ವಿಷಯಕ್ಕೆ ಹೋಗು

ಫ್ಲೋರಾ ಫೌಂಟೆನ್, ಮುಂಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫ್ಲೋರಾ ಫೌಂಟೆನ್
Flora Fountain
Flora Fountain
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Mumbai" does not exist.
Location within Lua error in ಮಾಡ್ಯೂಲ್:Location_map at line 42: Unable to find the specified location map definition: "Module:Location map/data/Mumbai" does not exist.
ಸಾಮಾನ್ಯ ಮಾಹಿತಿ
ವಾಸ್ತುಶಾಸ್ತ್ರ ಶೈಲಿNeo Classical and Gothic Revival
ನಗರಮುಂಬಯಿ
ದೇಶಭಾರತ
ನಿರ್ದೇಶಾಂಕ18°55′57″N 72°49′54″E / 18.9325°N 72.8317°E / 18.9325; 72.8317
ಪೂರ್ಣಗೊಂಡಿದೆ1864
ಬೆಲೆRs 47000 (9000 pounds sterling)
ಕಕ್ಷಿಗಾರಬಾಂಬೆ ಪ್ರೆಸಿಡೆನ್ಸಿ
Technical details
ರಚನಾತ್ಮಕ ವ್ಯವಸ್ಥೆSculpted in imported Portland Stone
Design and construction
ವಾಸ್ತುಶಿಲ್ಪಿರಿಚರ್ಡ್ ನಾರ್ಮನ್ ಶಾ
ಎಂಜಿನಿಯರ್ಜೇಮ್ಸ್ ಫೋರ್ಸತೇ

ಫ್ಲೋರಾ ಫೌಂಟೆನ್,,[] ನಿರ್ಮಾಣದ ಕೆಲಸ ೧೮೬೪, ರಲ್ಲಿ ಮುಗಿಯಿತು. ಈ ಚಿಲುಮೆಯನ್ನು ಅಗ್ರಿ-ಹಾರ್ಟಿಕಲ್ಚರಲ್ ಸೊಸೈಟಿ ಆಫ್ ವೆಸ್ಟರ್ನ್ ಇಂಡಿಯ', ರವರು, ನಿರ್ಮಿಸಿದರು. ನಿರ್ಮಾಣದ ಖರ್ಚು-ವೆಚ್ಚವನ್ನು, ಸೇಟ್ ಕುರ್ಸೆಟ್ ಜಿ ಫರ್ದೂನ್ ಜಿ ಪರೇಖ್, ರವರು ವಹಿಸಿಕೊಂಡರು. ಇದನ್ನು ಕಟ್ಟಲು ಬಳಸಿದ ಶಿಲೆ, ವಿದೇಶದಿಂದ ಆಮದು ಮಾಡಿಕೊಳ್ಳಲಾದ ಪೋರ್ಟ್ ಲ್ಯಾಂಡ್ ಸ್ಟೋನ್. ಈಗ ಅದಕ್ಕೆ ಬಿಳಿಯ ಆಯಿಲ್ ಪೇಂಟ್ ಬಳಿದಿದ್ದಾರೆ. ಕಟ್ಟಿದ ಮೇಲೆ, ಆಗಿನ ಬೊಂಬಾಯಿನ ಗವರ್ನರ್, 'ಸರ್ ಹೆನ್ರಿ ಬಾಟಲ್ ಫ್ರೇರ್' ರವರ ಹೆಸರನ್ನು 'ಕಾರಂಜಿ'ಗೆ ಇಡಬೇಕೆಂಬ ಏರ್ಪಾಟಾಗಿತ್ತು. ಆದರೆ,ಕೆಲವು ಕಾರಣಗಳಿಂದಾಗಿ, ಅನಾವರಣ ಮಾಡುವ ಮೊದಲೇ ನಿರ್ಧಾರ ಬದಲಾಗಿ, 'ಫ್ಲೋರಾ ಫೌಂಟೆನ್' ಎಂದು ಹೆಸರಿಸಲಾಯಿತು. ವಸಂತ ಕಾಲದ ಭವ್ಯ ಪ್ರಕೃತಿಯ ಸಂಭ್ರಮವನ್ನು ಪ್ರತಿಪಾದಿಸುವ ಸೌಂದರ್ಯದ ಖಣಿಯಾದ ರೋಮನ್ ದೇವತೆಯ ಸ್ಮರಣಾರ್ಥವಾಗಿ ಕಾರಂಜಿಗೆ ಹೆಸರನ್ನು ಕೊಡಲಾಯಿತು. 'ಫ್ಲೋರಾ ಫೌಂಟೆನ್, ಸ್ಥಳ ಈಗಿನಂತೆ ಅಂದೂ ನಗರದ ಕೋಟೆ ಪ್ರದೇಶದ ಮಧ್ಯಭಾಗದಲ್ಲಿದ್ದು, ಆಕರ್ಷಣೆಯಕೇಂದ್ರವಾಗಿತ್ತು. ಈಗ, 'ಫ್ಲೋರಾ ಫೌಂಟೆನ್,' ವಲಯ, ಪ್ರಮುಖ ವ್ಯಾಪಾರ, ಉದ್ಯೋಗಗಳ ತಾಣವಾಗಿದೆ. ದಕ್ಷಿಣ ಮುಂಬಯಿ ನ ಕೋಟೆ ಪ್ರದೇಶದಲ್ಲಿರುವ 'ಫ್ಲೋರಾ ಫೌಂಟೆನ್' ಈಗಲೂ ಪ್ರಮುಖ-ಪ್ರೇಕ್ಷಣೀಯ ತಾಣಗಳಲ್ಲೊಂದಾಗಿದೆ

ಹುತಾತ್ಮ ಚೌಕ್

[ಬದಲಾಯಿಸಿ]

ಪಕ್ಕದಲ್ಲೇ ಹುತಾತ್ಮರಿಗೆ ಸ್ಮಾರಕ,'ವನ್ನು ನಿರ್ಮಿಸಿದ್ದಾರೆ. ಮುಂಬಯಿ ಮಹಾರಾಷ್ಟ್ರದ ಜೊತೆಗೆ ಗುಜರಾಥ್ ರಾಜ್ಯವೂ ಸಹಿತ ಸೇರಬೇಕೆಂಬ ವಾದದಿಂದ 'ಸಂಯುಕ್ತ ಮಹಾರಾಷ್ಟ್ರ ಚಳುವಳಿ'ಯಲ್ಲಿ ಪೋಲೀಸರ ಗುಂಡಿನೇಟಿಗೆ ಬಲಿಯಾದ 'ಹುತಾತ್ಮ'ರಿಗೆ ಒಂದು ಸ್ಮಾರಕವನ್ನು ಅಲ್ಲಿ ನಿರ್ಮಿಸಿದ್ದಾರೆ. [] ಈ ಸ್ಥಳ ಇಂದಿಗೂ 'ಪರ್ಯಟಕರಿಗೆ' ಒಂದು ವಿಶೇಷ ಮಹತ್ವದ ಸ್ಥಾನವಾಗಿದೆ.

ಫ್ಲೋರಾ ಫೌಂಟೆನ್ ಬದಿಯಲ್ಲಿಯೇ ಹುತಾತ್ಮರ ಪುಥಳಿಯಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Flora Fountain
  2. THE HIDDEN HISTORY OF HUTATMA CHOWK 15 APRIL 2005- SHEKHAR