ನೆಟ್‌ಸ್ಕೇಪ್ ನ್ಯಾವಿಗೇಟರ್
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (November 2007) |
ಚಿತ್ರ:Netscape Navigator.png | |
ಅಭಿವೃದ್ಧಿಪಡಿಸಿದವರು | Netscape Communications Corporation |
---|---|
ಮೊದಲು ಬಿಡುಗಡೆ | 15 December 1994 (Netscape Navigator 1.0) |
ಗಣಕಯಂತ್ರದಲ್ಲಿ | Cross-platform |
ವಿಧ | Web browser |
ಅಧೀಕೃತ ಜಾಲತಾಣ | Netscape Browser Archive |
ನೆಟ್‌ಸ್ಕೇಪ್ ನ್ಯಾವಿಗೇಟರ್ ಹಾಗು ನೆಟ್‌ಸ್ಕೇಪ್ ಎಂಬುದು ೧೯೯೦ರ ದಶಕದಲ್ಲಿ ಜನಪ್ರಿಯವಾಗಿದ್ದ ಖಾಸಗಿ ಸ್ವಾಮ್ಯದ ವೆಬ್ ಬ್ರೌಸರ್‌ನ ಹೆಸರುಗಳು. ಇದು ನೆಟ್‌ಸ್ಕೇಪ್ ಕಮ್ಯೂನಿಕೇಷನ್ಸ್ ಕಾರ್ಪೋರೇಶನ್ ನ ಒಂದು ಪ್ರಮುಖ ತಾಂತ್ರಿಕ ಉತ್ಪನ್ನವಾಗಿದೆ. ಜೊತೆಗೆ ಬಳಕೆಯ ಹಂಚಿಕೆಗೆ ಸಂಬಂಧಿಸಿದಂತೆ ಇದೊಂದು ಪ್ರಮುಖ ವೆಬ್ ಬ್ರೌಸರ್ ಆಗಿದೆ, ಆದಾಗ್ಯೂ ೨೦೦೨ರ ಸುಮಾರಿಗೆ ಇದರ ಬಳಕೆಯು ಬಹುತೇಕವಾಗಿ ಕಣ್ಮರೆಯಾಯಿತು. ಇದಕ್ಕೆ ಆಂಶಿಕವಾಗಿ ಮೈಕ್ರೋಸಾಫ್ಟ್‌ನ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಂತರಜಾಲ ವೀಕ್ಷಕ ಸಾಫ್ಟ್‌ವೇರ್ ಹಾಗು ಇತರ ಅಂತರಜಾಲ ವೀಕ್ಷಕಗಳ ಹೆಚ್ಚಿದ ಬಳಕೆಯು ಕಾರಣವಾದರೆ, ಆಂಶಿಕವಾಗಿ ನೆಟ್‌ಸ್ಕೇಪ್ ಕಾರ್ಪೋರೇಶನ್ (ನಂತರ ಸಂಸ್ಥೆಯನ್ನು AOL ಖರೀದಿಸಿತು) ೧೯೯೦ರ ದಶಕದ ದ್ವಿತೀಯಾರ್ಧದ ನಂತರ ನೆಟ್‌ಸ್ಕೇಪ್ ನ್ಯಾವಿಗೇಟರ್‌ನ ತಾಂತ್ರಿಕ ಆವಿಷ್ಕಾರವನ್ನು ಸಮರ್ಥವಾಗಿ ನಿರ್ವಹಿಸದಿರುವುದೂ ಕಾರಣವಾಗಿತ್ತು.[೧]
ನೆಟ್‌ಸ್ಕೇಪ್ ನ ವ್ಯಾವಹಾರಿಕ ಅಂತ್ಯವು ಮೈಕ್ರೋಸಾಫ್ಟ್ ನ ಟ್ರಸ್ಟ್ ವಿರೋಧಿ ವಿಚಾರಣೆಗೆ ಒಂದು ಮುಖ್ಯ ಪೀಠಿಕೆಯಾಯಿತು. ಅಲ್ಲಿ ನ್ಯಾಯಾಲಯವು ಮೈಕ್ರೋಸಾಫ್ಟ್ ಕಾರ್ಪೋರೇಶನ್ ನ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಜೊತೆಗೆ ಇಂಟರ್ನೆಟ್ ಎಕ್ಸ್‌ಪ್ಲೋರರ್ ನ ಹೊರೆಯನ್ನು ಒಂದು ಏಕಸ್ವಾಮ್ಯದ ಹಾಗೂ ಕಾನೂನುಬಾಹಿರ ವ್ಯಾವಹಾರಿಕ ಪದ್ದತಿಯೆಂದು ತೀರ್ಪು ನೀಡಿತು.
ನೆಟ್‌ಸ್ಕೇಪ್ ನ್ಯಾವಿಗೇಟರ್ ವೆಬ್ ಬ್ರೌಸರ್ ಸ್ಥಾನವನ್ನು ನೆಟ್‌ಸ್ಕೇಪ್ ಕಮ್ಯೂನಿಕೇಟರ್ ಇಂಟರ್ನೆಟ್ ಸೂಟ್ ಆಕ್ರಮಿಸಿಕೊಂಡಿತು, ನಂತರದಲ್ಲಿ ಈ ಸ್ಥಾನವನ್ನು ನೆಟ್‌ಸ್ಕೇಪ್ 6, ನೆಟ್‌ಸ್ಕೇಪ್ 7, ನೆಟ್‌ಸ್ಕೇಪ್ ಬ್ರೌಸರ್ 8, ಹಾಗು ನೆಟ್‌ಸ್ಕೇಪ್ ನ್ಯಾವಿಗೇಟರ್ 9 ಆಕ್ರಮಿಸಿಕೊಂಡವು. [೨]
AOL ಔಪಚಾರಿಕವಾಗಿ ನೆಟ್‌ಸ್ಕೇಪ್ ನ್ಯಾವಿಗೇಟರ್ ಅಭಿವೃದ್ಧಿಪಡಿಸುವುದನ್ನು ಡಿಸೆಂಬರ್ ೨೮, ೨೦೦೭ರಲ್ಲಿ ನಿಲ್ಲಿಸಿತು, ಆದರೆ ಮಾರ್ಚ್ ೧, ೨೦೦೮ರವರೆಗೂ AOL ತಾಂತ್ರಿಕ ನೆರವನ್ನು ನಿಲ್ಲಿಸುವವರೆಗೂ ಭದ್ರತಾ ಪರಿಷ್ಕರಣೆಗಳೊಂದಿಗೆ ವೆಬ್ ಬ್ರೌಸರ್‌ಗೆ ತನ್ನ ಬೆಂಬಲವನ್ನು ಮುಂದುವರೆಸಿತು. ನೆಟ್‌ಸ್ಕೇಪ್ ನ್ಯಾವಿಗೇಟರ್ ವೆಬ್ ಬ್ರೌಸರ್ ಸಮೂಹದ ಸಂರಕ್ಷಿತ ಆವೃತ್ತಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು AOL ಅನುಮತಿ ನೀಡುತ್ತದೆ. ಅಲ್ಲದೆ, AOL ನೆಟ್‌ಸ್ಕೇಪ್ ಅಂತರಜಾಲವನ್ನು ಒಂದು ಇಂಟರ್ನೆಟ್ ಪೋರ್ಟಲ್ ಆಗಿ ನಿರ್ವಹಣೆ ಮಾಡುತ್ತದೆ.[೩]
ನೆಟ್‌ಸ್ಕೇಪ್ ಮೂಲ ಸಂಕೇತವು ಮೊಜಿಲ್ಲ ಫೈರ್ ಫಾಕ್ಸ್‌ಗೆ ಆಧಾರವಾಗಿದೆ.[೪]
ಇತಿಹಾಸ ಹಾಗು ಅಭಿವೃದ್ಧಿ
[ಬದಲಾಯಿಸಿ]ಸೃಷ್ಟಿ
[ಬದಲಾಯಿಸಿ]ನೆಟ್‌ಸ್ಕೇಪ್ ನ್ಯಾವಿಗೇಟರ್ ಮೊಸೈಕ್ ವೆಬ್ ಬ್ರೌಸರ್ ನ್ನು ಆಧರಿಸಿದೆ, ನ್ಯಾಷನಲ್ ಸೆಂಟರ್ ಫಾರ್ ಸೂಪರ್ ಕಂಪ್ಯೂಟಿಂಗ್ ಅಪ್ಲಿಕೆಷನ್ಸ್‌ನಲ್ಲಿ ಅರೆಕಾಲಿಕ ನೌಕರ ಮಾರ್ಕ್ ಆನ್ಡ್ರಿಸನ್ ಇದನ್ನು ಜಂಟಿಯಾಗಿ ರಚನೆ ಮಾಡಿದರು. ಇವರು ಯೂನಿವರ್ಸಿಟಿ ಆಫ್ ಇಲ್ಲಿನಾಯಿಸ್‌ನ ವಿದ್ಯಾರ್ಥಿಯೂ ಆಗಿದ್ದರು. ಆನ್ಡ್ರಿಸನ್ ೧೯೯೩ರಲ್ಲಿ ಪದವಿ ಗಳಿಸಿದ ನಂತರ, ಕ್ಯಾಲಿಫೋರ್ನಿಯಕ್ಕೆ ಸ್ಥಳ ಬದಲಾವಣೆ ಮಾಡಿಕೊಂಡರು, ನಂತರ ಅಲ್ಲಿ ಸಿಲಿಕಾನ್ ಗ್ರ್ಯಾಫಿಕ್ಸ್ ನ ಸ್ಥಾಪಕರಾಗಿದ್ದ, ಇತ್ತೀಚಿಗೆ ಅಗಲಿದ ಜಿಮ್ ಕ್ಲಾರ್ಕ್‌ರನ್ನು ಸಂಧಿಸಿದರು. ಕ್ಲಾರ್ಕ್, ಮೊಸೈಕ್ ಬ್ರೌಸರ್ ಒಂದು ಮಹತ್ವದ ವಾಣಿಜ್ಯ ಉಪಯೋಗಗಳನ್ನು ಹೊಂದಿರುವುದರ ಜೊತೆಗೆ ಮೂಲಧನವನ್ನು ಒದಗಿಸುತ್ತದೆಂದು ನಂಬಿದ್ದರು. ಶೀಘ್ರದಲ್ಲಿ ಮೊಸಾಯಿಕ್ ಕಮ್ಯೂನಿಕೇಷನ್ಸ್ ಕಾರ್ಪೋರೇಶನ್ ಕ್ಯಾಲಿಫೋರ್ನಿಯಾದ ಮೌಂಟನ್ ವ್ಯೂ ನಲ್ಲಿ ತಮ್ಮ ಉದ್ಯಮವನ್ನು ಆರಂಭಿಸಿತು. ಇದಕ್ಕೆ ಆನ್ಡ್ರಿಸನ್ ರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಯೂನಿವರ್ಸಿಟಿ ಆಫ್ ಇಲ್ಲಿನಾಯಿಸ್, ಸಂಸ್ಥೆಯ ಮೊಸೈಕ್ ಹೆಸರಿನ ಬಳಕೆಯಿಂದಾಗಿ ಅಸಂತುಷ್ಟತೆಯನ್ನು ಹೊಂದಿದ್ದರ ಪರಿಣಾಮವಾಗಿ, ಸಂಸ್ಥೆಯು ತನ್ನ ಹೆಸರನ್ನು ನೆಟ್‌ಸ್ಕೇಪ್ ಕಮ್ಯೂನಿಕೇಷನ್ಸ್ ಎಂದು ಬದಲಾಯಿಸಿತು (ಈ ಹೆಸರನ್ನು ಸಂಸ್ಥೆಯ ಮಾರಾಟ ಪ್ರತಿನಿಧಿ ಗ್ರೆಗ್ ಸ್ಯಾಂಡ್ಸ್ ಸೂಚಿಸಿದರು) ಜೊತೆಗೆ ಅದರ ಪ್ರಮುಖ ವೆಬ್ ಬ್ರೌಸರ್‌ನ್ನು ನೆಟ್‌ಸ್ಕೇಪ್ ನ್ಯಾವಿಗೇಟರ್ ಎಂದು ಹೆಸರಿಸಿತು.
ನೆಟ್‌ಸ್ಕೇಪ್ ತನ್ನ ಮೊದಲ ಮಾಧ್ಯಮ ಬಿಡುಗಡೆಯನ್ನು ಪ್ರಕಟಿಸಿ (ಅಕ್ಟೋಬರ್ ೧೩, ೧೯೯೪) ನ್ಯಾವಿಗೇಟರ್ ನ್ನು ಎಲ್ಲ ವಾಣಿಜ್ಯೇತರ ಬಳಕೆದಾರರಿಗೆ ಶುಲ್ಕವಿಲ್ಲದೆ ದೊರಕುವಂತೆ ಮಾಡುತ್ತದೆಂದು ಹೇಳಿತು, ಜೊತೆಗೆ ನವೆಂಬರ್ ೧೯೯೪ ಹಾಗು ಮಾರ್ಚ್ ೧೯೯೫ರಲ್ಲಿ ಬೀಟಾ ಆವೃತ್ತಿಗಳ ೧.೦ ಹಾಗು ೧.೧ ಆವೃತ್ತಿಗಳನ್ನು ವಾಸ್ತವವಾಗಿ ಶುಲ್ಕವಿಲ್ಲದೆ ಡೌನ್ ಲೋಡ್ ಮಾಡಿಕೊಳ್ಳಬಹುದೆಂದು ಪ್ರಕಟಿಸಿತು, ಜೊತೆಗೆ ಡಿಸೆಂಬರ್ ೧೯೯೪ರಲ್ಲಿ ೧.೦ರ ಸಂಪೂರ್ಣ ಆವೃತ್ತಿಯು ದೊರಕುವುದೆಂದು ತಿಳಿಸಿತು. ನ್ಯಾವಿಗೇಟರ್‌ಗೆ ಸಂಬಂಧಿಸಿದಂತೆ ನೆಟ್‌ಸ್ಕೇಪ್‌ನ ಆರಂಭಿಕ ಕಾರ್ಪೊರೇಟ್ ನೀತಿಯು ಆಸಕ್ತಿದಾಯಕವಾಗಿತ್ತು. ಸಂಸ್ಥೆಯು, ಇಂಟರ್ನೆಟ್ ಸಾಫ್ಟ್‌ವೇರ್ ಮುಕ್ತವಾಗಿ ಹಂಚಿಕೆ ಮಾಡುವ ಪರಿಕಲ್ಪನೆಗೆ ಅನುಗುಣವಾಗಿ ವಾಣಿಜ್ಯೇತರ ಬಳಕೆಗೆ ನ್ಯಾವಿಗೇಟರ್‌ನ್ನು ಸುಲಭವಾಗಿ ದೊರಕುವಂತೆ ಮಾಡುತ್ತೇವೆಂದು ಘೋಷಿಸಿತು.[೫]
ಆದಾಗ್ಯೂ, ಮಾಧ್ಯಮಕ್ಕೆ ಪ್ರಕಟನೆ ನೀಡಿದ ೨ ತಿಂಗಳೊಳಗೆ, ನೆಟ್‌ಸ್ಕೇಪ್ ಸ್ಪಷ್ಟವಾಗಿ ತನ್ನ ನೀತಿಯನ್ನು ಬದಲಿಸಿ,ಯಾರಿಗೆ ೧.೦ ಆವೃತ್ತಿ ಮುಕ್ತವಾಗಿ ದೊರಕುತ್ತದೆಂದು ತಿಳಿಸಿತು. ಇದರಂತೆ ಕೇವಲ ಶೈಕ್ಷಣಿಕ ಹಾಗು ಲಾಭೋದ್ದೇಶವಿಲ್ಲದ ಸಂಸ್ಥೆಗಳು ಯಾವುದೇ ಶುಲ್ಕ ಪಾವತಿಸದೆ ೧.೦ ಆವೃತ್ತಿಯನ್ನು ಬಳಸಬಹುದೆಂದು ಪ್ರಕಟಿಸಿತು.[೬]
ಮಾರ್ಚ್ ೬, ೧೯೯೫ರಲ್ಲಿ ೧.೧ ಬೀಟಾ ಆವೃತ್ತಿಯ ಲಭ್ಯತೆಯೊಂದಿಗೆ ಬದಲಾವಣೆಯು ಪೂರ್ಣಗೊಂಡಿತು. ಮಾಧ್ಯಮದಲ್ಲಿ ಪ್ರಕಟವಾದ ಹೇಳಿಕೆಯಂತೆ ಅಂತಿಮ ೧.೧ ಬಿಡುಗಡೆಯು ಕೇವಲ ಶೈಕ್ಷಣಿಕ ಹಾಗು ಲಾಭೋದ್ದೇಶವಿಲ್ಲದ ಸಂಸ್ಥೆಗಳ ಬಳಕೆಗೆ ಯಾವುದೇ ಶುಲ್ಕ ಪಾವತಿಸದೆ ಉಚಿತವಾಗಿ ಲಭ್ಯವಾಗುತ್ತದೆಂದು ತಿಳಿಸಿತು. ಇಂಟರ್ನೆಟ್ ಸಾಫ್ಟ್‌ವೇರ್ ಎಲ್ಲರಿಗೂ ಮುಕ್ತವಾಗಿ ಸಿಗುವ ದೃಷ್ಟಿಯಿಂದ ನ್ಯಾವಿಗೇಟರ್‌ನ್ನು ಶುಲ್ಕರಹಿತವಾಗಿ ಲಭ್ಯವಾಗುವಂತೆ ಮಾಡುತ್ತೇವೆ ಎಂದು ಮಾಧ್ಯಮಕ್ಕೆ ಮೊದಲು ವ್ಯಕ್ತಪಡಿಸಿದ ಭಾವನೆಯು ಇಲ್ಲವಾಯಿತು.
ತಂತ್ರಾಂಶ ಉತ್ಪನ್ನದ ಮೊದಲ ಕೆಲವು ಬಿಡುಗಡೆಗಳು "ವಾಣಿಜ್ಯ" ಹಾಗು "ಅರ್ಹತೆ ನಿರ್ಧಾರದ" ಆವೃತ್ತಿಗಳನ್ನು ಒದಗಿಸಿತು; ಉದಾಹರಣೆಗೆ "೧.೦" ಹಾಗು "೧.೦N" ಆವೃತ್ತಿ. "N" ಅರ್ಹತೆ ನಿರ್ಧಾರದ ಆವೃತ್ತಿಗಳು ವಾಣಿಜ್ಯ ಆವೃತ್ತಿಗಳಿಗೆ ಸಂಪೂರ್ಣವಾಗಿ ಹೋಲುತ್ತದೆ; ದೀರ್ಘ ಕಾಲದಿಂದ ಬ್ರೌಸರ್ ನ ಬಳಕೆ ಮಾಡಿ ಅದರಿಂದ ತೃಪ್ತಿ ಪಡೆದ ಜನರಿಗೆ ಶುಲ್ಕವನ್ನು ಪಾವತಿಸಬೇಕೆಂದು ನೆನಪಿಸುವ ಪತ್ರಗಳಿರುತ್ತಿತ್ತು. ಈ ವೈಶಿಷ್ಠ್ಯವನ್ನು ಅದರ ಪ್ರಾಥಮಿಕ ಬಿಡುಗಡೆಯ ಒಂದು ವರ್ಷದೊಳಗೆ ಅಧಿಕೃತವಾಗಿ ಕೈಬಿಡಲಾಯಿತು. ಜೊತೆಗೆ ಬ್ರೌಸರ್‌ನ ಸಂಪೂರ್ಣ ಆವೃತ್ತಿಯನ್ನು ಆನ್ಲೈನ್‌ನಲ್ಲಿ ಮುಕ್ತವಾಗಿ ಲಭ್ಯವಾಗುವಂತೆ ಮಾಡಲಾಯಿತು. ಇದರ ಆವೃತ್ತಿಗಳು ಮಳಿಗೆಗಳಲ್ಲಿ ದೂರವಾಣಿ ಬೆಂಬಲದ ಅವಧಿಯೊಂದಿಗೆ ಫ್ಲಾಪಿ ಡಿಸ್ಕ್‌ಗಳಲ್ಲಿ (ನಂತರ CDಗಳಲ್ಲಿ) ದೊರೆಯುತ್ತಿತ್ತು. ಇಮೇಲ್ ನೆರವು ಆರಂಭದಲ್ಲಿ ಉಚಿತವಾಗಿರುವುದರ ಜೊತೆಗೆ ಉಚಿತವಾಗಿ ಸೇವೆಯನ್ನು ಒದಗಿಸುವಂತೆ ಬಂದ ಕೋರಿಕೆಗಳ ಪ್ರಮಾಣವು ಅಧಿಕಗೊಳ್ಳುವ ತನಕ ಒಂದು ಅಥವಾ ಎರಡು ವರ್ಷಗಳ ಕಾಲ ಉಚಿತ ಸೇವೆ ಒದಗಿಸಿತು.
ಅಭಿವೃದ್ಧಿಯ ಸಂದರ್ಭದಲ್ಲಿ, ನೆಟ್‌ಸ್ಕೇಪ್ ಬ್ರೌಸರ್ ಮೊಜಿಲ್ಲ ಎಂಬ ಸಂಕೇತ ನಾಮದಿಂದ ಪರಿಚಿತವಾಗಿತ್ತು, ಇದರ ಹೆಸರು ಒಂದು ಗಾಡ್ಜಿಲ್ಲ-ಮಾದರಿಯ ಕಾರ್ಟೂನ್ ದೈತ್ಯಪ್ರಾಣಿಚಿಹ್ನೆಯಿಂದ ಹುಟ್ಟಿಕೊಂಡಿದೆ. ಈ ಚಿಹ್ನೆಯನ್ನು ಸಂಸ್ಥೆಯ ಅಂತರಜಾಲದಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಮೊಜಿಲ್ಲ ಹೆಸರನ್ನು ಬ್ರೌಸರ್ ಕೋರಿಕೆಗಳ ಮೇರೆಗೆ HTTPಯ ಯೂಸರ್-ಏಜೆಂಟ್ ಆಗೂ ಬಳಸಲಾಗುತ್ತದೆ. ಇತರ ವೆಬ್ ಬ್ರೌಸರ್‌ಗಳು ನೆಟ್‌ಸ್ಕೇಪ್ ನ HTML ವಿಸ್ತರಣೆ ಸಮಂಜಸವಾಗಿದೆ ಎಂದು ಸಮರ್ಥಿಸುತ್ತಾರೆ, ಜೊತೆಗೆ ಹೀಗಾಗಿ ಅದೇ ಹೆಸರನ್ನು ತಮ್ಮ ಯೂಸರ್-ಏಜೆಂಟ್ ಗುರುತುಗಾರಗಳಲ್ಲಿ ಬಳಸುತ್ತಿದ್ದರು. ಈ ರೀತಿಯಾಗಿ ವೆಬ್ ಸರ್ವರ್ಸ್‌ಗಳು ನೆಟ್‌ಸ್ಕೇಪ್ ಬ್ರೌಸರ್‌ಗಳಿಗೆ ಕಳುಹಿಸಲಾದಂತ ಅದೇ ಪುಟಗಳನ್ನು ಇವರಿಗೂ ಕಳುಹಿಸಬಹುದಿತ್ತು. ಮೊಜಿಲ್ಲ ಇದೀಗ ನೆಟ್‌ಸ್ಕೇಪ್ ಕಮ್ಯೂನಿಕೇಟರ್‌ಗೆ ಮುಕ್ತ ಮೂಲಉತ್ತರಾಧಿಕಾರ ಸಂಬಂಧಿತ ವಿಷಯಗಳಿಗೆ ಸೂಚಿತವಾದ ಒಂದು ಸಾರ್ವತ್ರಿಕ ಹೆಸರಾಗಿದೆ.
ನೆಟ್‌ಸ್ಕೇಪ್‌ನ ಅಭಿವೃದ್ಧಿ
[ಬದಲಾಯಿಸಿ]ಇಸವಿ ೧೯೯೦ರ ದಶಕದ ಮಧ್ಯಭಾಗದಿಂದ ಕಡೆಯ ಭಾಗದವರೆಗೂ ನಡೆದ ಗ್ರಾಹಕ ಅಂತರಜಾಲ ಕ್ರಾಂತಿಯ ಆರಂಭದಿಂದ, ನೆಟ್‌ಸ್ಕೇಪ್ ಅದರ ಸಂಪೂರ್ಣ ಲಾಭವನ್ನು ಪಡೆಯಲು ಉತ್ತಮವಾದ ಸ್ಥಾನದಲ್ಲಿತ್ತು. ಒಂದು ಉತ್ತಮ ಮಟ್ಟದ ವೈಶಿಷ್ಟ್ಯಗಳ ಮಿಶ್ರಣ ಹಾಗು ವಾಣಿಜ್ಯೇತರ ಬಳಕೆಗೆ ಉಚಿತವಾಗಿ ಲಭ್ಯವಾಗುವಂತೆ ಆಕರ್ಷಕ ಪರವಾನಗಿ ಯೋಜನೆಯನ್ನು ಪರಿಚಯಿಸಿತು, ನೆಟ್‌ಸ್ಕೇಪ್ ಬ್ರೌಸರ್ ಶೀಘ್ರದಲ್ಲೇ, ವಿಶೇಷವಾಗಿ ವಿಂಡೋಸ್‌ವೇದಿಕೆಗೆ ಒಂದು ವಾಸ್ತವಸ್ಟ್ಯಾಂಡರ್ಡ್ ಆಯಿತು. ಅಂತರಜಾಲ ಸೇವೆಯನ್ನು ಒದಗಿಸುವವರುಹಾಗು ಕಂಪ್ಯೂಟರ್ ಮ್ಯಾಗಜಿನ್ ಗಳ ಪ್ರಕಾಶಕರು, ನ್ಯಾವಿಗೇಟರ್ ಸುಲಭವಾಗಿ ಲಭ್ಯವಾಗುವಂತೆ ಮಾಡಿದರು.
ಒಂದು ಪ್ರಮುಖ ಆವಿಷ್ಕಾರದಲ್ಲಿ, ೧೯೯೪ರಲ್ಲಿ ಪರಿಚಿತವಾದ ನೆಟ್‌ಸ್ಕೇಪ್ ವೆಬ್ ಪುಟಗಳಲ್ಲಿ ಶೀಘ್ರವಾಗಿ ಪ್ರದರ್ಶಿತವಾಗುತ್ತಿತ್ತು, ಇದರಂತೆ ವೆಬ್ ಪುಟಗಳನ್ನೂ ಡೌನ್ ಲೋಡ್ ಮಾಡುತ್ತಿದ್ದಂತೆ ಪಠ್ಯ ಹಾಗು ಗ್ರ್ಯಾಫಿಕ್ಸ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿತ್ತು. ಮುಂಚೆ ವೆಬ್ ಬ್ರೌಸರ್‌ಗಳು ಎಲ್ಲ ಗ್ರ್ಯಾಫಿಕ್‌ಗಳು ನೆಟ್ವರ್ಕ್ ಸಂಪರ್ಕ ಜಾಲದ ಮೂಲಕ ಲೋಡ್ ಆಗುವ ತನಕ ಪುಟವನ್ನು ಪ್ರದರ್ಶಿಸುತ್ತಿರಲಿಲ್ಲ; ಇದು ಸಾಮಾನ್ಯವಾಗಿ ಬಳಕೆದಾರರು ಹಲವಾರು ನಿಮಿಷಗಳ ಕಾಲ ಒಂದು ಖಾಲಿ ಪುಟವನ್ನು ವೀಕ್ಷಿಸುವಂತೆ ಮಾಡುತ್ತಿತ್ತು. ನೆಟ್‌ಸ್ಕೇಪ್ ಮೂಲಕ, ಡಯಲ್ -ಅಪ್‌ಸಂಪರ್ಕಗಳನ್ನು ಬಳಸುವ ಜನರು ವೆಬ್ ವಿಳಾಸಕ್ಕೆ ಪ್ರವೇಶಿಸಿದ ಸೆಕೆಂಡುಗಳೊಳಗೆ ಒಂದು ವೆಬ್ ಪುಟದ ಪಠ್ಯವನ್ನು ಓದಬಹುದಾಗಿತ್ತು, ಇದು ಇತರ ಪಠ್ಯ ಹಾಗು ಗ್ರ್ಯಾಫಿಕ್ಸ್ ಡೌನ್ ಲೋಡ್ ಆಗುವುದಕ್ಕೆ ಮುಂಚಿತವಾಗಿ ಈ ಸೌಲಭ್ಯವು ದೊರಕುತ್ತಿತ್ತು. ಇದರಿಂದಾಗಿ ಒಬ್ಬ ಸಾಮಾನ್ಯ ಬಳಕೆದಾರನಿಗೆ ವೆಬ್ ನ ಬಳಕೆಯು ಸಹನೀಯವಾಗಿತ್ತು.
ಕಳೆದ ೧೯೯೦ರ ಕೊನೆಯ ಭಾಗದಲ್ಲಿ, ನ್ಯಾವಿಗೇಟರ್ ವೆಬ್ ಬ್ರೌಸರ್‌ಗಳಲ್ಲೇ ತಾಂತ್ರಿಕವಾಗಿ ಮುಂಚೂಣಿಯಲ್ಲಿರುವುದನ್ನು ನೆಟ್‌ಸ್ಕೇಪ್ ಖಾತರಿಪಡಿಸಿಕೊಂಡಿತು. ಪ್ರಮುಖ ಲಕ್ಷಣಗಳಲ್ಲಿ ಕುಕ್ಕೀಸ್, ಫ್ರೇಮ್ಸ್, ಹಾಗು ಜಾವಾಸ್ಕ್ರಿಪ್ಟ್ (೨.೦ ಆವೃತ್ತಿಯಲ್ಲಿ) ಗಳನ್ನು ಒಳಗೊಂಡಿತ್ತು. ಆದಾಗ್ಯೂ ಇವುಗಳು ಹಾಗು ಇತರ ಆವಿಷ್ಕಾರಗಳು ಅಂತಿಮವಾಗಿ W3C ಹಾಗು ECMA ಮುಕ್ತ ಪ್ರಮಾಣಗಳಾದವು. ಜೊತೆಗೆ ಇತರ ಬ್ರೌಸರ್‌ಗಳು ಅನುಕರಿಸಿದವು. ಇವುಗಳನ್ನು ಸಾಮಾನ್ಯವಾಗಿ ವಿವಾದಾತ್ಮಕವಾದ ದೃಷ್ಟಿಕೋನದಿಂದ ನೋಡಲಾಗುತ್ತಿತ್ತು. ಟೀಕಾಕಾರರ ಪ್ರಕಾರ, ನೆಟ್‌ಸ್ಕೇಪ್, ತನ್ನ ತಾಂತ್ರಿಕ ಉತ್ಪನ್ನಗಳಿಗೆ ಬಗ್ ಗಳನ್ನು ಸರಿಪಡಿಸುವುದಕ್ಕಿಂತ ಹೆಚ್ಚಾಗಿ ತನ್ನದೇ ಆದ ವಾಸ್ತವ "ಪ್ರಮಾಣಗಳಿಗೆ" ವೆಬ್ ನ್ನು ಪರಿವರ್ತಿಸುವಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿತ್ತು (ಪ್ರಮಾಣ ಸಮಿತಿಗಳನ್ನು ಉಪೇಕ್ಷಿಸಿ ವಾಣಿಜ್ಯಕ ಪೈಪೋಟಿಗಳನ್ನು ಅಪ್ರಧಾನವಾಗಿ ಮಾಡುವುದು). ಗ್ರಾಹಕ ಹಕ್ಕುಗಳ ವಾದಿಗಳು ಕುಕ್ಕೀಸ್ ಹಾಗು ವಾಣಿಜ್ಯ ವೆಬ್ ಜಾಲಗಳನ್ನು ಬಳಸಿಕೊಂಡು ವೈಯಕ್ತಿಕ ಖಾಸಗಿತನವನ್ನು ಅತಿಕ್ರಮಿಸುವ ಬಗ್ಗೆ ವಿಶೇಷವಾಗಿ ಟೀಕೆ ಮಾಡಿದರು.
ಆದಾಗ್ಯೂ, ಮಾರುಕಟ್ಟೆಯಲ್ಲಿ, ಈ ಕಳವಳಗಳು ಹೆಚ್ಚಿನ ವ್ಯತ್ಯಾಸವನ್ನೇನೂ ತರಲಿಲ್ಲ. ೫೦%ಕ್ಕೂ ಅಧಿಕ ಬಳಕೆದಾರರ ಹಂಚಿಕೆಯಲ್ಲಿ ನೆಟ್‌ಸ್ಕೇಪ್ ನ್ಯಾವಿಗೇಟರ್ ಮಾರುಕಟ್ಟೆಯ ಮುಂಚೂಣಿಯಲ್ಲಿತ್ತು. ಬ್ರೌಸರ್ ಸಾಫ್ಟ್‌ವೇರ್ ಒಂದು ವ್ಯಾಪಕ ಶ್ರೇಣಿಯ ಆಪರೇಟಿಂಗ್ ಸಿಸ್ಟಂಗಳಲ್ಲಿ ಲಭ್ಯವಾಗುತ್ತಿತ್ತು, ಇದರಲ್ಲಿ ವಿಂಡೋಸ್ (3.1, 95, 98, NT), ಮ್ಯಾಕಿಂತೋಶ್, ಲೈನಕ್ಸ್, OS/2 ಹಾಗು DEC, ಸನ್ ಸೋಲಾರಿಸ್, BSDI, IRIX, AIX, ಹಾಗು HP-UXನಂತಹ Unix ನ ಹಲವು ಆವೃತ್ತಿಗಳನ್ನು ಒಳಗೊಂಡಿತ್ತು, ಜೊತೆಗೆ ಪ್ರತಿಯೊಂದರಲ್ಲೂ ಸದೃಶವಾಗಿ ಕಂಡಿತು ಹಾಗೂ ಕಾರ್ಯನಿರ್ವಹಿಸಿತು. ನೆಟ್‌ಸ್ಕೇಪ್ ಒಂದು ವೆಬ್ ಆಧಾರಿತ ವ್ಯವಸ್ಥೆಯ ಮೂಲ ರೂಪಗಳೊಂದಿಗೆ ಪ್ರಯೋಗಗಳನ್ನು ಪ್ರಾರಂಭಿಸಿತು, ಇದನ್ನು ಆಂತರಿಕವಾಗಿ "ಕಾನ್ಸ್ಟಲೇಶನ್" ಎಂದು ಕರೆಯಲಾಗುತ್ತಿತ್ತು. ಇದು ಒಬ್ಬ ಬಳಕೆದಾರನಿಗೆ ಆತನ ಅಥವಾ ಆಕೆಯ ಕಡತಗಳನ್ನು ಸಂಪರ್ಕಜಾಲದಲ್ಲಿ ಎಲ್ಲಿಯಾದರೂ ಪ್ರವೇಶಿಸಿ ಪರಿಷ್ಕರಿಸಬಹುದಾಗಿರುತ್ತದೆ. ಆತ ಅಥವಾ ಆಕೆ ಯಾವುದೇ ಕಾರ್ಯಾಚರಣೆ ವ್ಯವಸ್ಥೆ(ಆಪರೇಟಿಂಗ್ ಸಿಸ್ಟಂ) ಅಥವಾ ಕಂಪ್ಯೂಟರ್ ಬಳಸಿದರೂ ಸಹ ಇದನ್ನು ನಿರ್ವಹಿಸಬಹುದಾಗಿದೆ.
ಉದ್ದಿಮೆಯ ವೀಕ್ಷಕರು ಕನೆಕ್ಟೆಡ್ ಕಂಪ್ಯೂಟಿಂಗ್‌ನ ಹೊಸ ಶಕೆಯ ಉದಯದ ಬಗ್ಗೆ ಭರವಸೆಯನ್ನು ಮುಂಗಾಣುತ್ತಾರೆ. ಆಪರೇಟಿಂಗ್ ಸಿಸ್ಟಂಯ ಆಧಾರವು ಒಂದು ಅಮುಖ್ಯವಾದ ಪರಿಗಣನೆಯನ್ನು ಹೊಂದಲಿದೆ ಒಂದು ನಂಬಲಾಗಿದೆ; ಭವಿಷ್ಯದಲ್ಲಿ ಅನ್ವಯಿಕ ತಂತ್ರಾಂಶಗಳು ವೆಬ್ ಬ್ರೌಸರ್‌ನೊಳಗೆ ನಡೆಯುತ್ತವೆ. ಇದನ್ನು ಮುಂದಿನ ಪೀಳಿಗೆಯ ಕಂಪ್ಯೂಟರ್ ಬಳಕೆಯ ಹೃದಯಭಾಗದಲ್ಲಿ ನ್ಯಾವಿಗೇಟರ್ ಬೇರೂರಲು ಒಂದು ಸ್ಪಷ್ಟವಾದ ಅವಕಾಶವೆಂದು ನೆಟ್‌ಸ್ಕೇಪ್ ಪರಿಗಣಿಸಿತು. ಜೊತೆಗೆ ಇತರ ಎಲ್ಲ ವಿಧದ ಸಾಫ್ಟ್‌ವೇರ್ ಹಾಗು ಸೇವಾ ಮಾರುಕಟ್ಟೆಯನ್ನು ವಿಸ್ತರಿಸುವ ಅವಕಾಶವನ್ನು ಗಳಿಸಿಕೊಳ್ಳಬಹುದೆಂದು ಭಾವಿಸಿತು.
ನೆಟ್‌ಸ್ಕೇಪ್‌ನ ಇಳಿಮುಖ
[ಬದಲಾಯಿಸಿ]ನೆಟ್‌ಸ್ಕೇಪ್, ವೆಬ್‌ನ ಪ್ರಾಮುಖ್ಯತೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿದ ನಂತರ (ನೆಟ್‌ಸ್ಕೇಪ್ ನ ಬಳಕೆಯನ್ನು ಸುಲಭಗೊಳಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಜನರು ಅಂತರಜಾಲದ ಬಳಕೆಯನ್ನು ಮಾಡಿದರು) ಮೈಕ್ರೋಸಾಫ್ಟ್ ತಾವು ಲಗ್ಗೆ ಇಡಬಹುದಾದ ಒಂದು ಹೊಸ ಅನುಕೂಲಕರ ಮಾರುಕಟ್ಟೆಯನ್ನು ಕಂಡುಕೊಂಡಿತು. ಮೈಕ್ರೋಸಾಫ್ಟ್ ವಿರೋಧಿ ಟೀಕೆ ಹಾಗು ಕಾರ್ಯಾಚರಣೆ ವ್ಯವಸ್ಥೆಯನ್ನು ನಿವಾರಿಸುವ ನೆಟ್‌ಸ್ಕೇಪ್ ಕಾನ್ಸ್ಟಲೇಶನ್ ಬಗೆಗಿನ ಚರ್ಚೆಯಿಂದ ಮೈಕ್ರೋಸಾಫ್ಟ್‌ನ ಯೋಜನೆಗಳನ್ನು ಬಹಿರಂಗ ಮಾಡಬೇಕಾಯಿತು. ನೆಟ್‌ಸ್ಕೇಪ್ ನ ಮುಂದಾಳತ್ವದ ಪರಿಣಾಮವಾಗಿ ಮೈಕ್ರೋಸಾಫ್ಟ್ ವೆಬ್ ಬ್ರೌಸರ್ ಸಾಫ್ಟ್‌ವೇರ್ ಮಾರುಕಟ್ಟೆಯನ್ನು ಪ್ರವೇಶಿಸಲು ಒಂದು ಅಭಿಯಾನವನ್ನು ಆರಂಭಿಸಿತು. ನೆಟ್‌ಸ್ಕೇಪ್ ನಂತಹ ಬ್ರೌಸರ್‌ಗಳಿಗೂ ಮುಂಚೆ, ಮೈಕ್ರೋಸಾಫ್ಟ್ Spyglass, Inc.ನಿಂದ ಮೊಸೈಕ್ ಆಕರಸಂಕೇತಕ್ಕೆ ಪರವಾನಗಿ ಪಡೆದಿತ್ತು ( ಯೂನಿವರ್ಸಿಟಿ ಆಫ್ ಇಲ್ಲಿನಾಯಿಸ್). ಮೂಲ ಸಂಕೇತವನ್ನು ಬಳಸಿಕೊಂಡು, ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ ಪ್ಲೋರರ್ (IE)ನ್ನು ಸೃಷ್ಟಿಸಿತು.
ಮೈಕ್ರೋಸಾಫ್ಟ್ ಹಾಗು ನೆಟ್‌ಸ್ಕೇಪ್ ನಡುವಿನ ಪೈಪೋಟಿಯು ಬ್ರೌಸರ್ ವಾರ್ಸ್ ಎಂಬ ಹೆಸರನ್ನು ಪಡೆಯಿತು; 1.0 ಆವೃತ್ತಿ (ಮೈಕ್ರೋಸಾಫ್ಟ್ ಪ್ಲಸ್! ಇಂಟರ್ನೆಟ್ ಜಂಪ್ ಸ್ಟಾರ್ಟ್ ಕಿಟ್ ನಲ್ಲಿ ಅಳವಡಿಸಲಾಗಿದೆ ವಿಂಡೋಸ್ 95[೭] ಹಾಗು ಇಂಟರ್ನೆಟ್ ಎಕ್ಸ್ ಪ್ಲೋರರ್‌ನ 2.0 ಆವೃತ್ತಿಯನ್ನು (ವಿಂಡೋಸ್ ಹಾಗು MacOS [೭] ಗೆ ನೆರವಾಗುವ ಮೊದಲ ಪ್ರತಿ ವೇದಿಕೆ ವೆಬ್ ಬ್ರೌಸರ್ ಆಗಿದೆ) ಹಲವರು ನೆಟ್‌ಸ್ಕೇಪ್ ನ್ಯಾವಿಗೇಟರ್ ನ ಸಮಕಾಲೀನ ಆವೃತ್ತಿಗಳಿಗೆ ಹೋಲಿಸಿದರೆ ಕೆಳಮಟ್ಟ ಹಾಗು ಹಳೆಯದೆಂದು ಭಾವಿಸಿದರು. 3.0 IE ಆವೃತ್ತಿಯ ಬಿಡುಗಡೆಯೊಂದಿಗೆ (೧೯೯೬) ಮೈಕ್ರೋಸಾಫ್ಟ್ ನೆಟ್‌ಸ್ಕೇಪ್‌ನೊಂದಿಗೆ ಸ್ಪರ್ಧಿಸುವಲ್ಲಿ ಸಮರ್ಥವಾಯಿತು. 4.0 IE ಆವೃತ್ತಿಯು (೧೯೯೭) ಮಾರುಕಟ್ಟೆಯಲ್ಲಿ ೩.೦ ಆವೃತ್ತಿಕ್ಕಿಂತ ಉತ್ತಮ ಮಟ್ಟದಲ್ಲಿತ್ತು. IE 5.0 (೧೯೯೯) ಸ್ಥಿರತೆಯನ್ನು ಸುಧಾರಿಸುವುದರ ಜೊತೆಗೆ ಮೊದಲ ಬಾರಿಗೆ ನೆಟ್‌ಸ್ಕೇಪ್ ನ್ಯಾವಿಗೇಟರ್‌ನಿಂದ ಗಮನಾರ್ಹ ಮಾರುಕಟ್ಟೆ ಹಂಚಿಕೆಯನ್ನು ಪಡೆಯಿತು.
ನೆಟ್‌ಸ್ಕೇಪ್ ನ್ಯಾವಿಗೇಟರ್ ೩.೦ ಎರಡು ಆವೃತ್ತಿಗಳನ್ನು ಹೊಂದಿದೆ; ಸ್ಟ್ಯಾಂಡರ್ಡ್ ಎಡಿಶನ್ ಹಾಗು ಗೋಲ್ಡ್ ಎಡಿಶನ್. ನಂತರದ ಆವೃತ್ತಿಯು ನ್ಯಾವಿಗೇಟರ್ ಬ್ರೌಸರ್ ನೊಂದಿಗೆ ಇ-ಮೇಲ್, ನ್ಯೂಸ್ ರೀಡರ್ಸ್, ಹಾಗು ಒಂದು WYSIWYG ವೆಬ್ ಪೇಜ್ ಕಂಪಾಸಿಟರ್‌ನ್ನು ಒಳಗೊಂಡಿದೆ. ಅಧಿಕ ಕಾರ್ಯ ಚಟುವಟಿಕೆಗಳು ವಿಸ್ತರಿಸುವುದರ ಜೊತೆಗೆ ಸಾಫ್ಟ್‌ವೇರ್‌ನ್ನು ನಿಧಾನಗೊಳಿಸಿತು, ಇದು ಅಂತಿಮವಾಗಿ ಅದರ ಕುಸಿತಕ್ಕೆ ಕಾರಣವಾಯಿತು.
ನೆಟ್‌ಸ್ಕೇಪ್ CEO ಜಿಮ್ ಬಾರ್ಕ್ಸ್ ಡೇಲ್ ಹೆಸರು ಬದಲಾವಣೆಗೆ ಒತ್ತಾಯಿಸಿದರು. ಏಕೆಂದರೆ ಕಮ್ಯೂನಿಕೇಟರ್ ಒಂದು ಸಾರ್ವತ್ರಿಕ-ಉದ್ದೇಶದ ಗ್ರಾಹಕ ಅನ್ವಯಿಕ ತಂತ್ರಾಂಶವಾಗಿದೆ. ಇದು ನ್ಯಾವಿಗೇಟರ್ ಬ್ರೌಸರ್ ನ್ನು ಒಳಗೊಂಡಿದೆ. ನೆಟ್‌ಸ್ಕೇಪ್ ಕಮ್ಯೂನಿಕೇಟರ್ ಎಂದು ಮರುನಾಮಕರಣಗೊಂಡ ಈ ಆವೃತ್ತಿಯು ನೆಟ್‌ಸ್ಕೇಪ್ ಕಮ್ಯೂನಿಕೇಟರ್ ಆವೃತ್ತಿ ೪.೦ರಲ್ಲಿ ಪ್ರಕಟವಾಯಿತು; ಹೆಸರಿನ ಬದಲಾವಣೆಯಿಂದಾಗಿ ಅದರ ಹೆಸರಿನ ಗುರುತು ದುರ್ಬಲಗೊಳ್ಳುವುದರ ಜೊತೆಗೆ ಬಳಕೆದಾರರಲ್ಲಿ ಗೊಂದಲ ಉಂಟುಮಾಡಿತು.
ಬದಲಾದ ನೆಟ್‌ಸ್ಕೇಪ್ ಕಮ್ಯೂನಿಕೇಟರ್ ೪.x ಕೋಡ್ ಇಂಟರ್ನೆಟ್ ಎಕ್ಸ್ ಪ್ಲೋರರ್ 5.0ಕ್ಕಿಂತ ನಿಧಾನವಾಗಿತ್ತು. ವಿಶಿಷ್ಟ ವೆಬ್ ಪೇಜ್ ಗಳು ತೀವ್ರವಾದ ವಿವರಣೆಗಳಿಂದ ಹಾಗೂ ಸಾಮಾನ್ಯವಾಗಿ ಜಾವಾಸ್ಕ್ರಿಪ್ಟ್‌ಇಂಟೆನ್ಸಿವ್‌ಗಳಿಂದ ಕೂಡಿತ್ತು ಹಾಗೂ ನಿರ್ದಿಷ್ಟ ಉದ್ದೇಶಗಳಿಗಾಗಿ ವಿನ್ಯಾಸಗೊಳಿಸಲಾದ HTML ಲಕ್ಷಣಗಳೊಂದಿಗೆ ಸಂಕೇತಿಕರಣಗೊಂಡಿತ್ತು. ಆದರೆ ಈಗ ಜಾಗತಿಕ ವಿನ್ಯಾಸ ಸಾಧನಗಳನ್ನಾಗಿ ಇದೀಗ ಬಳಸಲಾಗುತ್ತದೆ (ಇದರ ಒಂದು ಸ್ಪಷ್ಟ ಉದಾಹರಣೆಯೆಂದರೆ HTML ಕೋಷ್ಟಕಗಳು, ಇದು ವಿಶೇಷವಾಗಿ ಕಮ್ಯೂನಿಕೇಟರ್ ಗಳಿಗೆ ನಿರೂಪಿಸಲು ಕಷ್ಟಕರವಾಗಿದೆ). ಒಂದೊಮ್ಮೆ ಸುಭದ್ರ ತಾಂತ್ರಿಕ ಉತ್ಪನ್ನವಾಗಿದ್ದ ನೆಟ್‌ಸ್ಕೇಪ್ ಬ್ರೌಸರ್, ಕುಸಿತದ ಅಪಾಯ ಹಾಗು ಬಗ್ ಗಳಿಂದ ತುಂಬಿತ್ತು; ಉದಾಹರಣೆಗೆ, ಕೆಲವು ಆವೃತ್ತಿಗಳು ಬ್ರೌಸರ್ ವಿಂಡೋಗಳನ್ನು ಮರು ಆಕಾರಗೊಳಿಸಿದಾಗ ಮತ್ತೆ ನಿರೂಪಿಸಲು ಒಂದು ಸಂಪೂರ್ಣ ವೆಬ್ ಪೇಜ್‌ನ್ನು ಮರು-ಡೌನ್‌ಲೋಡ್ ಮಾಡಲಾಯಿತು (ಇದು ಡಯಲ್-ಅಪ್ ಬಳಕೆದಾರರಿಗೆ ಒಂದು ತೊಂದರೆಯಾಗಿ ಪರಿಣಮಿಸಿತು), ಜೊತೆಗೆ ಪೇಜ್ ಒಂದು ಸರಳವಾದ ಕ್ಯಾಸ್ಕೆಡಿಂಗ್ ಸ್ಟೈಲ್ ಶೀಟ್ಸ್ ಗಳನ್ನು ಒಳಗೊಂಡಾಗ ಸಾಮಾನ್ಯವಾಗಿ ಬ್ರೌಸರ್ ಗೆ ಹಾನಿಯಾಗುತ್ತಿತ್ತು. ಇದಕ್ಕಿಂತ ಹೆಚ್ಚಾಗಿ, ನೆಟ್‌ಸ್ಕೇಪ್ ಕಮ್ಯೂನಿಕೇಟರ್ ನ ಬ್ರೌಸರ್ ಇಂಟರ್ಫೇಸ್ ವಿನ್ಯಾಸವು ಇಂಟರ್ನೆಟ್ ಎಕ್ಸ್ ಪ್ಲೋರರ್ ಗೆ ಹೋಲಿಸಿದರೆ ಹಳೆಯದರಂತೆ ಕಂಡು ಬರುತ್ತಿತ್ತು. ಜೊತೆಗೆ ಮೈಕ್ರೋಸಾಫ್ಟ್ ಹಾಗು ಆಪಲ್ ನ ಆಪರೇಟಿಂಗ್ ಸಿಸ್ಟಂಗಳಲ್ಲಿ ಇಂಟರ್ಫೇಸ್ ವ್ಯತ್ಯಾಸವನ್ನು ಹೊಂದಿತ್ತು.
ದಶಕದ ಕೊನೆಯಲ್ಲಿ, ನೆಟ್‌ಸ್ಕೇಪ್ ನ ವೆಬ್ ಬ್ರೌಸರ್ ವಿಂಡೋಸ್ ವೇದಿಕೆ ಮೇಲಿನ ಪ್ರಾಬಲ್ಯವನ್ನು ಕಳೆದುಕೊಂಡಿತು. ಇತರ ಕಂಪ್ಯೂಟರ್ ವೇದಿಕೆಗಳಲ್ಲಿ, ಓಪನ್-ಸೋರ್ಸ್ ಬ್ರೌಸರ್ ಗಳಿಂದ ಬೆದರಿಕೆಯನ್ನು ಎದುರಿಸಿತು. ಜೊತೆಗೆ ಆಗಸ್ಟ್ ೧೯೯೭ರಲ್ಲಿ ನೂರೈವತ್ತು ದಶಲಕ್ಷ ಡಾಲರ್ ಗಳನ್ನು ಆಪಲ್‌ನಲ್ಲಿ ಬಂಡವಾಳ ಹೂಡುವ ಬಗ್ಗೆ ಮೈಕ್ರೋಸಾಫ್ಟ್ ಹಣಕಾಸು ಒಪ್ಪಂದ ಮಾಡಿಕೊಂಡಿತು. ಇದರಂತೆ ಆಪಲ್ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ್ನು ಹೊಸ Mac OS ಹಂಚಿಕೆಯಲ್ಲಿ ಒಂದು ಡಿಫಾಲ್ಟ್ ವೆಬ್ ಬ್ರೌಸರ್ ಆಗಿ ಮಾಡುವ ಅಗತ್ಯವನ್ನು ಹೊಂದಿತ್ತು. ಆ ಅವಧಿಗೆ ಹೊಸತಾದ IE Mac ನ ಬಿಡುಗಡೆ ಎಂದರೆ ಮ್ಯಾಕಿಂತೋಶ್ ೩.೦ ಆವೃತ್ತಿಯ ಇಂಟರ್ನೆಟ್ ಎಕ್ಸ್ ಪ್ಲೋರರ್ , ಆದರೆ ಇಂಟರ್ನೆಟ್ ಎಕ್ಸ್ ಪ್ಲೋರರ್ ೪ನ್ನು ಆ ವರ್ಷದ ದ್ವಿತಿಯಾರ್ಧದಲ್ಲಿ ಬಿಡುಗಡೆ ಮಾಡಲಾಯಿತು.
ಮೈಕ್ರೋಸಾಫ್ಟ್, ನೆಟ್‌ಸ್ಕೇಪ್ ನ್ಯಾವಿಗೇಟರ್‍ಗೆ ಬದಲಿಯಾಗಿ ತಮ್ಮ ಗ್ರಾಹಕರಿಗೆ ಇಂಟರ್ನೆಟ್ ಎಕ್ಸ್ ಪ್ಲೋರರ್‌ನ್ನು ISP ಗಳು ಹಾಗು PC ಮಾರಾಟಗಾರರ ಮೂಲಕ ಹಂಚಿಕೆ ಮಾಡಿಸುವಲ್ಲಿ ಯಶಸ್ವಿಯಾಯಿತು, ಬಹುತೇಕವಾಗಿ ಮೈಕ್ರೋಸಾಫ್ಟ್ ವಿಂಡೋಸ್ OEM ಪರವಾನಗಿಗಳಿಂದ ಸಾಮರ್ಥ್ಯವನ್ನು ಬಳಸಿಕೊಂಡಿದ್ದರಿಂದ ಜೊತೆಗೆ ಆಂಶಿಕವಾಗಿ ಮೈಕ್ರೋಸಾಫ್ಟ್ IE ಯನ್ನು ಒಂದು ಬ್ರ್ಯಾಂಡ್ ಆಗಿ ಮಾಡಲು ಬಂಡವಾಳ ಹೂಡಿದ್ದು ಕಾರಣವಾಗಿರಬಹುದು. ಹೀಗಾಗಿ ಅಗತ್ಯಗಳಿಗೆ ತಕ್ಕಂತ IEಆವೃತ್ತಿಯನ್ನು ಪ್ರಸ್ತಾಪಿಸಲಾಯಿತು. ಇದಲ್ಲದೆ, ವೆಬ್ ಅಭಿವೃದ್ಧಿಪಡಿಸುವವರು ನಿರ್ದಿಷ್ಟ-ಬ್ರೌಸರ್ ವಿಸ್ತರಣೆಗಳಾದ ಪ್ರೊಪ್ರೈಟರಿಯನ್ನು ವೆಬ್ ಪುಟಗಳಲ್ಲಿ ಬಳಸಿದರು. ಹಲವು ಖಾಸಗಿ ಸ್ವಾಮ್ಯದ HTML ಟ್ಯಾಗ್‌ಗಳನ್ನು ತಮ್ಮ ಬ್ರೌಸರ್‌ಗಳಿಗೆ ಸೇರಿಸಿಕೊಂಡ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಹಾಗು ನೆಟ್‌ಸ್ಕೇಪ್ ಎರಡೂ ಇದಕ್ಕೆ ನೀಡಿದ ಬೆಂಬಲದಿಂದಾಗಿ ತಪ್ಪಿತಸ್ಥವೆನಿಸಿದವು. ಇದು ಬಳಕೆದಾರರಲ್ಲಿ ಎರಡು ಸ್ಪರ್ಧಾತ್ಮಕ ಹಾಗು ಬಹುತೇಕ ಸಾಮರಸ್ಯವಿಲ್ಲದ ವೆಬ್ ಬ್ರೌಸರ್‌ಗಳ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಾಯ ಹೇರಿತು.
ಮಾರ್ಚ್ ೧೯೯೮ರಲ್ಲಿ, ನೆಟ್‌ಸ್ಕೇಪ್ ಮುಕ್ತ ಮೂಲ ಪರವಾನಗಿ ಅಡಿಯಲ್ಲಿ ನೆಟ್‌ಸ್ಕೇಪ್ ಕಮ್ಯೂನಿಕೇಟರ್ ಗೆ ಹೆಚ್ಚಿನ ಕೋಡ್ ಬೇಸ್ ನ್ನು ಬಿಡುಗಡೆ ಮಾಡಿತು. ನೆಟ್‌ಸ್ಕೇಪ್ 5 ತಾಂತ್ರಿಕ ಉತ್ಪನ್ನವು, ಮುಕ್ತ ಮೂಲ ಸಮುದಾಯದ ನೆರವನ್ನು ಬಳಸಿಕೊಂಡಿತು ಜೊತೆಗೆ ಇದು ಮೊಜಿಲ್ಲ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು, ಇದು ನೆಟ್‌ಸ್ಕೇಪ್ ನ್ಯಾವಿಗೇಟರ್ ನ ಮೂಲ ಸಂಕೇತ ನಾಮಆಗಿತ್ತು. ನೆಟ್‌ಸ್ಕೇಪ್ ಪ್ರೋಗ್ರಾಮರ್ ಗಳು ಮೊಜಿಲ್ಲಗೆ ಒಂದು ವಿಭಿನ್ನ GUIನ್ನು ನೀಡಿ ನೆಟ್‌ಸ್ಕೇಪ್ ೬ ಹಾಗು ನೆಟ್‌ಸ್ಕೇಪ್ ೭ ಎಂದು ಬಿಡುಗಡೆ ಮಾಡಿದರು. ಒಂದು ದೀರ್ಘಾವಧಿಯ ಸಾರ್ವಜನಿಕ ಬೀಟಾ ಪರೀಕ್ಷೆಯ ನಂತರ, ಮೊಜಿಲ್ಲ ೧.೦ನ್ನು ಜೂನ್ ೫ ೨೦೦೨ರಲ್ಲಿ ಬಿಡುಗಡೆ ಮಾಡಲಾಯಿತು. ಅದೇ ಕೋಡ್-ಬೇಸ್, ಗಮನಾರ್ಹವಾಗಿ ಗೆಚ್ಕೋ ಲೇಔಟ್ ಇಂಜಿನ್, ಸ್ವತಂತ್ರವಾದ ಬಳಕೆಗಳಿಗೆ ಆಧಾರವಾಯಿತು, ಇದರಲ್ಲಿ ಫೈರ್ ಫಾಕ್ಸ್ ಹಾಗು ತಂಡರ್‌ಬರ್ಡ್ ಗಳೂ ಸೇರಿವೆ.
ಆದಾಗ್ಯೂ, ಈ ವೆಬ್ ಬ್ರೌಸರ್ ಗಳು ಫಲಿತಾಂಶವನ್ನು ನೀಡಲು ಹಲವಾರು ವರ್ಷಗಳು ತೆಗೆದುಕೊಂಡವು. ಈ ನಡುವೆ ಅಮೆರಿಕ ಆನ್ಲೈನ್ ನೆಟ್‌ಸ್ಕೇಪ್ ನ್ನು ಖರೀದಿಸುವುದರ ಜೊತೆಗೆ ಮೊಜಿಲ್ಲ ಕೋಡ್ ಬೇಸ್‌ನ ಒಂದು ಪೂರ್ವ-ಬೀಟಾ-ವೈಶಿಷ್ಟ್ಯದ ರೂಪದೊಂದಿಗೆ ನೆಟ್‌ಸ್ಕೇಪ್ ನ್ಯಾವಿಗೇಟರ್ ೬ ನ್ನು ಬಿಡುಗಡೆ ಮಾಡಿತು. ಇದು ಬಳಕೆದಾರರ ಮೆಚ್ಚುಗೆಯನ್ನು ಗಳಿಸುವಂತಹ ಯಾವುದೇ ವೈಶಿಷ್ಟ್ಯವನ್ನು ತೋರಲಿಲ್ಲ. ಹೀಗಾಗಿ ಬಳಕೆದಾರರು ಇಂಟರ್ನೆಟ್ ಎಕ್ಸ್ ಪ್ಲೋರರ್ ನ ಬಳಕೆಯನ್ನು ಮುಂದುವರೆಸಿದರು. ಕಳೆದ ೨೮ ಡಿಸೆಂಬರ್ ೨೦೦೭ರಲ್ಲಿ, ನೆಟ್‌ಸ್ಕೇಪ್ ನ ಅಭಿವರ್ಧಕರು, AOL ನೆಟ್‌ಸ್ಕೇಪ್ ನ್ಯಾವಿಗೇಟರ್ ಅಭಿವೃದ್ದಿ ಕಾರ್ಯವನ್ನು ರದ್ದುಗೊಳಿಸಿದೆ ಎಂದು ಪ್ರಕಟಿಸಿ, ೧ ಫೆಬ್ರವರಿ ೨೦೦೮ರ ಸುಮಾರಿಗೆ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡರು.[೮] ಇವೆಲ್ಲದರ ಹೊರತಾಗಿಯೂ, ಬ್ರೌಸರ್ ನ ದಾಖಲೆ ಹಾಗು ಬೆಂಬಲ ರಹಿತ ಆವೃತ್ತಿಗಳು ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿದೆ.
ಬಿಡುಗಡೆಯ ಇತಿಹಾಸ
[ಬದಲಾಯಿಸಿ]- ಮೊಸೈಕ್ ನೆಟ್‌ಸ್ಕೇಪ್ ೦.೯ – ಅಕ್ಟೋಬರ್ ೧೩, ೧೯೯೪
- ನೆಟ್‌ಸ್ಕೇಪ್ ನ್ಯಾವಿಗೇಟರ್ ೧.೦ – ಡಿಸೆಂಬರ್ ೧೫, ೧೯೯೪
- ನೆಟ್‌ಸ್ಕೇಪ್ ನ್ಯಾವಿಗೇಟರ್ ೧.೧ – ಮಾರ್ಚ್ ೧೯೯೫
- ನೆಟ್‌ಸ್ಕೇಪ್ ನ್ಯಾವಿಗೇಟರ್ ೧.೨೨ – ಆಗಸ್ಟ್ ೧೯೯೫
- ನೆಟ್‌ಸ್ಕೇಪ್ ನ್ಯಾವಿಗೇಟರ್ ೨.೦ – ಮಾರ್ಚ್ ೧೯೯೬[೯][೧೦]
- ನೆಟ್‌ಸ್ಕೇಪ್ ನ್ಯಾವಿಗೇಟರ್ ೨.೦೧
- ನೆಟ್‌ಸ್ಕೇಪ್ ನ್ಯಾವಿಗೇಟರ್ ೨.೦೨
- ನೆಟ್‌ಸ್ಕೇಪ್ ನ್ಯಾವಿಗೇಟರ್ ೩.೦ – ಆಗಸ್ಟ್ ೧೯, ೧೯೯೬
- ನೆಟ್‌ಸ್ಕೇಪ್ ನ್ಯಾವಿಗೇಟರ್ ೩.೦೧
- ನೆಟ್‌ಸ್ಕೇಪ್ ನ್ಯಾವಿಗೇಟರ್ ೩.೦೨
- ನೆಟ್‌ಸ್ಕೇಪ್ ನ್ಯಾವಿಗೇಟರ್ ೩.೦೩
- ನೆಟ್‌ಸ್ಕೇಪ್ ನ್ಯಾವಿಗೇಟರ್ ೩.೦೪ – ಅಕ್ಟೋಬರ್ ೪, ೧೯೯೭[ಸೂಕ್ತ ಉಲ್ಲೇಖನ ಬೇಕು]
- ನೆಟ್‌ಸ್ಕೇಪ್ ನ್ಯಾವಿಗೇಟರ್ ೪.೦ – ಜೂನ್ ೧೯೯೭
- ನೆಟ್‌ಸ್ಕೇಪ್ ನ್ಯಾವಿಗೇಟರ್ ೪.೦೧
- ನೆಟ್‌ಸ್ಕೇಪ್ ನ್ಯಾವಿಗೇಟರ್ ೪.೦೨
- ನೆಟ್‌ಸ್ಕೇಪ್ ನ್ಯಾವಿಗೇಟರ್ ೪.೦೩
- ನೆಟ್‌ಸ್ಕೇಪ್ ನ್ಯಾವಿಗೇಟರ್ ೪.೦೪
- ನೆಟ್‌ಸ್ಕೇಪ್ ನ್ಯಾವಿಗೇಟರ್ ೪.೦೫
- ನೆಟ್‌ಸ್ಕೇಪ್ ನ್ಯಾವಿಗೇಟರ್ ೪.೦೬ – ಆಗಸ್ಟ್ ೧೭, ೧೯೯೮
- ನೆಟ್‌ಸ್ಕೇಪ್ ನ್ಯಾವಿಗೇಟರ್ ೪.೦೭
- ನೆಟ್‌ಸ್ಕೇಪ್ ನ್ಯಾವಿಗೇಟರ್ ೪.೦೮ – ನವೆಂಬರ್ ೯, ೧೯೯೮ (16-ಬಿಟ್ ವಿಂಡೋಸ್ ಗೆ ಕಡೆಯ ಬಿಡುಗಡೆ ಹಾಗು ೬೮k ಮ್ಯಾಕ್ಇಂತೋಶಸ್)
ಟೀಕೆಗಳು
[ಬದಲಾಯಿಸಿ]ನೆಟ್‌ಸ್ಕೇಪ್, ಅಂದಿನ ವೆಬ್-ಸ್ಟ್ಯಾಂಡರ್ಡ್ ಗಳನ್ನು ಸಮರ್ಥವಾಗಿ ಎದುರಿಸಲಿಲ್ಲವೆಂಬ ಟೀಕೆಯನ್ನು ಎದುರಿಸಿತು, ಸಾಮಾನ್ಯವಾಗಿ ಹಿಂದೆ ಉಳಿಯಿತು ಅಥವಾ ಬಹಳ ಕಳಪೆ ಮಟ್ಟದಲ್ಲಿ ಅಥವಾ ತಪ್ಪಾಗಿ ಬೆಂಬಲಿಸುತ್ತಿತ್ತು ಎಂದು ಟೀಕಿಸಿದ್ದಾರೆ. ಈ ಟೀಕೆಗಳು ಅದರ ಜನಪ್ರಿಯತೆಯ ದಿನಗಳಲ್ಲಿ ಗಮನ ಸೆಳೆದಿರಲಿಲ್ಲ. ಏಕೆಂದರೆ ವೆಬ್ ವಿನ್ಯಾಸಗಾರರು ಸಾಮಾನ್ಯವಾಗಿ ನೆಟ್‌ಸ್ಕೇಪ್ ನ್ಯಾವಿಗೇಟರ್ ಅಭಿವೃದ್ದಿಗೆ ಗಮನ ನೀಡಿದ್ದರು. ಆದರೆ ಇದು ಹಿಂದಿನ ವ್ಯವಸ್ಥಾನುಕೂಲ ವನ್ನು ಒದಗಿಸಲು ಇಚ್ಛಿಸಿದ ವೆಬ್ ವಿನ್ಯಾಸಗಾರರಿಗೆ ಹೆಚ್ಚಿನ ತೊಂದರೆಗೆ ಕಾರಣವಾಯಿತು, ಈ ತೊಂದರೆಯು ನೆಟ್‌ಸ್ಕೇಪ್ ನ್ಯಾವಿಗೇಟರ್ ೪ ಹಾಗು ನೆಟ್‌ಸ್ಕೇಪ್ ಕಮ್ಯೂನಿಕೇಟರನ್ನು ತಮ್ಮ ವೆಬ್ ಜಾಲಗಳಿಗೆ ಅಳವಡಿಸಿಕೊಳ್ಳುವಾಗ ಅಧಿಕವಾಗುತ್ತಿತ್ತು. ಇಂದು, ಹಲವು ವೆಬ್ ಅಭಿವರ್ಧಕರು ಈ ಹಳೆಯ ಆವೃತ್ತಿಗಳನ್ನು ಬೆಂಬಲಿಸುವುದಿಲ್ಲ, ಏಕೆಂದರೆ ಅವುಗಳು ಅತ್ಯಂತ ಕಡಿಮೆ ಮಾರುಕಟ್ಟೆ ಹಂಚಿಕೆಯನ್ನು ಹೊಂದಿರುವುದರ ಜೊತೆಗೆ ಮಾನಕೀಕರಣದಲ್ಲಿ ನ್ಯೂನತೆಯನ್ನು ಹೊಂದಿದೆ.
ಈ ಮಾದರಿಯ ವೆಬ್‌ಗೆ ನೆಟ್‌ಸ್ಕೇಪ್‌ನ ಕೊಡುಗೆಗಳು ವೆಬ್ ಅಭಿವರ್ಧಕರಿಗೆ ಅಡ್ಡಿ ಎಂದು ಯಾವಾಗಲೂ ಅನಿಸಿಲ್ಲ. ಜಾವಾಸ್ಕ್ರಿಪ್ಟ್(ಜಾವಾದ ಜೊತೆಗೆ ಅಲ್ಪಮಟ್ಟಿಗಿನ ಸಂಬಂಧವನ್ನು ಹೊಂದಿದೆ) ಉದಾಹರಣೆಗೆ, Ecma ಇಂಟರ್‌ನ್ಯಾಷನಲ್‌ಗೆ ಒಂದು ಹೊಸ ಪ್ರಮಾಣವನ್ನಾಗಿ ನಿರೂಪಿಸಲಾಯಿತು, ಇದರ ಪರಿಣಾಮECMAScriptನ ಸ್ಪೆಸಿಫಿಕೇಶನ್. ಈ ಪ್ರಯತ್ನದಿಂದಾಗಿ ಹಲವಾರು ವೆಬ್ ಬ್ರೌಸರ್ ಗಳಿಂದ ಸುಲಭವಾದ ಬೆಂಬಲಕ್ಕೆ ಅವಕಾಶ ದೊರೆಯಿತು. ನೆಟ್‌ಸ್ಕೇಪ್ ನ್ಯಾವಿಗೇಟರ್ ಸ್ವತಃ ಜನಪ್ರಿಯತೆಯನ್ನು ಕಳೆದುಕೊಂಡ ದೀರ್ಘ ಕಾಲದ ನಂತರಕ್ರಾಸ್-ಬ್ರೌಸರ್ ಸ್ಕ್ರಿಪ್ಟಿಂಗ್ ಭಾಷೆಯಾಗಿ ಸ್ಥಾಪಿತವಾಗಿದೆ. ಮತ್ತೊಂದು ಉದಾಹರಣೆಯೆಂದರೆ FRAME ಟ್ಯಾಗ್, ಇದನ್ನು ಇಂದು ವ್ಯಾಪಕವಾಗಿ ಬೆಂಬಲಿಸಲಾಗುತ್ತದೆ. ಜೊತೆಗೆ "HTML ೪.೦೧ ಫ್ರೇಮ್‌ಸೆಟ್" ಸ್ಪೆಸಿಫಿಕೇಶನ್ ಮುಂತಾದ ಅಧಿಕೃತ ವೆಬ್ ಸ್ಟ್ಯಾಂಡರ್ಡ್‌ಗಳಿಗೆ ಸೇರುವುದರಲ್ಲಿ ಅಂತ್ಯಗೊಂಡಿದೆ.
ಕಳೆದ ೨೦೦೭ರ PC ವರ್ಲ್ಡ್ ಅಂಕಣದಲ್ಲಿ, ಇಂಟರ್ನೆಟ್ ಮೇಲಿನ ಅದರ ಪ್ರಭಾವದಿಂದಾಗಿ ಮೂಲ ನೆಟ್‌ಸ್ಕೇಪ್ ನ್ಯಾವಿಗೇಟರ್ "ಎಲ್ಲ ಕಾಲದ ಉತ್ತಮ ತಾಂತ್ರಿಕ ಉತ್ಪನ್ನ"ವೆಂದು ಪರಿಗಣಿಸಲಾಗಿದೆ.[೧೧]
ಇವನ್ನೂ ನೋಡಿ
[ಬದಲಾಯಿಸಿ]- ಬ್ರೌಸರ್ ಟೈಮ್ ಲೈನ್
- ವೆಬ್ ಬ್ರೌಸರ್‌ಗಳ ನಡುವೆ ಹೋಲಿಕೆ
- ವೆಬ್ ಬ್ರೌಸರ್ ಗಳ ಪಟ್ಟಿ
- ನೆಟ್‌ಸ್ಕೇಪ್
- ಮೊಸೈಕ್
- ಮೊಜಿಲ್ಲ
- ಲೌ ಮೊಂಟುಲ್ಲಿ
ಉಲ್ಲೇಖಗಳು
[ಬದಲಾಯಿಸಿ]- ↑ ನೆಟ್‌ಸ್ಕೇಪ್'ಸ್ ಬ್ರೀಫ್ ಹಿಸ್ಟರಿ Archived 2009-02-16 ವೇಬ್ಯಾಕ್ ಮೆಷಿನ್ ನಲ್ಲಿ. ೦೨-೧೬-೨೦೦೯ರಂದು ಮರುಸಂಪಾದಿಸಲಾಗಿದೆ
- ↑ ನೆಟ್‌ಸ್ಕೇಪ್ 9 - 1 ಮೇ 2007 ಅನೌನ್ಸ್‌ಮೆಂಟ್ Archived 2009-01-10 ವೇಬ್ಯಾಕ್ ಮೆಷಿನ್ ನಲ್ಲಿ. ೦೫-೦೨-೨೦೦೭ರಂದು ಮರುಸಂಪಾದಿಸಲಾಗಿದೆ
- ↑ Tom Drapeau (December 28, 2007). "End of Support for Netscape web browsers". The Netscape Blog. Archived from the original on 2007-12-29. Retrieved 2007-12-29.
- ↑ "ಎಂಡ್ ಆಫ್ ಸಪೋರ್ಟ್ ಫಾರ್ ನೆಟ್‌ಸ್ಕೇಪ್ ವೆಬ್ ಬ್ರೌಸರ್ಸ್". Archived from the original on 2013-11-05. Retrieved 2010-07-28.
- ↑ "AOL.com - ನೆಟ್‌ಸ್ಕೇಪ್". Archived from the original on 2006-12-07. Retrieved 2010-07-28.
- ↑ "AOL.com - ನೆಟ್‌ಸ್ಕೇಪ್". Archived from the original on 2005-03-26. Retrieved 2010-07-28.
- ↑ ೭.೦ ೭.೧ ಹಿಸ್ಟರಿ ಆಫ್ ಇಂಟರ್ನೆಟ್ ಎಕ್ಸ್@ಪ್ಲೋರರ್
- ↑ BBC ನ್ಯೂಸ್ ಆರ್ಟಿಕಲ್ ೨೯ನೇ ಫೆಬ್ರವರಿ ೨೦೦೮ರಲ್ಲಿ ಮರುಸಂಪಾದಿಸಲಾಗಿದೆ
- ↑ "holgermetzger.de". Archived from the original on 2006-07-13. Retrieved 2010-07-28.
- ↑ "ಟಿಮ್ ಬರ್ನರ್ಸ್ -ಲೀ ಅಂಡ್ ದಿ W3C". Archived from the original on 2012-09-12. Retrieved 2010-07-28.
- ↑ "PC ವರ್ಲ್ಡ್ - ದಿ 50 ಬೆಸ್ಟ್ ಟೆಕ್ ಪ್ರಾಡಕ್ಟ್ಸ್ ಆಫ್ ಆಲ್ ಟೈಮ್". Archived from the original on 2008-06-10. Retrieved 2010-07-28.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ನೆಟ್‌ಸ್ಕೇಪ್ ಹ್ಯಾಂಡ್ ಬುಕ್ 1.1 Archived 2007-10-16 ವೇಬ್ಯಾಕ್ ಮೆಷಿನ್ ನಲ್ಲಿ. / 2.02 Archived 2007-10-13 ವೇಬ್ಯಾಕ್ ಮೆಷಿನ್ ನಲ್ಲಿ. / 3.0 Archived 2008-05-29 ವೇಬ್ಯಾಕ್ ಮೆಷಿನ್ ನಲ್ಲಿ., ಹಾಗು ನಾಲೆಡ್ಜ್ ಬೇಸ್ Archived 2006-07-08 ವೇಬ್ಯಾಕ್ ಮೆಷಿನ್ ನಲ್ಲಿ.
- OS/೨ ನ್ಯಾವಿಗೇಟರ್ Archived 2008-01-16 ವೇಬ್ಯಾಕ್ ಮೆಷಿನ್ ನಲ್ಲಿ. ಅನಧಿಕೃತ ಹೋಂ ಪೇಜ್, Y2K ಸರ್ಟಿಫಿಕೆಟ್ಸ್[ಶಾಶ್ವತವಾಗಿ ಮಡಿದ ಕೊಂಡಿ]
- ಫಾರ್ಟಿಫೈ Archived 2008-01-17 ವೇಬ್ಯಾಕ್ ಮೆಷಿನ್ ನಲ್ಲಿ. ನೆಟ್‌ಸ್ಕೇಪ್ ೨.೦೨ - ೪.೭೨ (ಅನಧಿಕೃತ ಭದ್ರತಾ ಸುಧಾರಣೆಗಳು)
- ನೆಟ್‌ಸ್ಕೇಪ್ ೩.೦ ಹಿಡನ್ ಫೀಚರ್ಸ್ Archived 2020-10-24 ವೇಬ್ಯಾಕ್ ಮೆಷಿನ್ ನಲ್ಲಿ., ಸಹವರ್ತನೆ ಸ್ಕ್ರೀನ್ ಶಾಟ್ಸ್
- ಮೊಸೈಕ್ ೦.೪ನಿಂದ ನೆಟ್‌ಸ್ಕೇಪ್ ನ್ಯಾವಿಗೇಟರ್ ೩.೦೪ನ ಡೌನ್ ಲೋಡ್ ಅರ್ಚಿವ್ ರಿಲೀಸಸ್ Archived 2010-06-12 ವೇಬ್ಯಾಕ್ ಮೆಷಿನ್ ನಲ್ಲಿ.
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hatnote templates targeting a nonexistent page
- Articles needing additional references from November 2007
- Articles with invalid date parameter in template
- All articles needing additional references
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using Infobox software with unknown parameters
- Articles with unsourced statements from April 2008
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2022
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ನೆಟ್‌ಸ್ಕೇಪ್
- ವಿಂಡೋಸ್ ವೆಬ್ ಬ್ರೌಸರ್‌ಗಳು
- ಮ್ಯಾಕ್ OS ವೆಬ್ ಬ್ರೌಸರ್ ಗಳು
- POSIX ವೆಬ್ ಬ್ರೌಸರ್ ಗಳು
- ಗೊಫೆರ್ನ ಗಿರಾಕಿಗಳು
- ಅಂತರಜಾಲದ ಇತಿಹಾಸ
- ಸ್ಥಗಿತಗೊಂಡ ವೆಬ್ ಬ್ರೌಸರ್ ಗಳು
- ಕ್ರಾಸ್-ಪ್ಲಾಟ್ಫಾರ್ಮ್ ಸಾಫ್ಟ್‌ವೇರ್
- ತಂತ್ರಾಂಶಗಳು