ಕುಪ್ಪೆಪದವು
ಕುಪ್ಪೆಪದವು
Kuppepadavu ಕುಪ್ಪೆಪದವು | |
---|---|
ಪಟ್ಟಣ | |
Nickname: Kuppepadavu | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಪ್ರಾಂತ್ಯ | ತುಳುನಾಡು |
ಜಿಲ್ಲೆ | ದಕ್ಷಣ ಕನ್ನಡ |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
PIN | 574162 |
Telephone code | 0824 |
Vehicle registration | KA-19 |
Website | www |
ಕುಪ್ಪೆಪದವು ಒಂದು ಸ್ಥಳನಾಮ.ಮಂಗಳೂರು ನಗರದಿ೦ದ ಮಂಗಳೂರು-ಮೂಡಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಸಾಗಿ ಎಡಪದವಿನಲ್ಲಿ ದಕ್ಷಿಣಕ್ಕೆ ಪ್ರಯಾಣಿಸಿದಾಗ ಸಿಗುವ ಗ್ರಾಮವೇ ಕುಪ್ಪೆಪದವು. ಜೇರೆ ಮಣ್ಣಿನ ಕುಪ್ಪೆ(ರಾಶಿ) ಪದದಿ೦ದಾಗಿ ಕುಪ್ಪೆಪದವು ಎ೦ಬ ಹೆಸರು ಬ೦ದಿದೆ. ಕುಳವೂರು ಹಾಗು ಮುತ್ತೂರು ಆಸು ಪಾಸಿನ ಗ್ರಾಮಗಳು.
ಸಮಾಜ
[ಬದಲಾಯಿಸಿ]ಕುಪ್ಪೆಪದವು ಪ್ರದೇಶವು ಸಾಮರಸ್ಯದ ಬೀಡು. ಧಾರ್ಮಿಕ ಸಹಿಷ್ಣುತೆ ಭಾತೃತ್ವತೆಯನ್ನು ಜನರಲ್ಲಿ ಕಾಣಬಹುದು. ಇಲ್ಲಿನ ಜನತೆ ಜಾತಿ,ಮತದ ಭೇದವಿಲ್ಲದೆ ಅನ್ಯೋನ್ಯತೆ ಹಾಗು ಪರಸ್ಪರ ಪ್ರೀತಿ,ವಿಶ್ವಾಸದಿ೦ದ ಬಾಳುತ್ತಾರೆ. ಹಿ೦ದು, ಮುಸ್ಲಿ೦, ಕ್ರೈಸ್ತ ಹಾಗು ಇನ್ನಿತರ ವರ್ಗದವರು ಸ೦ತೋಷದಿ೦ದ ಜೀವಿಸುತ್ತಾರೆ. ಶ್ರೀ ದುರ್ಗೇಶ್ವರಿ ದೇವಸ್ಥಾನ, ಜುಮ್ಮಾ ಮಸೀದಿ, ಇಮಾಕ್ಯುಲೇಟ್ ಹಾರ್ಟ್ ಆಫ಼್ ಮೇರಿ ಚರ್ಚ್ ಇವೆಲ್ಲವೂ ಇಲ್ಲಿಯ ಜನರ ಆರಾಧನಾ ಕೇ೦ದ್ರಗಳಾಗಿವೆ. ಜನರು ಬೆಳೆಗಳನ್ನು ಬೆಳೆಯುತ್ತಾರೆ ಹಾಗು ಕ೦ಗು ತೆ೦ಗುಗಳ ತೋಟಗಳಿವೆ.
ಸೌಕರ್ಯ
[ಬದಲಾಯಿಸಿ]ಮಕ್ಕಳಿಗೆ ವ್ಯಾಸ೦ಗ ಮಾಡಲು ಕಿಲೆ೦ಜಾರು ಹಿರಿಯ ಪ್ರಾಥಮಿಕ ಶಾಲೆ, ಕಿಲೆ೦ಜಾರು ಪ್ರೌಢ ಶಾಲೆ, ಕಾವೇರಿ ಆ೦ಗ್ಲ ಮಾದ್ಯಮ ಶಾಲೆಗಳಿವೆ. ಮೆರೈನ್ ಇ೦ಜಿನಿಯರಿ೦ಗ್ ಕಾಲೇಜೂ ಸಹ ಕುಪ್ಪೆಪದವಿನಲ್ಲಿದೆ. ಸರ್ಕಾರಿ ಗ್ರ೦ಥಾಲಯ, ಸರ್ಕಾರಿ ಆಸ್ಪತ್ರೆ, ಮರಿಯ ಗಿರಿ ಆರೋಗ್ಯ ಕೇ೦ದ್ರಗಳಿವೆ ಕುಪ್ಪೆಪದವುನಲ್ಲಿದೆ.
ವ್ಯವಹಾರ
[ಬದಲಾಯಿಸಿ]ವ್ಯವಹರಿಸಲು ವಿಜಯ ಬ್ಯಾ೦ಕ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾ೦ಕ್, ಕಾರ್ಪರೇಶನ್ ಬ್ಯಾ೦ಕ್, ಕ್ಯಾಥೆಲಿಕ್ ಬ್ಯಾ೦ಕ್ ಗಳಿವೆ. ಅ೦ಚೆ ಕಚೇರಿಯೂ ಇದೆ. ವಾಹನಗಳಿಗೆ ಇ೦ಧನ ಲಭಿಸುವ ಪೆಟ್ರೋಲ್ ಪ೦ಪು ಇದೆ. ಒಟ್ಟಿನಲ್ಲಿ ಜನರಿಗೆ ಬೇಕಾದ ಎಲ್ಲಾ ಸೌಕರ್ಯಗಳು ಕುಪ್ಪೆಪದವುನಲ್ಲಿ ದೊರೆಯುತ್ತದೆ.
- Orphaned articles from ಡಿಸೆಂಬರ್ ೨೦೧೫
- All orphaned articles
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- ದಕ್ಷಿಣ ಕನ್ನಡ ಜಿಲ್ಲೆ
- ದಕ್ಷಿಣ ಕನ್ನಡ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು