ಪ್ರಣಾಮ
ಗೋಚರ
ಪ್ರಣಾಮವು (ಸಂಸ್ಕೃತ, "ವಂದನೆ, ಅಡ್ಡಬೀಳುವುದು ಅಥವಾ ಮುಂದಕ್ಕೆ ಬಗ್ಗುವುದು") ಯಾವುದಾದರ, ಅಥವಾ ಮತ್ತೊಬ್ಬ ವ್ಯಕ್ತಿಯ ಮುಂದೆ - ಸಾಮಾನ್ಯವಾಗಿ ಅಜ್ಜಅಜ್ಜಿಯರು, ಹೆತ್ತವರು, ಹಿರಿಯರು ಅಥವಾ ಶಿಕ್ಷಕರು ದೇವರಂತಹ ಆಳವಾಗಿ ಗೌರವಾನ್ವಿತರಾದವರ ಮುಂದೆ ಗೌರವಪೂರ್ಣ ಅಥವಾ ಶ್ರದ್ಧಾಪೂರ್ಣ ಅಭಿವಂದನೆಯ ಒಂದು ರೂಪ. ಇದು ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಸಂಪ್ರದಾಯಗಳಲ್ಲಿ ಕಂಡುಬರುತ್ತದೆ.[೧]
ಪ್ರಣಾಮದ ಪ್ರಕಾರಗಳು
[ಬದಲಾಯಿಸಿ]ಆರು ಪ್ರಕಾರಗಳ ಪ್ರಣಾಮಗಳಿವೆ:
- ಅಷ್ಟಾಂಗ (ಅಕ್ಷರಶಃ ಎಂಟು ಭಾಗಗಳು) - ಉರಸ್ (ಎದೆ), ಶಿರಸ್ (ತಲೆ), ದೃಷ್ಟಿ (ಕಣ್ಣುಗಳು), ಮನಸ್ (ಗಮನ), ವಚನ (ಮಾತು), ಪಾದ, ಕರ (ಕೈ), ಜಾನು (ಮಂಡಿ).
- ಷಷ್ಠಾಂಗ (ಅಕ್ಷರಶಃ ಆರು ಭಾಗಗಳು) - ಕಾಲ್ಬರೆಳುಗಳು, ಮಂಡಿಗಳು, ಕೈಗಳು, ಗದ್ದ, ಮೂಗು ಮತ್ತು ಹಣೆಯಿಂದ ನೆಲವನ್ನು ಸ್ಪರ್ಶಿಸುವುದು.
- ಪಂಚಾಂಗ (ಅಕ್ಷರಶಃ ಐದು ಭಾಗಗಳು) - ಮಂಡಿಗಳು, ಎದೆ, ಗದ್ದ, ಹಣೆ ಮತ್ತು ಗಂಡಸ್ಥಳದಿಂದ ನೆಲವನ್ನು ಸ್ಪರ್ಶಿಸುವುದು.
- ದಂಡವತ್ (ಅಕ್ಷರಶಃ ಕೋಲು) - ಹಣೆ ಕೆಳಗಿರುವಂತೆ ಬಗ್ಗಿ ನೆಲವನ್ನು ಸ್ಪರ್ಶಿಸುವುದು.
- ನಮಸ್ಕಾರ - ಹಣೆ ಮುಟ್ಟಿ ಕೈ ಜೋಡಿಸುವುದು. ಇದು ಜನರ ನಡುವೆ ವ್ಯಕ್ತಪಡಿಸಲಾದ ಅಭಿವಂದನೆ ಹಾಗೂ ಶುಭಾಶಯದ ಮತ್ತೊಂದು ಸಾಮಾನ್ಯ ರೂಪವಾಗಿದೆ.
- ಅಭಿನಂದನ - ಕೈ ಜೋಡಿಸಿ, ಎದೆಗೆ ಸ್ಪರ್ಶಿಸಿ ಮುಂದಕ್ಕೆ ಬಗ್ಗುವುದು.
ಟಿಪ್ಪಣಿಗಳು
[ಬದಲಾಯಿಸಿ]- ↑ Sivaya Subramuniyaswami. Loving Ganesha. Himalayan Academy Publications. p. 481. ISBN 978-1-934145-17-3.