ಭಾರತದ ತುತ್ತತುದಿಗಳು
ಭಾರತದ ತುತ್ತತುದಿಗಳು ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಭಾರತದಲ್ಲಿನ ಇತರ ಯಾವುದೇ ಸ್ಥಳಗಿಂತ ಅಂತ್ಯದಲ್ಲಿರುವಂಥಹ ಸ್ಥಳಗಳಾಗಿವೆ. ಉತ್ತರ ಮತ್ತು ಪೂರ್ವದಲ್ಲಿ ಗುರುತಿಸಲ್ಪಟ್ಟಿರುವ ತುತ್ತತುದಿಗಳು ಚೀನಾ ಮತ್ತು ಭಾರತ ನಡುವಿನ ವಿವಾದಿತ ಪ್ರದೇಶದಲ್ಲಿವೆ. ಭಾರತ ಭೂಖಂಡದಲ್ಲಿ (ಅಂಡಮಾನ್ ದ್ವೀಪ ಸಮೂಹವನ್ನು ಹೊರತುಪಡಿಸಿ) ದಕ್ಷಿಣದ ತುತ್ತತುದಿಯಾದ ಕನ್ಯಾಕುಮಾರಿಯನ್ನು ಹೊರತುಪಡಿಸಿ, ಉಳಿದ ಯಾವುದೇ ತುತ್ತತುದಿಯ ಪ್ರದೇಶವು ವಾಸಯೋಗ್ಯವಿಲ್ಲ.
ಅಕ್ಷಾಂಶ ಮತ್ತು ರೇಖಾಂಶಗಳನ್ನು ದಶಮಾಂಶ ಪದವಿ ಸಂಕೇತದ ಮೂಲಕ ವ್ಯಕ್ತಪಡಿಸಲಾಗುತ್ತದೆ. ಉತ್ತರ ಗೋಲಾರ್ಧದಲ್ಲಿನ ಅಕ್ಷಾಂಶಗಳನ್ನು ಧನಾತ್ಮಕ ಮೌಲ್ಯದಿಂದ, ಮತ್ತು ದಕ್ಷಿಣ ಗೋಲಾರ್ಧದಲ್ಲಿನ ಅಕ್ಷಾಂಶಗಳನ್ನು ಋಣಾತ್ಮಕ ಮೌಲ್ಯದಿಂದ ಸೂಚಿಸಲಾಗುತ್ತದೆ. ಹಾಗೆಯೇ, ಪೂರ್ವ ಮತ್ತು ಪಶ್ಚಿಮ ಗೋಲಾರ್ಧದಲ್ಲಿನ ರೇಖಾಂಶಗಳು ಕ್ರಮವಾಗಿ ಧನಾತ್ಮಕ ಮತ್ತು ಋಣಾತ್ಮಕ ಮೌಲ್ಯಗಳಿಂದ ಸೂಚಿಸಲ್ಪಡುತ್ತವೆ. ಗೂಗಲ್ ಅರ್ಥ್ WGS84 ಭೌಗೋಳಿಕ ಸ್ಥಾನೀಕರಣ ವ್ಯವಸ್ಥೆಯನ್ನು (ಜಿಪಿಎಸ್) ಬಳಸುತ್ತಿದ್ದು, ಈ ಲೇಖನದಲ್ಲಿ ಉಲ್ಲೇಖಿಸಿರುವ ಕಕ್ಷೆಗಳ ಮೂಲವಾಗಿದೆ. ಹೆಚ್ಚುವರಿಯಾಗಿ, ಎತ್ತರದಲ್ಲಿನ ಋಣಾತ್ಮಕ ಮೌಲ್ಯವು ಸಮುದ್ರ ಮಟ್ಟದಿಂದ ಕೆಳಗಿನ ಸ್ಥರವನ್ನು ಸೂಚಿಸುತ್ತದೆ.
ತುತ್ತತುದಿಗಳು
[ಬದಲಾಯಿಸಿ]ದಿಕ್ಕು | ಸ್ಥಳ | ಆಡಳಿತಾತ್ಮಕ ಅಸ್ತಿತ್ವ | ಗಡಿ | ನಿರ್ದೇಶಾಂಕಗಳು | ಉಲ್ಲೇಖಗಳು |
---|---|---|---|---|---|
ಉತ್ತರ
(ವಿವಾದಿತ, ಆಡಳಿತ) |
ಸಿಯಾಚಿನ್ ಹಿಮನದಿ (ಗ್ಲೇಶಿಯರ್), ಇಂಧಿರಾ ಕಾಲ್‍ನ (ಸ್ಥಳೀಯ ಭಾಷೆಯಲ್ಲಿ 'ಕಣಿವೆ' ಎಂದರ್ಥ) ಬಳಿ | ಜಮ್ಮು-ಕಾಶ್ಮೀರ | ಕ್ಸಿನ್‍ಝಿಯಾಂಗ್, ಚೀನಾ | 35°40′28″N 76°50′43″E / 35.674520°N 76.845245°E | [೧] |
ಉತ್ತರ
(ವಿವಾದಿತ, ಅಧಿಯಾಚಿತ) |
ಬೇಯಿಕ್ ಕಣಿವೆ ಬಳಿಯ ತಗ್ದುಂಬಷ್ ಪಾಮಿರ್‍ನಲ್ಲಿನ ದಫ಼್‍ದಾರ್ | ಕ್ಸಿನ್‍ಝಿಯಾಂಗ್, ಚೀನಾ | ವಾಖಾನ್ ಕಾರಿಡಾರ್, ಬಡಾಕ್ಷಣ್ ಪ್ರಾಂತ್ಯ, ಆಫ಼್ಘಾನಿಸ್ತಾನ | 37°24′00″N 75°24′00″E / 37.40000°N 75.40000°E | [೨] |
ಉತ್ತರ
(ನಿರ್ವಿವಾದಿತ) |
ಧರ್ವಾಸ್, ಚಂಬಾ ಜಿಲ್ಲೆ | ಹಿಮಾಚಲ ಪ್ರದೇಶ | ಭಾರತ ಆಡಳಿತ ಕಾಶ್ಮೀರ | 33°14′56″N 76°49′37″E / 33.24902°N 76.82704°E | [೩] |
ದಕ್ಷಿಣ | ಇಂಧಿರಾ ಪಾಯಿಂಟ್, ನಿಕೋಬಾರ್ ದ್ವೀಪಸಮೂಹ | ಅಂಡಮಾನ್-ನಿಕೋಬಾರ್ ದ್ವೀಪಸಮೂಹ | ಹಿಂದೂ ಮಹಾಸಾಗರ | 6°44′48″N 93°50′33″E / 6.74678°N 93.84260°E | [೪] |
ದಕ್ಷಿಣ
(ಭೂಖಂಡ) |
ಕೇಪ್ ಕುಮರಿನ್, ಕನ್ಯಾಕುಮಾರಿ | ತಮಿಳು ನಾಡು | ಹಿಂದೂ ಮಹಾಸಾಗರ | 8°04′08″N 77°33′08″E / 8.06890°N 77.55230°E | [೫] |
ಪೂರ್ವ
(ವಿವಾದಿತ, ಆಡಳಿತ) |
ಕಿಬಿತು, ಅಂಜಾವ್ ಜಿಲ್ಲೆ | ಅರುಣಾಚಲ ಪ್ರದೇಶ | ಟಿಬೇಟ್, ಚೀನಾ | 28°01′03″N 97°24′09″E / 28.01744°N 97.40238°E | [೬] |
ಪೂರ್ವ (ನಿರ್ವಿವಾದಿತ) | ಕುಮ್ಕಿ, ಚಾಂಗ್ಲಾಂಗ್ ಜಿಲ್ಲೆ | ಅರುಣಾಚಲ ಪ್ರದೇಶ | ಕಾಚಿನ ರಾಜ್ಯ, ಮಯನ್ಮಾರ್ | 27°07′34″N 97°10′02″E / 27.12622°N 97.16712°E | [೭] |
ಪಶ್ಚಿಮ | ಗುಹರ್ ಮೋತಿ, ಕಚ್ | ಗುಜರಾತ್ | ಅರಬ್ಬೀ ಸಮುದ್ರ | 23°42′47″N 68°01′56″E / 23.71307°N 68.03215°E | [೮] |
ಎತ್ತರಗಳು
[ಬದಲಾಯಿಸಿ]ತೀವ್ರತೆ
(ಎತ್ತರ/ತಗ್ಗು) |
ಹೆಸರು | ಎತ್ತರ/ತಗ್ಗು | ಸ್ಥಳ | ರಾಜ್ಯ | ನಿರ್ದೇಶಾಂಕಗಳು | ಉಲ್ಲೇಖ |
---|---|---|---|---|---|---|
ಅತ್ಯಂತ ಎತ್ತರ (ನಿರ್ವಿವಾದಿತ) | ಕಾಂಚನಗಂಗಾ | ೮,೫೮೬ ಮೀ.
(೨೮,೧೬೯ ಅಡಿ) |
ಭಾರತ-ನೇಪಾಳ ಗಡಿಯಲ್ಲಿನ ಉತ್ತರ ಸಿಕ್ಕಿಂ | ಸಿಕ್ಕಿಂ | 27°42′09″N 88°08′54″E / 27.70250°N 88.14833°E | |
ಅತ್ಯಂತ ಎತ್ತರ (ವಿವಾದಿತ) | ಕೆ೨ | ೮,೬೧೧ ಮೀ.
(೨೮,೨೫೧ ಅಡಿ) |
ಗಿಲ್ಗಿಟ್-ಬಾಲ್ಟಿಸ್ತಾನ ಗಡಿ (ಪಾಕಿಸ್ತಾನ ಆಡಳಿತ) ಮತ್ತು ಕ್ಸಿಂಝಿಯಾಂಗ್ (ಚೀನಾ ಆಡಳಿತ) ನಡುವೆ | ಗಿಲ್ಗಿಟ್-ಬಾಲ್ಟಿಸ್ತಾನ, ಪಾಕಿಸ್ತಾನ | 35°52′57″N 76°30′48″E / 35.88250°N 76.51333°E | |
ಅತ್ಯಂತ ಎತ್ತರ
(ನಿರ್ವಿವಾದಿತ) |
ನಂದಾದೇವಿ | ೭,೮೧೬ ಮೀ.
(೨೫,೬೪೩ ಅಡಿ) |
ಹಿಮಾಲಯ | ಉತ್ತರಾಖಂಡ | 30°22′36″N 79°58′15″E / 30.37667°N 79.97083°E | |
ಅತ್ಯಂತ ತಗ್ಗು | ಕುಟ್ಟನಾಡು | -೨.೨ ಮೀ.
(-೭.೨ ಅಡಿ) |
ಅಳಪ್ಪುಳ | ಕೇರಳ | 9°09′13″N 76°28′23″E / 9.15360°N 76.47300°E | [೯] |
ಇವುಗಳನ್ನೂ ನೋಡಿ
[ಬದಲಾಯಿಸಿ]- ಭಾರತದ ಭೂಗೋಳ
- ಏಷ್ಯಾದ ತುತ್ತತುದಿಗಳು
- ಕಾಶ್ಮೀರ ವಿವಾದ
ಟಿಪ್ಪಣಿಗಳು
[ಬದಲಾಯಿಸಿ]
ಉಲ್ಲೇಖಗಳು
[ಬದಲಾಯಿಸಿ]- ↑ "Google Maps (Jammu and Kashmir)". Google. Retrieved 2014-05-11.Check date values in:
|access-date=
(help) - ↑ Thomas (2003). Manorama Yearbook 2003. Malayala Manorama Co. Ltd. p. 649. ISBN 81-900461-8-7.
- ↑ "Google Maps (Himachal Pradesh)". Google. Retrieved 2008-09-11.Check date values in:
|access-date=
(help) - ↑ "Google Maps (Kashmir)". Google. Retrieved 2008-09-11.Check date values in:
|access-date=
(help) - ↑ "Google Maps (Tamil Nadu)". Google. Retrieved 2008-09-11.Check date values in:
|access-date=
(help) - ↑ "Google Maps (Arunachal Pradesh)". Google. Retrieved 2008-09-11.Check date values in:
|access-date=
(help) - ↑ "Google Maps (Arunachal Pradesh)". Google. Retrieved 2008-09-11.Check date values in:
|access-date=
(help) - ↑ "Google Maps (Gujarat)". Google. Retrieved 2008-09-11.Check date values in:
|access-date=
(help) - ↑ Suchitra, M (2003-08-13). "Thirst below sea level". ದಿ ಹಿಂದೂ. Archived from the original on 2019-09-22. Retrieved 2014-05-11.Check date values in:
|access-date=
(help)