ವಿಷಯಕ್ಕೆ ಹೋಗು

ತೂಗಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಂದಿಸದ ಲಂಘಕ-ದ್ರವ್ಯರಾಶಿ ವ್ಯವಸ್ಥೆಯು ಒಂದು ಆಂದೋಲಕ ವ್ಯವಸ್ಥೆಯಾಗಿದೆ

ತೂಗಾಟ ಎಂದರೆ ವಿಶಿಷ್ಟವಾಗಿ ಕಾಲದಲ್ಲಿ, ಒಂದು ಕೇಂದ್ರ ಮೌಲ್ಯದ ಸುತ್ತಮುತ್ತ (ಹಲವುವೇಳೆ ಸಮತೋಲನದ ಬಿಂದುವಾಗಿರುತ್ತದೆ) ಅಥವಾ ಎರಡು ಅಥವಾ ಹೆಚ್ಚು ಭಿನ್ನ ಸ್ಥಿತಿಗಳ ನಡುವೆ ಯಾವುದೋ ಪರಿಮಾಣದ ಪುನರಾವರ್ತಿತ ವ್ಯತ್ಯಯನ. ಕಂಪನ ಪದವನ್ನು ನಿಖರವಾಗಿ ಯಾಂತ್ರಿಕ ತೂಗಾಟವನ್ನು ವರ್ಣಿಸಲು ಬಳಸಲಾಗುತ್ತದೆ. ತೂಗಾಟದ ಪರಿಚಿತ ಉದಾಹರಣೆಗಳೆಂದರೆ ತೂಗಾಡುವ ಲೋಲಕ ಮತ್ತು ಪರ್ಯಾಯ ಪ್ರವಾಹ.

ತೂಗಾಟಗಳು ಕೇವಲ ಯಾಂತ್ರಿಕ ವ್ಯವಸ್ಥೆಗಳಲ್ಲಿ ಅಷ್ಟೇ ಅಲ್ಲದೆ ಕ್ರಿಯಾತ್ಮಕ ವ್ಯವಸ್ಥೆಗಳಲ್ಲೂ, ವಸ್ತುತಃ ವಿಜ್ಞಾನದ ಪ್ರತಿ ಕ್ಷೇತ್ರದಲ್ಲಿ ಉಂಟಾಗುತ್ತವೆ: ಉದಾಹರಣೆಗೆ ಬಡಿಯುತ್ತಿರುವ ಮಾನವ ಹೃದಯ, ಅರ್ಥಶಾಸ್ತ್ರದಲ್ಲಿ ವ್ಯವಹಾರ ಚಕ್ರಗಳು, ಪರಿಸರ ವಿಜ್ಞಾನದಲ್ಲಿ ಪರಭಕ್ಷಕ-ಬೇಟೆ ಆವರ್ತಗಳು, ಭೂವಿಜ್ಞಾನದಲ್ಲಿ ಭೂಶಾಖದ ಗೀಜ಼ರ್‍ಗಳು, ಸಂಗೀತ ವಾದ್ಯಗಳಲ್ಲಿ ಕಂಪಿಸುವ ತಂತಿಗಳು, ಮಿದುಳಿನಲ್ಲಿ ನರಕೋಶಗಳ ನಿಯತಕಾಲಿಕ ಉತ್ತೇಜನ, ಮತ್ತು ಖಗೋಳಶಾಸ್ತ್ರದಲ್ಲಿ ಸೆಫ಼ೀಡ್ ಚರ ನಕ್ಷತ್ರಗಳ ನಿಯತಕಾಲಿಕ ಹಿಗ್ಗಿಕೆ.

ಅತ್ಯಂತ ಸರಳ ಯಾಂತ್ರಿಕ ಆಂದೋಲಕ ವ್ಯವಸ್ಥೆಯೆಂದರೆ ಕೇವಲ ತೂಕ ಮತ್ತು ಕರ್ಷಣಕ್ಕೆ ಒಳಪಟ್ಟ ರೇಖೀಯ ಲಂಘಕಕ್ಕೆ ಜೋಡಿಸಲ್ಪಟ್ಟ ತೂಕ. ಅಂತಹ ವ್ಯವಸ್ಥೆಯನ್ನು ಗಾಳಿ ಮೇಜು ಅಥವಾ ಹಿಮ ಮೇಲ್ಮೈ ಮೇಲೆ ಸದೃಶವಾಗಿಸಬಹುದು. ಲಂಘಕವು ಸ್ಥಿರವಾಗಿದ್ದಾಗ ವ್ಯವಸ್ಥೆಯು ಸಮತೋಲನದ ಸ್ಥಿತಿಯಲ್ಲಿರುತ್ತದೆ. ಈ ವ್ಯವಸ್ಥೆಯನ್ನು ಸಮತೋಲನದಿಂದ ಕದಲಿಸಿದಾಗ, ತೂಕದ ಮೇಲೆ ಅದನ್ನು ಮರಳಿ ಸಮತೋಲನಕ್ಕೆ ತರಲು ಹವಣಿಸುವ ಒಟ್ಟು ಪುನಃಸ್ಥಾಪನ ಬಲವಿರುತ್ತದೆ. ಆದರೆ, ತೂಕವನ್ನು ಮರಳಿ ಸಮತೋಲನ ಸ್ಥಿತಿಗೆ ಚಲಿಸುವ ಪ್ರಕ್ರಿಯೆಯಲ್ಲಿ, ಅದು ಆವೇಗವನ್ನು ಪಡೆದುಕೊಂಡಿರುತ್ತದೆ, ಇದು ಆ ಸ್ಥಿತಿಯ ಮುಂದಕ್ಕೂ ಚಲಿಸುವಂತೆ ಮಾಡುತ್ತದೆ. ಹಾಗಾಗಿ, ವಿರುದ್ಧ ಅರ್ಥದಲ್ಲಿ ಒಂದು ಹೊಸ ಪುನಃಸ್ಥಾಪನ ಬಲವನ್ನು ಪ್ರಾರಂಭಿಸಿರುತ್ತದೆ. ವ್ಯವಸ್ಥೆಗೆ ಗುರುತ್ವದಂತಹ ಒಂದು ಸ್ಥಿರ ಬಲವನ್ನು ಸೇರಿಸಿದರೆ, ಸಮತೋಲನದ ಬಿಂದು ಸ್ಥಳಾಂತರಗೊಳ್ಳುತ್ತದೆ.

ಲಂಘಕ-ದ್ರವ್ಯರಾಶಿ ವ್ಯವಸ್ಥೆಯಂತಹ ಒಂದು ಕಾಯದ ಮೇಲಿನ ಪುನಃಸ್ಥಾಪನ ಬಲವು ಅದರ ಸ್ಥಳಾಂತರಕ್ಕೆ ನೇರವಾಗಿ ಪ್ರಮಾಣಾನುಗುಣವಾಗಿದ್ದ ವ್ಯವಸ್ಥೆಗಳನ್ನು ಗಣಿತೀಯವಾಗಿ ಲಯಬದ್ಧ ಆಂದೋಲಕದಿಂದ ವಿವರಿಸಲಾಗುತ್ತದೆ ಮತ್ತು ನಿಯಮಿತ ಆವರ್ತಕ ಚಲನೆಯನ್ನು ಸರಳ ಲಯಬದ್ಧ ಚಲನೆ ಎಂದು ಕರೆಯಲಾಗುತ್ತದೆ. ಲಂಘಕ-ದ್ರವ್ಯರಾಶಿ ವ್ಯವಸ್ಥೆಯಲ್ಲಿ, ಸ್ಥಿರ ಸಮತೋಲನ ಸ್ಥಳಾಂತರದಲ್ಲಿ ತೂಕವು ಚಲನ ಶಕ್ತಿಯನ್ನು ಹೊಂದಿದ್ದು, ಅದರ ಪಥದ ವಿಪರೀತಗಳಲ್ಲಿ ಅದು ಲಂಘಕದಲ್ಲಿ ಸಂಗ್ರಹವಾದ ಅಂತಸ್ಥ ಶಕ್ತಿಯಾಗಿ ಪರಿವರ್ತಿತವಾಗುವ ಕಾರಣದಿಂದ ತೂಗಾಟಗಳು ಉಂಟಾಗುತ್ತವೆ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ತೂಗಾಟ&oldid=1158855" ಇಂದ ಪಡೆಯಲ್ಪಟ್ಟಿದೆ