ವಿಷಯಕ್ಕೆ ಹೋಗು

ಗುರಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜ಼ೂಲು ಮುಖ್ಯಸ್ಥನು ಗುರಾಣಿ ಹಿಡಿದಿರುವುದು.[]

ಗುರಾಣಿ ಕೈಯಲ್ಲಿ ಹಿಡಿಯಲಾದ ಅಥವಾ ಮಣಿಕಟ್ಟು ಅಥವಾ ಮುಂಗೈ ಮೇಲೆ ಏರಿಸಲಾದ ವೈಯಕ್ತಿಕ ರಕ್ಷಾಕವಚದ ಒಂದು ತುಂಡು. ನಿಕಟ ವ್ಯಾಪ್ತಿಯ ಶಸ್ತ್ರಾಸ್ತ್ರಗಳಿಂದ ಅಥವಾ ಬಾಣಗಳಂತಹ ಉತ್‍ಕ್ಷೇಪಕಗಳಿಂದಾಗಬಹುದಾದ ನಿರ್ದಿಷ್ಟ ದಾಳಿಗಳಿಗೆ ತಡೆಯೊಡ್ಡಲು ಗುರಾಣಿಗಳನ್ನು ಬಳಸಲಾಗುತ್ತದೆ, ನಿಷ್ಕ್ರಿಯ ರಕ್ಷಣೆ ಒದಗಿಸುವ ಬದಲು ಕ್ರಿಯಾತ್ಮಕ ತುಂಡುಗಳ ಮೂಲಕ.

ಗುರಾಣಿಗಳು ಗಾತ್ರದಲ್ಲಿ ಬಹುಮಟ್ಟಿಗೆ ಬದಲಾಗುತ್ತವೆ, ಬಳಕೆದಾರನ ಸಂಪೂರ್ಣ ಶರೀರವನ್ನು ರಕ್ಷಿಸುವ ದೊಡ್ಡ ಫಲಕಗಳಿಂದ ಹಿಡಿದು ಕೈಕೈ ಹೊಡೆದಾಟದ ಬಳಕೆಗೆ ಉದ್ದೇಶಿತವಾದ ಸಣ್ಣ ಮಾದರಿಗಳವರೆಗೆ (ಉದಾ. ಬಕ್ಲರ್). ಗುರಾಣಿಗಳು ದಪ್ಪದಲ್ಲಿಯೂ ಬಹಳವಾಗಿ ಬದಲಾಗುತ್ತವೆ; ಈಟಿಗಳು ಮತ್ತು ಅಡ್ಡಬಿಲ್ಲಿನ ಬಾಣಗಳ ಅಪ್ಪಳಿಕೆಯಿಂದ ಸೈನಿಕರನ್ನು ರಕ್ಷಿಸಲು ಕೆಲವು ಗುರಾಣಿಗಳು ತುಲನಾತ್ಮಕವಾಗಿ ಆಳ, ಹೀರಿಕೊಳ್ಳಬಲ್ಲ, ಕಟ್ಟಿಗೆ ಫಲಕಗಳಿಂದ ತಯಾರಾದರೆ, ಇತರ ಗುರಾಣಿಗಳು ತೆಳ್ಳಗೆ ಹಗುರಾಗಿದ್ದವು ಮತ್ತು ಮುಖ್ಯವಾಗಿ ಅಲಗಿನ ಹೊಡೆತ/ತಿವಿತಗಳನ್ನು ತಪ್ಪಿಸಲು ವಿನ್ಯಾಸಗೊಂಡಿದ್ದವು. ಅಂತಿಮವಾಗಿ, ಗುರಾಣಿಗಳು ಆಕಾರದಲ್ಲಿ ಬಹಳವಾಗಿ ಬದಲಾಗುತ್ತವೆ, ವರ್ತುಲತೆಯಿಂದ ಹಿಡಿದು ಕೋನೀಯತೆವರೆಗೆ, ಪ್ರಮಾಣಾನುಗುಣ ಉದ್ದ ಮತ್ತು ಅಗಲದಲ್ಲಿ, ಸಮರೂಪತೆ ಮತ್ತು ಅಂಚು ಮಾದರಿಯಲ್ಲಿ; ವಿಭಿನ್ನ ಆಕಾರಗಳು ಕಾಲಾಳು ಪಡೆ ಅಥವಾ ಅಶ್ವಸೈನ್ಯಕ್ಕೆ ಹೆಚ್ಚು ಉತ್ತಮ ರಕ್ಷಣೆ ನೀಡುತ್ತವೆ, ಸಾಗಿಸುವಿಕೆಯನ್ನು ಹೆಚ್ಚಿಸುತ್ತವೆ, ಒದಗಿಸುತ್ತವೆ, ಹಡಗು ರಕ್ಷಣೆ ಅಥವಾ ಶಸ್ತ್ರದಂತಹ ಆನುಷಂಗಿಕ ಬಳಕೆಗಳನ್ನು ಒದಗಿಸುತ್ತವೆ ಮತ್ತು ಇತ್ಯಾದಿ.

ಪೂರ್ವೇತಿಹಾಸದಲ್ಲಿ ಮತ್ತು ಅತ್ಯಂತ ಮೊದಲಿನ ನಾಗರಿಕತೆಗಳ ಯುಗದ ಅವಧಿಯಲ್ಲಿ, ಗುರಾಣಿಗಳು ಕಟ್ಟಿಗೆ, ಪ್ರಾಣಿ ಚರ್ಮ, ಹೆಣೆದ ಜೊಂಡು ಅಥವಾ ಬೆತ್ತದಿಂದ ತಯಾರಾಗುತ್ತಿದ್ದವು. ಶಾಸ್ತ್ರೀಯ ಪ್ರಾಚೀನತೆ, ವಲಸೆ ಅವಧಿ ಮತ್ತು ಮಧ್ಯಯುಗದಲ್ಲಿ, ಅವು ಸಾಮಾನ್ಯವಾಗಿ ಪಾಪ್ಲರ ಮರ, ಲೈಮ್ ಅಥವಾ ಬೇರೊಂದು ಒಡಕು ನಿರೋಧಕ ನಾಟದಿಂದ ನಿರ್ಮಾಣಗೊಳ್ಳುತ್ತಿದ್ದವು, ಮತ್ತು ಕೆಲವು ನಿದರ್ಶನಗಳಲ್ಲಿ ತೊಗಲು ಅಥವಾ ಕಚ್ಚಾತೊಗಲಿನಂತಹ ವಸ್ತುವಿನಿಂದ ಹೊದಿಸಲ್ಪಡುತ್ತಿದ್ದವು ಮತ್ತು ಹಲವುವೇಳೆ ಲೋಹದ ಗುಬುಟು, ಅಂಚು ಅಥವಾ ಪಟ್ಟಿಗಳಿಂದ ಬಲಪಡಿಸಲಾಗುತ್ತಿದ್ದವು. ಅವನ್ನು ಪದಾತಿಗಳು, ನೈಟ್‍ಗಳು ಮತ್ತು ಅಶ್ವದಳದವರು ಒಯ್ಯುತ್ತಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. Wood, J. G. (1870). The uncivilized races of men in all countries of the world. Рипол Классик. p. 115. ISBN 9785878634595.


"https://kn.wikipedia.org/w/index.php?title=ಗುರಾಣಿ&oldid=754564" ಇಂದ ಪಡೆಯಲ್ಪಟ್ಟಿದೆ