ಡಗ್ಲಸ್ ಗೋಲ್ಡ್‌ರಿಂಗ್

ವಿಕಿಪೀಡಿಯ ಇಂದ
Jump to navigation Jump to search


ಡಗ್ಲಸ್ ಗೋಲ್ಡ್‌ರಿಂಗ್

ಗೋಲ್ಡ್‌ರಿಂಗ್, ಡಗ್ಲಸ್ 1887-1960. ಇಂಗ್ಲಿಷ್ ಕಾದಂಬರಿಕಾರ ಮತ್ತು ಪ್ರಬಂಧಕಾರ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಗಿದ ಬಳಿಕ 1907ರಲ್ಲಿ ಕಂಟ್ರಿ ಲೈಫ್ ಎಂಬ ಪತ್ರಿಕೆಯ ಸಂಪಾದಕಮಂಡಲಿಯನ್ನು ಸೇರಿದ.

ವೃತ್ತಿ ಜೀವನ[ಬದಲಾಯಿಸಿ]

ಮಾರನೆಯ ವರ್ಷ, ಆಗ ತಾನೇ ಸ್ಥಾಪಿತವಾಗಿದ್ದ ಇಂಗ್ಲಿಷ್ ರಿವ್ಯೂ ಎಂಬ ಪತ್ರಿಕೆಯ ಉಪಸಂಪಾದಕನಾದ. ಅಲ್ಲಿ ಸಾಹಿತಿ ಫೋರ್ಡ್‌ ಮ್ಯಾಡಕ್ಸ್‌ ಫೋರ್ಡನ ಸ್ನೇಹಗಳಿಸಿದ. 1910ರಲ್ಲಿ ದಿ ಟ್ರ್ಯಾಂಪ್ ಎಂಬ ಸಚಿತ್ರ ಪತ್ರಿಕೆಯೊಂದನ್ನು ಸ್ಥಾಪಿಸಿ ಅದರ ಸಂಪಾದಕನಾದ. ಮುಂದೆ ಅದು ಉತ್ತಮ ಕವನಗಳನ್ನು ಬೆಳಕಿಗೆ ತರುವ ಪತ್ರಿಕೆಯೆಂದು ಪ್ರಸಿದ್ಧಿ ಪಡೆಯಿತು. 1917-20 ರವರೆಗೆ ಗೋಲ್ಡ್‌ರಿಂಗ್ ಇಂಗ್ಲೆಂಡ್ ಮತ್ತು ಐರ್ಲೆಂಡ್ಗಳೊಳಗಿನ ಸಂಬಂಧವನ್ನು ಸುಧಾರಿಸುವುದಕ್ಕಾಗಿ ದುಡಿದ. 1925ರಲ್ಲಿ ಗಾಟೆನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕನಾಗಿ ನೇಮಕಗೊಂಡ. 1927ರಲ್ಲಿ ಈ ಉದ್ಯೋಗವನ್ನು ತೊರೆದು ಅಮೆರಿಕ ಪ್ರವಾಸ ಕೈಗೊಂಡ. ಅಲ್ಲಿಂದ ಯುರೋಪಿಗೆ ಮರಳಿ ಮೂರು ವರ್ಷ ಫ್ರಾನ್ಸ್‌ ದೇಶದಲ್ಲಿ ವಾಸಿಸಿದ. 1930ರ ಅನಂತರ ಇಂಗ್ಲೆಂಡಿನಲ್ಲಿ ನೆಲೆಸಿದ.

ಕೃತಿಗಳು[ಬದಲಾಯಿಸಿ]

 1. ಈತ ಮ್ಯಾಡಕ್ಸ್‌, ಥಾಮಸ್ ಲಾರೆನ್ಸ್‌, ಜೇಮ್ಸ್‌ ಎಲ್ರಾಯ್ ಫೇಕರ್ ಇವರ ಜೀವನಚರಿತ್ರೆಗಳನ್ನು ಬರೆದಿದ್ದಾನೆ.

ಕಾದಂಬರಿಗಳು[ಬದಲಾಯಿಸಿ]

 1. ದಿ ಪರ್ಮನೆಂಟ್ ಅಂಕಲ್ (1912),
 2. ದಿ ಫಾರ್ಚೂನ್ (1913),
 3. ನೋಬಡಿ ನೋಸ್ (1923),
 4. ದಿ ಕಕೂ (1926),
 5. ದಿ ಫಸಾಡ್ (1927),
 6. ಮಾರ್ಗಾಟ್ಸ್‌ ಪ್ರೋಗ್ರೆಸ್ (1929)-ಇವು ಈತನ ಕೆಲವು ಕಾದಂಬರಿಗಳು.

ಆತ್ಮಚರಿತ್ರೆಗಳು[ಬದಲಾಯಿಸಿ]

 1. ಆಡ್ ಮ್ಯಾನ್ ಔಟ್ (1935),
 2. ಫೇಸಿಂಗ್ ದಿ ಆಡ್ಸ್‌ (1939),
 3. ಸೌತ್ ಲಾಜ್ (1943)- ಇವು ಈತನ ಆತ್ಮಚರಿತ್ರೆಗಳು.

ಇತರೆ ಕೃತಿಗಳು[ಬದಲಾಯಿಸಿ]

 1. ವೇಸ್ ಆಫ್ ಎಸ್ಕೇಪ್ (1912),
 2. ಡ್ರೀಮ್ ಸಿಟೀಸ್ (1913),
 3. ಎ ಸ್ಟ್ರೇಂಜರ್ ಇನ್ ಐರ್ಲೆಂಡ್ (1919),
 4. ದಿ ಫೈಟ್ ಫಾರ್ ಫ್ರೀಡಮ್ (1920),
 5. ನಾರ್ದರ್ನ್‌ ಲೈಟ್ಸ್‌ ಆಫ್ ಸದರ್ನ್‌ ಷೋರ್ಸ್‌ (1926)-ಇವು ಈತನ ಕೆಲವು ಕೃತಿಗಳು.