ಪತಂಜಲಿಯ ಯೋಗಸೂತ್ರಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪತಂಜಲಿಯ ಯೋಗಸೂತ್ರಗಳು ಯೋಗದ ಮೂಲಭೂತ ಪಠ್ಯವನ್ನು ರೂಪಿಸುವ ೧೯೬ ಭಾರತೀಯ ಸೂತ್ರಗಳಾಗಿವೆ. ಮಧ್ಯಯುಗದಲ್ಲಿ, ಯೋಗವನ್ನು ಹಿಂದೂ ತತ್ವಶಾಸ್ತ್ರದ ಆರು ಸಾಂಪ್ರದಾಯಿಕ ಆಸ್ತಿಕ ಪರಂಪರೆಗಳ ಪೈಕಿ ಒಂದಾಗಿ ಇರಿಸಲಾಗಿತ್ತು. ನಂತರದ ಯೋಗತತ್ವ ಉಪನಿಷತ್ ಪ್ರಕಾರ, ಯೋಗವನ್ನು ನಾಲ್ಕು ರೂಪಗಳಲ್ಲಿ ವಿಭಜಿಸಲಾಗುತ್ತದೆ — ಮಂತ್ರಯೋಗ, ಲಯಯೋಗ, ಹಠಯೋಗ ಮತ್ತು ರಾಜಯೋಗ – ಇವುಗಳಲ್ಲಿ ಕೊನೆಯದು ಅತ್ಯಂತ ಉನ್ನತ ಆಚರಣೆ.