ಡಗ್ಲಸ್ ಗೋಲ್ಡ್‌ರಿಂಗ್
ಗೋಲ್ಡ್‌ರಿಂಗ್, ಡಗ್ಲಸ್ ೧೯೯೭-೧೯೬೦. ಇಂಗ್ಲಿಷ್ ಕಾದಂಬರಿಕಾರ ಮತ್ತು ಪ್ರಬಂಧಕಾರ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಗಿದ ಬಳಿಕ ೧೯೦೭ ರಲ್ಲಿ ಕಂಟ್ರಿ ಲೈಫ್ ಎಂಬ ಪತ್ರಿಕೆಯ ಸಂಪಾದಕಮಂಡಲಿಯನ್ನು ಸೇರಿದ.
ವೃತ್ತಿ ಜೀವನ
[ಬದಲಾಯಿಸಿ]ಮಾರನೆಯ ವರ್ಷ, ಆಗ ತಾನೇ ಸ್ಥಾಪಿತವಾಗಿದ್ದ ಇಂಗ್ಲಿಷ್ ರಿವ್ಯೂ ಎಂಬ ಪತ್ರಿಕೆಯ ಉಪಸಂಪಾದಕನಾದ. ಅಲ್ಲಿ ಸಾಹಿತಿ ಫೋರ್ಡ್ ಮ್ಯಾಡಕ್ಸ್ ಫೋರ್ಡನ ಸ್ನೇಹಗಳಿಸಿದ. ೧೯೧೦ ರಲ್ಲಿ ದಿ ಟ್ರ್ಯಾಂಪ್ ಎಂಬ ಸಚಿತ್ರ ಪತ್ರಿಕೆಯೊಂದನ್ನು ಸ್ಥಾಪಿಸಿ ಅದರ ಸಂಪಾದಕನಾದ. ಮುಂದೆ ಅದು ಉತ್ತಮ ಕವನಗಳನ್ನು ಬೆಳಕಿಗೆ ತರುವ ಪತ್ರಿಕೆಯೆಂದು ಪ್ರಸಿದ್ಧಿ ಪಡೆಯಿತು. ೧೯೧೭-೨೦ ರವರೆಗೆ ಗೋಲ್ಡ್‌ರಿಂಗ್ ಇಂಗ್ಲೆಂಡ್ ಮತ್ತು ಐರ್ಲೆಂಡ್ಗಳೊಳಗಿನ ಸಂಬಂಧವನ್ನು ಸುಧಾರಿಸುವುದಕ್ಕಾಗಿ ದುಡಿದ. ೧೯೨೫ ರಲ್ಲಿ ಗಾಟೆನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕನಾಗಿ ನೇಮಕಗೊಂಡ. ೧೯೨೭ ರಲ್ಲಿ ಈ ಉದ್ಯೋಗವನ್ನು ತೊರೆದು ಅಮೆರಿಕ ಪ್ರವಾಸ ಕೈಗೊಂಡ. ಅಲ್ಲಿಂದ ಯುರೋಪಿಗೆ ಮರಳಿ ಮೂರು ವರ್ಷ ಫ್ರಾನ್ಸ್ ದೇಶದಲ್ಲಿ ವಾಸಿಸಿದ. ೧೯೩೦ ರ ಅನಂತರ ಇಂಗ್ಲೆಂಡಿನಲ್ಲಿ ನೆಲೆಸಿದ.
ಕೃತಿಗಳು
[ಬದಲಾಯಿಸಿ]- ಈತ ಮ್ಯಾಡಕ್ಸ್, ಥಾಮಸ್ ಲಾರೆನ್ಸ್, ಜೇಮ್ಸ್ ಎಲ್ರಾಯ್ ಫೇಕರ್ ಇವರ ಜೀವನಚರಿತ್ರೆಗಳನ್ನು ಬರೆದಿದ್ದಾನೆ.
ಕಾದಂಬರಿಗಳು
[ಬದಲಾಯಿಸಿ]- ದಿ ಪರ್ಮನೆಂಟ್ ಅಂಕಲ್ (೧೯೧೨),
- ದಿ ಫಾರ್ಚೂನ್ (೧೯೧೩),
- ನೋಬಡಿ ನೋಸ್ (೧೯೨೩),
- ದಿ ಕಕೂ (೧೯೨೬),
- ದಿ ಫಸಾಡ್ (೧೯೨೭),
- ಮಾರ್ಗಾಟ್ಸ್ ಪ್ರೋಗ್ರೆಸ್ (೧೯೨೯)-ಇವು ಈತನ ಕೆಲವು ಕಾದಂಬರಿಗಳು.
ಆತ್ಮಚರಿತ್ರೆಗಳು
[ಬದಲಾಯಿಸಿ]- ಆಡ್ ಮ್ಯಾನ್ ಔಟ್ (೧೯೩೫),
- ಫೇಸಿಂಗ್ ದಿ ಆಡ್ಸ್ (೧೯೩೯),
- ಸೌತ್ ಲಾಜ್ (೧೯೪೩)- ಇವು ಈತನ ಆತ್ಮಚರಿತ್ರೆಗಳು.
ಇತರೆ ಕೃತಿಗಳು
[ಬದಲಾಯಿಸಿ]- ವೇಸ್ ಆಫ್ ಎಸ್ಕೇಪ್ (೧೯೧೨),
- ಡ್ರೀಮ್ ಸಿಟೀಸ್ (೧೯೧೩),
- ಎ ಸ್ಟ್ರೇಂಜರ್ ಇನ್ ಐರ್ಲೆಂಡ್ (೧೯೧೯),
- ದಿ ಫೈಟ್ ಫಾರ್ ಫ್ರೀಡಮ್ (೧೯೨೦),
- ನಾರ್ದರ್ನ್ ಲೈಟ್ಸ್ ಆಫ್ ಸದರ್ನ್ ಷೋರ್ಸ್ (೧೯೨೭)-ಇವು ಈತನ ಕೆಲವು ಕೃತಿಗಳು.