ದವಡೆ
ದವಡೆ ಎಂದರೆ ಬಾಯಿಯ ಪ್ರವೇಶದಾರಿಯಲ್ಲಿನ ಯಾವುದೇ ಎದುರುಬದುರಿರುವ ಕೀಲುಳ್ಳ ರಚನೆ. ಇದನ್ನು ವಿಶಿಷ್ಟವಾಗಿ ಆಹಾರವನ್ನು ಭದ್ರವಾಗಿ ಹಿಡಿಯಲು ಮತ್ತು ಕುಶಲತೆಯಿಂದ ನಿಭಾಯಿಸಲು ಬಳಸಲಾಗುತ್ತದೆ. ದವಡೆಗಳು ಪದವನ್ನು ಸ್ಥೂಲವಾಗಿ ಬಾಯಿಯ ಕುಹರವನ್ನು ರಚಿಸುವ ಮತ್ತು ಅದನ್ನು ತೆರೆಯುವ ಹಾಗೂ ಮುಚ್ಚುವ ಕಾರ್ಯನಿರ್ವಹಿಸುವ ರಚನೆಗಳ ಸಮಗ್ರಕ್ಕೂ ಅನ್ವಯಿಸಲಾಗುತ್ತದೆ ಮತ್ತು ಬಹುತೇಕ ಪ್ರಾಣಿಗಳ ಶರೀರ ಯೋಜನೆಯ ಭಾಗವಾಗಿದೆ.
ಸಸ್ತನಿಗಳಲ್ಲಿ ದವಡೆಗಳು ಕೆಳದವಡೆ ಮತ್ತು ಮೇಲ್ದವಡೆಯಿಂದ ರೂಪಗೊಂಡಿರುತ್ತವೆ. ಏಪ್‍ಗಳಲ್ಲಿ ಕೆಳದವಡೆಯ ಮೂಳೆಗೆ ವಾನರ ಗೂಡು ಎಂದು ಕರೆಯಲಾಗುವ ಬಲವರ್ಧಕ ಇರುತ್ತದೆ. ಸಸ್ತನಿಗಳ ದವಡೆಯ ವಿಕಾಸದಲ್ಲಿ, ದವಡೆಯ ರಚನೆಯ ಮೂಳೆಗಳಲ್ಲಿ ಎರಡು (ಕೆಳದವಡೆಯ ಕೀಲು ಮೂಳೆ ಮತ್ತು ಚದರಾಕಾರದ ಮೂಳೆ) ಗಾತ್ರದಲ್ಲಿ ಕಿರಿದಾಗಿ ಕಿವಿಯೊಳಗೆ ಸೇರಿಕೊಂಡರೆ, ಅನೇಕ ಇತರ ಮೂಳೆಗಳು ಒಟ್ಟಾಗಿ ಒಂದುಗೂಡಿದವು.[೧] ಪರಿಣಾಮವಾಗಿ, ಸಸ್ತನಿಗಳು ಬಹಳ ಕಡಿಮೆ ಅಥವಾ ಸ್ವಲ್ಪವೂ ಕಪಾಲ ಚಲನೆ ತೋರಿಸುವುದಿಲ್ಲ, ಮತ್ತು ಕೆಳದವಡೆಯು ಕೀಲುಗಳಿಂದ ಕಪೋಲ ಮೂಳೆಗೆ ಜೋಡಿಸಲ್ಪಟ್ಟಿರುತ್ತದೆ. ಈ ಕೀಲಿನ ವಿಕೃತಿ ಒಂದು ಸಾಮಾನ್ಯ ಅಸ್ವಸ್ಥತೆಯಾಗಿದೆ, ಮತ್ತು ನೋವು, ಕ್ಲಿಕ್ ಸದ್ದು ಹಾಗೂ ಕೆಳದವಡೆಯ ಚಲನೆಯಲ್ಲಿ ಸೀಮಿತತೆ ಇದರ ಲಕ್ಷಣಗಳು.
ಮೀನಿಗೆ ಹೋಲಿಸಿದರೆ ಚತುಷ್ಪಾದಿಗಳಲ್ಲಿ ದವಡೆಯು ಗಣನೀಯವಾಗಿ ಸರಳೀಕೃತಗೊಂಡಿದೆ. ಮೇಲ್ದವಡೆಯ ಬಹುತೇಕ ಮೂಳೆಗಳು ಕಪಾಲಕ್ಕೆ ಜೋಡಣೆಯಾಗಿವೆ, ಮತ್ತು ಕೆಳದವಡೆಯ ಮೂಳೆಗಳು ಮ್ಯಾಂಡಿಬಲ್ ಎಂಬ ಘಟಕವಾಗಿ ಒಂದುಗೂಡಿವೆ. ದವಡೆಯು ಚದರಾಕಾರ ಮೂಳೆ ಮತ್ತು ಕೀಲಿನ ಮಧ್ಯೆ ಒಂದು ಗೆಣ್ಣು ಜಂಟಿಯ ಮೂಲಕ ರೂಪಗೊಂಡಿರುತ್ತದೆ. ಚತುಷ್ಪಾದಿಗಳ ದವಡೆಗಳು ವಿವಿಧ ಪ್ರಮಾಣದ ಚಲನೆಯನ್ನು ತೋರಿಸುತ್ತವೆ. ಕೆಲವು ಪ್ರಜಾತಿಗಳ ದವಡೆ ಮೂಳೆಗಳು ಸಂಪೂರ್ಣವಾಗಿ ಒಂದುಗೂಡಿದ್ದರೆ, ಇತರ ಪ್ರಜಾತಿಗಳು ಡೆಂಟರಿ, ಕ್ವಾಡ್ರೇಟ್ ಅಥವಾ ಮ್ಯಾಕ್ಸಿಲಾ ಮೂಳೆಗಳ ಚಲನೆಗೆ ಅವಕಾಶ ನೀಡುವ ಕೀಲುಗಳನ್ನು ಹೊಂದಿರಬಹುದು. ಹಾವಿನ ಬುರುಡೆಯು ಅತ್ಯಂತ ಹೆಚ್ಚಿನ ಪ್ರಮಾಣದ ಚಲನೆಯನ್ನು ತೋರಿಸುತ್ತದೆ, ಇದರಿಂದಲೇ ಹಾವು ದೊಡ್ಡ ಬೇಟೆಗಳನ್ನು ನುಂಗಬಲ್ಲದು.
ಉಲ್ಲೇಖಗಳು
[ಬದಲಾಯಿಸಿ]- ↑ Allin EF (December 1975). "Evolution of the mammalian middle ear". J. Morphol. 147 (4): 403–37. doi:10.1002/jmor.1051470404. PMID 1202224.