ಜೇಡಿಮಣ್ಣು
ಗೋಚರ
ಜೇಡಿಮಣ್ಣು (ಆವೆಮಣ್ಣು, ಮೃತ್ತಿಕೆ, ಕೊಜೆ) ಒಂದು ಅಥವಾ ಹೆಚ್ಚು ಜೇಡಿ ಖನಿಜಗಳು, ಜೊತೆಗೆ ಸ್ಫಟಿಕ ಶಿಲೆ (SiO2), ಲೋಹದ ಆಕ್ಸೈಡುಗಳು (Al2O3 , MgO ಇತ್ಯಾದಿ) ಹಾಗೂ ಕಾರ್ಬನಿಕ ಪದಾರ್ಥಗಳ ಸಂಭಾವ್ಯ ಕುರುಹುಗಳು ಸೇರಿರುವ ಬಹು ಸಣ್ಣ ಕಣಗಳ ಕಲ್ಲು ಅಥವಾ ಮಣ್ಣು. ಭೌಗೋಳಿಕ ಜೇಡಿಮಣ್ಣು ನಿಕ್ಷೇಪಗಳು ಬಹುತೇಕವಾಗಿ ಫ಼ಿಲೊಸಿಲಿಕೇಟ್ ಖನಿಜಗಳಿಂದ ರೂಪಗೊಂಡಿರುತ್ತವೆ, ಜೊತೆಗೆ ಖನಿಜ ರಚನೆಯಲ್ಲಿ ಬದಲಾಗಬಲ್ಲ ಪ್ರಮಾಣದ ನೀರು ಸಿಕ್ಕಿಕೊಂಡಿರುತ್ತದೆ. ಜೇಡಿಮಣ್ಣು ಕಣದ ಗಾತ್ರ ಹಾಗೂ ಜ್ಯಾಮಿತಿ, ಜೊತೆಗೆ ನೀರಿನ ಅಂಶದ ಕಾರಣ ಮೆತುವಾಗಿರುತ್ತದೆ, ಮತ್ತು ಒಣಗಿಸಿದ ಅಥವಾ ಸುಟ್ಟ ಮೇಲೆ ಗಟ್ಟಿ, ಭಿದುರವಾಗಿ ಮೆತು ಗುಣವನ್ನು ಕಳೆದುಕೊಳ್ಳುತ್ತದೆ.[೧] ಅದು ಎಲ್ಲಿ ಕಂಡುಬರುತ್ತದೋ ಆ ಮಣ್ಣಿನ ಅಂಶವನ್ನು ಅವಲಂಬಿಸಿ, ಜೇಡಿಮಣ್ಣು ವಿವಿಧ ಬಣ್ಣಗಳಾಗಿ ಕಾಣಬಹುದು, ಉದಾಹರಣೆಗೆ ಬಿಳಿ, ಮಂದ ಬೂದು ಅಥವಾ ಕಂದು, ಆಳವಾದ ಕಿತ್ತಳೆ ಕೆಂಪು.
ಉಲ್ಲೇಖಗಳು
[ಬದಲಾಯಿಸಿ]- ↑ "University College London Geology on Campus: Clays". Earth Sciences department, University College London. Archived from the original on 27 ಜನವರಿ 2016. Retrieved 10 ಜನವರಿ 2016.
{{cite web}}
: Unknown parameter|deadurl=
ignored (help)