ವಿಷಯಕ್ಕೆ ಹೋಗು

ಬ್ರೆಡ್ ರೋಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ರೆಡ್ ರೋಲ್
ಜರ್ಮನ್ ಬೇಕರಿಯಲ್ಲಿ ಬ್ರೆಡ್ ರೋಲ್ಸ್ (ಲೋವರ್ ಬಿನ್).
ವಿವರಗಳು
ಸೇವನಾ ಸಮಯಸೈಡ್ ಡಿಶ್
ನಮೂನೆಬ್ರೆಡ್
ವಿವಿಧ ಜರ್ಮನ್ ಶೈಲಿಯ ಬ್ರೆಡ್ ರೋಲ್‌ಗಳ ವಿಂಗಡಣೆ.
"ಕೈಸರ್ ರೋಲ್" ಎಂದು ಕರೆಯಲ್ಪಡುವ ವಿಶಿಷ್ಟವಾದ ಆಸ್ಟ್ರಿಯನ್ ಬ್ರೆಡ್ ರೋಲ್.

ಬ್ರೆಡ್ ರೋಲ್ ಒಂದು ತಿನಿಸು. ಇದು ಸಾಮಾನ್ಯವಾಗಿ ದುಂಡಗೆ ಅಥವಾ ಉದ್ದವಾಗಿರುತ್ತದೆ. ಇದನ್ನು ಪ್ರತ್ಯೇಕವಾಗಿ ಊಟದ ರೂಪದಲ್ಲಿ ನೀಡಲಾಗುತ್ತದೆ ಹಾಗೂ ಇದನ್ನು[] ಬೆಣ್ಣೆಯೊಂದಿಗೆ ತಿನ್ನಲಾಗುತ್ತದೆ. ರೋಲ್‌ಗಳನ್ನು ಪೂರ್ತಿಯಾಗಿ ತಿನ್ನಬಹುದು. ಕೆಲವೊಮ್ಮೆ ಅದನ್ನು ಕತ್ತರಿಸಿ ಅದರ ಒಳಭಾಗದಲ್ಲಿ ವಿವಿಧ ಬಗೆಯ ತಿನಿಸುಗಳನ್ನು ತುಂಬಿಸಲಾಗುತ್ತದೆ. ಹೀಗೆ, ಮಾಡುವುದರ ಫಲಿತಾಂಶವನ್ನು ಇಂಗ್ಲಿಷ್‌ನಲ್ಲಿ ಸ್ಯಾಂಡ್‌‌ವಿಚ್ ಎಂದು ಪರಿಗಣಿಸಲಾಗುತ್ತದೆ.[]

ಯುರೋಪ್

[ಬದಲಾಯಿಸಿ]

ರೋಲ್ಸ್‌ಗಳು ಯುರೋಪಿನಾದ್ಯಂತ ಸಾಮಾನ್ಯವಾಗಿದೆ. ರೋಲ್‌ಗಳನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಕೆಲವು ಯುರೋಪಿಯನ್ ಭಾಷೆಗಳು ಬ್ರೆಡ್ ರೋಲ್‌ಗಳ ಅನೇಕ ಸ್ಥಳೀಯ ಮತ್ತು ಉಪಭಾಷೆಯ ಪದಗಳನ್ನು ಹೊಂದಿವೆ. ಇವುಗಳಲ್ಲಿ ಪಶ್ಚಿಮ ಮತ್ತು ಮಧ್ಯ ಜರ್ಮನಿಯ ಹೆಚ್ಚಿನ ಭಾಗಗಳಲ್ಲಿ ಅವುಗಳನ್ನು ಬ್ರಾಟ್ಚೆನ್ ಎಂದು ಕರೆಯಲಾಗುತ್ತದೆ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಅವುಗಳನ್ನು ಬ್ರೋಟ್ಲಿ ಎಂದು ಕರೆಯಲಾಗುತ್ತದೆ. ಬ್ರೋಟ್ ಎಂಬ ಪದ ಜರ್ಮನ್ ಭಾಷೆಯಲ್ಲಿಯೂ ಲಭ್ಯವಿದೆ.[] ಇತರ ಜರ್ಮನ್ ಭಾಷಾ ಪದಗಳಲ್ಲಿ ಬ್ರೆಡ್ ರೋಲ್‌ಅನ್ನು ಹ್ಯಾಂಬರ್ಗ್‌ನ ರುಂಡ್ ಸ್ಟಾಕ್ ("ದುಂಡು ತುಂಡು") ಮತ್ತು ಶ್ಲೆಸ್ವಿಗ್-ಹೋಲ್ಸ್ಟೈನ್ ಎಂದೂ ಕರೆಯಲಾಗುತ್ತದೆ. ಆಸ್ಟ್ರಿಯಾ, ಸ್ಯಾಕ್ಸನಿ ಮತ್ತು ದಕ್ಷಿಣ ಬವೇರಿಯಾ, ವೆಕರ್ಲ್, ಸೆಮ್ಮೆಲ್, ಬಾಡೆನ್-ವುರ್ಟೆಂಬರ್ಗ್, ಫ್ರಾಂಕೋನಿಯಾ ಮತ್ತು ಸಾರ್ಲ್ಯಾಂಡ್‌ನ ವೆಕ್, ಬರ್ಲಿನ್ ಮತ್ತು ಬ್ರಾಂಡೆನ್ ಬರ್ಗ್‌ನ ಕೆಲವು ಭಾಗಗಳಲ್ಲಿ ಸ್ಕ್ರಿಪ್ ಎಂದು ಕರೆಯಲಾಗುತ್ತದೆ. ಈ ಹೆಸರುಗಳಲ್ಲಿ ಕೆಲವು ಇತರ ಯುರೋಪಿಯನ್ ಭಾಷೆಗಳಲ್ಲಿಯೂ ಮತ್ತೆ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, ಹಂಗೇರಿಯನ್ ಭಾಷೆಯಲ್ಲಿ ಝೆಮ್ಲೆ, ಅಥವಾ ಡ್ಯಾನಿಶ್ ಮತ್ತು ನಾರ್ವೇಜಿಯನ್ ಭಾಷೆಯಲ್ಲಿ ರುಂಡ್ಸ್ಟೈಕರ್ ("ದುಂಡು ತುಂಡುಗಳು"). ನೆದರ್ಲ್ಯಾಂಡ್ಸ್‌ನಲ್ಲಿ ಅವುಗಳನ್ನು ಬ್ರೂಡ್ಜೆ ಎಂದು ಕರೆಯಲಾಗುತ್ತದೆ.

"ಸಣ್ಣ ಬ್ರೆಡ್" ಇಟಾಲಿಯನ್‌ನ ಪ್ಯಾನಿನೊ ಎಂಬಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಸ್ಟಫ್ಡ್ ಸಣ್ಣ ಬ್ರೆಡ್ ರೋಲ್‌ನಂತೆ ಕಂಡುಬರುತ್ತದೆ. ಕೈಸರ್ಸೆಮ್ಮೆಲ್ ಇಟಲಿಯಲ್ಲಿ ಮಿಚೆಟ್ಟಾ ಅಥವಾ ರೊಸೆಟ್ಟಾ ಆಗಿ ಮತ್ತೆ ಕಾಣಿಸಿಕೊಳ್ಳುತ್ತದೆ. ಸ್ವೀಡಿಶ್ ಭಾಷೆಯಲ್ಲಿ, ಬ್ರೆಡ್ ರೋಲ್ ಎಂದರೆ (ಫ್ರುಕೋಸ್ಟ್) ಬುಲ್ಲಾರ್ ("ಉಪಾಹಾರ, ಬನ್"), ಫ್ರಾನ್ಸ್ಕ್ಬ್ರೊಡ್ಬುಲ್ಲರ್ ("ಫ್ರೆಂಚ್ ಬ್ರೆಡ್ ಬನ್") ಅಥವಾ ಸರಳವಾಗಿ ಫ್ರಾಲ್ಲಾ ("ಬನ್"), ಬೆಣ್ಣೆಯೊಂದಿಗೆ ತಿನ್ನುವ ಆರಾಮದಾಯಕ ಆಹಾರ ಮತ್ತು ವಾರಾಂತ್ಯದ ಉಪಾಹಾರಕ್ಕಾಗಿ ಯಾವುದೇ ರೀತಿಯಲ್ಲಿ (ಮಾರ್ಮಾಲೆಡ್, ಚೀಸ್, ಹ್ಯಾಮ್, ಸಲಾಮಿ) ಬಳಕೆಮಾಡಲಾಗುತ್ತದೆ.[] ಡೊಪ್ಪೆಲ್ವೆಕ್ ಅಥವಾ ಡೊಪ್ಪೆಲ್ಬ್ರಾಟ್ಚೆನ್ ಎಂಬುದು ಸಾರ್ಲ್ಯಾಂಡ್‌ನಿಂದ ಹುಟ್ಟಿಕೊಂಡ ಒಂದು ರೀತಿಯ ಬ್ರೆಡ್ ರೋಲ್ ಆಗಿದ್ದು, ಇದು ಬೇಯಿಸುವ ಮೊದಲು ಎರಡು ರೋಲ್‌ಗಳನ್ನು ಅಕ್ಕಪಕ್ಕ ಜೋಡಿಸುವುದನ್ನು ಒಳಗೊಂಡಿದೆ.

ಪ್ರದೇಶವನ್ನು ಅವಲಂಬಿಸಿ ಯುನೈಟೆಡ್ ಕಿಂಗ್ಡಮ್‌ನಲ್ಲಿ ಬ್ರೆಡ್ ರೋಲ್‌ಗೆ ಅನೇಕ ಪದಗಳಿವೆ. ಅವುಗಳೆಂದರೆ: ಬಾಪ್, ಬಾರ್ಮ್ ಕೇಕ್, ಬ್ಯಾಚ್, ಬ್ರೆಡ್ ಕೇಕ್, ಬನ್, ಕಾಬ್, ಟೀ ಕೇಕ್ ಮತ್ತು ಮಫಿನ್ ಹೀಗೆ ಹಲವಾರು ಭಾಷೆಯಲ್ಲಿ ಲಭ್ಯವಿದೆ.[]


ಗೋಧಿ ಹಿಟ್ಟಿನಿಂದ ತಯಾರಿಸಿದ ಬಿಳಿ ರೋಲ್‌ಗಳಿಂದ ಹಿಡಿದು ಹೆಚ್ಚಾಗಿ ರೈ ಹಿಟ್ಟನ್ನು ಹೊಂದಿರುವ ಡಾರ್ಕ್ ರೋಲ್‌ಗಳವರೆಗೆ ಯುರೋಪ್‌ನಲ್ಲಿ ವಿವಿಧ ರೋಲ್‌ಗಳು ಕಂಡುಬರುತ್ತವೆ.[] ಅನೇಕ ರೂಪಾಂತರಗಳಲ್ಲಿ ಕೊತ್ತಂಬರಿ ಮತ್ತು ಜೀರಿಗೆ ಅಥವಾ ಬೀಜಗಳಂತಹ ಮಸಾಲೆಗಳು ಸೇರಿವೆ. ಎಳ್ಳು, ಗಸಗಸೆ, ಕುಂಬಳಕಾಯಿ ಅಥವಾ ಸೂರ್ಯಕಾಂತಿಯಂತಹ ಸಂಪೂರ್ಣ ಬೀಜಗಳನ್ನು ಹೊಂದಿರುವ ಅಥವಾ ಅಲಂಕರಿಸಿದ ಬ್ರೆಡ್ ರೋಲ್‌ಗಳು ಸಹ ಸಾಮಾನ್ಯವಾಗಿದೆ.[]

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Stein, Sadie (April 13, 2015). "Ode to the Buttered Roll, That New York Lifeline". The New York Times. Retrieved November 30, 2017.
  2. "What is a Sandwich? | British Sandwich Week". British Sandwich & Food to Go Association. Archived from the original on 25 ಮೇ 2024. Retrieved 18 May 2022. The British Sandwich Association defines a sandwich as: Any form of bread with a filling, generally assembled cold – to include traditional wedge sandwiches, as well as filled rolls, baguettes, bloomers, pita, wraps and bagels.
  3. www.abendblatt.de: Hamburger Rundstück (in German)
  4. https://eatlittlebird.com/soft-bread-rolls/
  5. Matthew Smith (2018-07-20). "Cobs, buns, baps or barm cakes: what do people call bread rolls?". YouGov (in ಇಂಗ್ಲಿಷ್). YouGov. Retrieved 2021-12-02.
  6. https://www.indianhealthyrecipes.com/bread-roll-recipe-snacks-recipes/
  7. https://simply-delicious-food.com/easy-soft-and-fluffy-bread-rolls/

ಬಾಹ್ಯ ಕೊಂಡಿ

[ಬದಲಾಯಿಸಿ]