ್ತವೆ. ಸಂತಾನೋತ್ಪತ್ತಿಯ ಸಮಯದಲ್ಲಿ ನೀರಿನ ಬಳಿ ಚಿಕ್ಕ ಗಿಡಗಳ ಎಲೆಗಳ ಮಧ್ಯ ನೊರೆಗೂಡುಗಳನ್ನು (ಗಂಡು ಗಪ್ಪೆಗಳು ಉತ್ಪತ್ತಿಸುವ ಮೂಲದ್ರವ) ಕಟ್ಟುವುದು ನೋಡಬಹುದು. ಸಂತಯಾನೋತ್ಪತ್ತಿಯ ಕ್ರಿಯೆಯ ಕೆಲ ಕಾಲದ ನಂತರ, ಭ್ರೂಣಗಳು ನೊರೆಗೂಡಿನಲ್ಲೇ ವೃದ್ಧಿಯಾಗುತ್ತವೆ. ೫-೭ ದಿನಗಳ ನಂತರ, ಮಳೆಯಿಂದ ಕರಗುವ ನೊರೆಗೂಡಿನಿಂದ ಗೊದಮೊಟ್ಟೆಗಳು ನೀರಿನಲ್ಲಿ ಬೀಳುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ ಬಿಜು, ಎಸ್ ಡಿ; ದತ್ತಾ, ಸುಶಿಲ್; ವಾಸುದೇವನ್, ಕಾರ್ತಿಕೇಯನ್; ಶ್ರೀನಿವಾಸುಲು, ಚೆಲ್ಮಲ; ವಿಜಯಕುಮಾರ್, ಎಸ್ ಪಿ. "Rhacophorus malabaricus". IUCN Redlist. The IUCN Redlist of Threatened Species. Retrieved 06 January, 2018.
{{cite web}}
: Check date values in:|accessdate=
(help) - ↑ ಬಿಜು, ಎಸ್ ಡಿ; ದತ್ತಾ, ಸುಶಿಲ್; ವಾಸುದೇವನ್, ಕಾರ್ತಿಕೇಯನ್; ಶ್ರೀನಿವಾಸುಲು, ಚೆಲ್ಮಲ; ವಿಜಯಕುಮಾರ್, ಎಸ್ ಪಿ. "Rhacophorus malabaricus". IUCN Redlist. The IUCN Redlist of Threatened Species. Retrieved 06 January, 2018.
{{cite web}}
: Check date values in:|accessdate=
(help)
- {{{assessors}}} (2004). Rhacophorus malabaricus. 2006. IUCN Red List of Threatened Species. IUCN 2006. www.iucnredlist.org. Retrieved on 12 May 2006.
- Bordoloi, Sabitry; Bortamuli, Tutul and Ohler, Annemarie (2007): Systematics of the genus Rhacophorus (Amphibia, Anura): identity of red-webbed forms and description of a new species from Assam. Zootaxa 1653: 1–20. PDF abstract and first page
- Boulenger, George Albert (1890): 56. Rhacophorus malabaricus. In: Fauna of British India – Reptilia and Batrachia: 473. Taylor and Francis, London. DjVu fulltext
- Kadadevaru, Girish G. and Kanamadi, Ravishankar D. (2000): Courtship and nesting behaviour of the Malabar gliding frog, Rhacophorus malabaricus (Jerdon, 1870). Curr. Sci. 79(3): 377–380 PDF fulltext