ವಿಷಯಕ್ಕೆ ಹೋಗು

ಕೆ.ವಿ.ಅಯ್ಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಲಾರ ವೆಂಕಟೇಶ್ ಅಯ್ಯರ್ ಇವರು [] ೧೮೯೮ರಲ್ಲಿ ಕೋಲಾರ ಜಿಲ್ಲೆಯ ದೇವರಾಯಸಮುದ್ರದಲ್ಲಿ ಜನಿಸಿದರು. ಇವರ ಕಾವ್ಯ ನಾಮ, 'ಕೆ.ವಿ. ಅಯ್ಯರ್' ಎಂದು. ಇವರ ಓದು ಕೇವಲ ಎಸ್.ಎಸ್.ಎಲ್.ಸಿ ವರೆಗೆ ಮಾತ್ರ. ಕೆ.ವಿ.ಅಯ್ಯರರವರು ನವೋದಯದ ಮಹತ್ವದ ಸಾಹಿತಿಗಳು.ನಾಟಕದಲ್ಲಿ ಆಸಕ್ತಿ ಹೊಂದಿದ ಇವರು "ರವಿ ಕಲಾವಿದರು" ಎನ್ನುವ ಒಂದು ನಾಟಕ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅಲ್ಲದೆ ಅಂಗಸಾಧನೆಯಲ್ಲಿ ಸಹ ಇವರು ಆಸಕ್ತರು. ತಾವೇ ಒಂದು ವ್ಯಾಯಾಮ ಶಾಲೆಯನ್ನು ಸಹ ನಡೆಯಿಸುತ್ತಿದ್ದರು ಟಿ.ಪಿ.ಕೈಲಾಸಂಈವ್ಯಾಯಾಮಶಾಲೆಗೆ ಬಂದು ಮಾರ್ಗದರ್ಶನ ನೀಡಿದ್ದಿದೆ.

ಅನುವಾದ ನಾಟಕಗಳು

[ಬದಲಾಯಿಸಿ]
  1. ಪ್ರಜಾಪ್ರಗತಿ.(ಇಬ್ಸೆನ್ ನಾಟಕ)
  2. ಪತಿಯ ಕೈಗೊಂಬೆ.(ಇಬ್ಸೆನ್ ನಾಟಕ)
  3. ಮಹಾಶಿಲ್ಪಿ.(ಇಬ್ಸೆನ್ ನಾಟಕ)
  4. ವರಪರೀಕ್ಷೆ.(ಆಲಿವರ್ ಗೋಲ್ಡ್ ಸ್ಮಿತ್ ನಾಟಕ)

ಕಾದಂಬರಿಗಳು

[ಬದಲಾಯಿಸಿ]
  • ಶಾಂತಲಾ,
  • ರೂಪದರ್ಶಿ,
  • ಲೀನಾ,

ಕಥಾ ಸಂಕಲನ

[ಬದಲಾಯಿಸಿ]
  • ಸಮುದ್ಯತಾ (ಕಥೆಗಳು),
  • ಮಹಾಶಿಲ್ಪ.
  • ವರಪರೀಕ್ಷೆ.
  • ಇತರೆ:-ಕೈಲಾಸಂ ಅವರ ಸ್ಮರಣಿ.

ಅಂಗಸಾಧನೆಯ ಬಗೆಗೆ ಪುಸ್ತಕಗಳನ್ನು ಇಂಗ್ಲಿಷ್‍ನಲ್ಲಿ ರಚಿಸಿದ್ದಾರೆ:-

[ಬದಲಾಯಿಸಿ]
  • Chemical change in Physical Figure
  • Physic and Figure
  • Surya Namaskar
  • Perfect Strength. How to obtain strength.
  • Muscle Cult,

ಪ್ರಶಸ್ತಿ, ಪುರಸ್ಕಾರಗಳು

[ಬದಲಾಯಿಸಿ]
  • ೧೯೭೯ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಗರಿ.
  • ೧೯೯೪ರಲ್ಲಿ ‘ಪ್ರೊ. ಕೆ.ವಿ. ಅಯ್ಯರ್’ ಸಂಸ್ಮರಣ ಗ್ರಂಥ ಪ್ರಕಟಣೆ.

ಶ್ರೀ. ಕೆ.ವಿ.ಅಯ್ಯರ್, ನಮ್ಮನ್ನಗಲಿದ್ದು ೩.೧.೧೯೮೦ರಲ್ಲಿ.

ಉಲ್ಲೇಖಗಳು

[ಬದಲಾಯಿಸಿ]
  1. [ಕೆ-ವಿ-ಅಯ್ಯರ್]

ಹೊರಗಿನ ಕೊಂಡಿಗಳು

[ಬದಲಾಯಿಸಿ]