ಕುರುಬ ಮಹಿಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಂಪ್ರದಾಯಿಕವಾಗಿ ಕುರುಬರು ಎಂದರೆ ಕುರಿಕಾಯುವವರು. ಕುರುಬ ಎಂಬ ಹೆಸರು 'ಕುರು' ಎಂಬ ಸಂಸ್ಕೃತ ಪದದಿಂದ ಬಂದಿದೆ, ಇದರ ಅರ್ಥ 'ಸತ್ಯ ಅನ್ವೇಷಕ'.[೧] ಕುರುಬರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಹರಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಅಂದಾಜು ಒಟ್ಟು ಜನಸಂಖ್ಯೆಯ ೧೨ ಶೇಖಡದಷ್ಟು ಕುರುಬರಿದ್ದಾರೆ. ರಾಜ್ಯದಲ್ಲಿರುವ ವಿವಿಧ ಸಮುದಾಯಗಳ ಜನಸಂಖ್ಯೆಗೆ ಹೋಲಿಸಿದರೆ ಕುರುಬರದು ಮೂರನೇ ಬಹುದೊಡ್ಡ ಸಮುದಾಯವಾಗಿದೆ. ಭಾರತದಲ್ಲಿ ಬುಡಕಟ್ಟು ಎಂಬ ಜನಾಂಗದಲ್ಲಿ ಗೊಂಡರ ಸಂಖ್ಯೆ ಬಹಳಷ್ಟಿದೆ.[೨]

ಉಡುಗೆ ತೊಡುಗೆ[ಬದಲಾಯಿಸಿ]

ಕುರುಬ ಸಮಾಜದಲ್ಲಿ ಕೃಷಿ ಕುಟುಂಬದ, ಕೃಷಿಕೂಲಿಯ ಹಾಗು ಕುರಿಗಾರ ಮಹಿಳೆಯರು ಉಡುಗೆ ವಿಷಯದಲ್ಲಿ ಇತರ ಸಮಾಜದ ಮಹಿಳೆಯರಂತೆ ಇದ್ದಾರೆ. ಆದರೆ ನಿಪ್ಪಾಣಿ ಕುರಿಗಾರ ಮಹಿಳೆಯರು ಕಚ್ಚೆ ಹಾಕಿ ಸೀರೆ ಉಡುತ್ತಾರೆ.

ಗೊಂಡ ಮಹಿಳೆಯರು ಇತ್ತೀಚಿನವರೆಗೂ ಮೊಣಕಾಲಿನವರೆಗೆ ಮೇಲೇರಿಸಿ ಸೀರೆಯನ್ನು ಉಡಬೇಕಾಗಿತ್ತು. ಆದರೆ ಈಗ ಕಾಲ ಬದಲಾಗಿದ್ದು ವಯಸ್ಕರಷ್ಟೇ ಹಳೆಯ ರೀತಿಯಲ್ಲಿ ಸೀರೆಯನ್ನು ಉಡುತ್ತಾರೆ. ಉಳಿದ ವಯಸ್ಸಿನ ಗೊಂಡ ಮಹಿಳೆಯರು ಸೀರೆ ಕುಪ್ಪಸ ಧರಿಸುತ್ತಿದ್ದಾರೆ.

ಕರಕುಶಲತೆ[ಬದಲಾಯಿಸಿ]

ಗೊಂಡ ಮಹಿಳೆಯರು ದಿನನಿತ್ಯ ಬಳಕೆಯಾಗುವ ಬಿದಿರಿನಿಂದ ತಯಾರಿಸಿದ ಬುಟ್ಟಿಗಳನ್ನು, ಗುರುಬುಗಳನ್ನು, ಹುಲ್ಲು ಅಥವಾ ತೆಂಗಿನ ಗರಿಗಳಿಂದ ತಯಾರಿಸಿದ ಚಾಪೆ ಹಾಗು ಬೀಸಣಿಗೆ ಮುಂತಾದ ವಸ್ತುಗಳನ್ನು ತಾವೇ ತಯಾರಿಸಿ ಮಿಕ್ಕಿದನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು.

ಮನೆಮದ್ದು[ಬದಲಾಯಿಸಿ]

ಗೊಂಡ ಮಹಿಳೆಯರು ತಮ್ಮ ಪೂರ್ವಜರಿಂದ ಗಳಿಸಿದ ಜ್ಞಾನದಿಂದ ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯುವ ಗಿಡಮೂಲಿಕೆಗಳನ್ನು ಬಳಸಿ ಸಣ್ಣ-ಪುಟ್ಟ ಕಾಯಿಲೆಗಳಿಗೆ ತಾವೇ ಔಷಧಿಗಳನ್ನು ತಯಾರಿಸುತ್ತಿದ್ದರು. ಅವರು ಮನುಷ್ಯರಿಗಲ್ಲದೆ ಪ್ರಾಣಿಗಳಿಗೂ ಔಷಧವನ್ನು ತಯಾರಿಸುತ್ತಿದ್ದರು. [೩]

ಉಲ್ಲೇಖಗಳು[ಬದಲಾಯಿಸಿ]

  1. Ramchandra Chintaman Dhere, Translated by Anne Feldhaus (2011). Rise of a Folk God: Vitthal of Pandharpur, https://books.google.co.in/books?id=jUeeAgAAQBAJ&pg=PA256#v=onepage&q&f=false.Oxford University Press. pp. 240–241. ISBN 9780199777648.
  2. ಕುರುಬ ಮಹಿಳೆ, ಡಾ. ಚನ್ನಪ್ಪ ಕಟ್ಟಿ,ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೭, ಪು.೨೯
  3. https://www.bookbrahma.com/book/kurub-mahile