ಪತಂಜಲಿಯ ಯೋಗಸೂತ್ರಗಳು
ಪತಂಜಲಿಯ ಯೋಗಸೂತ್ರಗಳು ಯೋಗದ ಮೂಲಭೂತ ಪಠ್ಯವನ್ನು ರೂಪಿಸುವ ೧೯೬ ಭಾರತೀಯ ಸೂತ್ರಗಳಾಗಿವೆ.ಪತಂಜಲಿ ಮುನಿಯು ೪೦೦ ರ ಆಸುಪಾಸಿನಲ್ಲಿ ಹಳೆಯ ಸಂಪ್ರದಾಯಗಳನ್ನೆಲ್ಲಾ ಅರಿತುಕೊಂಡ ನಂತರ ಯೋಗ ಸೂತ್ರಗಳನ್ನು ಸಂಪಾದಿಸಿರುತ್ತಾರೆ.[೧] ಮಧ್ಯಯುಗದಲ್ಲಿ, ಯೋಗವನ್ನು ಹಿಂದೂ ತತ್ವಶಾಸ್ತ್ರದ ಆರು ಸಾಂಪ್ರದಾಯಿಕ ಆಸ್ತಿಕ ಪರಂಪರೆಗಳ ಪೈಕಿ ಒಂದಾಗಿ ಇರಿಸಲಾಗಿತ್ತು. ನಂತರದ ಯೋಗತತ್ವ ಉಪನಿಷತ್ ಪ್ರಕಾರ, ಯೋಗವನ್ನು ನಾಲ್ಕು ರೂಪಗಳಲ್ಲಿ ವಿಭಜಿಸಲಾಗುತ್ತದೆ — ಮಂತ್ರಯೋಗ, ಲಯಯೋಗ, ಹಠಯೋಗ ಮತ್ತು ರಾಜಯೋಗ – ಇವುಗಳಲ್ಲಿ ಕೊನೆಯದು ಅತ್ಯಂತ ಉನ್ನತ ಆಚರಣೆ. ಪತಂಜಲಿಯ ಯೋಗ ಸೂತ್ರಗಳು ಮಧ್ಯಯುಗದ ಕಾಲದಲ್ಲಿ ಹೆಚ್ಚು ಅನುವಾದಗೊಂಡ ಪ್ರಾಚೀನ ಭಾರತೀಯ ಪಠ್ಯ, ಸುಮಾರು ನಲವತ್ತು ಭಾರತೀಯ ಭಾಷೆಗಳಿಗೆ ಮತ್ತು ಎರಡು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ.ಪಠ್ಯ ಸುಮಾರು ೭೦೦ ವರ್ಷಗಳ ಕಾಲ ಮಸುಕಾಗಿ ಉಳಿಯಿತು ಅಂದರೆ ೧೨ರಿಂದ ೧೯ನೇ ಶತಮಾನದ ವರೆಗೂ;ಮತ್ತೇ ಸ್ವಾಮಿ ವಿವೇಕಾನಂದರ ಪ್ರಯತ್ನದ ಫಲವಾಗಿ ೧೯ನೇ ಶತಮಾನದಲ್ಲಿ ಹಿಂದಿರುಗಿತು.ಇದು ೨೦ನೇ ಶತಮಾನದಲ್ಲಿ ಪುನರಾಗಮನದ ನಂತರ ಮತ್ತೆ ತನ್ನ ಶ್ರೇಷ್ಠತೆ ಮತ್ತು ಪ್ರಾಮುಖ್ಯತೆಯನ್ನು ಪಡೆಯಿತು.೨೦ನೇ ಶತಮಾನದಲ್ಲಿ ಕಾರ್ಪೊರೇಟ್ ಯೋಗ ಉಪಸಂಸ್ಕೃತಿಯು ಇದನ್ನು ಹಿಂದೆಂದೂ ಇರದ ಮಟ್ಟಿಗೆ ಯೋಗ ಸೂತ್ರಗಳನ್ನು ಉನ್ನತೀಕರಿಸಲಾಯಿತು.ವಿದ್ವಾಂಸರು ಪತಂಜಲಿ ಸೂತ್ರಗಳನ್ನು ಹಿಂದೂ ಧರ್ಮದ ಶಾಸ್ತ್ರೀಯ ಯೋಗ ತತ್ವಜ್ಞಾನದ ಅಡಿಪಾಯ ಎಂದು ಪರಿಗಣಿಸುತ್ತಾರೆ.[೨]
ಉಲ್ಲೇಖಗಳು
[ಬದಲಾಯಿಸಿ]