ಜಾನ್ ಸ್ಟೂವರ್ಟ್ ಮಿಲ್
ಜೀವನ ಚಿತ್ರಣ
[ಬದಲಾಯಿಸಿ]ಜಾನ್ ಸ್ಟೂವರ್ಟ್ ಮಿಲ್ ರವರು ೧೮೦೬ರಲ್ಲಿ ಜನಿಸಿದರು.ಅವರ ತಂದೆ ಜೇಮ್ಸ್ ಮಿಲ್ ಒಬ್ಬ ಸುಪ್ರಸಿದ್ದ ಇತಿಹಾಸಕಾರ,ತತ್ವಶಾಸ್ತ್ರಜ್ಞ್ ಮತ್ತು ರಾಜಕೀಯ ಅರ್ಥಶಾಸ್ತ್ರಜ್ಞ್ ಒಬ್ಬ ಅತಂತ್ಯ ಮೇದಾವಿ ಬಾಲಕನಾಗಿದ್ದ ಮಿಲ್ ತನ್ನ ತಂದೆಯ ಉಸ್ತುವಾರಿಯಲ್ಲಿ ವ್ಯವಸ್ಥಿತವಾದ ಶಿಕ್ಷಣ ಪಡೆದರು.ಈತ ತನ್ನ ಮೂರನೇ ವಯಸ್ಸಿನಲ್ಲಿ ಗ್ರೀಕ್ ಭಾಷೆ,ಎಂಟನೇ ವಯಸ್ಸಿನಲ್ಲಿ ಲ್ಯಾಟಿನ್ ಮತ್ತು ಹನ್ನೆರಡನೇ ವಯಸ್ಸಿನಲ್ಲಿ ಬೀಜಗಣಿತ ಮತ್ತು ರೇಖಾಗಣಿತವನ್ನು ಕಲಿತಿದ್ದರು.ಈತ ತನ್ನ ಹನ್ನೊಂದನೇ ವಯಸ್ಸಿನಲ್ಲಿ ಇರುವಾಗಲೇ ತನ್ನ ತಂದೆ ರಚಿಸಿದ್ದ ಭಾರತದ ಇತಿಹಾಸದ ಕರಡು ಪ್ರತಿಯನ್ನು ತಿದ್ದಿದರು.ಮಿಲ್ ತನ್ನ ಚಿಕ್ಕ ವಯಸ್ಸಾದ ಹದಿಮೂರನೇ ವಯಸ್ಸಿನಲ್ಲೇ ಇತಿಹಾಸ,ಸಾಹಿತ್ಯ ಮತ್ತು ರಾಜಕೀಯ ಅರ್ಥಶಾಸ್ತ್ರದಲ್ಲಿ ವ್ಯಾಪಕ ಜ್ಞಾನ ಹೊಂದಿದವನಾಗಿದ್ದ.ಆವರೆಗೆ ಬೆಳೆದು ಬಂದಿದ್ದ ಎಲ್ಲ ಅರ್ಥಶಾಸ್ತ್ರವನ್ನು ಕರಗತ ಮಾಡಿಕೊಂಡಿದ್ದರು.ಈತ ಎಷ್ಟು ಚಾಣಾಕ್ಷ ಮತಿಯವನಾಗಿದ್ದನೆಂದರೆ ತನ್ನ ಹದಿನಾಲ್ಕನೇ ವಯಸ್ಸಿನಲ್ಲೇ ಫ್ರೆಂಚ್ ಅರ್ಥಶಾಸ್ತ್ರಜ್ಞ್ ಜೆ.ಬಿ.ಸೇ ಯೊಂದಿಗೆ ಸಂಪರ್ಕ ಬೆಳೆಸಿ ಫ್ರಾನ್ಸಿಗೆ ಹೋದವರು ಅಲ್ಲಿ ಫ್ರೆಂಚ್ ಭಾಷೆಯನ್ನು ಕಲಿತು ರೋಮನ್ ಮತ್ತು ಇಂಗ್ಲಿಷ್ ಕಾನೂನುಗಳನ್ನು ಅಭ್ಯಸಿದರು.೧೮೨೩ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಒಬ್ಬ ಗುಮಾಸ್ತನಾಗಿ ಸೇರಿದ ಈತ ೧೮೫೬ರಲ್ಲಿ ಕಚೇರಿಯ ಮುಖ್ಯಸ್ತನಾಗಿ ನೇಮಕಗೊಂಡರು.೧೮೫೮ರಲ್ಲಿ ಈ ಹುದ್ದೆಯಿಂದ ನಿವ್ರತ್ತಿ ಹೊಂದಿದ್ದ ಮಿಲ್ ೧೮೫೮ ರಿಂದ ೧೮೬೮ರ ವರೆಗೆ ಹೌಸ್ ಆಫ್ ಕಾಮನ್ಸ್ನ ಸ್ವತಂತ್ರ ಸದಸ್ಯನಾಗಿದ್ದರು.ಈ ಅವಧಿಯಲ್ಲಿ ಆತ ಕಾರ್ಮಿಕ ಕಲ್ಯಾಣ ಮತ್ತು ಮಹಿಳೆಯರ ಸ್ಥಾನಮಾನಕ್ಕಾಗಿ ಪ್ರಯತ್ನ ನಡೆಸಿದರು.ಅವರು ೧೮೭೩ರಲ್ಲಿ ಫ್ರಾನ್ಸಿನಲ್ಲಿ ಮರಣ ಹೊಂದಿದರು.
ಪರಿಚಯ
[ಬದಲಾಯಿಸಿ]ಆರ್ಥಿಕ ಚಿಂತನೆಯ ಇತಿಹಾಸದಲ್ಲಿ ಜಾನ್ ಸ್ಟೂವರ್ಟ್ ಮಿಲ್ ಅಗ್ರಗಣ್ಯ ಸ್ಥಾನವನ್ನು ಅಕ್ರಮಿಸಿಕೊಂಡಿದಾರೆ.ಸಂಪ್ರದಾಯ ಪಂಥದ ಕಟ್ಟಕಡೆಯ ಶ್ರೇಷ್ಟ ಅರ್ಥಶಾಸ್ತ್ರಜ್ಞ್ ಪರಿಗಣಿಸಲ್ಪಟ್ಟಿರುವ ಜೆ.ಎಸ್.ಮಿಲ್ ಒಬ್ಬ ವ್ಯಕ್ತಿವಾದಿ,ಸ್ವತಂತ್ರವಾದಿ ಮತ್ತು ಸಮಾಜವಾದಿ.ಅರ್ಥಿಕ ಚಿಂತನೆಯು ಒಂದು ಸಂಕ್ರಮಣ ಕಾಲವನ್ನು ತಲುಪಿದ್ದ ಸಮಯದಲ್ಲಿ ಆತ ಕಾಣಿಸಿಕೊಂಡರು.ಸಂಪ್ರದಾಯ ಪಂಥದ ಚಿಂತನೆಗಳು ಪರಿಪೂರ್ಣತೆಯ ಪರಾಕಾಷ್ಟೆಯನ್ನು ತಲುಪಿ ಅವಸಾನಗೊಳ್ಳುವ ಸಂದ್ದಿಗ ಪರಿಸ್ಥಿಯನ್ನು ಎದುರಿಸುತ್ತಿದ್ದ ಹಾಗೂ ಸಮಾಜವಾದದ ಬಗ್ಗೆ ಅಧಿಕ ಒಲವು ಬಳೆಯುತ್ತಿದ್ದ ಸಂದರ್ಭದಲ್ಲಿ ಜೆ.ಎಸ್.ಮಿಲ್ ತನ್ನ ಆರ್ಥಿಕ ವಿಚಾರಧಾರೆಗಳೊಂದಿಗೆ ಪ್ರತ್ಯಕ್ಷನಾದ.ಆಡಂ ಸ್ಮಿತ್,ಡೇವಿಡ್ ರಿಕಾರ್ಡೋ ಮತ್ತು ಮಾಲ್ಥಸ್ ತರುವಾಯ ಯೂರೋಪಿನಾದ್ಯಂತ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅನೇಕ ಸ್ಥಿತ್ಯಂತರಗಳಾದವು.ಇದರಿಂದಾಗಿ ಅವರ ಚಿಂತನೆಗಳು ಸಾವು ಬದುಕಿನ ಹೋರಾಟದ ಅವಸಾನದ ಅಂಚಿನಲ್ಲಿದ್ದವು.ಹಾಗಾಗಿ ಅವುಗಳನ್ನು ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಪರಿಷ್ಕ್ರತಗೊಳಿಸಿ ಮಾರ್ಪಾಟು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು.ಅಂತಹ ಸಮಯದಲ್ಲಿ ಮಿಲ್ ಅವತರಿಸಿ ಸಂಪ್ರದಾಯ ಪಂಥದ ಚಿಂತನೆಗಳನ್ನು ಪುನರುತ್ಥಾನಗೊಳಿಸಿದರು.ಮಿಲ್ ಒಬ್ಬ ದ್ವಿಮುಖ ವ್ಯಕ್ತಿತ್ವದ ಚಿಂತಕ.ಆತ ಸಂಪ್ರದಾಯ ವಾದಿಯೂ ಹೌದು ಮತ್ತು ಸಮಾಜವಾದದ ಬಗ್ಗೆ ಒಲವಿದ್ದ ಮಾನವತಾವಾದಿಯೂ ಹೌದು.ಜೊತೆಗೆ ಈ ಎರಡೂ ಮೇಳೈಸಿದ ವಿಚಿತ್ರ ವ್ಯಕ್ತಿಯೂ ಹೌದು.ಒಂದು ಕಡೆ ಸಂಪ್ರದಾಯ ಪಂಥದ ಅನೇಕ ಆರ್ಥಿಕ ಅಭಿಪ್ರಾಯಗಳಿಗೆ ತನ್ನ ಸಹಮತ ವ್ಯಕ್ತಪಡಿಸಿ ಅವುಗಳಿಗೆ ಸ್ಪಷ್ಟ ಹಾಗೂ ಪರಿಪೂರ್ಣ ರೂಪ ನೀಡಿದರು.ಇದೇ ವೇಳೆ ಅವರು ಕೆಲವಕ್ಕೆ ವ್ಯತಿರಿಕ್ತವಾದ ದ್ರಷ್ಟಿಕೋನವನ್ನು ನೀಡಿ ಅವುಗಳಿಂದ ದೂರ ಸರಿಯಲೂ ಯತ್ನಿಸಿದರು.ಒಂದು ಕಡೆ ಸಂಪ್ರದಾಯ ಪಂಥದ ಪುನರುತ್ಥಾನಕ್ಕೆ ಶಕ್ತಿ ಮೀರಿ ಪ್ರಯತ್ನಿಸಿದ ಮಿಲ್ ಇನ್ನೊಂದಡೆ ಅದರ ಅವಸಾನಕ್ಕೂ ಕಾರಣನಾಗುತ್ತಾರೆ.ಈತರು ಸಂಪ್ರದಾಯ ಪಂಥದ ಸ್ಥಿತಿಯನ್ನು ಅದರ ಅಂತಿಮ ಮತ್ತು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಿರೂಪಿಸಿದ್ದಾರೆ.ಅದೇ ವೇಳೆಯಲ್ಲಿ ಅದರ ಅವಸಾನಕ್ಕೂ ನಾಂದಿ ಹಾಡಿದರು.ಗೈಡ್ ಮತ್ತು ರಿಸ್ಟ್ ಅವರು ಹೇಳುವಂತೆ, ಮಿಲ್ನಿಂದ ಸಂಪ್ರದಾಯ ಅರ್ಥಶಾಸ್ತ್ರ ಒಂದರ್ಥದಲ್ಲಿ ಪರಿಪೂರ್ಣತೆಯನ್ನು ಪಡೆಯಿತು ಮತ್ತು ಅವನೊಂದಿಗೇ ಅದರ ಅವಸಾನವೂ ಆರಂಭವಾಯಿತು.ಒಟ್ಟಾರೆಯಾಗಿ ಮಿಲ್ನದು ಒಂದು ವಿಶಿಷ್ಟ ವ್ಯಕ್ತಿತ್ವ.ಅವರು ಸಂಪ್ರದಾಯ ಚಿಂತನೆ ಮತ್ತು ಸಮಾಜವಾದಿ ಚಿಂತನೆ ನಡುವೆ ತೀವ್ರ ತೊಳಲಾಟಕ್ಕೆ ಒಳಗಾಗಿದ್ದರು.
ಪ್ರಭಾವಗಳು
[ಬದಲಾಯಿಸಿ]ತನ್ನ ಮೇಲಾದ ವಿವಿಧ ದಿಕ್ಕಿನ ಪ್ರಭಾವಗಳ ಕಾರಣದಿಂದಾಗಿ ಮಿಲ್ ಒಬ್ಬ ದ್ವಂದ್ವ ಪ್ರತಿ ಪಾದಕನಾಗಿ ರೂಪುಗೊಂಡರು.ಆತ ಮುಖ್ಯವಾಗಿ ಒಬ್ಬ ಸಂಪ್ರದಾಯವಾದಿ ಅರ್ಥಶಾಸ್ತ್ರಜ್ಞ್ ನಾಗಿದ್ದರು.ಸ್ಮಿತ್ ಮತ್ತು ರಿಕಾರ್ಡೋರವರ ಚಿಂತನೆಗಳ ಪ್ರಭಾವಕ್ಕೆ ಒಳಗಾದ ಆತ ಅವರ ಆರ್ಥಿಕ ಅಭಿಪ್ರಾಯಗಳನ್ನು ಕರಗತ ಮಾಡಿಕೊಂಡ.ಜೆ.ಬಿ.ಸೇ ಯು ಆಡಂ ಸ್ಮಿತ್ನಿಗೆ ಏನನ್ನು ಮಾಡಿದನೋ ಅದನ್ನೇ ಜೆ.ಎಸ್.ಮಿಲ್ ಡೇವಿಡ್ ರಿಕಾರ್ಡೋನಿಗೆ ಮಾಡಿದ್ದಾರೆ ಎಂಬ ನ್ಯೂಮನ್ನ ಮಾತುಗಳನ್ನು ಗಮನಿಸಿದರೆ ಮಿಲ್ನು ರಿಕಾರ್ಡೋನ ವಿಚಾರಧಾರೆಗಳಿಂದ ಹೆಚ್ಚು ಪ್ರಭಾವಿತನಾಗಿದ್ದುದು ವೇದ್ಯವಾಗುತ್ತದೆ.ಅವರು ರಿಕಾರ್ಡೋನ ಅಭಿಪ್ರಾಯಗಳನ್ನು ಕ್ರಮಬದ್ದಗೊಳಿಸಿ ಜನಪ್ರಿಯಗೊಳಿಸಲು ಶಕ್ತಿಮೀರಿ ಯತ್ನಿಸಿದರು.ಜೆರಿಮಿ ಬೆಂಥ್ಯಾಮನ ತುಷ್ಟಿಗುಣವಾದ,ಮಾಲ್ಥಸ್ನ ಜನಸಂಖ್ಯಾ ಸಿದ್ದಾಂತ ಮತ್ತು ರಿಕಾರ್ಡೋನ ಗೇಣಿ ಸಿದ್ದಾಂತಗಳು ಮಿಲ್ಲನ ಮೇಲೆ ಗಾಢ ಪ್ರಭಾವ ಬೀರಿದವು.ಸಮಾಜವಾದಿ ಚಿಂತಕ ಸೈಂಟ್ ಸೈಮನ್,ರಮ್ಯಕವಿ ಕಾಲೆರಿಡ್ಜ್ ಮುಂತಾದವರ ಪ್ರಭಾವಕ್ಕೂ ಆತ ಒಳಗಾದರು.ಅಸಮಾನ್ಯ ಪ್ರತಿಭೆಯ ಆತನ ಧರ್ಮಪತ್ನಿ ಹ್ಯಾರಿಟ್ ಟೇಲರ್ ಸಹ ಅವನ ಚಿಂತನೆಗಳು ರೂಪುಗೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಳು.ಫ್ರಾನ್ಸಿನ ಮಹಾಕ್ರಾಂತಿಯು ಜೆ.ಎಸ್.ಮಿಲ್ ಮೇಲೆ ಅಗಾಧ ಪ್ರಭಾವ ಬೀರಿತು.ಇಳಿಮುಖ ಪ್ರತಿಫಲ ನಿಯಮದಲ್ಲಿ ಅಚಲ ನಂಬಿಕೆ,ಮುಕ್ತ ವ್ಯಾಪಾರ,ಪರಿಪೂರ್ಣ ಪೈಪೋಟಿ ಮುಂತಾದುಗಳ ಮೇಲಿನ ಒಲವು ಇವುಗಳು ಅವರು ಸಂಪ್ರದಾಯ ಪಂಥದಲ್ಲಿ ಪೂರ್ಣ ವಿಶ್ವಾಸವಿರಿಸಲು ಕಾರಣವಾದವು.ಆದರೆ ಬೆಂಥಾಮ್,ಸೈಮನ್ ಮುಂತಾದವರ ಪ್ರಭಾವಗಳು ಅವರನನ್ನು ವ್ಯಕ್ತಿವಾದ ಮತ್ತು ಸ್ವಾತಂತ್ರ್ಯವಾದದತ್ತ ತಳ್ಳಿದವು.ಒಟ್ಟಾರೆಯಾಗಿ ಸಂಪ್ರದಾಯ ಪಂಥದ ಸಿದ್ದಾಂತಗಳಿಗೆ ಹೊಸ ನೋಟ ನೀಡಲು ಶ್ರಮಿಸಿದ ಮಿಲ್ಲನು ಸಂಪ್ರದಾಯ ಪಂಥದ ಗುರು ಎಂದು ಪರಿಗಣಿತನಾಗಿದ್ದಾರೆ.
ಅಧ್ಯಯನ ವಿಧಾನ ಮತ್ತು ನಿಯಮಗಳು
[ಬದಲಾಯಿಸಿ]ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಅಧ್ಯಯನಕ್ಕೆ ನಿಗಮನ ವಿಧಾನವನ್ನು ಅನುಸರಿಸಿದರು.ಪ್ರಾರಂಭದಲ್ಲಿ ಮಿಲ್ ಸಹ ಇದೇ ವಿಧಾನವನ್ನು ಅನುಸರಿಸಿದರು.ಆದರೆ ಈ ವಿಧಾನದ ಕೆಲ ಮಿತಿಗಳ ಕಾರಣದಿಂದಾಗಿ ಅನುಗಮನ ಮತ್ತು ನಿಗಮನ ವಿಧಾನಗಳ ಸಂಯೋಜನೆಗೆ ಒತ್ತು ನೀಡಿದರು.ಸಂಪ್ರದಾಯವಾದಿಗಳ ಪ್ರಕಾರ ಆರ್ಥಿಕ ನಿಯಮಗಳು ಪ್ರಕ್ರತಿ ನಿಯಮಗಳ ರೀತಿಯಲ್ಲಿ ಶಾಶ್ವತ ಮತ್ತು ಸರ್ವತ್ರಿಕ.ಆದರೆ ಜೆ.ಎಸ್.ಮಿಲ್ ಪ್ರಕಾರ ಕೇವಲ ಉತ್ಪಾದನಾ ನಿಯಮಗಳ ವಿಚಾರದಲ್ಲಿ ಮಾತ್ರ ಈ ಮಾತು ಸತ್ಯ.ವಿತರಣಾ ನಿಯಮಗಳ ಮಾನವ ನಿರ್ಮಿತವಾಗಿದ್ದು ಅವು ಸರ್ವತ್ರಿಕವಾಗಿರುವುದಿಲ್ಲ.ಆದ್ದರಿಂದ ಮಿಲ್ ಪ್ರಕಾರ ಅರ್ಥಶಾಸ್ತ್ರದ ಎಲ್ಲ ನಿಯಮಗಳು ಸಾರ್ವತ್ರಿಕವಾಗಿರುವುದಿಲ್ಲ.
ಮೌಲ್ಯ ಸಿದ್ದಾಂತ
[ಬದಲಾಯಿಸಿ]ಮಿಲ್ಲನು ಮೌಲ್ಯದ ವಿಚಾರ ಹೆಚ್ಚೂ ಕಡಿಮೆ ತೀರ್ಮಾನವಾದ ಸಮಸ್ಯೆಯೆಂದು ಭಾವಿಸುತ್ತಾರೆ.ಅವರ ಮಾತಿನಲ್ಲೇ ಹೇಳುವುದಾದರೆ ವರ್ತಮಾನ ಅಥವಾ ಭವಿಷ್ಯದ ಯಾವುದೇ ಬರಹಗಾರ ಸರಿಪಡಿಸಬಹುದಾದ ಸಮಸ್ಯೆ ಯಾವುದೂ ಮೌಲ್ಯ ನಿಯಮಗಳಲ್ಲಿ ಇಲ್ಲದಿರುವುದು ಸಂತೋಷ ಸಂಗತಿ.ಈ ವಿಷಯದ ಸಿದ್ದಾಂತವು ಪೂರ್ಣವಾಗಿದೆ.ಈ ಕಾರಣಕ್ಕಾಗಿ ಮಿಲ್ಲನ ಪ್ರಕಾರ ಮೌಲ್ಯದ ಕ್ಷೇತ್ರದಲ್ಲಿ ಉಳಿದಿರುವ ಏಕೈಕ ಕಾರ್ಯವೆಂದರೆ ರಿಕಾರ್ಡೋನ ಸಿದ್ದಾಂತವನ್ನು ಪುನಃ ಸರಳ ರೂಪದಲ್ಲಿ ಪ್ರತಿಪಾದಿಸುವುದು.ಮಿಲ್ನ ವ್ಯಕ್ತಿವಾದಿ ಸಮಾಜವಾದಿ ಕಾರ್ಯಕ್ರಮ:ಶ್ರಮಿಕರ ಬಗ್ಗೆ ಹೆಚ್ಚಿನ ಕಾಳಜಿ,ಸಮಾಜವಾದ ಬಗ್ಗೆ ಒಲವು.ಗೇಣಿಯ ಸಾಮಾಜೀಕರಣ,ಕೂಲಿ ವ್ಯವಸ್ಥೆಯ ರದ್ದತಿ,ಮತ್ತು ಅನುವಂಶೀಯತೆಯ ಹಕ್ಕಿನ ಮೇಲೆ ನಿರ್ಬಂಧಗಳು.
ಉಲೇಖಗಳು
[ಬದಲಾಯಿಸಿ]- ↑ http://www.iep.utm.edu/milljs/
- ↑ http://plato.stanford.edu/entries/mill/. Retrieved 4 ಸೆಪ್ಟೆಂಬರ್ 2016.
{{cite web}}
: Missing or empty|title=
(help)