ವಿಷಯಕ್ಕೆ ಹೋಗು

ದೇಬಾಲ್ ಮುತ್ತಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Siege of Debal
Part of Umayyad campaigns in India and Umayyad conquest of Sindh, Muslim conquests in the Indian subcontinent
ಕಾಲ: 711 AD
ಸ್ಥಳ: Debal, Sindh
ಪರಿಣಾಮ: Umayyad Victory
ಪ್ರದೇಶಗಳ ಕೈಬದಲು: Debal is conquered by the Umayyads and Muhammed Ibn Qasim leaves a garrison of 4,000 strong in the city.
ಕದನಕಾರರು
Umayyad Caliphate Brahmin dynasty of Sindh
ಸೇನಾಧಿಪತಿಗಳು
Muhammad ibn al-Qasim Unknown (nephew of Raja Dahir)


ದೇಬಲ್‌ನ ಮುತ್ತಿಗೆ ಎಂದೂ ಕರೆಯಲ್ಪಡುವ ದೇಬಲ್‌ನ ಮುತ್ತಿಗೆಯು 711 ಸಿ.ಇ ಯ ಶರತ್ಕಾಲದಲ್ಲಿ ನಡೆಯಿತು, ಇದರಲ್ಲಿ ಮುಹಮ್ಮದ್ ಇಬ್ನ್ ಅಲ್-ಖಾಸಿಮ್ ನೇತೃತ್ವದ ಉಮಯ್ಯದ್ ಪಡೆಗಳು ರಾಜ ದಾಹಿರ್ ಆಳ್ವಿಕೆ ನಡೆಸುತ್ತಿದ್ದ ಸಿಂದ್ ಪ್ರಾಂತ್ಯದ ನಗರವಾದ ದೇಬಲ್ ಅನ್ನು ಮುತ್ತಿಗೆ ಹಾಕಿದವು. ಉಮಯ್ಯದ್‌ಗಳು ಇರಾಕ್‌ನ ಗವರ್ನರ್ ಅಲ್-ಹಜ್ಜಾಜ್‌ನ ಆದೇಶದಂತೆ ಕೋಟೆಯ ನಿವಾಸಿಗಳನ್ನು ಸೋಲಿಸಿ ಅದನ್ನು ವಶಪಡಿಸಿಕೊಂಡರು.

ಮುತ್ತಿಗೆ

[ಬದಲಾಯಿಸಿ]

ಸಿ.ಇ. 711 ರಲ್ಲಿ ಮುಹಮ್ಮದ್ ಇಬ್ನ್ ಖಾಸಿಮ್ 6,000 ಸಿರಿಯನ್ ಅಶ್ವಸೈನ್ಯ ಮತ್ತು 3,000 ಒಂಟೆಗಳೊಂದಿಗೆ ಉತ್ತಮ ತರಬೇತಿ ಪಡೆದ ಅರಬ್ ಸೈನಿಕರೊಂದಿಗೆ ದೇಬಾಲ್ ವಶಪಡೆಯಲು ಸರ್ವಸನ್ನದ್ದನಾಗಿ ಹೊರಟನು. ದಾಹಿರ್ ಕೋಟೆಯನ್ನು ರಾಜ ದಾಹಿರ್ ರವರ ಸೋದರಳಿಯನು, 4,000 ರಜಪೂತರು ಮತ್ತು 3,000 ಬ್ರಾಹ್ಮಣರಿಂದ ರಕ್ಷಿಸುತ್ತಿದ್ದನು[] []. ಕಾಸಿಮ್‌ನ ಮಗನಾದ ಮುಹಮದ್, ಅರ್ಮೈಲ್‌ನಿಂದ ಹೊರಟು, ಶುಕ್ರವಾರದಂದು ದಾಬಲ್‌ಗೆ ಬಂದನು. ಅಲ್ಲಿಗೆ ಹಡಗುಗಳಿಂದ ಬಂದ ಅವನ ಸೈನಿಕರು, ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಚಿತ ಯಂತ್ರಗಳನ್ನು ಖರೀದಿಸಿದರು. ಅವನು ಒಂದು ರಕ್ಷಣಾಗುಂಡಿಗಳನ್ನು ಅಗೆಸಿದನು. ಪ್ರತಿ ಯೋಧರ ತಂಡವನ್ನು ಅದರ ಅಡಿಯಲ್ಲಿ ಜೋಡಿಸಲಾಯಿತು ಮತ್ತು ಕವಣೆಯಂತ್ರವನ್ನು ಸರಿಪಡಿಸಲಾಯಿತು, ಇದನ್ನು "ವಧುವಣಗಿತ್ತಿ " ಎಂದು ಕರೆಯಲಾಯಿತು. ಇದರ ಕೆಲಸ ಮಾಡಲು ಐದು ನೂರು ಜನರು ಬೇಕಾಗುತ್ತಾರೆ. ದೇಬಲ್‌ನಲ್ಲಿ ಉದ್ದನೆಯ ಕಂಬದಿಂದ ಆರೋಹಿಸಲಾದ ಎತ್ತರದ ದೇವಾಲಯದ ಗೊಪುರವಿತ್ತು (ಬುಡ್) ಮತ್ತು ಕಂಬದ ಮೇಲೆ ಕೆಂಪು ಧ್ವಜವನ್ನು ಹಾರಿಸಲಾಗಿತ್ತು. ಗಾಳಿ ಬೀಸಿದಾಗ ಅದು ನಗರದ ಮೇಲೆ ಹಾರಡುತಿತ್ತು. ಇದು ಒಂದು ಎತ್ತರದ ಸ್ತಂಭವಾಗಿದ್ದು, ಅದರ ಕೆಳಗೆ ವಿಗ್ರಹಗಳನ್ನು ಇಡಲಾಗುತಿತ್ತು. ಭಾರತೀಯರು ಸಾಮಾನ್ಯವಾಗಿ ತಮ್ಮ ಆರಾಧನೆಗೆ ಸಂಬಂಧಿಸಿದ ಯಾವುದಾದರೂ ಅಥವಾ ಅವರ ಆರಾಧನೆಯ ವಸ್ತುವಿಗೆ ಬುಡ್ ಹೆಸರನ್ನು ನೀಡುತ್ತಾರೆ. ಆದ್ದರಿಂದ, ವಿಗ್ರಹವನ್ನು ಬುಡ್ ಎಂದು ಕರೆಯಲಾಗುತ್ತದೆ.

ಉಮಯ್ಯದ್ ಪಡೆಗಳು ಕೋಟೆಯ ಹೊರಗೆ 7 ದಿನಗಳ ಕಾಲ ದಾಳಿ ಮಾಡಲು ಅನುಮತಿ ಪತ್ರಕ್ಕಾಗಿ ಕಾಯುತ್ತಿದ್ದವು. ಎಂಟನೇ ದಿನ, ಮುಹಮ್ಮದ್ ಇಬ್ನ್ ಖಾಸಿಮ್ ಅಲ್-ಹಜ್ಜಾಜ್ ಅವರಿಂದ ಪತ್ರವನ್ನು ಸ್ವೀಕರಿಸಿದನು. ನಂತರದ ಪತ್ರವ್ಯವಹಾರದಲ್ಲಿ, ಮುಹಮ್ಮದ್ ಅವರು ಅಲ್-ಹಜ್ಜಾಜ್ಗೆ ಅವರು ಏನು ಮಾಡಿದ್ದಾರೆಂದು ತಿಳಿಸಿದ್ದಾನೆ ಮತ್ತು ಭವಿಷ್ಯದ ಬಗ್ಗೆ ಸಲಹೆಯನ್ನು ಕೇಳುತಿದ್ದರು. ಮೂರು ದಿನಕ್ಕೊಮ್ಮೆ ಪತ್ರ ಬರೆಯುತ್ತಿದ್ದರು. ಒಂದು ದಿನದ ಪತ್ರದಲ್ಲಿ ಇವರಿಗೆ ಸಿಕ್ಕ ಉತ್ತರ:- " ಕವಣೆಯಂತ್ರವನ್ನು ಸರಿಪಡಿಸಿ,ಅದರ ಪಾದವನ್ನು ಕಡಿಮೆ ಮಾಡಿ ಅದನ್ನು ಪೂರ್ವದಲ್ಲಿ ಇರಿಸಿ; ನಂತರ ನೀವು ಕವಣೆಯಂತ್ರದ ಸಾರಥಿಯನ್ನು ಕರೆದು, ಧ್ವಜದ ದಂಡವನ್ನು ಗುರಿಮಾಡಲು ಹೇಳಿ. " ಎಂಬ ವಿವರಣೆ ಸಿಕ್ಕಿತ್ತು. ಈ ಯೊಜನೆಯಂತೆ ಅವರು ಧ್ವಜಸ್ತಂಭವನ್ನು ಉರುಳಿಸಿದರು ಹಾಗು ಅದು ಮುರಿದುಹೋಯಿತು; ಇದರಿಂದ ನಾಸ್ತಿಕರು ತುಂಬಾ ಭಯಪೀಡಿತರಾದರು. ದಾಬೆಲ್ ಉಳಿಸುವುದಕ್ಕಾಗಿ ಯುದ್ಧಕ್ಕೆ ಮುಂದಾದರು, ಆಕ್ರಮಣಕಾರಿಗಲು ಏಣಿಗಳಿಂದ ಗೋಡೆಯನ್ನು ಏರಿದರು. ಶಿಖರವನ್ನು ಮೊದಲು ದ್ವಂಸಮಾಡಿದವನು ಮುರಾದ್ ಬುಡಕಟ್ಟಿನ ಕೂಫಾದ ವ್ಯಕ್ತಿ. ನಂತರ ಪಟ್ಟಣವನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಮೂರು ದಿನಗಳ ಕಾಲ ಹತ್ಯಾಕಾಂಡವನ್ನು ಮಾಡಲಾಯಿತು.. [] [] [] [] []

ನಂತರದ ಪರಿಣಾಮ

[ಬದಲಾಯಿಸಿ]

ರಾಜಾ ದಾಹಿರ್ ನೇಮಿಸಿದ ಪಟ್ಟಣದ ಗವರ್ನರ್ ಓಡಿಹೋದನು. ಮುಸುಲ್ಮನ್ನರು ಈ ಸ್ಥಳವನ್ನು ಮಸೀದಿಯನ್ನಗಿಸಿ ನಿರ್ಮಿಸಿದನು. ನಾಲ್ಕು ಸಾವಿರ ಮುಸಲ್ಮಾನ್‌ರೂಂದಿಗೆ ಈ ಸ್ಥಳವನ್ನು ಸೇನಾನೆಲೆ ಮಾಡಿದನು. ಸಿಂಧ್‌ನ ಗವರ್ನರ್ ಆಗಿದ್ದ 'ಇಶಾಕ್ ಅಜ್ ಜಬ್ಬಿ ಅವರ ಮಗ ಅಂಬಿಸ್ಸಾ' ದೇವಾಲಯದ ಮಿನಾರ್‌ನ ಮೇಲಿನ ಭಾಗವನ್ನು ಕೆಡವಿ ಅದನ್ನು ಜೈಲಾಗಿ ಪರಿವರ್ತಿಸಿದನು. ಅದೇ ಸಮಯದಲ್ಲಿ, ಅವರು ಮಿನಾರೆಟ್ನ ಕಲ್ಲುಗಳಿಂದ ಪಾಳುಬಿದ್ದ ಪಟ್ಟಣವನ್ನು ದುರಸ್ತಿ ಮಾಡಲು ಪ್ರಾರಂಭಿಸಿದರು; ಆದರೆ ಅವನು ತನ್ನ ಕಾರ್ಯ ಪೂರ್ಣಗೊಳಿಸುವ ಮೊದಲು, ಅವನನ್ನು ವರ್ಗಾವಣೆ ಮಾಡಲ್ಪಟ್ಟನು. ತದನಂತರ ಅಬಿ ಖಾಲಿದ್-ಅಲ್ ಮರುರುಜಿಯ ಮಗನಾದ ಹರುನ್‌ ಉತ್ತರಾಧಿಕಾರಿಯಾದನು ಮತ್ತು ಅವನು ಅಲ್ಲಿಯೇ ಕೊಲ್ಲಲ್ಪಟ್ಟನು []. ಭಾರತೀಯ ಉಪಖಂಡದಲ್ಲಿ ಮುಸ್ಲಿಮರು

ಉಲ್ಲೇಖಗಳು

[ಬದಲಾಯಿಸಿ]
  1. Wolseley Haig. The Cambridge History Of India Volume III. BRAOU, Digital Library Of India. At The University Press Cambridge. p. 2.
  2. ೨.೦ ೨.೧ Board, Pratiyogita Darpan Editorial. Pratiyogita Darpan Extra Issue Series-16 Indian History–Medieval India (in ಇಂಗ್ಲಿಷ್). Upkar Prakashan. p. 36.
  3. The Muslim World (in ಇಂಗ್ಲಿಷ್). Motamar al-Alam al-Islami; World Muslim Congress. 2001. p. 48.
  4. Kalichbeg (1900). The Chachnamah An Ancient History Of Sindh. p. 81.
  5. Indian Armed Forces Yearbook (in ಇಂಗ್ಲಿಷ್). Indian youth. 1961. p. 488.
  6. Mahajan, V. D. (2007). History of Medieval India (in ಇಂಗ್ಲಿಷ್). S. Chand Publishing. p. 17. ISBN 978-81-219-0364-6.
  7. Profeddor John, Dowson (1867). "The History Of India As Told By Its Own Historians Vol 1". Internet Archive.{{cite web}}: CS1 maint: url-status (link)