ದಾನ ಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ದಾನ ಶಾಸನ ವನ್ನು ಅರಸನ ಸಮಕ್ಷಮದಲ್ಲಿ ಅಥವಾ ರಾಜನ ಅಪ್ಪಣೆ ಪಡೆದ ಅವನ ಪ್ರತಿನಿಧಿಯ ಸಮಕ್ಷಮದಲ್ಲಿ ಕೊರೆಸಲ್ಪಡುತ್ತಿತ್ತು. ಇದರಲ್ಲಿ ಎರಡು ವಿಧ. ೧)ವ್ಯಕ್ತಿಗೆ ಕೊಟ್ಟ ದಾನ: ಇದು ವೀರನ ಪರಾಕ್ರಮಕ್ಕೆ ಅಥವಾ ವ್ಯಕ್ತಿಯ ವಿದ್ವತ್ತನ್ನು ಮೆಚ್ಚಿ ಕೊಟ್ಟ ದಾನ. ೨)ಸಂಸ್ಥೆಗೆ ಕೊಟ್ಟ ದಾನ:ಇದು ದೇವಾಲಯ, ಮಠ, ಮಹಾ ಜನಗಳಿಗೆ ಬಿಟ್ಟ ದಾನ.

ಇತಿವೃತ್ತ[ಬದಲಾಯಿಸಿ]

ರಾಜರು ದಾನವನ್ನು ಕೊಡುವಾಗ ಅರ್ಚಕರಿಗೆ, ಊಳಿಗದವರಿಗೆ, ದೇವದಾಸಿಯರಿಗೆ, ಛತ್ರಕ್ಕೆ ಬಿಟ್ಟ ದಾನಗಳಾಗಿವೆ. ಹಿಂದೆ ಮಠಗಳಲ್ಲಿ ವಿದ್ಯಾಭ್ಯಾಸಕ್ಕೆ ಔಷಧೋಪಚಾರಗಳಿಗೆ ಮುಂತಾದ ಕಾರಣಗಳಿಗೆ ದತ್ತಿಯನ್ನು ಬಿಡುತ್ತಿದ್ದರು. ಅಗ್ರಹಾರಗಳಿಗೆ ಅವರ ದೈನಂದಿನ ಉದರಂಭರಣಕ್ಕಾಗಿ ಹೋರಾಡದೆ ನಿಶ್ಚಿಂತೆಯಿಂದ ವೇದಾಧ್ಯಯನ ಮೊದಲಾದ ವ್ಯಾಸಂಗಗಳಲ್ಲಿ ತೊಡಗಲಿ ಎಂದು ದತ್ತಿಯನ್ನು ಕೊಡುತ್ತಿದ್ದರು. ದಾನಶಾಸನಗಳು ಶಿಲೆಯಲ್ಲಿ ಮತ್ತು ತಾಮ್ರಪಟದಲ್ಲಿ ಕೆತ್ತಲ್ಪಡುತ್ತಿದ್ದುವು.