ವಿಷಯಕ್ಕೆ ಹೋಗು

ಮಕರಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಮೆಲ್ಲಿಯಾ ಹೂವಿನಲ್ಲಿ ಮಕರಂದ

ಮಕರಂದ ಸಸ್ಯಗಳು ಉತ್ಪಾದಿಸುವ ಒಂದು ಶರ್ಕರಭರಿತ ದ್ರವ. ಸಸ್ಯಗಳಲ್ಲಿ ಮಕರಂದವು ಹೂವಿನಿಂದ ಅಥವಾ ಎಲೆಗಳ ಬುಡದಲ್ಲಿ ಉತ್ಪನ್ನವಾಗುತ್ತದೆ. ಹೂವಿನಿಂದ ಸ್ರವಿಸುವ ಮಕರಂದವು ಪರಾಗಸ್ಪರ್ಶ ಕ್ರಿಯೆಯಲ್ಲಿ ಸಹಕರಿಸುವ ಪ್ರಾಣಿಗಳನ್ನು (ಸಾಮಾನ್ಯವಾಗಿ ಕೀಟಗಳು ಮತ್ತು ಪಕ್ಷಿಗಳು) ಆಕರ್ಷಿಸಿದರೆ ಎಲೆಯ ಭಾಗದಲ್ಲಿ ಸ್ರವಿಸುವ ಮಕರಂದವು ಸಸ್ಯಾಹಾರಿ ಪ್ರಾಣಿಗಳಿಂದ ತನಗಾಗುವ ಹಾನಿಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ಸಸ್ಯವು ಹೂಡಿಕೊಂಡಿರುವ ನೈಸರ್ಗಿಕ ಉಪಾಯವಾಗಿದೆ. ಈ ರೀತಿಯಲ್ಲಿ ತನ್ನನ್ನು ಭಕ್ಷಿಸಲೋಸುಗ ಬರುವ ಪ್ರಾಣಿಗಳನ್ನು ಎಲೆಯ ಬುಡದ ಮಕರಂದದಿಂದ ತೃಪ್ತಿಗೊಳಿಸಿ ತನ್ನ ಪ್ರಮುಖ ಅಂಗಗಳಾದ ಹೂವು, ಕಾಯಿ ಇತ್ಯಾದಿಗಳನ್ನು ರಕ್ಷಿಸಿಕೊಳ್ಳುತ್ತದೆ. ಮಕರಂದವನ್ನು ಸ್ರವಿಸುವ ಸಸ್ಯಗ್ರಂಥಿಯನ್ನು ನೆಕ್ಟರಿ ಎಂದು ಕರೆಯಲಾಗುತ್ತದೆ. ಮಕರಂದವು ಹಲವು ರಾಸಾಯನಿಕಗಳ ಸಂಯುಕ್ತವಾಗಿದ್ದು ಸಾಮಾನ್ಯ ಸಕ್ಕರೆ (ಗ್ಲೂಕೋಸ್,ಸುಕ್ರೋಸ್) ಅತಿ ಹೆಚ್ಚಿನ ಪ್ರಮಾಣದಲ್ಲಿರುವುದು. ಮಕರಂದವು ಆರ್ಥಿಕವಾಗಿ ಸಹ ಒಂದು ಪ್ರಮುಖ ವಸ್ತು. ಜೇನಿನ ಮೂಲ ಮಕರಂದವಾಗಿದೆ.

ಎಲೆಯ ಬುಡದಿಂದ ಸ್ರವಿಸಿರುವ ಮಕರಂದ
"https://kn.wikipedia.org/w/index.php?title=ಮಕರಂದ&oldid=486199" ಇಂದ ಪಡೆಯಲ್ಪಟ್ಟಿದೆ