ಥಾಮಸ್ ಹಾರ್ಡಿ
Thomas Hardy | |
---|---|
ಜನನ | Did not recognize date. Try slightly modifying the date in the first parameter. Stinsford, Dorchester, Dorset, England |
ಮರಣ | Did not recognize date. Try slightly modifying the date in the first parameter. (aged 87) Dorchester, Dorset, England |
ವೃತ್ತಿ | Novelist, Poet, and Short Story writer |
ಸಾಹಿತ್ಯ ಚಳುವಳಿ | Naturalism |
ಬಾಳ ಸಂಗಾತಿ | Emma Lavinia Gifford (1874–1912) Florence Dugdale (1914–28) |
ಪ್ರಭಾವಗಳು
| |
ಪ್ರಭಾವಿತರು | |
ಸಹಿ |
ಧಾಮಸ್ ಹಾರ್ಡಿ , OM ( 2 ಜೂನ್ 1840- 11 ಜನವರಿ 1928) ಇಂಗ್ಲಿಷ್ ಮೂಲದ ಒಬ್ಬ ಕಾದಂಬರಿಕಾರ ಮತ್ತು ಕವಿಯಾಗಿದ್ದರು. ಅವರ ಕೃತಿಗಳು ಸಾಮಾನ್ಯವಾಗಿ ಯಥಾರ್ಥ ಚಿತ್ರಣದ ಬೆಳವಣಿಗೆಗೆ ಸೇರಿದರೂ, ಅವರ ಹಲವು ಕವನಗಳು ಮುಂಚಿನ ಸಾಹಿತ್ಯ ಯುಗದ ರಮ್ಯ ಮತ್ತು ಜ್ಞಾನೋದಯ ಅವಧಿಗಳ ಅಂಶಗಳನ್ನು ಪ್ರದರ್ಶಿಸುತ್ತದೆ. ಇದರಲ್ಲಿ ಅಲೌಕಿಕ ಶಕ್ತಿಗಳ ಬಗ್ಗೆ ಅವರ ಆಕರ್ಷಣೆ ಕೂಡ ಒಳಗೊಂಡಿದೆ.
ತಮ್ಮನ್ನು ಸ್ವತಃ ಹಣಕ್ಕಾಗಿ ಕಾದಂಬರಿಗಳನ್ನು ರಚಿಸಿದ ಕವಿಯನ್ನಾಗಿ ಪರಿಗಣಿಸಿದರೂ, ಅವರ ಜೀವಾವಧಿಯಲ್ಲಿ ಅವರು ಹೆಚ್ಚಾಗಿ ತಮ್ಮ ಕಾದಂಬರಿಗಳಿಗಾಗಿ ಖ್ಯಾತರಾಗಿದ್ದರು. ಇವರ ಕಾದಂಬರಿಗಳಲ್ಲಿ ಟೆಸ್ ಆಫ್ ದಿ ಡಿ'ಅರ್ಬರ್ವಿಲ್ಸ್ ಹಾಗೂ ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್ ಅವರಿಗೆ ಮಹಾನ್ ಕಾದಂಬರಿಕಾರ ಎಂಬ ಖ್ಯಾತಿಯನ್ನು ತಂದುಕೊಟ್ಟಿತು. ಇವರ ಕಾಲ್ಪನಿಕ ಕಥಾ-ಕೃತಿಗಳು ಮೊದಲಿಗೆ ಪತ್ರಿಕೆಗಳಲ್ಲಿ ಧಾರಾವಾಹಿ-ರೂಪದಲ್ಲಿ ಪ್ರಕಟಣೆಯಾಗುತ್ತಿದ್ದವು. ಅವರು ಹುಟ್ಟಿ-ಬೆಳೆದ ಡಾರ್ಚೆಸ್ಟರ್ ವಲಯವನ್ನಾಧರಿಸಿ, ಅರೆ-ಕಾಲ್ಪನಿಕ ವೆಸೆಕ್ಸ್ ಎಂಬ ಭೂಪ್ರದೇಶದಲ್ಲಿ ಅವರು ಬರೆದ ಕಾಲ್ಪನಿಕ-ಕಥೆಗಳನ್ನು ಹೆಣೆಯಲಾಗಿತ್ತು ಮತ್ತು ಅವು ಬಾವೋದ್ರೇಕಗಳು ಮತ್ತು ಸಾಮಾಜಿಕ ಸನ್ನಿವೇಶಗಳ ವಿರುದ್ಧ ಹೋರಾಡುವ ದುರಂತ ಪಾತ್ರಗಳನ್ನು ಶೋಧಿಸಿತು.
ಥಾಮಸ್ ಹಾರ್ಡಿಯವರ ಕವಿತೆಗಳು ಮೊದಲ ಬಾರಿಗೆ ತಮ್ಮ ಐವತ್ತನೇ ವಯಸ್ಸಿನಲ್ಲಿ ಪ್ರಕಟಣೆಯಾದವು ಮತ್ತು ಅವರ ಕಾದಂಬರಿಗಳು ಒಳ್ಳೆಯ ಮೆಚ್ಚುಗೆ ಗಳಿಸಿದವು. ಇವು ಆಧುನಿಕ ಇಂಗ್ಲಿಷ್ ಭಾಷಾ ಕವಿತೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಿದವು. ಅದರಲ್ಲೂ ವಿಶೇಷವಾಗಿ, 1950 ಹಾಗೂ 1960ರ ದಶಕದ ಕಾಲಾವಧಿಗಳಲ್ಲಿ, ಥಾಮಸ್ ಹಾರ್ಡಿಯವರದ್ದು ಪ್ರಧಾನ ವ್ಯಕ್ತಿತ್ವ ಎಂದು ದಿ ಮೂವ್ಮೆಂಟ್ ಕವಿಗಳು ಅಭಿಪ್ರಾಯಪಟ್ಟಿದ್ದಾರೆ.
ಜೀವನ
[ಬದಲಾಯಿಸಿ]ಇಂಗ್ಲೆಂಡ್ ದೇಶದ ಡಾರ್ಸೆಟ್ ಪ್ರಾಂತ್ಯದ ಡಾರ್ಚೆಸ್ಟರ್‌ನ ಪೂರ್ವದಲ್ಲಿ ಸ್ಟಿನ್ಸ್‌ಫರ್ಡ್ ಜಿಲ್ಲೆಯ ಸಣ್ಣ ಹಳ್ಳಿ ಹೈಯರ್ ಬಕ್ಹ್ಯಾಂಪ್ಟನ್‌ನಲ್ಲಿ ಥಾಮಸ್ ಹಾರ್ಡಿ ಜನಿಸಿದರು. ಅವರ ತಂದೆ ಥಾಮಸ್ (ನಿಧನ 1892) ಕಲ್ಲು ಕಟ್ಟುವ ಕೆಲಸಗಾರ ಮತ್ತು ಸ್ಥಳೀಯ ನಿರ್ಮಾಣಗಾರರಾಗಿದ್ದರು. ಇವರ ತಾಯಿ ಜೆಮಿಮಾ (ನಿಧನ 1904) ಬಹಳಷ್ಟು ಶಿಕ್ಷಣ ಪಡೆದಿದ್ದರು. ಬಾಲಕ ಥಾಮಸ್ ತನ್ನ ಎಂಟನೆಯ ವಯಸ್ಸಿನಲ್ಲಿ ಬಕ್ಹ್ಯಾಂಪ್ಟನ್‌ನಲ್ಲಿನ ಮೊದಲ ಶಾಲೆಗೆ ಸೇರುವವರೆಗೆ ಆತನಿಗೆ ವಿದ್ಯಾಭ್ಯಾಸ ಕಲಿಸುತ್ತಿದ್ದರು. ಥಾಮಸ್ ಹಾರ್ಡಿ ಲಾಸ್ಟ್ ಎಂಬೊಬ್ಬರು ನಡೆಸುತ್ತಿದ್ದ ಶಾಲೆಯಲ್ಲಿ ಬಹಳ ವರ್ಷಗಳ ಕಾಲ ಅವರು ವ್ಯಾಸಂಗ ಮಾಡಿದರು. ಇಲ್ಲಿ ಅವರು ಲ್ಯಾಟೀನ್ ಭಾಷೆ ಕಲಿತು ತಮ್ಮ ಶೈಕ್ಷಣಿಕ ಸಾಮರ್ಥ್ಯದ ಪರಿಚಯ ನೀಡಿದರು.[೧] ಆದರೆ, ಥಾಮಸ್ ಹಾರ್ಡಿಯವರ ಕುಟುಂಬದ ಸಾಮಾಜಿಕ ಸ್ಥಿತಿಗತಿಯು ವಿಶ್ವವಿದ್ಯಾನಿಲಯ ಶಿಕ್ಷಣಕ್ಕೆ ಅಗತ್ಯ ಹಣಕಾಸಿನ ಅನುಕೂಲದ ಕೊರತೆಯಿಂದ ಕೂಡಿತ್ತು. ಸ್ಥಳೀಯ ವಾಸ್ತುವಿನ್ಯಾಸಕ ಜಾನ್ ಹಿಕ್ಸ್ ಅವರಲ್ಲಿ ಅಪ್ರೆಂಟಿಸ್‌ನಂತೆ ಸೇರುವುದರೊಂದಿಗೆ, ಥಾಮಸ್ ಹಾರ್ಡಿಯವರ ವಿಧ್ಯುಕ್ತ ಶಿಕ್ಷಣವು 16ನೇ ವಯಸ್ಸಿನಲ್ಲಿ ಅಂತ್ಯಗೊಂಡಿತು. ಥಾಮಸ್ ಹಾರ್ಡಿ ಡಾರ್ಚೆಸ್ಟರ್‌ನಲ್ಲಿ ಒಬ್ಬ ವಾಸ್ತುವಿನ್ಯಾಸಕರಾಗಿ ತರಬೇತಿ ಪಡೆದರು. ನಂತರ, ಅವರು 1862ರಲ್ಲಿ ಲಂಡನ್‌ಗೆ ಸ್ಥಳಾಂತರಗೊಂಡು, ಅಲ್ಲಿನ ಕಿಂಗ್ಸ್ ಕಾಲೇಜ್‌ನಲ್ಲಿ ವಿದ್ಯಾರ್ಥಿಯಾಗಿ ನೋಂದಣಿಯಾದರು. ಅವರು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್ ಮತ್ತು ಅರ್ಕಿಟೆಕ್ಚರಲ್ ಅಸೋಸಿಯೇಷನ್‌ನಿಂದ ಬಹುಮಾನಗಳನ್ನು ಗೆದ್ದುಕೊಂಡರು. ಥಾಮಸ್ ಹಾರ್ಡಿಗೆ ಲಂಡನ್‌ನಲ್ಲಿ ತಾಯಿನಾಡಿನ ಭಾವನೆ ಉಂಟಾಗಲಿಲ್ಲ. ಅವರು ವರ್ಗ ವಿಭಜನೆಗಳು ಮತ್ತು ತಮ್ಮ ಸಾಮಾಜಿಕ ಕೀಳರಿಮೆ ಕುರಿತು ತೀವ್ರವಾದ ಪ್ರಜ್ಞೆಯನ್ನು ಹೊಂದಿದ್ದರು. ಆದರೂ, ಅವರು ಸಾಮಾಜಿಕ ಸುಧಾರಣೆಯಲ್ಲಿ ಆಸಕ್ತಿ ಹೊಂದಿದ್ದರು. ಅವರು ಜಾನ್ ಸ್ಟುವರ್ಟ್ ಮಿಲ್‌ರ ಕೃತಿಗಳನ್ನು ಬಲ್ಲವರಾಗಿದ್ದರು. ಡಾರ್ಸೆಟ್‌ನವರೇ ಅದ ತಮ್ಮ ಸ್ನೇಹಿತ ಹಾರೇಸ್ ಮೌಲ್ ಚಾರ್ಲ್ಸ್ ಫೂರಿಯರ್ ಮತ್ತು ಆಗಸ್ಟ್ ಕಾಮ್ಟ್‌ರವರ ಕೃತಿಗಳನ್ನು ಥಾಮಸ್ ಹಾರ್ಡಿಯವರಿಗೆ ಈ ಅವಧಿಯಲ್ಲಿ ಪರಿಚಯಿಸಿದರು. ಐದು ವರ್ಷಗಳ ನಂತರ, ತಮ್ಮ ಆರೋಗ್ಯದ ಬಗ್ಗೆ ತಳಮಳ ವ್ಯಕ್ತಪಡಿಸಿದ ಥಾಮಸ್ ಹಾರ್ಡಿ, ಡಾರ್ಸೆಟ್‌ಗೆ ಮರಳಿ ತಮ್ಮ ಕೃತಿ-ಲೇಖನದತ್ತ ಗಮನ ಕೇಂದ್ರೀಕರಿಸಲು ನಿರ್ಧರಿಸಿದರು.
1870ರಲ್ಲಿ, ಕಾರ್ನ್ವಾಲ್[೨]ನಲ್ಲಿರುವ ಸೇಂಟ್ ಜುಲಿಯಟ್ ಜಿಲ್ಲಾ ಇಗರ್ಜಿಯ ಪುನಶ್ಚೇತನಕ್ಕೆ ವಾಸ್ತುಶೈಲಿ ಅಭಿಯಾನದಲ್ಲಿದ್ದಾಗ, ಥಾಮಸ್ ಹಾರ್ಡಿ ಎಮ್ಮಾ ಲ್ಯಾವಿನ್ಯಾ ಜಿಫರ್ಡ್ ಅವರನ್ನು ಭೇಟಿ ಮಾಡಿದರು ಹಾಗು ಪ್ರೇಮಾಂಕುರವಾಗಿ 1874ರಲ್ಲಿ ವಿವಾಹವಾದರು.[೩][೪] ನಂತರ ಅವರು ಪತ್ನಿಯಿಂದ ಬೇರೆಯಾದರೂ, 1912 ರಲ್ಲಿ ಸಂಭವಿಸಿದ ಪತ್ನಿಯ ಸಾವಿನಿಂದ ತೀವ್ರ ಆಘಾತಕ್ಕೀಡಾದರು. ಆಕೆಯ ಸಾವಿನ ನಂತರ, ಥಾಮಸ್ ಹಾರ್ಡಿ ಕಾರ್ನ್‌ವಾಲ್‌ಗೆ ಪ್ರಯಾಣಿಸಿ, ಪತ್ನಿಯೊಂದಿಗೆ ಪ್ರಣಯಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಪುನಃ ಭೇಟಿ ನೀಡಿದರು. ಎಮ್ಮಾ ಸಾವಿನ ಬಗ್ಗೆ ಥಾಮಸ್‌ರ ಪೊಯೆಮ್ಸ್ 1912–13 ಬಿಂಬಿಸುತ್ತದೆ. 1914ರಲ್ಲಿ, ತಮಗಿಂತ 39 ವರ್ಷ ಕಿರಿಯರಾಗಿದ್ದ ತಮ್ಮ ಕಾರ್ಯದರ್ಶಿ ಫ್ಲಾರೆನ್ಸ್ ಎಮಿಲಿ ಡಗ್ಡೇಲ್‌ರನ್ನು ಥಾಮಸ್ ಹಾರ್ಡಿ ವಿವಾಹವಾದರು. ಆದರೂ, ತಮ್ಮ ಮೊದಲ ಪತ್ನಿಯ ಸಾವು ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದು, ಕವನಗಳನ್ನು ಬರೆಯುವ ಮೂಲಕ ಶೋಕವನ್ನು ಶಮನಗೊಳಿಸಲು ಯತ್ನಿಸಿದರು.[೫]
1927ರ ಡಿಸೆಂಬರ್ ತಿಂಗಳಲ್ಲಿ ಥಾಮಸ್ ಹಾರ್ಡಿಯವರಿಗೆ ಪಕ್ಕೆ ಜ್ವರ (ಪ್ಲೂರಿಸಿ) ಸಂಭವಿಸಿತು. ಇದರ ಪರಿಣಾಮವಾಗಿ, ಅವರು 1928ರ ಜನವರಿ 11ರ ರಾತ್ರಿ 9 ಗಂಟೆಯ ಸ್ವಲ್ಪನಂತರ ಮ್ಯಾಕ್ಸ್ ಗೇಟ್‌ನಲ್ಲಿ ನಿಧನರಾದರು. ತಮ್ಮ ಮೃತ್ಯುಶಯ್ಯೆಯಲ್ಲಿ ಅವರು ತಮ್ಮ ಕೊನೆಯ ಕವನವನ್ನು ಪತ್ನಿಗೆ ಉಕ್ತಲೇಖನ ಮಾಡಿಸಿದ್ದರು. ಅವರ ಮೃತ್ಯು ಪ್ರಮಾಣ ಪತ್ರದಲ್ಲಿ, ಮೃತ್ಯುವಿನ ಕಾರಣವನ್ನು ತಾತ್ಕಾಲಿಕ ಪ್ರಜ್ಞಾಶೂನ್ಯತೆ ಹಾಗೂ ಮುಪ್ಪು ಎಂದು ತಿಳಿಸಲಾಗಿತ್ತು. ಅದೇ ಜನವರಿ ತಿಂಗಳ 16ರಂದು ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಿತು. ಸ್ಟಿನ್ಸ್‌ಫರ್ಡ್‌ನಲ್ಲಿ ಅವರ ಮೊದಲ ಪತ್ನಿ ಎಮ್ಮಾರ ಸಮಾಧಿಯಲ್ಲೇ ಅವರನ್ನು ಹೂಳಬೇಕೆಂದು ಥಾಮಸ್ ಹಾರ್ಡಿ, ಅವರ ಕುಟುಂಬ ಮತ್ತು ಸ್ನೇಹಿತರು ಬಯಸಿದ್ದ ಕಾರಣ, ಈ ಅಂತಿಮ ಸಂಸ್ಕಾರವು ವಿವಾದ ಹುಟ್ಟಿಸಿತು. ಆದರೂ, ಥಾಮಸ್ ಹಾರ್ಡಿಯವರನ್ನು ಅಬ್ಬೆಯ ಖ್ಯಾತ ಪೊಯಟ್ಸ್ ಕಾರ್ನರ್‌ನಲ್ಲಿ ಹೂಳಬೇಕೆಂದು ಧಾಮಸ್ ಹಾರ್ಡಿಯವರ ಉಯಿಲು ನಿರ್ವಾಹಕ ಸರ್ ಸಿಡ್ನಿ ಕಾರ್ಲೈಲ್ ಕಾಕರೆಲ್ ಒತ್ತಾಯಿಸಿದರು. ಇದಕ್ಕಾಗಿ ಸಂಧಾನ ಮಾಡಿಕೊಂಡು ಅವರ ಹೃದಯವನ್ನು ತೆಗೆದು, ಸ್ಟಿನ್ಸ್‌ಫರ್ಡ್‌ನಲ್ಲಿ ಎಮ್ಮಾರ ಸಮಾಧಿಯೊಂದಿಗೆ ಹೂಳಲಾಯಿತು ಮತ್ತು ಅವರ ಚಿತಾಭಸ್ಮವನ್ನು ಪೊಯಟ್ಸ್ ಕಾರ್ನರ್‌ನಲ್ಲಿ ಹೂಳಲಾಯಿತು.
ಥಾಮಸ್ ಹಾರ್ಡಿ ನಿಧನರಾದ ಸ್ವಲ್ಪ ನಂತರ, ಅವರ ಸ್ಥಿರಾಸ್ತಿ ಉಯಿಲು ನಿರ್ವಾಹಕರು ಅವರ ಪತ್ರಗಳು ಮತ್ತು ಲೇಖನಪುಸ್ತಕಗಳನ್ನು ಸುಟ್ಟರು. ಹನ್ನೆರಡು ದಾಖಲೆಗಳು ಉಳಿದುಕೊಂಡವು. ಇವುಗಳಲ್ಲೊಂದು, 1820ರ ದಶಕದ ಕಾಲಾವಧಿಯ ವಾರ್ತಾಪತ್ರಿಕೆಗಳಲ್ಲಿನ ಕಥೆಗಳ ಟಿಪ್ಪಣಿಗಳು ಮತ್ತು ಉದ್ಧರಣೆಗಳನ್ನು ಹೊಂದಿದ್ದವು. ಥಾಮಸ್ ಹಾರ್ಡಿ ಅವುಗಳನ್ನು ಹೇಗೆ ಜಾಡು ಹಿಡಿದರು ಹಾಗೂ ಅವರು ಹೇಗೆ ತಮ್ಮ ಆನಂತರದ ಕೃತಿಗಳಿಗಾಗಿ ಬಳಸಿಕೊಂಡರು ಎಂಬುದರ ಬಗ್ಗೆ, ಉಳಿದುಕೊಂಡ ಈ ದಾಖಲೆಗಳ ಸಂಶೋಧನೆಯು ಒಳನೋಟ ನೀಡಿದವು.[೬] ಧಾಮಸ್ ಹಾರ್ಡಿ ಸಾವಿನ ವರ್ಷದಲ್ಲಿ, ಶ್ರೀಮತಿ ಹಾರ್ಡಿ ದಿ ಅರ್ಲಿ ಲೈಫ್ ಆಫ್ ಥಾಮಸ್ ಹಾರ್ಡಿ 1841-1891 ಪ್ರಕಟಿಸಿದರು. ಇವನ್ನು ವ್ಯಾಪಕವಾಗಿ ಸಮಕಾಲೀನ ಟಿಪ್ಪಣಿಗಳು, ಪತ್ರಗಳು, ದಿನಚರಿಗಳು ಮತ್ತು ಜೀವನಚರಿತ್ರೆಯ ಲಿಖಿತ ದಾಖಲೆಗಳು, ಹಾಗೂ, ಹಲವು ವರ್ಷಗಳಲ್ಲಿ ಸಂಭಾಷಣೆಗಳ ಮೌಖಿಕ ಮಾಹಿತಿಗಳಿಂದ ಸಂಗ್ರಹಿಸಲಾಗಿತ್ತು.
ಡಿ. ಎಚ್. ಲಾರೆನ್ಸ್ ಮತ್ತು ವರ್ಜಿನಿಯಾ ವುಲ್ಫ್ ಸೇರಿದಂತೆ, ಯುವ ಪೀಳಿಗೆಯಲ್ಲಿನ ಹಲವು ಬರಹಗಾರರು ಧಾಮಸ್ ಹಾರ್ಡಿಯವರ ಕೃತಿಗಳನ್ನು ಶ್ಲಾಘಿಸಿದರು. ಅವರ ಆತ್ಮಚರಿತ್ರೆ 'ಗುಡ್ಬೈ ಟು ಆಲ್ ದಟ್ 'ನಲ್ಲಿ ರಾಬರ್ಟ್ ಗ್ರೇವ್ಸ್ 1920ರ ದಶಕದ ಆರಂಭಕಾಲದಲ್ಲಿ ಥಾಮಸ್ ಹಾರ್ಡಿಯವರೊಂದಿಗೆ ಡಾರ್ಸೆಟ್‌ನಲ್ಲಿ ಭೇಟಿಯಾದದ್ದನ್ನು ಸ್ಮರಿಸಿಕೊಂಡಿದ್ದರು. ಥಾಮಸ್ ಹಾರ್ಡಿ ಗ್ರೇವ್ಸ್ ಅವರನ್ನು ಮತ್ತು ಹೊಸದಾಗಿ ವಿವಾಹವಾಗಿದ್ದ ಅವರ ಪತ್ನಿಯನ್ನು ಆದರದಿಂದ ಬರಮಾಡಿಕೊಂಡು, ಅವರ ಕೃತಿ-ರಚನೆಯ ಬಗ್ಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.
1910ರಲ್ಲಿ ಧಾಮಸ್ ಹಾರ್ಡಿ ಆರ್ಡರ್ ಆಫ್ ಮೆರಿಟ್ ಪುರಸ್ಕೃತರಾದರು.
ಬಕ್ಹ್ಯಾಂಪ್ಟನ್‌ನಲ್ಲಿರುವ ಹಾರ್ಡಿಯವರ ಹಳ್ಳಿಮನೆ ಹಾಗೂ ಡಾರ್ಚೆಸ್ಟರ್‌ನಲ್ಲಿರುವ ಮ್ಯಾಕ್ಸ್ ಗೇಟ್ ನ್ಯಾಷನಲ್ ಟ್ರಸ್ಟ್ ಸ್ವಾಮ್ಯದಲ್ಲಿವೆ.
ಧಾರ್ಮಿಕ ನಂಬಿಕೆಗಳು
[ಬದಲಾಯಿಸಿ]ಥಾಮಸ್ ಹಾರ್ಡಿ ಕುಟುಂಬವು ಆಂಗ್ಲಿಕನ್ ಪಂಥಕ್ಕೆ ಸೇರಿದ್ದರೂ, ಧಾರ್ಮಿಕತೆಯನ್ನು ಅಷ್ಟಾಗಿ ಪಾಲಿಸುತ್ತಿರಲಿಲ್ಲ. ಐದು ವಾರಗಳ ಶಿಶುವಾಗಿದ್ದಾಗಲೇ ಥಾಮಸ್ ಹಾರ್ಡಿಯವರಿಗೆ ದೀಕ್ಷಾಸ್ನಾನ ಮಾಡಿಸಲಾಯಿತು. ಅವರು ಇಗರ್ಜಿಯಲ್ಲಿ ಪ್ರಾರ್ಥನಾಸಭೆಗಳಲ್ಲಿ ಹಾಜರಾಗುತ್ತಿದ್ದರು. ಅವರ ತಂದೆ ಮತ್ತು ಚಿಕ್ಕಪ್ಪ ಪ್ರಾರ್ಥನಾ ಸಂಗೀತವೃಂದದಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದರು. ಆದರೂ, ಅವರು ಸ್ಥಳೀಯ ಚರ್ಚ್ ಆಫ್ ಇಂಗ್ಲೆಂಡ್ ಶಾಲೆ ಸೇರುವ ಬದಲಿಗೆ, ಇನ್ನೂ ಮೂರು ಮೈಲು ದೂರವಿದ್ದ ಲಾಸ್ಟ್‌ರ ಶಾಲೆ ಸೇರಿದರು. ಯುವಕರಾಗಿ, ಅವರು ಪ್ಲಿಮೌತ್ ಬ್ರೆತ್ರೆನ್ ಸದಸ್ಯ ಹೆನ್ರಿ ಆರ್ ಬ್ಯಾಸ್ಟೊರೊಂದಿಗೆ ಸ್ನೇಹ ಬೆಳೆಸಿಕೊಂಡರು. ಇವರು ವಿದ್ಯಾರ್ಥಿ-ವಾಸ್ತುಶಿಲ್ಪಿಯಾಗಿದ್ದು, ಬ್ಯಾಪ್ಟಿಸ್ಟ್ ಇಗರ್ಜಿಯಲ್ಲಿ ವಯಸ್ಕರ ದೀಕ್ಷೆಗಾಗಿ ಸಿದ್ಧರಾಗುತ್ತಿದ್ದರು. ಹಾರ್ಡಿ ಮತಾಂತರಗೊಳ್ಳುವ ಕಲ್ಪನೆ ಹೊತ್ತಿದ್ದರು, ಆದರೆ ಅಂತಿಮವಾಗಿ ಬೇಡವೆಂದು ನಿರ್ಧರಿಸಿದರು.[೭] ಬಾಸ್ಟೊ ಆಸ್ಟ್ರೇಲಿಯಾಗೆ ತೆರಳಿ, ಥಾಮಸ್ ಹಾರ್ಡಿಯವರೊಂದಿಗೆ ದೀರ್ಘಕಾಲ ಪತ್ರಸಂವಹನ ನಡೆಸುತ್ತಿದ್ದರು. ಆದರೆ ಅಂತಿಮವಾಗಿ, ಥಾಮಸ್ ಹಾರ್ಡಿ ಇಂತಹ ಪತ್ರವ್ಯವಹಾರಗಳ ಬಗ್ಗೆ ಸುಸ್ತಾಗಿ, ಪತ್ರವ್ಯವಹಾರವು ನಿಂತುಹೋಯಿತು. ಈ ರೀತಿಯಲ್ಲಿ ಥಾಮಸ್ ಹಾರ್ಡಿ ಮತ್ತು ಬ್ಯಾಪ್ಟಿಸ್ಟರೊಂದಿನ ಕೊಂಡಿಗಳು ಕೊನೆಯಾದವು.
ಜೀವನದಲ್ಲಿ ವಿಧಿಯ ಬಗ್ಗೆ ಥಾಮಸ್ ಹಾರ್ಡಿಯವರ ಕಲ್ಪನೆಯು ದೇವರೊಂದಿಗಿನ ತಾತ್ತ್ವಿಕ ಹೋರಾಟಕ್ಕೆ ದಾರಿಯಾಯಿತು. ಥಾಮಸ್ ಹಾರ್ಡಿಯವರ ನಂಬಿಕೆ ಹಾಗೇ ಉಳಿದುಕೊಂಡರೂ, ಜೀವನದ ದುರ್ವಿಧಿ ಮತ್ತು ಹೋರಾಟಗಳಿಂದಾಗಿ, ದೇವರ ಬಗೆಗಿನ ಸಾಂಪ್ರದಾಯಿಕ ಕ್ರೈಸ್ತೀಯ ದೃಷ್ಟಿಯನ್ನು ಪ್ರಶ್ನಿಸುವಂತೆ ಮಾಡಿತು.
“ | The Christian god — the external personality — has been replaced by the intelligence of the First Cause…the replacement of the old concept of God as all-powerful by a new concept of universal consciousness. The 'tribal god, man-shaped, fiery-faced and tyrannous' is replaced by the 'unconscious will of the Universe' which progressively grows aware of itself and 'ultimately, it is to be hoped, sympathetic'.[೮] | ” |
ಥಾಮಸ್ ಹಾರ್ಡಿಯವರ ಧಾರ್ಮಿಕ ಜೀವನವು ಆಜ್ಞೇಯತಾವಾದ, ತಾರ್ಕಿಕ ದೈವವಾದ ಮತ್ತು ಆಧ್ಯಾತ್ಮವಾದಗಳ ಮಿಶ್ರಣವಾಗಿತ್ತು. ನೋವಿನ ಭಯಾನಕತೆಗಳನ್ನು, ಪ್ರೀತಿಸುವ ದೇವರ ಒಳ್ಳೆಯತನದೊಂದಿಗೆ ಹೊಂದಿಕೆ ಮಾಡುವ ವಿಚಾರದ ಬಗ್ಗೆ, ಪತ್ರದ ಮೂಲಕ ದೀಕ್ಷಿತಪಾದ್ರಿಯೊಬ್ಬರು ಒಮ್ಮೆ ಕೇಳಿದಾಗ, ಹಾರ್ಡಿ ಉತ್ತರಿಸಿದ್ದು ಹೀಗೆ:
“ | Mr. Hardy regrets that he is unable to offer any hypothesis which would reconcile the existence of such evils as Dr. Grosart describes with the idea of omnipotent goodness. Perhaps Dr. Grosart might be helped to a provisional view of the universe by the recently published Life of Darwin, and the works of Herbert Spencer, and other agnostics.[೯] | ” |
ಅದೇನೇ ಇರಲಿ, ಥಾಮಸ್ ಹಾರ್ಡಿ, ಬ್ರಹ್ಮಾಂಡವನ್ನು ನಿಯಂತ್ರಿಸುವ ಅತಿಮಾನುಷ ಶಕ್ತಿಗಳ ಬಗ್ಗೆ ಆಗಾಗ್ಗೆ ಕಲ್ಪಿಸಿಕೊಂಡು, ತಮ್ಮ ಯಾವುದೇ ದೃಢಸಂಕಲ್ಪಕ್ಕಿಂತ ಹೆಚ್ಚಾಗಿ ಔದಾಸೀನ್ಯ ಅಥವಾ ವಿಚಿತ್ರಕಲ್ಪನೆ ಮೂಲಕ ಬರೆಯುತ್ತಿದ್ದರು. ಜೊತೆಗೆ, ಥಾಮಸ್ ಹಾರ್ಡಿ ಭೂತಗಳು ಮತ್ತು ಆತ್ಮಗಳಿಂದ ಸ್ವಲ್ಪ ಪ್ರಮಾಣದಲ್ಲಿ ಮರುಳಾಗಿರುವುದನ್ನು ತಮ್ಮ ಬರವಣಿಗೆಯಲ್ಲಿ ತೋರ್ಪಡಿಸುತ್ತಿದ್ದರು.[೯] ಈ ಭಾವನೆಗಳ ನಡುವೆಯೂ, ವಿಶೇಷವಾಗಿ ಗ್ರಾಮಾಂತರ ಸಮುದಾಯಗಳಲ್ಲಿ ಕಾಣಿಸಿಕೊಂಡ ಕ್ರಿಶ್ಚಿಯನ್ ವಿಧಿಗಳು ಹಾಗೂ ಇಗರ್ಜಿ ಕರ್ಮಗಳ ಬಗ್ಗೆ ಥಾಮಸ್ ಹಾರ್ಡಿ ದೃಢ ಭಾವನಾತ್ಮಕ ನಂಟು ಹೊಂದಿದ್ದರು. ಇವು ತಮ್ಮ ಆರಂಭಿಕ ವರ್ಷಗಳಲ್ಲಿ ಬಹಳಷ್ಟು ಪ್ರಭಾವ ಬೀರುತ್ತಿದ್ದವು. ಥಾಮಸ್ ಹಾರ್ಡಿಯವರ ಹಲವು ಕಾದಂಬರಿಗಳುದ್ದಕ್ಕೂ ಹೆಣೆದುಕೊಂಡ ಬೈಬಲ್ ಉಲ್ಲೇಖಗಳು ಕಾಣಸಿಗಬಹುದು.
ಥಾಮಸ್ ಹಾರ್ಡಿ ಜಾನ್ ಹಿಕ್ಸ್ ಬಳಿ ಅಪ್ರೆಂಟಿಸ್ ಆಗಿದ್ದಾಗ, ಹಾರೇಸ್ ಮೌಲ್ (ಹೆನ್ರಿ ಮೌಲ್‌ರ ಎಂಟು ಮಂದಿ ಪುತ್ರರಲ್ಲಿ ಒಬ್ಬ) ಮತ್ತು ಕವಿ ವಿಲಿಯಮ್ ಬಾರ್ನ್ಸ್ ಸೇರಿದಂತೆ ಕೆಲವು ಸ್ನೇಹಿತರಿದ್ದರು. ಹೆನ್ರಿ ಮತ್ತು ವಿಲಿಯಮ್ ಇಬ್ಬರೂ ಧಾರ್ಮಿಕ ಮೇಲಧಿಕಾರಿಗಳಾಗಿದ್ದರು. ಥಾಮಸ್ ಹಾರ್ಡಿಯವರ ಜೀವನದುದ್ದಕ್ಕೂ ಹಾರೇಸ್ ಮೌಲ್ ಅವರ ಆಪ್ತ ಸ್ನೇಹಿತರಾದರು. ಬೈಬಲ್‌ನ ಲಿಖಿತ ವ್ಯಾಖ್ಯಾನಗಳ ಮೇಲೆ ಅನುಮಾನದ ಛಾಯೆ ತರಿಸಿದ[೧೦] ಜಿಡಿಯಾನ್ ಮ್ಯಾಂಟೆಲ್ ಮತ್ತಿತರೆ ವಿಜ್ಞಾನಿಗಳ ಹೊಸ ಪರಿಶೋಧನೆಗಳನ್ನು ಹಾರೇಸ್ ಥಾಮಸ್‌ರಿಗೆ ಪರಿಚಯಿಸಿದರು. 1848ರಲ್ಲಿ ಪ್ರಕಟಣೆಯಾದ ಮ್ಯಾಂಟೆಲ್‌ರ 'ದಿ ವಂಡರ್ಸ್ ಆಫ್ ಜಿಯಾಲಜಿ ' ಗ್ರಂಥದ ಪ್ರತಿಯನ್ನು ಹಾರೇಸ್ ಮೌಲ್ 1858ರಲ್ಲಿ ಹಾರ್ಡಿಯವರಿಗೆ ನೀಡಿದರು. ಎ ಪೇರ್ ಆಫ್ ಬ್ಲೂ ಐಯ್ಸ್ ನ ಅತಿರೋಮಾಂಚಕ ವಿಭಾಗ ಹಾಗೂ ಮ್ಯಾಂಟೆಲ್‌ರ ಭೂವೈಜ್ಞಾನಿಕ ವಿವರಣೆಗಳ ನಡುವೆ ಬಲವಾದ ಸಾಮ್ಯತೆಗಳಿವೆ ಎಂದು ಅಡೆಲೀನ್ ಬಕ್ಲೆಂಡ್ ಸೂಚಿಸಿದ್ದಾರೆ. ಎ ಪೇರ್ ಆಫ್ ಬ್ಲೂ ಐಯ್ಸ್ ನಲ್ಲಿ ಹೆನ್ರಿ ನೈಟ್‌ನ ಪಾತ್ರವು ಹಾರೇಸ್ ಮೌಲ್‌ರನ್ನು ಆಧರಿಸಿತ್ತು ಎಂದೂ ಹೇಳಲಾಗಿದೆ.[೧೧]
ಕಾದಂಬರಿಗಳು
[ಬದಲಾಯಿಸಿ]ಥಾಮಸ್ ಹಾರ್ಡಿಯವರ ಮೊದಲ ಕಾದಂಬರಿ ದಿ ಪೂರ್ ಮ್ಯಾನ್ ಅಂಡ್ ದಿ ಲೇಡಿ 1867ರಲ್ಲಿ ಸಿದ್ಧಗೊಂಡರೂ, ಪ್ರಕಾಶಕರಾರೂ ದೊರೆಯಲಿಲ್ಲ. ಥಾಮಸ್ ಹಾರ್ಡಿ ಈ ಗ್ರಂಥದ ಹಸ್ತಪ್ರತಿಯನ್ನು ನಾಶಗೊಳಿಸಿದರು. ಈ ಗ್ರಂಥದ ಕೆಲವೇ ಅಂಶಗಳು ಮಾತ್ರ ಉಳಿದುಕೊಂಡಿತು. ಪುನಃ ಪ್ರಯತ್ನಿಸುವಂತೆ ಹಾರ್ಡಿಯವರಿಗೆ ತಮ್ಮ ಮಾರ್ಗದರ್ಶಕ ಮತ್ತು ಸ್ನೇಹಿತ, ವಿಕ್ಟೋರಿಯನ್ ಕವಿ ಮತ್ತು ಕಾದಂಬರಿಕಾರ ಜಾರ್ಜ್ ಮೆರೆಡಿತ್ ಪ್ರೋತ್ಸಾಹ ನೀಡಿದರು. ಡೆಸ್ಪರೇಟ್ ರೆಮೆಡೀಸ್ (1871) ಮತ್ತು ಅಂಡರ್ ದಿ ಗ್ರೀನ್ವುಡ್ ಟ್ರೀ (1872) ಗ್ರಂಥಗಳನ್ನು ಅನಾಮಧೇಯವಾಗಿ ಪ್ರಕಟಿಸಲಾಯಿತು. ಥಾಮಸ್ ಹಾರ್ಡಿ ತಮ್ಮ ಮೊದಲ ಪತ್ನಿಯೊಂದಿಗೆ ಕಳೆದ ಪ್ರಣಯಕಾಲದ ಘಟನೆಗಳನ್ನು ಆಧರಿಸಿ ಬರೆದ 'ಎ ಪೇರ್ ಆಫ್ ಬ್ಲೂ ಅಯ್ಸ್ ' ಕಾದಂಬರಿಯು 1873ರಲ್ಲಿ ಅವರ ಹೆಸರಿನೊಂದಿಗೇ ಪ್ರಕಟಿಸಲಾಯಿತು. ಈ ಕಥೆಯ ಧಾರಾವಾಹಿರೂಪೀ ಆವೃತ್ತಿಯಲ್ಲಿ ಕ್ಲಿಫ್‌ಹ್ಯಾಂಗರ್ ಎಂಬ ಪದವು ಉಗಮಿಸಿತು ಎನ್ನಲಾಗಿದೆ. ಈ ಕಥೆಯನ್ನು ಟಿನ್‌ಸ್ಲೇಸ್ ಮ್ಯಾಗಝೀನ್ ನಲ್ಲಿ 1872ರ ಸೆಪ್ಟೆಂಬರ್‌ನಿಂದ 1873ರ ಜುಲೈ ತಿಂಗಳ ವರೆಗೆ ಪ್ರಕಟಿಸಲಾಯಿತು. ಇದರಲ್ಲಿ, ಪ್ರಮುಖ ಪಾತ್ರಗಳಲ್ಲೊಂದಾದ ಹೆನ್ರಿ ನೈಟ್ ಅಕ್ಷರಶಃ ಕಡಿಬಂಡೆಯ ತುದಿಯಿಂದ ನೇತಾಡುತ್ತಿರುವಂತೆ ಚಿತ್ರಿಸಲಾಗಿದೆ.
ತಮ್ಮ ಮುಂದಿನ ಕಾದಂಬರಿ 'ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್ 'ನಲ್ಲಿ (1874) ವೆಸೆಕ್ಸ್ ಎಂಬ ಸ್ಥಳವನ್ನು ಪರಿಚಯಿಸಿದ ಬಗ್ಗೆ ಥಾಮಸ್ ಹಾರ್ಡಿ ಹೇಳಿದರು. ಈ ಕಾದಂಬರಿಯು, ಥಾಮಸ್ ಹಾರ್ಡಿ ವಾಸ್ತುವಿನ್ಯಾಸಕರ ಕೆಲಸ ಬಿಟ್ಟು, ಸಾಹಿತ್ಯದಲ್ಲಿ ನೆಲೆ ಕಂಡುಕೊಳ್ಳುವಷ್ಟು ಯಶಸ್ವಿಯಾಯಿತು. ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಥಾಮಸ್ ಹಾರ್ಡಿ ಇನ್ನೂ ಹತ್ತು ಕಾದಂಬರಿಗಳನ್ನು ರಚಿಸಿದರು.
ಹಾರ್ಡಿ ಕುಟುಂಬವು ಲಂಡನ್‌ನಿಂದ ಇಯೊವಿಲ್‌ಗೆ ಹಾಗೂ ಅಲ್ಲಿಂದ ಸ್ಟರ್ಮಿಂಸ್ಟರ್ ನ್ಯುಟನ್‌ಗೆ ಸ್ಥಳಾಂತರಗೊಂಡರು. ಅಲ್ಲಿ ಅವರು 'ದಿ ರಿಟರ್ನ್ ಆಫ್ ದಿ ನೇಟಿವ್ ' (1878) ಬರೆದರು. 1885ರಲ್ಲಿ, ಕುಟುಂಬವು ಕೊನೆಯ ಬಾರಿಗೆ ಸ್ಥಳಾಂತರಗೊಂಡು, ಥಾಮಸ್ ಸ್ವತಃ ವಿನ್ಯಾಸಿಸಿ, ಅವರ ಸಹೋದರ ಡಾರ್ಚೆಸ್ಟರ್ ಆಚೆ ನಿರ್ಮಿಸಿದ ಮ್ಯಾಕ್ಸ್ ಗೇಟ್ ಎಂಬ ಮನೆಯಲ್ಲಿ ನೆಲೆಸಿತು. ಅಲ್ಲಿ ವಾಸವಿದ್ದಾಗ ಅವರು ದಿ ಮೇಯರ್ ಆಫ್ ಕ್ಯಾಸ್ಟರ್‌ಬ್ರಿಡ್ಜ್ (1886), ದಿ ವುಡ್ಲೆಂಡರ್ಸ್ (1887) ಹಾಗೂ ಟೆಸ್ ಆಫ್ ದಿ ಡಿ'ಅರ್ಬರ್ವಿಲ್ಸ್ (1891) ಎಂಬ ಮೂರು ಕಾದಂಬರಿಗಳನ್ನು ರಚಿಸಿದರು. ಕೊನೆಯ ಕಾದಂಬರಿಯಲ್ಲಿ ವಿವಾಹಕ್ಕೆ ಮುನ್ನ ಕನ್ಯತ್ವ ಕಳೆದುಕೊಂಡ ಮಹಿಳೆಯೊಬ್ಬಳನ್ನು ಅನುಕಂಪದ ದೃಷ್ಟಿಯಲ್ಲಿ ತೋರಿಸಿದ್ದು, ಆರಂಭಿಕ ಟೀಕೆಗೆ ಗುರಿಯಾಗಿ, ಪ್ರಕಟಣೆಯನ್ನೂ ನಿರಾಕರಿಸಲಾಯಿತು. ಇದರ ಉಪಶೀರ್ಷಿಕೆ ಎ ಪ್ಯೂರ್ ವಿಮನ್: ಫೇಯ್ತ್‌ಫುಲ್ಲಿ ಪ್ರೆಸೆಂಟೆಡ್ ವಿಕ್ಟೋರಿಯನ್ ಯುಗದ ಮಧ್ಯಮವರ್ಗದವರ ಹುಬ್ಬೇರಿಸಲೆಂದೇ ನೀಡಲಾಗಿತ್ತು.
1895ರಲ್ಲಿ ಪ್ರಕಟಣೆಯಾದ ಜೂಡ್ ದಿ ಆಬ್‌ಸ್ಕೂರ್ ಗೆ ವಿಕ್ಟೊರಿಯಾದ ಸಾರ್ವಜನಿಕರಿಂದ ಇನ್ನಷ್ಟು ಬಲವಾದ ನಕಾರಾತ್ಮಕ ಪ್ರತಿಕ್ರಿಯೆ ದೊರಕಿತು. ಈ ಕಾದಂಬರಿಯಲ್ಲಿ ಲೈಂಗಿಕತೆಯನ್ನು ಮುಚ್ಚುಮರೆಯಿಲ್ಲದೆ ನಿರೂಪಿಸಿದ್ದು ಇದಕ್ಕೆ ಕಾರಣ. ಇದನ್ನು ಕೆಲವೊಮ್ಮೆ ಜೂಡ್ ದಿ ಆಬ್ಸೀನ್ ಎಂದು ಜರಿಯಲಾಗುತ್ತಿತ್ತು. ಈ ಕಾದಂಬರಿಯಲ್ಲಿ ಎರೊಟೊಲೆಪ್ಸಿ ಎಂಬ ಕಲ್ಪನೆಯನ್ನು ಪರಿಚಯಿಸುವುದರ ಮೂಲಕ, ವಿವಾಹವೆಂಬ ಸಾಮಾಜಿಕ ಸಂಸ್ಥೆಯ ಮೇಲೆ ಪರೋಕ್ಷ ಹಲ್ಲೆ ನಡೆಸಿದಕ್ಕೆ ಬಹಳಷ್ಟು ಟೀಕೆ ಎದುರಿಸಿತು. ಈಗಾಗಲೇ ಥಾಮಸ್ ಹಾರ್ಡಿಯ ವೈವಾಹಿಕ ಜೀವನದ ಕಷ್ಟದ ಜತೆಗೆ ಮತ್ತಷ್ಟು ಒತ್ತಡವನ್ನು ಉಂಟುಮಾಡಿತು. ಏಕೆಂದರೆ ಜೂಡ್ ದಿ ಆಬ್‌ಸ್ಕೂರ್ ಕಾದಂಬರಿಯನ್ನು ಜನರು ಹಾರ್ಡಿಯವರ ಆತ್ಮಚರಿತ್ರೆಯಂತೆ ಓದುತ್ತಾರೆಂದು ಅವರ ಪತ್ನಿ ಎಮ್ಮಾ ತಳಮಳಗೊಂಡಿದ್ದರು. ಕೆಲವು ಪುಸ್ತಕ ಮಾರಾಟಗಾರರು ಈ ಕಾದಂಬರಿಯನ್ನು ಕಂದುಬಣ್ಣದ ಕಾಗದ ಚೀಲಗಳಲ್ಲಿ ಮಾರಿದರು. ವೇಕ್ಫೀಲ್ಡ್‌ನ ಬಿಷಪ್ ಈ ಪುಸ್ತಕವನ್ನು ಸುಟ್ಟರೆಂದು ವರದಿಯಾಗಿತ್ತು.[೬] 1912 ಕೃತಿಯ ಪಶ್ಚಲೇಖದಲ್ಲಿ ಈ ಘಟನೆಯನ್ನು ಹಾರ್ಡಿ ಹಾಸ್ಯಮಯವಾಗಿ ತೆಗೆದುಕೊಂಡು, ಈ ಪುಸ್ತಕದ ವೃತ್ತಿಜೀವನದ ಒಂದು ಭಾಗ ಎಂದು ಬಣ್ಣಿಸಿದರು. 'ಪತ್ರಿಕೆಗಳಿಂದ ಈ ರೀತಿಯ ನಕಾರಾತ್ಮಕ ಪ್ರತಿಕ್ರಿಯೆಗಳ ನಂತರ, ಇದರ ಮುಂದಿನ ದುರದೃಷ್ಟವೆಂದರೆ, ಬಿಷಪ್ ಒಬ್ಬರು ಈ ಕಾದಂಬರಿಯನ್ನು ಸುಡುವುದು - ಬಹುಶಃ ನನ್ನನ್ನು ಸುಡಲಾಗದೆ ಹತಾಶರಾಗಿ ಅದನ್ನು ಸುಟ್ಟರು' ಎಂದು ಹಾರ್ಡಿ ಹೇಳಿದರು.[೧೨]
ಈ ಟೀಕೆಗಳು ಕೇಳಿಬಂದರೂ ಸಹ, 1900ರ ದಶಕದ ಕಾಲಾವಧಿಯಲ್ಲಿ ಥಾಮಸ್ ಹಾರ್ಡಿ ಇಂಗ್ಲಿಷ್ ಸಾಹಿತ್ಯ ಕ್ಷೇತ್ರದಲ್ಲಿ ಆಗಲೇ ಒಬ್ಬ ಖ್ಯಾತನಾಮರಾಗಿದ್ದರು. ಇವರು ಅತಿಯಶಸ್ವೀ ಕಾದಂಬರಿಗಳನ್ನೂ ರಚಿಸಿದ್ದರು. ಆದರೆ, ತಮ್ಮ ಎರಡು ಅತಿ ಮಹತ್ತರ ಕೃತಿಗಳನ್ನು ಸಾರ್ವಜನಿಕರು ಟೀಕಿಸಿದ್ದರ ಬಗ್ಗೆ ಜುಗುಪ್ಸೆ ವ್ಯಕ್ತಪಡಿಸಿ, ಕಾದಂಬರಿಗಳನ್ನು ಬರೆಯುವುದನ್ನು ಸಂಪೂರ್ಣ ಕೈಬಿಟ್ಟರು. ಥಾಮಸ್ ಹಾರ್ಡಿ ರಚಿಸಿದ ಕಾದಂಬರಿಗಳಲ್ಲಿ ಟೂ ಆನ್ ಎ ಟವರ್ , ಖಗೋಳವಿಜ್ಞಾನ ಪ್ರಪಂಚದಲ್ಲಿ ಹೆಣೆಯಲಾದ ಪ್ರಣಯ ಕಥೆಯಾಗಿದೆ.
ಸಾಹಿತ್ಯದ ವಿಷಯಗಳು
[ಬದಲಾಯಿಸಿ]ಹತ್ತೊಂಬತ್ತನೆಯ ಶತಮಾನದಲ್ಲಿ ಜೀವಿಸುತ್ತಿದ್ದವರಿಗೆ ಅಡಚಣೆ ಉಂಟುಮಾಡಿದ ಕೆಲವು ಸಾಮಾಜಿಕ ನಿರ್ಬಂಧಗಳ ಬಗ್ಗೆ ಥಾಮಸ್ ಹಾರ್ಡಿ ವಿಮರ್ಶಾತ್ಮಕವಾಗಿ ಚರ್ಚಿಸಿದ್ದರು. ವಿಕ್ಟೊರಿಯನ್ ವಾಸ್ತವಿಕತಾವಾದಿ ಬರಹಗಾರ ಎನಿಸಿಕೊಂಡ ಥಾಮಸ್ ಹಾರ್ಡಿ, ವಿಕ್ಟೊರಿಯನ್ ಯುಗದ 'ಯಥಾಸ್ಥಿತಿ'ಯ ಅಂಗವಾಗಿದ್ದ ಸಾಮಾಜಿಕ ನಿರ್ಬಂಧಗಳನ್ನು ಪರಿಶೀಲಿಸಿ, ಈ ನಿಯಮಗಳು ಜನರ ಜೀವನದಲ್ಲಿ ಬಹಳಷ್ಟು ಅನನುಕೂಲವನ್ನೊಡ್ಡಿ, ಅಂತಿಮವಾಗಿ ಅತೃಪ್ತಿ ಉಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟರು. ತಮ್ಮ 'ಟೂ ಆನ್ ಎ ಟವರ್ ' ಕೃತಿಯಲ್ಲಿ, ಥಾಮಸ್ ಹಾರ್ಡಿ ಈ ನಿಯಮಾವಳಿಗಳ ವಿರುದ್ಧ ನಿಲುವು ತಾಳಿ, ಇಂತಹ ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ಕಥೆ ಹೆಣೆದು, ವರ್ಗಶ್ರೇಣಿಯ ಗಡಿಗಳನ್ನು ದಾಟುವ ಪ್ರೀತಿ-ಪ್ರೇಮದ ಕಥೆ ರಚಿಸಿದ್ದರು. ಓದುಗ ಪ್ರೀತಿಗಾಗಿ ಸಂಪ್ರದಾಯಗಳನ್ನು ಕೊಡವಿಕೊಳ್ಳುವುದನ್ನು ಪರಿಗಣಿಸುವಂತಾಯಿತು. ಹತ್ತೊಂಬತ್ತನೆಯ ಶತಮಾನದ ಸಮಾಜವು ಈ ಸಂಪ್ರದಾಯಗಳನ್ನು ಜಾರಿಗೊಳಿಸಿದ್ದು, ಸಾಮಾಜಿಕ ಒತ್ತಡವು ಈ ಅನುಸರಣೆಯನ್ನು ಖಾತರಿಮಾಡಿತು. 'ಟೂ ಆನ್ ಎ ಟವರ್' ಕೃತಿಯ ಪಾತ್ರ ಸ್ವಿತಿನ್ ಸೇಂಟ್ ಕ್ಲೀವ್‌ನ ಆದರ್ಶವಾದವು ಆತನನ್ನು ಸಮಕಾಲೀನ ಸಾಮಾಜಿಕ ಕಟ್ಟುಪಾಡುಗಳ ವಿರುದ್ಧ ನಿಲ್ಲಿಸುತ್ತಿತ್ತು. ಸಾಮಾಜಿಕ ನಿಯಮಗಳು ಮತ್ತು ಸಂಪ್ರದಾಯಗಳ ದಬ್ಬಾಳಿಕೆಯ ವಿರುದ್ಧ ಸೆಟೆದು ನಿಂತ ಸೇಂಟ್ ಕ್ಲೀವ್ ಸ್ವ-ಇಚ್ಛಾಶಕ್ತಿಯುಳ್ಳ ವ್ಯಕ್ತಿಯಾಗಿದ್ದನು.
“ | In a novel structured around contrasts, the main opposition is between Swithin St Cleeve and Lady Viviette Constantine, who are presented as binary figures in a series of ways: aristocratic and lower class, youthful and mature, single and married, fair and dark, religious and agnostic…she [Lady Viviette Constantine] is also deeply conventional, absurdly wishing to conceal their marriage until Swithin has achieved social status through his scientific work, which gives rise to uncontrolled ironies and tragic-comic misunderstandings (Harvey 108). | ” |
ಥಾಮಸ್ ಹಾರ್ಡಿಯವರ ಕಥೆಗಳು ಜೀವನದ ಘಟನೆಗಳು ಮತ್ತು ಅವುಗಳ ಪರಿಣಾಮಗಳನ್ನು ಪರಿಗಣಿಸುತ್ತವೆ. ಅವರ ಹಲವು ಕೃತಿಗಳಿಗೆ ವಿಷಯಾಧಾರಿತವಾಗಿ ವಿಧಿಯು ಗಮನಾರ್ಹ ಪಾತ್ರ ವಹಿಸುತ್ತದೆ. ಇದರಲ್ಲಿ ಪಾತ್ರಗಳು ಯಾವಾಗಲೂ ಕವಲುದಾರಿಯ ಪರಿಸ್ಥಿತಿ ಎದುರಿಸುತ್ತಿರುತ್ತವೆ. ಇದು ಒಂದು ಅವಕಾಶದ ಹಂತ ಮತ್ತು ಸಂಕ್ರಮಣದ ಸಂಕೇತ. ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್ ಕಾದಂಬರಿಯು, ಅಕಸ್ಮಾತಾಗಿ ರೂಪುಗೊಳ್ಳುವ ಜೀವಗಳ ಕಥೆಯನ್ನು ವಿವರಿಸುತ್ತದೆ. 'ಉದಾಹರಣೆಗೆ, ಒಂದು ವೇಳೆ, ಬಾತ್‌ಷಿಬಾ ವ್ಯಾಲೆಂಟೀನ್‌ನ್ನು ಕಳುಹಿಸದಿದ್ದಲ್ಲಿ, ಫ್ಯಾನಿ ತನ್ನ ವಿವಾಹವನ್ನು ತಪ್ಪಿಸದಿದ್ದಲ್ಲಿ, ಕಥೆಯು ಬಹಳಷ್ಟು ವಿಭಿನ್ನ ಪಥದಲ್ಲಿ ಸಾಗುತ್ತಿತ್ತು.'[೧೩] ಒಂದೊಮ್ಮೆ ಸಂದರ್ಭಗಳನ್ನು ಚಾಲನೆಗೊಳಿಸಿದಾಗ, ಅವು ಮುಕ್ತಾಯಕ್ಕೆ ತರುತ್ತವೆ. ಥಾಮಸ್ ಹಾರ್ಡಿಯವರು ಸೃಷ್ಟಿಸಿದ ಪಾತ್ರಗಳು ಸಹಿಸಲಾರದ ವಿಧಿಯ ಬಿಗಿ ಹಿಡಿತದಲ್ಲಿರುವಂತೆ ನಿರೂಪಿತವಾಗಿರುತ್ತವೆ.
ಕವಿತೆ
[ಬದಲಾಯಿಸಿ]- ಥಾಮಸ್ ಹಾರ್ಡಿಯವರು ರಚಿಸಿದ ಹಲವು ಕವಿತೆಗಳ ವಿಸ್ತೃತ ಪಠ್ಯ(ಆಂಗ್ಲ ಭಾಷೆ) ಓದಲು, 'ಬಾಹ್ಯ ಕೊಂಡಿಗಳು' ವಿಭಾಗ ನೋಡಿ.
ಥಾಮಸ್ ಹಾರ್ಡಿ ಮೂವತ್ತು ವರ್ಷಗಳಲ್ಲಿ ಬರೆದ ಕವಿತೆಗಳ ಮೊಟ್ಟಮೊದಲ ಸಂಕಲನ ವೆಸೆಕ್ಸ್ ಪೊಯಮ್ಸ್ ಶೀರ್ಷಿಕೆಯಡಿ 1898ರಲ್ಲಿ ಪ್ರಕಟಿಸಿದರು. ಕವಿತೆ ಬರೆಯುವುದು ತಮ್ಮ ಮೊಟ್ಟಮೊದಲ ಪ್ರೇಮ ಎಂದು ಥಾಮಸ್ ಹಾರ್ಡಿ ಹೇಳಿಕೊಂಡಿದ್ದರು. ತಮ್ಮ ಕಾದಂಬರಿ ಜೂಡ್ ದಿ ಆಬ್ಸ್ಕೂರ್ ಪ್ರಕಟಣೆಯ ಬಳಿಕ ಉಂಟಾದ ವ್ಯಾಪಕ ನಕಾರಾತ್ಮಕ ಟೀಕೆಯ ನಂತರ, ಥಾಮಸ್ ಹಾರ್ಡಿ ಕಾದಂಬರಿ ಬರೆಯುವುದನ್ನು ಕಾಯಂ ಕೈಬಿಟ್ಟು, ಕವಿತೆ ಬರೆಯುವುದರತ್ತ ತಮ್ಮ ಸಾಹಿತ್ಯ ಪ್ರಯತ್ನಗಳನ್ನು ಕೇಂದ್ರೀಕರಿಸಲು ನಿರ್ಧರಿಸಿದರು. ತಾವು ಕಾದಂಬರಿ ರಚನೆ ಸ್ಥಗಿತಗೊಳಿಸಿದ ನಂತರ, 1928ರಲ್ಲಿ ತಮ್ಮ ಸಾವು ಸಂಭವಿಸುವ ತನಕ, ಥಾಮಸ್ ಹಾರ್ಡಿ ಕವನ ಸಂಕಲನ ಪ್ರಕಟಣೆ ಮುಂದುವರೆಸಿದರು. 1897ರಲ್ಲಿ ದಿ ವೆಲ್ ಬಿಲವ್ಡ್ ಎಂಬ ತಮ್ಮ ಕೊನೆಯ ಕಾದಂಬರಿ ಪ್ರಕಟಿಸಿದರಾದರೂ, ಇದನ್ನು ಜೂಡ್ ದಿ ಆಬ್‌ಸ್ಕ್ಯೂರ್ ಗೆ ಮುಂಚೆ ಬರೆಯಲಾಗಿತ್ತು.
ತಮ್ಮ ಕಾದಂಬರಿಗಳಿಗೆ ಹೋಲಿಸಿದರೆ, ತಮ್ಮ ಆರಂಭಕಾಲಿಕ ಕವನಗಳು ಸಮಕಾಲೀನರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದಿದ್ದರೂ, ಥಾಮಸ್ ಹಾರ್ಡಿಯವರನ್ನು ಇಪ್ಪತ್ತನೆಯ ಶತಮಾನದ ಮಹಾನ್ ಕವಿಯೆಂದು ಪರಿಗಣಿಸಲಾಗಿದೆ. ಅವರ ಪದ್ಯಪಂಕ್ತಿಗಳು ಆನಂತರ ಕಾಲದ ಬರಹಗಾರರ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದವು. ಇವರಲ್ಲಿ ಫಿಲಿಪ್ ಲಾರ್ಕಿನ್ ಸಹ ಒಬ್ಬರು. ಇವರು 1973ರಲ್ಲಿ ಸಂಪಾದಿಸಿದ ಆಕ್ಸ್‌ಫರ್ಡ್ ಬುಕ್ ಆಫ್ ಟ್ವೆಂಟಿಯತ್ ಸೆಂಚುರಿ ಇಂಗ್ಲಿಷ್ ವರ್ಸ್ ನಲ್ಲಿ ಥಾಮಸ್ ಹಾರ್ಡಿಯವರ ಹಲವು ಕವನಗಳನ್ನು ಸೇರಿಸಿದರು.
ಹಾರ್ಡಿ ಕುರಿತ ಜೀವನಚರಿತ್ರೆಯಲ್ಲಿ ಕ್ಲೇರ್ ಟೊಮಲಿನ್ ತಮ್ಮ ಮೊದಲ ಪತ್ನಿ ಎಮ್ಮಾ ನಿಧನರಾದ ನಂತರ ಥಾಮಸ್ ಹಾರ್ಡಿ ನಿಜಕ್ಕೂ ಮಹಾನ್ ಇಂಗ್ಲಿಷ್ ಕವಿಗಳಾದರು ಎಂದು ವಾದಿಸಿದ್ದಾರೆ. ಮೊದಲಿಗೆ, ಹಾರ್ಡಿ ತಮ್ಮ ಪತ್ನಿಯ ನೆನಪಿನಲ್ಲಿ ಹಲವು ಶೋಕಗೀತೆಗಳನ್ನು ಬರೆದಿದ್ದು, ಇಂಗ್ಲಿಷ್ ಕವಿತೆಯಲ್ಲಿ, ಮೃತರ ಬಗ್ಗೆ ಅತಿ ಸುಲಲಿತ ಮತ್ತು ಅತಿ ವಿಚಿತ್ರವಾದ ಆಚರಣೆ' ಎಂದು ಟೊಮಲಿನ್ ತಿಳಿಸಿದ್ದಾರೆ.[೧೪]
ನ್ಯೂಟ್ರಲ್ ಟೋನ್ಸ್ ಮತ್ತು ಎ ಬ್ರೋಕನ್ ಅಪಾಯಿಂಟ್ಮೆಂಟ್ ಸೇರಿದಂತೆ ಹಲವು ಕವಿತೆಗಳು, ಹಾರ್ಡಿ ಕಾದಂಬರಿಗಳಲ್ಲಿನ ಪ್ರಮುಖ ವಿಷಯಗಳಾದ ಪ್ರೀತಿ-ಪ್ರೇಮ ಮತ್ತು ಜೀವನದಲ್ಲಿ ನಿರಾಶೆಯ ವಿಷಯಗಳನ್ನು ಚರ್ಚಿಸುತ್ತವೆ. ಜೊತೆಗೆ, ಮಾನವನ ಸಂಕಷ್ಟಕ್ಕೆ ಔದಾಸೀನ್ಯದ ವಿರುದ್ಧ ಮಾನವಕುಲದ ಸುದೀರ್ಘ ಹೋರಾಟವೂ ಸಹ ಈ ಕವಿತೆಗಳ ವಿಷಯವಾಗಿತ್ತು. ತಮ್ಮ ಕಾದಂಬರಿಗಳಲ್ಲಿ ಶೈಲಿಯುಕ್ತ ವಿನ್ಯಾಸಗಳನ್ನು ತಮ್ಮ ಕವಿತೆಗಳಲ್ಲಿಯೂ ಸಹ ಬಳಸಿ, ಥಾಮಸ್ ಹಾರ್ಡಿ, 'ಆಹ್ ಆರ್ ಯು ಡಿಗ್ಗಿಂಗ್ ಆನ್ ಮೈ ಗ್ರೇವ್' ಸೇರಿದಂತೆ, ವ್ಯಂಗ್ಯದ ಕವಿತೆಗಳನ್ನು ಬರೆದರು . ಇದರಲ್ಲಿ ವ್ಯಂಗ್ಯವನ್ನು ಓದುಗರಿಗೆ ತಲುಪಿಸಲೆಂದು ಕವಿತೆಯ ಕೊನೆಯ ಕೆಲವು ಸಾಲುಗಳು ಅಥವಾ ಕಟ್ಟಕಡೆಯ ಸಾಲಿನಲ್ಲಿ ಕವಿತೆಯ ಅಂತ್ಯಗಳನ್ನು ತಿರುಚಿದ್ದುಂಟು. 'ದಿ ಡಾರ್ಕ್ಲಿಂಗ್ ಥ್ರಷ್' ಮತ್ತು 'ಅನ್ ಆಗಸ್ಟ್ ಮಿಡ್ನೈಟ್'ನಂತಹ ಕೆಲವು ಕವಿತೆಗಳು, ಕವಿತೆ ರಚಿಸುವುದನ್ನು ಕುರಿತ ಕವಿತೆಗಳಾಗಿ ಕಾಣುತ್ತವೆ. ಏಕೆಂದರೆ, ಅವುಗಳಲ್ಲಿ ವಿವರಿಸಲಾದ ಪ್ರಕೃತಿಯು, ಕವಿತೆ ಬರೆಯಲು ಥಾಮಸ್ ಹಾರ್ಡಿಯವರಿಗೆ ಸ್ಫೂರ್ತಿ ನೀಡಿದವು. ಇವರ ರಚನೆಗಳು, ಮೂರು ಸಂಪುಟಗಳುಳ್ಳ ಮಹಾಕಾವ್ಯ ಪಾಠ್ಯ ನಾಟಕ ದಿ ಡೈನಾಸ್ಟ್ಸ್ ಇಂದ ಹಿಡಿದು, 'ಎ ಬ್ರೋಕನ್ ಅಪಾಯಿಂಟ್ಮೆಂಟ್'ನಂತಹ ಸಣ್ಣ ಕವಿತೆಗಳ ವರೆಗೆ ಹಬ್ಬಿವೆ. ವೆಸೆಕ್ಸ್ ಪೊಯಮ್ಸ್ ನಲ್ಲಿನ ವಿಶಿಷ್ಟವಾಗಿ ಪ್ರಬಲ ವಿಷಯವೆಂದರೆ, ಹತ್ತೊಂಬತ್ತನೆಯ ಶತಮಾನದಲ್ಲಿ ನೆಪೊಲಿಯನ್ ಯುದ್ಧಗಳು ಬೀರಿದ ಕರಾಳ ನೆರಳು. 'ದಿ ಸಾರ್ಜೆಂಟ್ಸ್ ಸಾಂಗ್' ಮತ್ತು 'ಲೇಪ್ಜಿಗ್' ಸೂಕ್ತ ಉದಾಹರಣೆಗಳಾಗಿವೆ.
ದಿ ಬ್ಲೈಂಡೆಡ್ ಬರ್ಡ್ (vinkenzetting ಕ್ರೀಡೆಯ ವಿರುದ್ಧದ ವಿಷಣ್ಣತೆ ಕುರಿತ ವಿವಾದಾತ್ಮಕ ಚರ್ಚೆ) ಮುಂತಾದ ಕವನಗಳು ಅವರ ಪ್ರಕೃತಿ ಪ್ರಪಂಚ ಕುರಿತ ಪ್ರೇಮ, ಪ್ರಾಣಿ ಹಿಂಸೆ ವಿರುದ್ಧ ದೃಢ ನಿಲುವು ಸೂಚಿಸುತ್ತದೆ. ಅವರ ಜೀವಚ್ಛೇದನ ವಿರೋಧಿ ನಿಲುವು ಹಾಗೂ ಆರ್‌ಎಸ್‌ಪಿಸಿಎ ಸದಸ್ಯತ್ವದ ಮೂಲಕ ಇದು ವ್ಯಕ್ತವಾಗುತ್ತಿತ್ತು.[೧೫]
ಗೆರಾಲ್ಡ್ ಫಿಂಜಿ, ಬೆಂಜಮಿನ್ ಬ್ರಿಟನ್ ಮತ್ತು ಗುಸ್ಟಾವ್ ಹೊಲ್ಸ್ಟ್ ಮುಂತಾದ ಹಲವು ಖ್ಯಾತ ಸಂಗೀತ ರಚನಕಾರರು ಥಾಮಸ್ ಹಾರ್ಡಿಯವರ ಕವಿತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಕಾದಂಬರಿಗಳಲ್ಲಿ ಸೂಚಿಸಲಾದ ಸ್ಥಳಗಳು
[ಬದಲಾಯಿಸಿ]ಈ ವಿಭಾಗದಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (February 2009) |
This section may stray from the topic of the article into the topic of another article, Thomas Hardy's Wessex. (August 2010) |
ಬರ್ಕ್ಷೈರ್ ಪ್ರದೇಶವನ್ನು ಉತ್ತರ ವೆಸೆಕ್ಸ್ ಎನ್ನಲಾಗಿದೆ. ಡೆವೊನ್ ಎಂಬುದು ವೆಸೆಕ್ಸ್ ತಗ್ಗುಪ್ರದೇಶ ವಾಗಿದೆ. ಡಾರ್ಸೆಟ್ ಎಂಬುದನ್ನು ದಕ್ಷಿಣ ವೆಸೆಕ್ಸ್ ಎಂದು ಹೆಸರಿಸಲಾಗಿದೆ. ಸಾಮರ್ಸೆಟ್ ಎಂಬುದು ಹೊರವಲಯ ಅಥವಾ ನೆದರ್ ವೆಸೆಕ್ಸ್ ಎನ್ನಲಾಗಿದೆ, ವಿಲ್ಟ್‌ಷೈರ್ ಎಂಬುದು ಮಧ್ಯ-ವೆಸೆಕ್ಸ್ ಎನ್ನಲಾಗಿದೆ,
ಬೀಯರ್ ರೆಗಿಸ್ ಎಂಬುದು ಕಿಂಗ್ಸ್ ಬೀಯರ್ ಆಫ್ ಟೆಸ್ ಎನ್ನಲಾಗಿದೆ, ಎ ಮೆಲಾಂಕೊಲಿ ಹುಸಾರ್ ಕೃತಿಯಲ್ಲಿ ಬಿನ್ಕಾಂಬ್ ಡೌನ್ಅಡ್ಡ ರಸ್ತೆಗಳು ಸೇನಾ ಮರಣದಂಡನಾ ಸನ್ನಿವೇಶದ ಸ್ಥಳವಾಗಿದೆ. ಇದು ಸತ್ಯ ಘಟನೆಯಾಗಿದ್ದು, ಜರ್ಮನ್ ಸೈನ್ಯದಳ ತೊರೆದವರನ್ನು 1801ರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಈ ಘಟನೆಯನ್ನು ಪ್ಯಾರಿಷ್ ದಾಖಲೆ ಪುಸ್ತಕದಲ್ಲಿ ಬರೆದುಕೊಳ್ಳಲಾಗಿದೆ. ಏಂಜೆಲ್ ಕ್ಲೇರ್ ಆಕೆಯನ್ನು ಒಯ್ದ ಸ್ಥಳವೇ ಬೈಂಡನ್ ಅಬ್ಬೆ ಬೊರ್ನ್ಮೌತ್ ಎಂಬುದು ಹ್ಯಾಂಡ್ ಆಫ್ ಇಥೆಲ್ಬರ್ಟಾ ಮತ್ತು ಟೆಸ್ ಆಫ್ ದಿ ಡಿಅರ್ಬರ್ವಿಲ್ಸ್ ಕಾದಂಬರಿಗಳಲ್ಲಿನ ಸ್ಯಾಂಡ್ಬೊರ್ನ್ ಆಗಿದೆ. ಬ್ರಿಡ್ಜ್‌ಪೋರ್ಟ್ ಎಂಬುದು ಪೋರ್ಟ್ ಬ್ರೆಡಿ ಎನ್ನಲಾಗಿದೆ, ಚಾರ್ಬೊರೊ ಹೌಸ್ ಮತ್ತು ಅದರ ವಿಲಕ್ಷಣ ಮಹಲಿನ ಗೋಪುರವು, ಟೂ ಆನ್ ಎ ಟವರ್ ಕಾದಂಬರಿಯಲ್ಲಿನ ವೆಲೆಂಡ್ ಹೌಸ್ ಗಾಗಿ ಮಾದರಿಯಾಗಿದೆ. ಕೊರ್ಫ್ ಕ್ಯಾಸ್ಲ್ ಎಂಬುದು ಹ್ಯಾಂಡ್ ಆಫ್ ಇಥಲ್ಬರ್ಟಾ ದ ಕಾರ್ವ್ಸ್ಗೇಟ್-ಕ್ಯಾಸ್ಲ್ ಎಂದಾಗಿದೆ. ಕ್ರ್ಯಾನ್ಬೊರ್ನ್ ಚೇಸ್ ಸ್ಥಳವು ಟೆಸ್‌ಳ ಪ್ರಲೋಭನದ ದಿ ಚೇಸ್ ಸನ್ನಿವೇಶದ ದೃಶ್ಯವಾಗಿದೆ. ಗಮನಿಸಿ — ಕ್ರ್ಯಾನ್ಬೊರ್ನ್ ಚೇಸ್‌ನಲ್ಲಿರುವ ಬೊವರ್ಚಾಕ್ ಪ್ರದೇಶವು, 1967ರಲ್ಲಿ ಬಿಡುಗಡೆಯಾದ ಜಾನ್ ಷ್ಲೆಸಿಂಜರ್ ಅವರ ಫಾರ್ ಫ್ರಂ ದಿ ಮ್ಯಾಡಿಂಗ್ ಕ್ರೌಡ್ ಚಲನಚಿತ್ರದಲ್ಲಿ ಮಹಾ ಅಗ್ನಿ ದುರಂತದ ಸ್ಥಳವಾಗಿತ್ತು. ಮಿಲ್ಬರ್ನ್ ಸೇಂಟ್ ಆಂಡ್ರ್ಯೂ ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್ ಚಲನಚಿತ್ರದಲ್ಲಿ "ಮಿಲಿಪಾಂಡ್ ಸೇಂಟ್ ಜೂಡ್ಸ್" ಆಗಿದೆ. ಚ್ಯಾರ್ಬೊರೊ ಹೌಸ್[೧೬] ಸ್ಟರ್ಮಿನ್ಸ್ಟರ್ ಮಾರ್ಷಲ್ ಮತ್ತು ಬೀರ್ ರೆಗಿಸ್ ನಡುವೆ ನೆಲೆಗೊಂಡಿದೆ. ಚ್ಯಾರ್ಬರೊ ಹೌಸ್ ಮತ್ತು ಇದರ ವಿಲಕ್ಷಣ ಮಹಲಿನ ಗೋಪುರವು ಥಾಮಸ್ ಹಾರ್ಡಿಯವರ ಕೃತಿ ಟೂ ಆನ್ ಎ ಟವರ್‌ನಲ್ಲಿ ವೆಲೆಂಡ್ ಹೌಸ್‌ನ ಮಾದರಿಯಾಗಿದೆ.[೧೬] ಮಿಲ್ಬೊರ್ನ್ ಸೇಂಟ್ ಆಂಡ್ರ್ಯೂನಲ್ಲಿರುವ ಲಿಟ್ಲ್ ಇಂಗ್ಲೆಂಡ್ ಕಾಟೇಜ್, ಸ್ವಿತಿನ್ ಸೇಂಟ್ ಕ್ಲೀವ್ಸ್ ಹೋಮ್‌ನ ಸ್ಥಳವಾಗಿದ್ದು, ಇಂದೂ ಸಹ ಅದೇ ಹೆಸರಿನಲ್ಲಿ ಉಲ್ಲೇಖಿಸಲಾಗಿದೆ. ಡಾರ್ಸೆಟ್‌ನಲ್ಲಿರುವ ಡಾರ್ಚೆಸ್ಟರ್, ಮೇಯರ್ ಆಫ್ ಕ್ಯಾಸ್ಟರ್ಬ್ರಿಡ್ಜ್ ನ ದೃಶ್ಯ ಕ್ಯಾಸ್ಟರ್ಬ್ರಿಡ್ಜ್ ಆಗಿದೆ. ಸಾಮರ್ಸೆಟ್‌ನಲ್ಲಿರುವ ಡನ್ಸ್ಟರ್ ಕ್ಯಾಸ್ಲ್, ಎ ಲಾವೊಡಿಸಿಯನ್ ನಲ್ಲಿ ಕ್ಯಾಸ್ಲ್ ಡಿ ಸ್ಟ್ಯಾನ್ಸಿ ಯಾಗಿದೆ. ಫೊರ್ಡಿಂಗ್ಟನ್ ಮೂರ್ ಡರ್ನೊವರ್ ಮೂರ್ ಮತ್ತು ಹೊಲಗದ್ದೆಗಳಾಗಿವೆ. ಬೀಯರ್ ರೆಗಿಸ್ ಸನಿಹ ಗ್ರೀನ್ಹಿಲ್ ಫೇರ್, ವುಡ್‌ಬ್ಯೂರಿ ಹಿಲ್ ಫೇರ್ ಆಗಿದೆ. ಲಲ್ವರ್ತ್ ಕೋವ್ ಲಲ್‌ಸ್ಟೆಡ್ ಕೋವ್ ಆಗಿದೆ. ಮಾರ್ನ್‌ಹಲ್ ಟೆಸ್ ಆಫ್ ದಿ ಡಿ'ಅರ್ಬರ್ವಿಲ್ಸ್ ಕೃತಿಯಲ್ಲಿ ಮಾರ್ಲಾಟ್ ಆಗಿದೆ. ಎವರ್ಷಾಟ್ ಸನಿಹ ಮೆಲ್ಬ್ಯೂರಿ ಹೌಸ್ ಎಂಬುದು ಎ ಗ್ರೂಪ್ ಆಫ್ ನೋಬಲ್ ಡೇಮ್ಸ್ ಕೃತಿಯಲ್ಲಿ ಗ್ರೇಟ್ ಹಿಂಟಾಕ್ ಕೋರ್ಟ್ ಆಗಿದೆ. ಮಿಂಟರ್ನ್ ಎಂಬುದು ಲಿಟ್ಲ್ ಹಿಂಟಾಕ್ ಆಗಿದೆ. ಒವರ್ಮಾಯಿನ್ ಎಂಬುದು ವೆಸಕ್ಸ್ ಟೇಲ್ಸ್ ನಲ್ಲಿ ನೆದರ್ ಮಾಯಿನ್ಟನ್ ಆಗಿದೆ.
ಪಿಡ್ಲ್‌ಹಿಂಟನ್ ಮತ್ತು ಪಿಡ್ಲ್ ಟ್ರೆಂಥೈಡ್ ಎಂಬುದು ಎ ಫ್ಯೂ ಕ್ರಸ್ಟೆಡ್ ಕ್ಯಾರೆಕ್ಟರ್ಸ್ ನಲ್ಲಿ ಲಾಂಗ್‌ಪಡ್ಲ್ . ಪಡ್ಲ್‌ಟನ್ ಹೀತ್, ಮೋರ್ಟನ್ ಹೀತ್, ಟಿಂಕಲ್ಟನ್ ಹೀತ್ ಮತ್ತು ಬೀಯರ್ ಹೀತ್ ಇವೆಲ್ಲವೂ ಎಗ್ಡನ್ ಹೀತ್ ಆಗಿವೆ. ಪೂಲ್ ಎಂಬುದು ಲೈಫ್ಸ್ ಲಿಟ್ಲ್ ಐರಾನೀಸ್ ನಲ್ಲಿ ಹ್ಯಾವೆನ್ಪೂಲ್ ಆಗಿದೆ. ದಿ ಪರ್ಸೂಟ್ ಆಫ್ ವೆಲ್-ಬಿಲವ್ಡ್ ಕೃತಿಯಲ್ಲಿ ಪೋರ್ಟ್ಲೆಂಡ್ ಸನ್ನಿವೇಶವಾಗಿದೆ. ಪಡ್ಲ್‌ಟೌನ್ ಎಂಬುದು ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್ ಕೃತಿಯಲ್ಲಿ ವೆದರ್ಬ್ಯೂರಿ ಆಗಿದೆ. ರಿವರ್ ಫ್ರೊಮ್ ಕಣಿವೆಯು ಟೆಸ್ ಕೃತಿಯಲ್ಲಿ ಟಲ್ಬೊತೆಸ್ ಡೇರಿ ಯ ದೃಶ್ಯವಾಗಿದೆ. ಸ್ಯಾಲಿಸ್ಬ್ಯೂರಿ ಆನ್ ದಿ ವೆಸ್ಟರ್ನ್ ಸರ್ಕ್ಯೂಟ್ , ಲೈಫ್ಸ್ ಲಿಟ್ಲ್ ಐರೊನಿಸ್ ಹಾಗೂ ಜೂಡ್ ದಿ ಆಬ್ಸ್ಕೂರ್ ಮುಂತಾದವುಗಳಲ್ಲಿ ಮೆಲ್ಚೆಸ್ಟರ್ ಆಗಿದೆ. ಷಾಫ್ಟ್ಸ್‌ಬ್ಯೂರಿಯು ಟೆಸ್ ಆಫ್ ದಿ ಡಿಅರ್ಬರ್ವಿಲ್ಸ್ ಮತ್ತು ಜೂಡ್ ದಿ ಆಬ್ಸ್ಕೂರ್ ನಲ್ಲಿ ಷಾಸ್ಟನ್ ಆಗಿದೆ. ಷರ್ಬೊರ್ನ್ ಎಂಬುದು ಷರ್ಟನ್-ಅಬ್ಬಾಸ್ ಆಗಿದೆ, ಷರ್ಬೊರ್ನ್ ಕ್ಯಾಸ್ಲ್, ಎ ಗ್ರೂಪ್ ಆಫ್ ನೋಬಲ್ ಡೇಮ್ಸ್ ಕೃತಿಯಲ್ಲಿ ಲೇಡಿ ಬ್ಯಾಕ್ಸ್ಬಿ ವಾಸಸ್ಥಳವಾಗಿದೆ. ಸ್ಟೋನ್ಹೆಂಜ್ ಟೆಸ್‌ಳ ಬಂಧನದ ದೃಶ್ಯವಾಗಿದೆ. ಸಟನ್ ಪಾಯಿಂಟ್ಸ್ ಎಂಬುದು ಒವರ್ಕೂಂಬ್ .ಆಗಿದೆ. ಸ್ವಾನೇಜ್ ಹ್ಯಾಂಡ್ ಆಫ್ ಇಥೆಲ್ಬರ್ಟಾ ದಲ್ಲಿ ನೊಲ್ಸೀ ಆಗಿದೆ. ಹಾರ್ಡಿಯವರ ಕಾದಂಬರಿಗಳು ಮತ್ತು ಕವಿತೆಗಳಲ್ಲಿ ಟಾಂಟನ್‌ನ್ನು ಟೋನ್ಬರೊ ಎನ್ನಲಾಗಿದೆ. ವಾಂಟೇಜ್ ಎಂಬುದು ಜೂಡ್ ದಿ ಆಬ್ಸ್ಕೂರ್‌ನಲ್ಲಿ ಆಲ್ಫ್ರೆಡ್‌ಸ್ಟನ್ ಆಗಿದೆ ಬರ್ಕ್ಷೈರ್‌ನ ಫಾಲೆ, ಜೂಡ್ ದಿ ಆಬ್ಸ್ಕೂರ್ ನ ಮೇರಿಗ್ರೀನ್ ಆಗಿದೆ. ವೇಹಿಲ್ ಎಂಬುದು ವೇಡನ್ ಪ್ರಯರ್ಸ್ , ವೇಮೌತ್ ಎಂಬುದು ಬಡ್ಮೌತ್ ರೇಗಿಸ್ , ಟ್ರಂಪೆಟ್ ಮೇಜರ್ ಹಾಗೂ ಇತರೆ ಕಾದಂಬರಿಗಳ ಬಹಳಷ್ಟು ಅಂಶಗಳಲ್ಲಿ ಪ್ರಮುಖ ದೃಶ್ಯವಾಗಿದೆ. ವಿಂಚೆಸ್ಟರ್ ಎಂಬುದು ವಿಂಟನ್ಚೆಸ್ಟರ್ ಆಗಿದೆ, ಇಲ್ಲಿ ಟೆಸ್‌ಳನ್ನು ನೇಣಿಗೇರಿಸಲಾಯಿತು. ವಿಂಬೊರ್ನ್ ಎಂಬುದು ಟೂ ಆನ್ ಎ ಟವರ್ ನಲ್ಲಿ ವಾರ್ಬೊರ್ನ್ ಆಗಿದೆ. ಡಾರ್ಚೆಸ್ಟರ್ ಬಳಿ ವುಲ್ಫ್‌ಟನ್ ಹೌಸ್ ಎಂಬುದು ಎ ಗ್ರೂಪ್ ಆಫ್ ನೋಬಲ್ ಡೇಮ್ಸ್ ನ ಲೇಡಿ ಪೆನೆಲೊಪ್ ಳ ದೃಶ್ಯವಾಗಿದೆ. ವುಲ್ ಸ್ಟೇಷನ್ ಬಳಿಯಿರುವ ವುಲ್ಬ್ರಿಡ್ಜ್ ಓಲ್ದ್ ಮ್ಯಾನರ್ ಹೌಸ್ ಟೆಸ್‌ನ ತಪ್ಪೊಪ್ಪಿಗೆ ಮತ್ತು ಮಧುಚಂದ್ರದ ದೃಶ್ಯವಾಗಿದೆ.
ಪ್ರಭಾವ
[ಬದಲಾಯಿಸಿ]ಡಿ. ಎಚ್. ಲಾರೆನ್ಸ್‌ರ ಸ್ಟಡಿ ಆಫ್ ಥಾಮಸ್ ಹಾರ್ಡಿ (1936) ಕೃತಿಗೆ ಹಾರ್ಡಿ ಉತ್ತೇಜಕವಾಗಿದ್ದಾರೆ. ಪ್ರಮಾಣಿತ ಸಾಹಿತ್ಯ ಅಧ್ಯಯನಕ್ಕಿಂತಲೂ ಹೆಚ್ಚಾಗಿ ಲಾರೆನ್ಸ್‌ರ ಸ್ವಯಂ ಅಭಿವೃದ್ಧಿಯ ತತ್ತ್ವಕ್ಕೆ ಈ ಕೃತಿಯು ವೇದಿಕೆಯಾದರೂ, ಪಾತ್ರದ ನಿರೂಪಣೆಯಲ್ಲಿ ಹಾರ್ಡಿಯ ಪ್ರಭಾವ ಹಾಗೂ ಹಾರ್ಡಿಯವರ ಅನೇಕ ಕೃತಿಗಳ ಹಿಂದಿನ ಕೇಂದ್ರೀಯ ತಾತ್ತ್ವಿಕ ಸಿದ್ಧಾಂತಕ್ಕೆ ಲಾರೆನ್ಸ್‌ರ ಸ್ವಯಂ ಪ್ರತಿಕ್ರಿಯೆಯು, ದಿ ರೇನ್ಬೊ (1915, ಅಪ್ರಕಟಿತ) ಹಾಗೂ ವಿಮೆನ್ ಇನ್ ಲವ್ (1920, ಖಾಸಗಿಯಾಗಿ ಪ್ರಕಟಿತ) ಕೃತಿಗಳ ಅಭಿವೃದ್ಧಿಗೆ ಗಮನಾರ್ಹವಾಗಿ ಸಹಾಯವಾಯಿತು. ವಿಲಿಯಮ್ ಸಮರ್ಸೆಟ್ ಮಾಮ್‌ರ ಕಾದಂಬರಿ ಕೇಕ್ಸ್ ಅಂಡ್ ಆಲ್ ನಲ್ಲಿ ಕಾದಂಬರಿಕಾರ ಎಡ್ವರ್ಡ್ ಡ್ರಿಫೀಲ್ಡ್‌ನ ಪಾತ್ರಕ್ಕೆ ಥಾಮಸ್ ಹಾರ್ಡಿ ಸ್ಪಷ್ಟವಾಗಿ ಪ್ರಾರಂಭಬಿಂದುವಾಗಿತ್ತು. ಥಾಮಸ್ ಹಾರ್ಡಿಯವರ ಕೃತಿಗಳು ಕ್ರಿಸ್ಟೋಫರ್ ಡ್ಯೂರಂಗ್‌ರ ದಿ ಮ್ಯಾರಿಯೇಜ್ ಆಫ್ ಬೆಟ್ ಅಂಡ್ ಬೂ ಕಥಾನಿರೂಪಣೆಯಲ್ಲಿ ಪ್ರಮುಖವಾಗಿ ಗೋಚರಿಸುತ್ತದೆ. ಇದರಲ್ಲಿ ಟೆಸ್ ಅಫ್ ದಿ ಡಿಅರ್ಬರ್ವಿಲ್ಸ್ ಕೃತಿಯ ವಿಶ್ಲೇಷಣೆಯ ಪದವಿ ಪ್ರೌಢ ಪ್ರಬಂಧವು ಮ್ಯಾಟ್ ಕುಟುಂಬದ ನರರೋಗದ ವಿಶ್ಲೇಷಣೆಯೊಂದಿಗೆ ವೈವಿಧ್ಯಗೊಂಡಿದೆ.
ಕೃತಿಗಳು
[ಬದಲಾಯಿಸಿ]ಗದ್ಯ
[ಬದಲಾಯಿಸಿ]ಥಾಮಸ್ ಹಾರ್ಡಿ ತಮ್ಮ ಕಾದಂಬರಿಗಳನ್ನು ವಿಭಜಿಸಿ, ಕಿರುಕಥೆಗಳನ್ನು ಮೂರು ವರ್ಗಗಳಲ್ಲಿ ವಿಂಗಡಿಸಿದರು:
ಪಾತ್ರ ಮತ್ತು ಪರಿಸರ ಕುರಿತ ಕಾದಂಬರಿಗಳು
- ದಿ ಪೂವರ್ ಮ್ಯಾನ್ ಅಂಡ್ ದಿ ಲೇಡಿ (1867, ಪ್ರಕಟಣೆಯಾಗಲಿಲ್ಲ, ಕಳೆದುಹೋಯಿತು)
- ಅಂಡರ್ ದಿ ಗ್ರೀನ್ವುಡ್ ಟ್ರೀ (1872)
- ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್ (1874)
- ದಿ ರಿಟರ್ನ್ ಆಫ್ ದಿ ನೇಟಿವ್ (1878)
- ದಿ ಮೇಯರ್ ಆಫ್ ಕ್ಯಾಸ್ಟರ್‌ಬ್ರಿಡ್ಜ್ (1886)
- ದಿ ವುಡ್‌ಲ್ಯಾಂಡರ್ಸ್ (1887)
- ವೆಸೆಕ್ಸ್ ಟೇಲ್ಸ್ (1888, ಕಿರುಕಥೆಗಳ ಸಂಕಲನ)
- ಟೆಸ್ ಆಫ್ ದಿ ಡಿಅರ್ಬರ್ವಿಲ್ಸ್ (1891)
- ಲೈಫ್ಸ್ ಲಿಟ್ಲ್ ಐರನೀಸ್ (1894, ಕಿರುಕಥೆಗಳ ಸಂಕಲನ)
- ಜೂಡ್ ದಿ ಆಬ್ಸ್ಕೂರ್ (1895)
ರಮ್ಯಸಾಹಿತ್ಯ ಹಾಗೂ ಕಲ್ಪನಾಪ್ರಧಾನ ಕಾದಂಬರಿಗಳು
- ಎ ಪೇರ್ ಆಫ್ ಬ್ಲೂ ಐಯ್ಸ್ (1873)
- ದಿ ಟ್ರಂಪೆಟ್-ಮೇಜರ್ (1880)
- ಟೂ ಆನ್ ಎ ಟವರ್ (1882)
- ಎ ಗ್ರೂಪ್ ಆಫ್ ನೊಬಲ್ ಡೇಮ್ಸ್ (1891, ಕಿರುಕಥೆಗಳ ಸಂಕಲನ)
- ದಿ ವೆಲ್-ಬಿಲವ್ಡ್ (1897) (ಮೊದಲ ಬಾರಿಗೆ 1892ರಿಂದ ಧಾರಾವಾಹಿ ರೂಪದಲ್ಲಿ ಪ್ರಕಟಿತ)
ಮುಚ್ಚುಮರೆಯಿಲ್ಲದ ಕಾದಂಬರಿಗಳು
- ಡೆಸ್ಪರೇಟ್ ರೆಮೆಡೀಸ್ (1871)
- ದಿ ಹ್ಯಾಂಡ್ ಆಫ್ ಇಥೆಲ್ಬರ್ಟಾ (1876)
- ಎ ಲಾವೊಡಿಸಿಯನ್ (1881)
ಥಾಮಸ್ ಹಾರ್ಡಿ ಇನ್ನೂ ಹಲವು ಸಣ್ಣಕಥೆಗಳು ಹಾಗೂ 1894ರಲ್ಲಿ ದಿ ಸ್ಪೆಕ್ಟರ್ ಆಫ್ ದಿ ರಿಯಲ್ ಎಂಬ ಸಹಯೋಗದ ಕಾದಂಬರಿ ರಚಿಸಿದರು. 1913ರಲ್ಲಿ ಪ್ರಕಟಿತವಾದ ಎ ಚೇಂಜ್ಡ್ ಮ್ಯಾನ್ ಅಂಡ್ ಅದರ್ ಟೇಲ್ಸ್ ಎಂಬುದು, ಮೇಲೆ ತಿಳಿಸಲಾದ ಕಥೆಗಳಲ್ಲದೆ ರಚನೆಯಾದ ಕಿರುಕಥೆಗಳ ಇನ್ನೊಂದು ಸಂಕಲನ. ಇವರ ಕೃತಿಗಳೆಲ್ಲವೂ 24 ಸಂಪುಟಗಳ ವೆಸೆಕ್ಸ್ ಆವೃತ್ತಿಯಲ್ಲಿ (1912-13) ಹಾಗೂ 37 ಸಂಪುಟಗಳ ಮೆಲ್ಸ್ಟಾಕ್ ಆವೃತ್ತಿಯಲ್ಲಿ (1919-20) ಸಂಕಲನ ಮಾಡಲಾಗಿದೆ. ಮುಖ್ಯವಾಗಿ ತಾವೇ ಬರೆದ ಆತ್ಮ ಚರಿತ್ರೆಯು ತಮ್ಮ ಎರಡನೆಯ ಪತ್ನಿಯ ಹೆಸರಿನಡಿ, ಎರಡು ಸಂಪುಟಗಳಲ್ಲಿ ಪ್ರಕಟಣೆಯಾದವು. 1928-30 ಅವಧಿಯಲ್ಲಿ ದಿ ಅರ್ಲಿ ಲೈಫ್ ಆಫ್ ಥಾಮಸ್ ಹಾರ್ಡಿ, 1840-91 ಹಾಗೂ ದಿ ಲೇಟರ್ ಇಯರ್ಸ್ ಆಫ್ ಥಾಮಸ್ ಹಾರ್ಡಿ (1892-1928) ಪ್ರಕಟಣೆಯಾದವು. ಆನಂತರ, ಇವೆರಡೂ ಸಂಪುಟಗಳನ್ನು ಒಟ್ಟಿಗೆ ಸೇರಿಸಿ, ಮೈಕಲ್ ಮಿಲ್ಗೇಟ್ ಸಂಪಾದಿಸಿದ ದಿ ಲೈಫ್ ಅಂಡ್ ವರ್ಕ್ ಆಫ್ ಥಾಮಸ್ ಹಾರ್ಡಿ 1984ರಲ್ಲಿ ಪ್ರಕಟವಾಯಿತು.
ಸಣ್ಣಕಥೆ ಸಂಗ್ರಹಗಳು
ಲೈಫ್ಸ್ ಲಿಟ್ಲ್ ಐರನೀಸ್
ಕಿರುಕಥೆಗಳು (ಮೊದಲ ಪ್ರಕಟಣೆಯ ದಿನಾಂಕದೊಂದಿಗೆ)
|
|
ಕವನ ಸಂಗ್ರಹಗಳು
[ಬದಲಾಯಿಸಿ]- ದಿ ಫೊಟೊಗ್ರಾಫ್ (1890)
- ವೆಸೆಕ್ಸ್ ಪೊಯಮ್ಸ್ ಅಂಡ್ ಅದರ್ ವರ್ಸೆಸ್ (1898)
- ಪೊಯಮ್ಸ್ ಆಫ್ ದಿ ಪಾಸ್ಟ್ ಅಂಡ್ ಪ್ರೆಸೆಂಟ್ (1901)
- ದಿ ಮ್ಯಾನ್ ಹಿ ಕಿಲ್ಡ್ (1902)
- ಟೈಮ್ಸ್ ಲಾಫಿಂಗ್‌ಸ್ಟಾಕ್ಸ್ ಅಂಡ್ ಅದರ್ ವರ್ಸಸ್ (1909)
- ದಿ ವಾಯ್ಸ್ (1912)
- ಸ್ಯಾಟೈರ್ಸ್ ಆಫ್ ಸರ್ಕಮ್‌ಸ್ಟನ್ಸ್ (1914)
- ಮೊಮೆಂಟ್ಸ್ ಆಫ್ ವಿಷನ್ (1917)
- ಕಲೆಕ್ಟೆಡ್ ಪೊಯಮ್ಸ್ (1919)
- ಲೇಟ್ ಲಿರಿಕ್ಸ್ ಅಂಡ್ ಅರ್ಲಿಯರ್ ವಿತ್ ಮೆನಿ ಅದರ್ ವರ್ಸಸ್ (1923)
- ಹ್ಯೂಮನ್ ಷೋಸ್, ಫಾರ್ ಫ್ಯಾಂಟಸೀಸ್, ಸಾಂಗ್ಸ್ ಅಂಡ್ ಟ್ರೈಫಲ್ಸ್ (1925)
- ವಿಂಟರ್ ವರ್ಡ್ಸ್ ಇನ್ ವೇರಿಯಸ್ ಮೂಡ್ಸ್ ಅಂಡ್ ಮೀಟರ್ಸ್ (1928)
- ದಿ ಕಂಪ್ಲೀಟ್ ಪೊಯಮ್ಸ್ (ಮೆಕ್ಮಿಲನ್, 1976)
- ಸೆಲೆಕ್ಟೆಡ್ ಪೊಯಮ್ಸ್ (ಹ್ಯಾರಿ ಥಾಮಸ್, ಪೆಂಗ್ವಿನ್ ಪ್ರಕಾಶನ, 1993)
- ಹಾರ್ಡಿ: ಪೊಯಮ್ಸ್ (ಎವರಿಮ್ಯಾನ್ಸ್ ಲೈಬ್ರೆರಿ ಪಾಕೆಟ್ ಪೊಯಟ್ಸ್, 1995)
- ಥಾಮಸ್ ಹಾರ್ಡಿ: ಸೆಲೆಕ್ಟೆಡ್ ಪೊಯೆಟ್ರಿ ಅಂಡ್ ನಾನ್‌ಫಿಕ್ಷನಲ್ ಪ್ರೋಸ್ (ಸೇಂಟ್ ಮಾರ್ಟಿನ್ಸ್ ಪ್ರೆಸ್, 1996)
- ಸೆಲೆಕ್ಟೆಡ್ ಪೊಯಮ್ಸ್ (ಸಂಪಾದಕರು: ರಾಬರ್ಟ್ ಮೆಝೆ, ಪೆಂಗ್ವಿನ್, 1998)
- ಥಾಮಸ್ ಹಾರ್ಡಿ: ದಿ ಕಂಪ್ಲೀಟ್ ಪೊಯಮ್ಸ್: ದಿ ಕಂಪ್ಲೀಟ್ ಪೊಯಮ್ಸ್ (ಸಂಪಾದಕರು: ಜೇಮ್ಸ್ ಜಿಬ್ಸನ್, ಪಾಲ್ಗ್ರೇವ್, 2001)
ನಾಟಕಗಳು
[ಬದಲಾಯಿಸಿ]- ದಿ ಡೈನಾಸ್ಟ್ಸ್' (ಕವನಸಾಲು ನಾಟಕ)
- ದಿ ಡೈನಾಸ್ಟ್ಸ್, ಭಾಗ 1 (1904)
- ದಿ ಡೈನಾಸ್ಟ್ಸ್, ಭಾಗ 2 (1906)
- ದಿ ಡೈನಾಸ್ಟ್ಸ್, ಭಾಗ 3 (1908)
- ದಿ ಫೇಮಸ್ ಟ್ರಾಜಡಿ ಆಫ್ ದಿ ಕ್ವೀನ್ ಆಫ್ ಕಾರ್ನ್ವಾಲ್ ಅಟ್ ಟಿಂಟಜೆಲ್ ಇನ್ ಲಯೊನೆಸ್ (1923) (ಒಂದೇ ಸನ್ನಿವೇಶದ ನಾಟಕ)
ಟಿಪ್ಪಣಿಗಳು
[ಬದಲಾಯಿಸಿ]- ↑ ಕ್ಲೇರ್ ಟೊರ್ಮಲಿನ್, ಥಾಮಸ್ ಹಾರ್ಡಿ: ದಿ ಟೈಮ್-ಟಾರ್ನ್ ಮ್ಯಾನ್ (ಪೆಂಗ್ವಿನ್, 2007) ಪಿಪಿ.30,36.
- ↑ ಜಿಬ್ಸನ್, ಜೇಮ್ಸ್ (ಸಂಪಾದಕರು) (1975) ಚೊಸೆನ್ ಪೊಯೆಮ್ಸ್ ಆಫ್ ಥಾಮಸ್ ಹಾರ್ಡಿ, ಲಂಡನ್: ಮೆಕ್ಮಿಲನ್ ಎಜುಕೇಷನ್; ಪಿ.9.
- ↑ ಹಾರ್ಡಿ, ಎಮ್ಮಾ (1961) ಎಮ್ಮಾ ಹಾರ್ಡಿ ಸ್ಮರಣೆಗಳು, ಜೊತೆಗೆ ಥಾಮಸ್ ಹಾರ್ಡಿಯವರ ಕೆಲವು ಪದ್ಯಗಳು; ಸಂಪಾದಕಿ ಇವ್ಲಿನ್ ಹಾರ್ಡಿ ಮತ್ತು ಆರ್ ಗಿಟಿಂಗ್ಸ್. ಲಂಡನ್: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್
- ↑ "ಥಾಮಸ್ ಹಾರ್ಡಿ — ದಿ ಟೈಮ್ ಟಾರ್ನ್ ಮ್ಯಾನ್" (ಇದೇ ಶೀರ್ಷಿಕೆಯ ಕ್ಲೇರ್ ಟೊರ್ಮಲಿನ್‌ಪುಸ್ತಕದ ಪಠಣ), ಬಿಬಿಸಿ ರೇಡಿಯೊ 4, 23 ಅಕ್ಟೊಬರ್ 2006
- ↑ "ಥಾಮಸ್ ಹಾರ್ಡಿ ಅಟ್ ಸ್ಟೂರ್ಹೆಡ್" ಬಿಬಿಸಿ ಆನ್ಲೈನ್ , 10 ಮಾರ್ಚ್ 2004 (7 ಸೆಪ್ಟೆಂಬರ್ 2009ರಂದು ಮರುಪಡೆಯಲಾಯಿತು)
- ↑ ೬.೦ ೬.೧ "ಹೋಮ್‌ಗ್ರೌಂಡ್: ಡೆಡ್ ಮ್ಯಾನ್ ಟಾಕಿಂಗ್" ಬಿಬಿಸಿ ಆನ್ಲೈನ್ , 20 ಆಗಸ್ಟ್ 2003 (7 ಸೆಪ್ಟೆಂಬರ್ 2009ರಂದು ಮರುಪಡೆಯಲಾಯಿತು.)
- ↑ ಕ್ಲೇರ್ ಟೊಮಲಿನ್, ಥಾಮಸ್ ಹಾರ್ಡಿ, ದಿ ಟೈಮ್‌ಟಾರ್ನ್ ಮ್ಯಾನ್ (ಪೆಂಗ್ವಿನ್, 2007), ಪಿಪಿ.46–47.
- ↑ Wotton, George. Thomas Hardy: Towards A Materialist Criticism. Lanham,: Rowan & Littlefield, 1985, p.36.
- ↑ ೯.೦ ೯.೧ Ellman, Richard & O'Clair, Robert (eds.) 1988. "Thomas Hardy" in The Norton Anthology of Modern Poetry, Norton, New York.
- ↑ "ಬಯೊಗ್ರಫಿ: ಥಾಮಸ್ ಹಾರ್ಡಿ" Archived 22 June 2013[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಡಬ್ಲ್ಯೂಪಿಎಸ್. Ablongman.com , (7 ಸೆಪ್ಟೆಂಬರ್ 2009ರಂದು ಮರುಪಡೆಯಲಾಯಿತು)
- ↑ "ಅಡಿಲೀನ್ ಬಕ್ಲೆಂಡ್: ಥಾಮಸ್ ಹಾರ್ಡಿ, ಪ್ರಾವಿಂಷಿಯಲ್ ಜಿಯಾಲಜಿ ಅಂಡ್ ದಿ ಮೆಟೀರಿಯಲ್ ಇಮ್ಯಾಜಿನೇಷನ್". Archived from the original on 1 ಏಪ್ರಿಲ್ 2011. Retrieved 14 ಮಾರ್ಚ್ 2011.
- ↑ Hardy, Thomas (1998). Jude the Obscure. Penguin Classics. p. 466. ISBN 0140435387.
{{cite book}}
: Cite has empty unknown parameter:|coauthors=
(help) - ↑ "ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್, ಥಾಮಸ್ ಹಾರ್ಡಿ — ಇಂಟ್ರೊಡಕ್ಷನ್" Archived 15 January 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. (ಟ್ವೆಂಟಿಯತ್ ಸೆಂಚುರಿ ಲಿಟರರಿ ಕ್ರಿಟಿಸಿಸಮ್. ಸಂಪಾದಕಿ: ಲಿಂಡಾ ಪಾವ್ಲವ್ಸ್ಕಿ ಸಂಪುಟ 153. ಗೇಲ್ ಗ್ರೂಪ್ ಇನ್ಕ್, 2005. eNotes.com. 2006. 12 ಮಾರ್ಚ್ 2008) eNotes.com (7 ಸೆಪ್ಟೆಂಬರ್ 2009ರಂದು ಪುನಃ ಪಡೆಯಲಾಯಿತು)
- ↑ ಟೊಮಲಿನ್, ಕ್ಲೇರ್. ಥಾಮಸ್ ಹಾರ್ಡಿ ನ್ಯೂಯಾರ್ಕ್: ಪೆಂಗ್ವಿನ್, 2007.
- ↑ Herbert N. Schneidau. Waking Giants: The Presence of the Past in Modernism. Retrieved 16 ಏಪ್ರಿಲ್ 2008. (ಗೂಗಲ್ ಬುಕ್ಸ್)
- ↑ ೧೬.೦ ೧೬.೧ http://en.wikipedia.org/wiki/Charborough_House
ಉಲ್ಲೇಖಗಳು
[ಬದಲಾಯಿಸಿ]- ಆರ್ಮ್‌ಸ್ಟ್ರಾಂಗ್, ಟಿಮ್. "ಪ್ಲೇಯರ್ ಪಿಯನೊ: ಪೊಯೆಟ್ರಿ ಅಂಡ್ ಸೊನಿಕ್ ಮಾಡರ್ನಿಟಿ" Modernism/Modernity Archived 14 June 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. 14.1 (ಜನವರಿ 2007), 1–19.
- ಬ್ಲಂಡೆನ್, ಎಡ್ಮಂಡ್ ಥಾಮಸ್ ಹಾರ್ಡಿ ನ್ಯೂಯಾರ್ಕ್: ಸೇಂಟ್ ಮಾರ್ಟಿನ್ಸ್, 1991.
- ಬ್ರೆನೆಕ್, ಜೂನಿಯರ್, ಅರ್ನೆಸ್ಟ್. ದಿ ಲೈಫ್ ಆಫ್ ಥಾಮಸ್ ಹಾರ್ಡಿ. ನ್ಯೂಯಾರ್ಕ್: ಗ್ರೀನ್ಬರ್ಗ್, 1925.
- ಡಿ'ಅಗ್ನಿಲೊ, "ಮ್ಯೂಸಿಕ್ ಅಂಡ್ ಮೆಟಫೊರ್ ಇನ್ ಅಂಡರ್ ದಿ ಗ್ರೀನ್ವುಡ್ ಟ್ರೀ , ಇನ್ ದಿ ಥಾಮಸ್ ಹಾರ್ಡಿ ಜರ್ನಲ್ , 9, 2 (May 1993), ಪಿಪಿ.39–50.
- ಡಿ'ಅಗ್ನಿಲೊ, ರೆಂಜೊ, "ಬಿಟ್ವೀನ್ ಬಿಲೀಫ್ ಅಂಡ್ ನಾನ್-ಬಿಲೀಫ್: ಥಾಮಸ್ ಹಾರ್ಡಿಸ್ 'ದಿ ಷಾಡೊ ಆನ್ ದಿ ಸ್ಟೋನ್'" ಇನ್ ಥಾಮಸ್ ಹಾರ್ಡಿ, ಫ್ರಾಂಸೆಸ್ಕೊ ಮರೊನಿ ಮತ್ತು ನಾರ್ಮನ್ ಪೇಜ್ (ಸಂಪಾದಕರು), ಪೆಸ್ಕಾರಾ, ಎಡಿಝಿಯೊನಿ ಟ್ರಾಸ್, 1995, ಪಿಪಿ. 197-222.
- ಡೀಕನ್, ಲೊಯಿಸ್ ಮತ್ತು ಟೆರಿ ಕೊಲ್ಮನ್. ಪ್ರಾವಿಡೆನ್ಸ್ ಅಂಡ್ ಮಿಸ್ಟರ್ ಹಾರ್ಡಿ. ಲಂಡನ್: ಹಚಿನ್ಸನ್, 1966.
- ಡ್ರೇಪರ್, ಜೊ. ಥಾಮಸ್ ಹಾರ್ಡಿ: ಎ ಲೈಫ್ ಇನ್ ಪಿಕ್ಟರ್ಸ್. ವಿಂಬೊರ್ನ್, ಡಾರ್ಸೆಟ್: ದಿ ಡವ್ಕೋಟ್ ಪ್ರೆಸ್.
- ಎಲ್ಮನ್, ರಿಚರ್ಡ್ & ಒಕ್ಲೇರ್, ರಾಬರ್ಟ್ (ಸಂಪಾದಕರು) 1988. "ಧಾಮಸ್ ಹಾರ್ಡಿ" ಇನ್ ದಿ ನಾರ್ಟನ್ ಅಂಥೊಲಜಿ ಆಫ್ ಮಾಡರ್ನ್ ಫೊಯಟ್ರಿ , ನಾರ್ಟನ್, ನ್ಯೂಯಾರ್ಕ್.
- ಗ್ಯಾಟ್ರೆಲ್, ಸೈಮನ್. ಹಾರ್ಡಿ ದಿ ಕ್ರಿಯೇಟರ್: ಎ ಟೆಕ್ಸ್‌ಟುಯಲ್ ಬಯೊಗ್ರಫಿ. ಆಕ್ಸ್‌ಫರ್ಡ್: ಕ್ಲಾರೆಂಡನ್, 1988.
- ಜಿಬ್ಸನ್, ಜೇಮ್ಸ್. ಥಾಮಸ್ ಹಾರ್ಡಿ: ಎ ಲಿಟರರಿ ಲೈಫ್. ಲಂಡನ್: ಮೆಕ್ಮಿಲನ್: 1996.
- ಗಿಟಿಂಗ್ಸ್, ರಾಬರ್ಟ್ಸ್. ಥಾಮಸ್ ಹಾರ್ಡಿಸ್ ಲೇಟರ್ ಇಯರ್ಸ್. ಬಾಸ್ಟನ್: ಲಿಟ್ಲ್, ಬ್ರೌನ್, 1978.
- ಗಿಟಿಂಗ್ಸ್, ರಾಬರ್ಟ್. ಯಂಗ್ ಥಾಮಸ್ ಹಾರ್ಡಿ. ಬೋಸ್ಟನ್: ಲಿಟ್ಲ್, ಬ್ರೌನ್, 1975.
- ಗಿಟಿಂಗ್ಸ್, ರಾಬರ್ಟ್ ಮತ್ತು ಜೋ ಮ್ಯಾನ್ಟನ್: ದಿ ಸೆಕೆಂಡ್ ಮಿಸಸ್ ಹಾರ್ಡಿ ಲಂಡನ್: ಹೇನ್ಮನ್, 1979.
- ಗಾಸಿನ್, ಪಿ. ಥಮಸ್ ಹಾರ್ಡಿಸ್ ನಾವೆಲ್ ಯುನಿವರ್ಸ್: ಆಸ್ಟ್ರೊನೊಮಿ, ಕಾಸ್ಮೊಲಜಿ ಅಂಡ್ ಜೆಂಡರ್‌ಇನ್ ದಿ ಪೊಸ್ಟ್-ಡಾರ್ವಿನಿಯನ್ ವರ್ಲ್ಡ್ . ಆಲ್ಡರ್ಷಾಟ್, ಆಷ್ಗೇಟ್, 2007 (ದಿ ನೈನ್ಟೀನ್ತ್ ಸೆಂಚುರಿ ಸೀರೀಸ್)
- ಹ್ಯಾಲಿಡೇ, ಎಫ್. ಇ. ಥಾಮಸ್ ಹಾರ್ಡಿ: ಹಿಸ್ ಲೈಫ್ ಅಂಡ್ ವರ್ಕ್. ಬಾತ್: ಆಡಮ್ಸ್ & ಡಾರ್ಟ್, 1972.
- ಹ್ಯಾಂಡ್ಸ್, ಟಿಮೊತಿ. ಥಾಮಸ್ ಹಾರ್ಡಿ: ಡಿಸ್ಟ್ರಾಕ್ಟೆಡ್ ಪ್ರೀಚರ್?: ಹಾರ್ಡಿಸ್ ರಿಲಿಜಿಯಸ್ ಬಯೊಗ್ರಫಿ ಅಂಡ್ ಇಟ್ಸ್ ಇನ್ಫ್ಲುಯೆನ್ಸ್ ಆನ್ ಹಿಸ್ ನಾವೆಲ್ಸ್. ನ್ಯೂಯಾರ್ಕ್: ಸೇಂಟ್ ಮಾರ್ಟಿನ್ಸ್ ಪ್ರೆಸ್, 1996.
- ಹಾರ್ಡಿ, ಇವ್ಲಿನ್. ಥಾಮಸ್ ಹಾರ್ಡಿ: ಎ ಕ್ರಿಟಿಕಲ್ ಬಯೊಗ್ರಫಿ. ಲಂಡನ್: ಹಾಗರ್ಥ್ ಪ್ರೆಸ್, 1954.
- ಹಾರ್ಡಿ, ಫ್ಲಾರೆನ್ಸ್ ಎಮಿಲಿ. ದಿ ಅರ್ಲಿ ಲೈಫ್ ಆಫ್ ಥಾಮಸ್ ಹಾರ್ಡಿ, 1840-1891. ಲಂಡನ್: ಮೆಕ್ಮಿಲನ್, 1928.
- ಹಾರ್ಡಿ, ಫ್ಲೊರೆನ್ಸ್ ಎಮಿಲಿ. ದಿ ಲೇಟರ್ ಇಯರ್ಸ್ ಆಫ್ ಥಾಮಸ್ ಹಾರ್ಡಿ, 1892–1928 ಲಂಡನ್: ಮೆಕ್ಮಿಲನ್, 1930.
- ಹಾರ್ವೆ, ಜಿಯೊಫ್ರಿ. ಥಾಮಸ್ ಹಾರ್ಡಿ: ದಿ ಕಂಪ್ಲೀಟ್ ಕ್ರಿಟಿಕಲ್ ಗೈಡ್ ಟು ಥಾಮಸ್ ಹಾರ್ಡಿ. ನ್ಯೂಯಾರ್ಕ್: ರೂಟ್ಲೆಜ್ (ಟೇಲರ್ & ಫ್ರಾನ್ಸಿಸ್ ಗ್ರೂಪ್), 2003.
- ಹೆಡ್ಜ್‌ಕಾಕ್, ಎಫ್. ಎ., ಥಾಮಸ್ ಹಾರ್ಡಿ: ಪೆನ್ಸುಯರ್ ಎಟ್ ಆರ್ಟಿಸ್ಟ್. ಪ್ಯಾರಿಸ್: ಲೈಬ್ರರಿ ಹ್ಯಾಚೆಟ್, 1911.
- ಹಾಲೆಂಡ್, ಕ್ಲೈವ್. ಥಾಮಸ್ ಹಾರ್ಡಿ ಒ ಎಮ್.: ದಿ ಮ್ಯಾನ್, ಹಿಸ್ ವರ್ಕ್ಸ್ ಅಂಡ್ ದಿ ಲ್ಯಾಂಡ್ ಆಫ್ ವೆಸೆಕ್ಸ್. ಲಂಡನ್: ಹರ್ಬರ್ಟ್, ಜೆನ್ಕಿನ್ಸ್, 1933.
- ಜೆಡ್ಜೆಜೀವ್‌ಸ್ಕಿ, ಜಾನ್. ಥಾಮಸ್ ಹಾರ್ಡಿ ಅಂಡ್ ದಿ ಚರ್ಚ್. ಲಂಡನ್: ಮೆಕ್ಮಿಲನ್, 1996.
- ಜಾನ್ಸನ್, ಲಯನೆಲ್ ಪಿಗೊಟ್. ದಿ ಆರ್ಟ್ ಆಫ್ ಥಾಮಸ್ ಹಾರ್ಡಿ (ಲಂಡನ್: ಇ. ಮ್ಯಾಥ್ಯೂಸ್, 1894).
- ಕೇ-ರಾಬಿನ್ಸನ್, ಡೆನಿಸ್. ದಿ ಫಸ್ಟ್ ಮಿಸೆಸ್ ಥಾಮಸ್ ಹಾರ್ಡಿ. ಲಂಡನ್: ಮೆಕ್ಮಿಲನ್, 1979.
- ಲ್ಯಾಂಗ್ಬಾಮ್, ರಾಬರ್ಟ್. "ಥಾಮಸ್ ಹಾರ್ಡಿ ಇನ್ ಆವರ್ ಟೈಮ್." ನ್ಯೂಯಾರ್ಕ್: ಸೇಂಟ್ ಮಾರ್ಟಿನ್ಸ್ ಪ್ರೆಸ್, 1995, ಲಂಡನ್: ಮೆಕ್ಮಿಲನ್, 1997.
- ಮರೊನಿ, ಫ್ರಾನ್ಸೆಸ್ಕೊ, "ದಿ ನೆಗೇಷನ್ ಆಫ್ ಇರೊಸ್ ಇನ್ ಬಾರ್ಬರಾ ಆಫ್ ದಿ ಹೌಸ್ ಆಫ್ ಗ್ರೀಬ್’", ಇನ್ "ಥಾಮಸ್ ಹಾರ್ಡಿ ಜರ್ನಲ್", 10, 1 (ಫೆಬ್ರುವರಿ 1994) ಪಿಪಿ. 33–41
- ಮರೊನಿ, ಫ್ರಾನ್ಸೆಸ್ಕೊ ಮತ್ತು ನಾರ್ಮನ್ ಪೇಜ್ (ಸಂಪಾದಕರು), ಥಾಮಸ್ ಹಾರ್ಡಿ . ಪೆಸ್ಕರಾ ಎಜಿಟಿಯಾನಿ ಟ್ರೇಸ್, 1995.
- ಮರೊನಿ, ಫ್ರಾನ್ಸೆಸ್ಕೊ, ಲಾ ಪೊಯೆಸಿಯ ಡಿ ಥಾಮಸ್ ಹಾರ್ಡಿ . ಬರಿ: ಅಡ್ರಿಯಾಟಿಕಾ ಎಡಿಟ್ರಿಸ್, 1997.
- ಮರೊನಿ, ಫ್ರಾನ್ಸೆಸ್ಕೊ, "ದಿ ಪೊಯೆಟ್ರಿ ಆಫ್ ಆರ್ನಿಥಾಲಜಿ ಇನ್ ಕೀಟ್ಸ್, ಲಿಯೊಪಾರ್ಡಿ ಅಂಡ್ ಹಾರ್ಡಿ: ಎ ಡಯಲಾಗಿಕ್ ಅನಲಿಸಿಸ್", ಇನ್ "ಥಾಮಸ್ ಹಾರ್ಡಿ ಜರ್ನಲ್", 14, 2 (ಮೇ 1998) ಪಿಪಿ. 35–44
- ಮಿಲ್ಗೇಟ್, ಮೈಕಲ್ (ಸಂಪಾದಕರು). ದಿ ಲೈಫ್ ಅಂಡ್ ವರ್ಕ್ ಆಫ್ ಥಾಮಸ್ ಹಾರ್ಡಿ ಬೈ ಥಾಮಸ್ ಹಾರ್ಡಿ. ಲಂಡನ್: ಮೆಕ್ಮಿಲನ್, 1984.
- ಮಿಲ್ಗೇಟ್, ಮೈಕಲ್. ಥಾಮಸ್ ಹಾರ್ಡಿ: ಎ ಬಯೊಗ್ರಫಿ. ನ್ಯೂಯಾರ್ಕ್: ರಾಂಡಮ್ ಹೌಸ್ , 1994.
- ಮಿಲ್ಗೇಟ್, ಮೈಕಲ್. ಥಾಮಸ್ ಹಾರ್ಡಿ: ಎ ಬಯೊಗ್ರಫಿ ರಿವಿಸಿಟೆಡ್. ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, 2004.
- ಮಸೆಲ್ವೈಟ್, ಡೇವಿಡ್. ಸೋಷಿಯಲ್ ಟ್ರಾಂಸ್ಫರ್ಮೇಷನ್ಸ್ ಇನ್ ಹಾರ್ಡಿಸ್ ಟ್ರಾಜಿಕ್ ನಾವೆಲ್ಸ್: ಮೆಗಾಮೆಷಿನ್ಸ್ ಅಂಡ್ ಫಾಂಟಸ್‌ಮ್ಸ್ ಲಂಡನ್: ಪಾಲ್ಗ್ರೇವ್ ಮೆಕ್ಮಿಲನ್, 2003.
- ಒ'ಸಲಿವನ್, ಟಿಮೊತಿ. ಥಾಮಸ್ ಹಾರ್ಡಿ: ಎನ್ ಇಲ್ಲುಸ್ಟ್ರೇಟೆಡ್ ಬಯೊಗ್ರಫಿ. ಲಂಡನ್: ಮೆಕ್ಮಿಲನ್, 1975.
- ಒರೆಲ್, ಹರೊಲ್ಡ್. ದಿ ಫೈನಲ್ ಇಯರ್ಸ್ ಆಫ್ ಥಾಮಸ್ ಹಾರ್ಡಿ, 1912–1928. ಲಾರೆನ್ಸ್: ಯುನಿವರ್ಸಿಟಿ ಫ್ರೆಸ್ ಆಫ್ ಕನ್ಸಸ್, 1976.
- ಒರೆಲ್, ಹರೊಲ್ಡ್. ದಿ ಅನ್ನೋನ್ ಥಾಮಸ್ ಹಾರ್ಡಿ. ನ್ಯೂಯಾರ್ಕ್: ಸೇಂಟ್ ಮಾರ್ಟಿನ್ಸ್, 1987.
- ಫೆಲ್ಪ್ಸ್, ಕೆನೆತ್. ದಿ ವರ್ಮ್‌ವುಡ್ ಕಪ್: ಥಾಮಸ್ ಹಾರ್ಡಿ ಇನ್ ಕಾರ್ನ್ವಾಲ್. ಪ್ಯಾಡ್ಸ್ಟೊ: ಲೋಡ್ನೆಕ್ ಪ್ರೆಸ್, 1975.
- ಪಿನಿಯನ್, ಎಫ್. ಬಿ. ಥಾಮಸ್ ಹಾರ್ಡಿ: ಹಿಸ್ ಲೈಫ್ ಅಂಡ್ ಫ್ರೆಂಡ್ಸ್. ಲಂಡನ್: ಪಾಲ್ಗ್ರೇವ್, 1992.
- ಪೈಟ್, ರಾಲ್ಫ್. ಥಾಮಸ್ ಹಾರ್ಡಿ: ದಿ ಗಾರ್ಡೆಡ್ ಲೈಫ್. ಲಂಡನ್: ಪಿಕೆಡಾರ್, 2006.
- ಸಕ್ಸೆಲ್ಬಿ, ಎಫ್. ಔಟ್ವಿನ್. ಎ ಥಾಮಸ್ ಹಾರ್ಡಿ ಡಿಕ್ಷನರಿ : ದಿ ಕ್ಯಾರೆಕ್ಟರ್ಸ್ ಅಂಡ್ ಸೀನ್ಸ್ ಆಫ್ ದಿ ನಾವೆಲ್ಸ್ ಅಂಡ್ ಪೊಯಮ್ಸ್ ಅಲ್ಫಾಬೆಟಿಕಲ್ಲಿ ಅರೇಂಜ್ಡ್ ಅಂಡ್ ಡಿಸ್ಕ್ರೈಬ್ಡ್ (ಲಂಡನ್: ಜಿ. ರೂಟ್ಲೆಜ್, 1911).
- ಸೇಮೊರ್-ಸ್ಮಿತ್, ಮಾರ್ಟಿನ್. ಹಾರ್ಡಿ. ಲಂಡನ್: ಬ್ಲೂಮ್ಸ್‌ಬ್ಯೂರಿ, 1994.
- ಸ್ಟೀವೆನ್ಸ್-ಕಾಕ್ಸ್, ಜೆ. ಥಾಮಸ್ ಹಾರ್ಡಿ: ಮೆಟಿರಿಯಲ್ಸ್ ಫಾರ್ ಎ ಸ್ಟಡಿ ಆಫ್ ಹಿಸ್ ಲೈಫ್, ಟೈಮ್ಸ್ ಅಂಡ್ ವರ್ಕ್ಸ್. ಸೇಂಟ್ ಪೀಟರ್ ಪೋರ್ಟ್, ಗೆರ್ನ್ಸೆ: ಟೂಕನ್ ಪ್ರೆಸ್, 1968.
- ಸ್ಟೀವೆನ್ಸ್-ಕಾಕ್ಸ್, ಜೆ. ಥಾಮಸ್ ಹಾರ್ಡಿ: ಮೋರ್ ಮೆಟಿರಿಯಲ್ಸ್ ಫಾರ್ ಎ ಸ್ಟಡಿ ಆಫ್ ಹಿಸ್ ಲೈಫ್, ಟೈಮ್ಸ್ ಅಂಡ್ ವರ್ಕ್ಸ್. ಸೇಂಟ್ ಪೀಟರ್ ಪೋರ್ಟ್, ಗೆರ್ನ್ಸೆ: ಟೂಕನ್ ಪ್ರೆಸ್, 1971.
- ಸ್ಟೀವರ್ಟ್, ಜಿಐಎಮ್ ಥಾಮಸ್ ಹಾರ್ಡಿ: ಎ ಕ್ರಿಟಿಕಲ್ ಬಯೊಗ್ರಫಿ. ನ್ಯೂಯಾರ್ಕ್: ಡಾಡ್, ಮೀಡ್ ಅಂಡ್ ಕಂಪೆನಿ, 1971.
- ಟರ್ನರ್, ಪಾಲ್. ದಿ ಲೈಫ್ ಆಫ್ ಥಾಮಸ್ ಹಾರ್ಡಿ: ಎ ಕ್ರಿಟಿಕಲ್ ಬಯೊಗ್ರಫಿ. ಆಕ್ಸ್‌ಫರ್ಡ್: ಬ್ಲ್ಯಾಕ್ವೆಲ್, 1998.
- ವೆಬರ್, ಕಾರ್ಲ್ ಜೆ. ಹಾರ್ಡಿ ಆಫ್ ವೆಸೆಕ್ಸ್, ಹಿಸ್ ಲೈಫ್ ಅಂಡ್ ಲಿಟರರಿ ಕೆರಿಯರ್. ನ್ಯೂಯಾರ್ಕ್: ಕೊಲಂಬಿಯಾ ವಿಶ್ವವಿದ್ಯಾನಿಲಯ ಮುದ್ರಣಾಲಯ, 1940
- ವಿಲ್ಸನ್, ಕೀತ್. ಥಾಮಸ್ ಹಾರ್ಡಿ ಆನ್ ಸ್ಟೇಜ್. ಲಂಡನ್: ಮೆಕ್ಮಿಲನ್, 1995.
- ವಿಲ್ಸನ್, ಕೀತ್, ಸಂಪಾದಕರು ಥಾಮಸ್ ಹಾರ್ಡಿ ರಿಅಪ್ರೈಸ್ಡ್: ಎಸ್ಸೇಸ್ ಇನ್ ಆನರ್ ಆಫ್ ಮೈಕಲ್ ಮಿಲ್ಗೇಟ್. ಟೊರೊಂಟೊ: ಯುನಿವರ್ಸಿಟಿ ಆಫ್ ಟೊರೊಂಟೊ ಪ್ರೆಸ್, 2006.
- ವೊಟ್ಟೊನ್, ಜಾರ್ಜ್. ಥಾಮಸ್ ಹಾರ್ಡಿ: ಟುವರ್ಡ್ಸ್ ಎ ಮೆಟಿರಿಯಲಿಸ್ಟ್ ಕ್ರಿಟಿಸಿಸಮ್. ಲ್ಯಾನ್ಹ್ಯಾಮ್: ರೊವಾನ್ ಅಂಡ್ ಲಿಟ್ಲ್‌ಫೀಲ್ಡ್, 1985.
- ಹಾರ್ಡಿಯವರಿಂದ ಬರ್ಟ್ರಾಮ್ ವಿಂಡ್ಲ್‌ರಿಗೆ ಪತ್ರ, ಇದನ್ನು ಸಿಎಲ್, ಸಂಪುಟ 2, ಪಿಪಿ.131–133 ಇಂದ ದಾಖಲಿಸಿದವರು ಬಿರ್ಗಿಟ್ ಪ್ಲೀಟ್ಜ್ Archived 8 February 2021[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಟಿಟಿಎಚ್‌ಎ ಅಂತರಜಾಲತಾಣದ ನಕ್ಷಾ ವಿಭಾಗದಲ್ಲಿ ಈ ಪತ್ರವಿದೆ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Works by or about ಥಾಮಸ್ ಹಾರ್ಡಿ in libraries (WorldCat catalog)
- Works by Thomas Hardy at Project Gutenberg
- ಥಾಮಸ್ ಹಾರ್ಡಿಯವರ ಕೃತಿಗಳು[೧] - ಅಂತರಜಾಲ ಆರ್ಕೈವ್ನಲ್ಲಿ
- ಥಾಮಸ್ ಹಾರ್ಡಿಯವರ ಕೃತಿಗಳು ಧ್ವನಿಪಥದಲ್ಲಿ ಲೈಬ್ರಿವಾಕ್ಸ್ನಲ್ಲಿ
- ಥಾಮಸ್ ಹಾರ್ಡಿಯವರ ಕವನಗಳು Archived 10 July 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. - ಪೊಯೆಟ್ರಿ ಫೌಂಡೇಷನ್ನಲ್ಲಿ
- ಥಾಮಸ್ ಹಾರ್ಡಿಯವರ ಕವನಗಳು PoemHunter.com ಜಾಲತಾಣದಲ್ಲಿ
- "ದಿ ಡೆಡ್ ಮ್ಯಾನ್ ವಾಕಿಂಗ್" (1909) Archived 14 August 2020[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಹಾಗೂ ಇತರೆ ಹಾರ್ಡಿ ಕವನಗಳು poetry-archive.com ನಲ್ಲಿ
- ಥಾಮಸ್ ಹಾರ್ಡಿಸ್ ವೆಸೆಕ್ಸ್ ಸಂಶೋಧನಾ ಜಾಲತಾಣ, ಇದರಲ್ಲಿ ನಕ್ಷೆಗಳು ಸೇರಿವೆ, ಕರ್ತೃ ಡಾ. ಬಿರ್ಗಿಟ್ ಪ್ಲೀಟ್ಜ್
- ದಿ ಥಾಮಸ್ ಹಾರ್ಡಿ ಸೊಸೈಟಿ
- ದಿ ಥಾಮಸ್ ಹಾರ್ಡಿ ಅಸೋಸಿಯೇಷನ್ Archived 8 February 2021[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. (TTHA)
- ಥಾಮಸ್ ಹಾರ್ಡಿಯವರ ಕೃತಿಗಳು ಇ-ಪುಸ್ತಕ ಆವೃತ್ತಿಯಲ್ಲಿ
- ವೆಸ್ಟ್ಮಿಂಸ್ಟರ್ ಅಬ್ಬೆಯಲ್ಲಿ ಥಾಮಸ್ ಹಾರ್ಡಿಯವರ ಚಿತಾಭಸ್ಮ
- ಡಾರ್ಸೆಟ್ನ ಪೋರ್ಟ್ಲೆಂಡ್ನ ದೀಪದ ಮನೆಯಲ್ಲಿ ಮೇರಿ ಸ್ಟೋಪ್ಸ್ರನ್ನು ಭೇಟಿಯಾದ ಥಾಮಸ್ ಹಾರ್ಡಿಯವರ ಚಿತ್ರಗಳು Archived 8 February 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ದಿ ಲೈಫ್ ಅಂಡ್ ಡೆತ್ ಆಫ್ ಥಾಮಸ್ ಹಾರ್ಡಿ @ ವಾರ್ಡ್ಸ್ ಬುಕ್ ಆಫ್ ಡೇಸ್
- ಆಸ್ಟಿನ್ನಲ್ಲಿನ ಟೆಕ್ಸಾಸ್ ವಿಶ್ವವಿದ್ಯಾಲಯದ ಹ್ಯಾರಿ ರಾನ್ಸಂ ಸೆಂಟರ್ನಲ್ಲಿರುವ ಥಾಮಸ್ ಹಾರ್ಡಿ Archived 5 June 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಸಂಗ್ರಹ
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: empty unknown parameters
- Articles with hatnote templates targeting a nonexistent page
- Use dmy dates from August 2010
- Articles with invalid date parameter in template
- Birth-date transclusions with invalid parameters
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles containing Dutch-language text
- Articles needing additional references from February 2009
- All articles needing additional references
- Wikipedia articles that may have off-topic sections
- Commons link is locally defined
- Persondata templates without short description parameter
- ಥಾಮಸ್ ಹಾರ್ಡಿ
- 19ನೇ-ಶತಮಾನದ ಇಂಗ್ಲಿಷ್ ಜನರು
- ಸರ್ವಬ್ರಹ್ಮವಾದಿಗಳು
- ಇಂಗ್ಲಿಷ್ ಕವಿಗಳು
- ಇಂಗ್ಲಿಷ್ ಕಾದಂಬರಿಕಾರರು
- ಇಂಗ್ಲಿಷ್ ಸಣ್ಣಕಥಾ ಲೇಖಕರು
- ಆರ್ಡರ್ ಆಫ್ ಮೆರಿಟ್ನ ಸದಸ್ಯರು
- ಸಾಹಿತ್ಯದ ರಾಯಲ್ ಸೊಸೈಟಿಯ ಗೌರವ ಸದಸ್ಯರು
- ಲಂಡನ್ನ ಕಿಂಗ್ಸ್ ಕಾಲೇಜ್ನ ಹಳೆಯ ವಿದ್ಯಾರ್ಥಿಗಳು
- ಡಾರ್ಸೆಟ್ನ ಡಾರ್ಚೆಸ್ಟರ್‌ನ ಜನರು
- ೧೮೪೦ ಜನನ
- ೧೯೨೮ ನಿಧನ
- ವಿಕ್ಟೊರಿಯನ್ ಕವಿಗಳು
- ವಿಕ್ಟೋರಿಯನ್ ಕಾಲದ ಕಾದಂಬರಿಕಾರರು
- ವೆಸ್ಟ್‌ಮಿನ್‌ಸ್ಟರ್ ಆಬ್ಬೆಯಲ್ಲಿನ ಶವಸಂಸ್ಕಾರಗಳು
- ಕಾದಂಬರಿಕಾರರು
- ಕವಿಗಳು