ಕರ್ನಾಟಕ ವಿಧಾನ ಪರಿಷತ್' ಕರ್ನಾಟಕ ರಾಜ್ಯ ಶಾಸಕಾಂಗದ ಮೇಲ್ಮನೆ. ವಿಧಾನ ಸಭೆಯನ್ನು ಕೆಳಮನೆ ಎಂದು ಕರಿಯಲಾಗುತ್ತದೆ. ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಈ ಎರಡೂ ಸಭೆಗಳು ನಿರ್ಧಿಷ್ಟ ಕಾರ್ಯ ನಿರ್ವಹಿಸುತ್ತವೆ. ಇದನ್ನು ಭಾರತದ ರಾಜ್ಯಸಭೆಗೆ ಹೋಲಿಸಬಹುದು.
ಗಂಭೀರ ಚರ್ಚೆಗಳು ನಡೆಯಬೇಕು ಎನ್ನುವ ಕಾರಣಕ್ಕಾಗಿಯೇ ವಿಧಾನ ಪರಿಷತ್ ಅನ್ನು ವಿಶಿಷ್ಟವಾಗಿ ರಚಿಸಲಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ತಜ್ಞರಾದವರು, ನೇರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಸಾಧ್ಯವಾಗದೇ ಇರುವವನ್ನು ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗುತ್ತದೆ.11 ಸದಸ್ಯರನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ.
ಭಾರತದಲ್ಲಿ ಒಟ್ಟು ೭ (೬?) ರಾಜ್ಯಗಳಲ್ಲಿ ವಿಧಾನ ಪರಿಷತ್ ಕಾರ್ಯ ನಿರ್ವಹಿಸುತ್ತಿವೆ. ತಮಿಳು ನಾಡು ರಾಜ್ಯದಲ್ಲೂ ಪ್ರಾರಂಭ ಮಾಡಲು ನಿರ್ಧರಿಸಲಾಗಿದೆ. ಕರ್ನಾಟಕ ವಿಧಾನ ಪರಿಷತ್'ನ ಒಟ್ಟು ಸದಸ್ಯರ ಸಂಖ್ಯೆ ೭೫. ಸದಸ್ಯರ ಕಾರ್ಯಾವದಿ ೬ ವರ್ಷ. ಇದರಲ್ಲಿ ೧/೩ ನೇ ಭಾಗದಷ್ಟು ಸದಸ್ಯರು ಪ್ರತಿ ೨ ವರ್ಷಕ್ಕೊಮ್ಮೆ ನಿವೃತ್ತಿ ಹೊಂದುತ್ತಾರೆ. ಈ ಕಾರಣದಿಂದ, ವಿಧಾನ ಪರಿಷತನ್ನು ಸ್ಥಿರ ಅಥವಾ ಖಾಯಂ ಸಭೆ ಎಂದು ಕರೆಯಲಾಗುತ್ತದೆ
ವಿಧಾನಪರಿಷತ್ತಿಗೆ ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಂದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯಪಾಲರು 11 ಸದಸ್ಯರನ್ನು ನಾಮಕರಣ ಮಾಡುತ್ತಾರೆ.
ಪರಿಷತ್ ಬಲಾಬಲ : ವಿಧಾನಪರಿಷತ್ತಿನ ಒಟ್ಟು ಸದಸ್ಯ ಬಲ 75. ಸದಸ್ಯರ ಅವಧಿ 6 ವರ್ಷಗಳು. ಇವರಲ್ಲಿ 3/1 ಭಾಗದಷ್ಟು ಸದಸ್ಯರು ಪ್ರತಿ 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ಸದ್ಯ, ವಿಧಾನಸಭೆಯಿಂದ ಆಯ್ಕೆಯಾದ 7 ಸದಸ್ಯರು ನಿವೃತ್ತರಾಗಲಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
ಸದಸ್ಯರ ಆಯ್ಕೆ * ವಿಧಾನಸಭೆಯಿಂದ 25 * ಸ್ಥಳೀಯ ಸಂಸ್ಥೆಗಳ ಸದಸ್ಯರು, ಕ್ಷೇತ್ರದ ಎಂಪಿಗಳು, ಎಂಎಲ್‌ಎಗಳು 25 * ಶಿಕ್ಷಕ ಕ್ಷೇತ್ರದಿಂದ 7 * ಪದವೀಧರ ಕ್ಷೇತ್ರದಿಂದ 7 * ರಾಜ್ಯಪಾಲರು 11 ಸದಸ್ಯರನ್ನು ನಾಮಕರಣ ಮಾಡುತ್ತಾರೆ.[೧]
೨೦೧೩ ಆಗಸ್ಟ್ ಕೊನೇ ವಾರದ ಲ್ಲಿ ನೆಡೆದ ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ) ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಒಬ್ಬ ಪಕ್ಷೇರ ಅಭ್ಯರ್ಥಿ ಜಯ ಗಳಿಸಿದ್ದಾರೆ ( ಎಣಿಕೆ ೨೬-೮-೨೦೧೩). ಅದಕ್ಕೆ ಒಂದು ವಾರದ ಮೊದಲು ಮಂಡ್ಯ ,ಬೆಂಗಳೂರು ಗ್ರಾಮಾಂತರ , ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡು ಲೋಕಸಭೆಯ ಕ್ಷೇತ್ರ ಗೆದ್ದಿತ್ತು . ದಿನಾಂಕ ೨೭-೮-೨೦೧೩ ಕ್ಕೆ ವಿಧಾನ ಪರಿಷತ್ತಿನಲ್ಲಿ ಪಕ್ಷಗಳ ಬಲಾಬಲ ಈ ರೀತಿ ಇದೆ :
ಒಟ್ಟು -----೭೫ ಸ್ಥಾನಗಳು
ಕಾಂಗ್ರೆಸ್ ---- -೧೯ ,
ಬಿಜೆಪಿ -------೩೯ ,
ಜೆಡಿಎಸ್ ------೧೨ ,,
ಪಕ್ಷೇತರರು -----೨
ಸಭಾಪತಿ -------೧ ;;
ಖಾಲಿ --------೨
ಒಟ್ಟು -------೭೫
೨೦೧೪ ಜೂನ್ ನಲ್ಲಿ ಬಿಜೆಪಿ ಯ ೧೦, ಜೆಡಿಎಸ್ ನ ೩ ಕಾಂಗ್ರೆಸ್ ನ ಒಬ್ಬರು ನಿವೃತ್ತಿ ಹೊಂದಲಿದ್ದಾರೆ . ಅದರಲ್ಲಿ ೭ ಮಂದಿ ವಿಧಾನ ಸಭೆಯಿಂದ ಆಯ್ಕೆ ಆಗುವರು; ಉಳಿದವರು ೫ ನಾಮ ಕರಣ (೫) ಒಬ್ಬರಿ ಶಿಕ್ಷಕರ ಕ್ಷೇತ್ರದಿಂದ , ಒಬ್ಬ ಪಧವೀ ಧರ ಕ್ಷೇತ್ರದಿಂದ ಆಯ್ಕೆ ಆಗುವರು. ಆಗ್ ಪುನಹ ಪಕ್ಷಗಳ ಬಲಾಬಲ ಬದಲಾಯಿಸುವುದು.
೨೪-೬-೨೦೧೪ ಶಿಕ್ಷಕರ ಕ್ಷೇತ್ರಗಳು ಗೆದ್ದವರು: +ಚುನಾವಣೆ ಎಣಿಕೆ ಈಶಾನ್ಯ ಶರಣಪ್ಪ ಮಟ್ಟೂರು, ಕಾಂಗ್ರೆಸ್ +೧/1-;; ಪ್ರೊ.ಎಸ್`ವಿ.ಸಂಕನೂರ.ಬಿಜೆಪಿ+೧/1-;; + ಜೆಡಿಎಎಸ್`++2 ಬೆಂಗಳೂರು ಕ್ಷೇತ್ರ ಪುಟ್ಟಣ್ಣ ೩ನೇಬಾರಿ ಜಯ ಆಗ್ನೇಯಪಧವೀಧರ ಕ್ಷೇತ್ರ ಜೆಡಿಎಸ್`ಚೌಡರೆಡ್ಡಿ ಗೆಲವು,;; ??ಜೆಡಿಎಸ್`ನ ಎಂ.ಬಿ.ಅಂಬಲಗಿ ಗೆಲವು;
೨೪-೬-೨೦೧೪ ದಿ ೨೩ರಂದು ಕಾಂಗ್ರೆಸ`ನ ೫/5 ಜನರನ್ನು ನಾಮಕರಣ ಮಾಡಲಾಗಿದೆ ವಿ.ಎಸ್.ಉಗ್ರಪ್ಪ, ಇಕ್ಬಾಲ್ ಸರಡಗಿ; ಅಬ್ದುಲ್` ಜಬ್ಬಾರ್`, ಜಯಮಾಲಾ, ಐವನ್`ಡಿಸೋಜಾ.;(ಪ್ರಜಾವಾಣಿ ೨೪-೬-೨೦೧೪)ಈ ಪೈಕಿ ಪ್ರೊ| ಮುಮ್ತಾಜ್ ಅಲಿಖಾನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ಹಿಂದೆಯೇ ಆಯ್ಕೆಯಾಗಿದ್ದ ಅಬ್ದುಲ್ ಜಬ್ಟಾರ್ ಅವರನ್ನು ಮುಂದುವರೆಸಲಾಗಿದೆ. ಇನ್ನು ಬಿಜೆಪಿಯ ಎಸ್.ಆರ್.ಲೀಲಾ, ಡಾ| ದೊಡ್ಡರಂಗೇಗೌಡ, ಎಂ.ಆರ್.ದೊರೆಸ್ವಾಮಿ ಹಾಗೂ ಬಿ.ಬಿ.ಶಿವಪ್ಪ ಅವರ ಸ್ಥಾನಗಳಿಗೆ ಉಳಿದ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿಯ ನಾಲ್ವರು ಸದಸ್ಯರ ಅಧಿಕಾರಾವಧಿ ಜು.30ಕ್ಕೆ ಕೊನೆಗೊಳ್ಳಲಿದ್ದು, ಅನಂತರ ಹೊಸ ಸದಸ್ಯರು ಅಧಿಕಾರ ಪಡೆಯುವರು'
ರಾಜ್ಯದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಭಾನುವಾರ, 2015 ಡಿಸೆಂಬರ್ 27ರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆದಿದೆ.
ಈಗಿನ ಒಟ್ಟು ಬಲಾಬಲ : ವಿಧಾನಪರಿಷತ್ ಸದಸ್ಯರ ಬಲಾಬಲ 75 (ಸಭಾಪತಿಗಳು ಸೇರಿ). ಸದ್ಯ ಕಾಂಗ್ರೆಸ್ 28, ಬಿಜೆಪಿ 30, ಜೆಡಿಎಸ್ 12 ಸದಸ್ಯ ಬಲ ಹೊಂದಿವೆ. 4 ಪಕ್ಷೇತರ ಸದಸ್ಯರಿದ್ದಾರೆ.
ವಿಧಾನ ಪರಿಷತ್ ಚುನಾವಣೆ 2015 ಮತದಾರರು : 1,07,123. (Dec 27, 2015/deccanherald)
ದ್ವಿಸದಸ್ಯ ಕ್ಷೇತ್ರಗಳು ಸೇರಿ ಒಟ್ಟು 20 ಕ್ಷೇತ್ರಗಳಿಂದ 25 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಕಣದಲ್ಲಿದ್ದ ಅಭ್ಯರ್ಥಿಗಳು-125.
ಮತ ಚಲಾವಣೆಯ ವಿಧಾನ: ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ‘ಪ್ರಾಶಸ್ತ್ಯ’ದ ಮತಗಳನ್ನು ಚಲಾಯಿಸ ಬೇಕು.
ಮೊದಲ ಪ್ರಾಶಸ್ತ್ಯದ ಅಭ್ಯರ್ಥಿಯ ಹೆಸರಿನ ಮುಂದೆ ‘1’ ಎಂದು ನಮೂದಿಸಬೇಕು. ಉಳಿದ ಅಭ್ಯರ್ಥಿಗಳಿಗೆ ಎಷ್ಟು ಪ್ರಾಶಸ್ತ್ಯ ನೀಡಬೇಕು ಎಂಬುದನ್ನು ಅವರ ಹೆಸರಿನ ಮುಂದೆ 2, 3, 4, ಇತ್ಯಾದಿ ಅಂಕಿಗಳಲ್ಲಿ ನಮೂದಿಸಬಹುದು. ಒಬ್ಬ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಉಳಿದ ಅಭ್ಯರ್ಥಿಗಳಿಗೆ ಮತ ನೀಡದೆಯೂ ಇರಬಹುದು. ಯಾವುದೇ ಅಭ್ಯರ್ಥಿ (ನೋಟಾ ಸೇರಿದಂತೆ) ಹೆಸರಿನ ಮುಂದೆ ‘1’ ಎಂದು ಸೂಚಿಸದಿದ್ದರೆ ಅಥವಾ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಎದುರು ‘1’ ಎಂದು ನಮೂದಿಸಿದರೆ ಮತ ಅಸಿಂಧು ಆಗಲಿದೆ. ಮತವನ್ನು ಅಂಕಿಗಳಲ್ಲಿಯೇ ನಮೂದಿಸಬೇಕು.
ಅಸಿಂಧು ಮತಗಳ ನಿಯಮ:
ಅಂಕಿಗಳನ್ನು ಅಕ್ಷರ ರೂಪದಲ್ಲಿ ನಮೂದಿಸಿದರೆ ಮತ ಅಸಿಂಧು ಆಗಲಿದೆ.
ಮತಪತ್ರದಲ್ಲಿ ಮತದಾರ ಹೆಸರು ಬರೆದರೆ, ಸಹಿ ಮಾಡಿದರೆ, ಹೆಬ್ಬೆಟ್ಟು ಹಾಕಿದರೆ ಅದು ಅಸಿಂಧು ಆಗಲಿದೆ
ಒಬ್ಬ ಅಭ್ಯರ್ಥಿಯ ಹೆಸರಿನ ಎದುರು ಒಂದು ಅಂಕಿಯನ್ನು ಮಾತ್ರ ನಮೂದಿಸಬೇಕು. ಒಂದಕ್ಕಿಂತ ಹೆಚ್ಚು ಅಂಕಿಗಳನ್ನು ನಮೂದಿಸಿದರೂ ಮತ ಅಸಿಂಧು ಆಗಲಿದೆ.
ಮತಪತ್ರದಲ್ಲಿ ಅಂಕಿಗಳನ್ನು ಗುರುತಿಸಲು ಚುನಾವಣಾಧಿಕಾರಿ ನೀಡಿದ ನೇರಳೆ ಬಣ್ಣದ ಸ್ಕೆಚ್ ಪೆನ್ ಮಾತ್ರ ಬಳಸಬೇಕು. ಅದರ ಬದಲು ಬೇರೆ ಪೆನ್ ಬಳಸಿದರೂ ಮತ ಅಸಿಂಧು ಆಗಲಿದೆ.
ಈ ಬಾರಿ ನೋಟಾಗೆ ಅವಕಾಶ
ನೋಟಾ ಆಯ್ಕೆಯ ಎದುರು 1 ಅಂಕಿಯನ್ನು ಬರೆದು ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಬಹುದು.[೨]
25 ಸ್ಥಾನಗಳಿಗೆ ಚುನಾವಣೆ : ಶಿಕ್ಷಕರ, ಪದವೀಧರರ ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ 25 ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ನ 12, ಬಿಜೆಪಿಯ 7, ಜೆಡಿಎಸ್ 5, ಒಬ್ಬರು ಪಕ್ಷೇತರ ಸದಸ್ಯರು 2016ರ ಜನವರಿ 5ರಂದು ನಿವೃತ್ತರಾಗಲಿದ್ದು, ಇವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
ಚುನಾವಣೆ ಕ್ಷೇತ್ರ : ವಾಯುವ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ, ದಕ್ಷಿಣ ಪದವೀಧರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರ. ಮೈಸೂರು, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ರಾಯಚೂರು, ಚಿತ್ರದುರ್ಗ
ಕಾಂಗ್ರೆಸ್ ಮತ್ತು ಬಿ.ಜೆ.ಪಿ. ತಲಾ 20 ಸ್ಥಾನಗಳಿಗೆಸ್ಪರ್ದಿಸಿದ್ದವು ; ಜೆ.ಡಿ.(ಎಸ್) 18 ಸ್ಥಾನಗಳಿಗೂ , ಇತರ ಅಭ್ಯರ್ಥಿಗಳು ಸೇರಿ 125 ಸ್ಪರ್ಧಿಗಳಿದ್ದರು
ದ್ವಿಸದಸ್ಯ ಕ್ಷೇತ್ರಗಳು ಸೇರಿ ಒಟ್ಟು 20 ಕ್ಷೇತ್ರಗಳಿಂದ 25 ಸದಸ್ಯರನ್ನು ಆಯ್ಕೆ ಮಾಡಬೇಕಾಗಿತ್ತು. ಕಣದಲ್ಲಿದ್ದ ಅಭ್ಯರ್ಥಿಗಳು-125.
2015 ಡಿಸೆಂಬರ್ 27ರಂದು ಚುನಾವಣೆ ನಡೆದಿದ್ದು, ಡಿಸೆಂಬರ್ 30ರಂದು ಎಣಿಕೆಯಾಗಿ ಫಲಿತಾಂಶ ಪ್ರಕಟಗೊಂಡಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಏಳು ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ಜೂನ್ 10ರಂದು ಚುನಾವಣೆ ನಡೆಯಲಿದೆ.
ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ ಈ ಬಾರಿ ನಾಲ್ಕು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಬಹುದು. ಅಲ್ಲದೇ ಮೂವರು ನಾಮಕರಣ ಸದಸ್ಯರನ್ನು ನೇಮಿಸುವುದಕ್ಕೂ ಆಡಳಿತ ಪಕ್ಷಕ್ಕೆ ಅವಕಾಶ ಇದೆ.
ಚುನಾವಣೆ ವೇಳಾಪಟ್ಟಿ :
ಅಧಿಸೂಚನೆ ಪ್ರಕಟಣೆ ೨೪-೫-೨೦೧೬,
ನಾ,ಪತ್ರ ಸಲ್ಲಿಕೆ ಕೊನೇ ದಿನ :೩೧-೫-೨೦೧೬,
ನಾಮಪತ್ರ ಪರಿಶೀಲನೆ :೧-೬-೨೦೧೬,
ನಾಮಪತ್ರ ಹಿಂಪಡೆಯಲು ಕೊನೆಯ ದಿನ : ೩-೬-೨೦೧೬,
ಮತದಾನ : ೧೦-೬-೨೦೧೬.
(ಆಕಾಂಕ್ಷಿಗಳು :ಕಾಂ:ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್, ಉದ್ಯಮಿ ಕೆ.ಪಿ.ನಂಜುಂಡಿ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಜಿ.ಸಿ.ಚಂದ್ರಶೇಖರ್, ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಕಾರ್ಯದರ್ಶಿ ಎಂ.ಎಸ್.ಬಸವರಾಜು, ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರಾಮಚಂದ್ರಪ್ಪ, ಮಾಜಿ ಸಂಸದ ಮಂಜುನಾಥ ಕುನ್ನೂರು, ಜಯಪ್ರಕಾಶ ನಾರಾಯಣ ವೇದಿಕೆ ಅಧ್ಯಕ್ಷ ಮಳವಳ್ಳಿ ಶಿವಣ್ಣ;ಹಟ್ಟಿ ಚಿನ್ನದ ಗಣಿ ಅಧ್ಯಕ್ಷೆ ರಾಣಿ ಸತೀಶ್, ಮಾಜಿ ಸಂಸದೆ ರಮ್ಯಾ, ಚಿತ್ರನಟಿಯರಾದ ಭವ್ಯಾ ಹಾಗೂ ಬಾಲ ಭವನ ಸೊಸೈಟಿ ಅಧ್ಯಕ್ಷೆ ಭಾವನಾ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಲ್ಲಾಜಮ್ಮಾ)
ಚುನಾವಣೆ ಬಲಾಬಲ : ವಿಧಾನಪರಿಷತ್ತಿಗೆ ಏಳು ಸದಸ್ಯರನ್ನು ಆಯ್ಕೆ ಮಾಡಲು ಜೂನ್ 10ರಂದು ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಆಯ್ಕೆಯಾಗಲು 29 ಮತಗಳು ಬೇಕು. 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 8 ಅಭ್ಯರ್ಥಿಗಳಿದ್ದಾರೆ.
ಕಾಂಗ್ರೆಸ್ ಬಲಾಬಲ : ಚುನಾವಣೆಗೆ ರಿಜ್ವಾನ್ ಅರ್ಷದ್, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ಆರ್.ಬಿ.ತಿಮ್ಮಾಪುರ ಅವರು ಕಾಂಗ್ರೆಸ್ ಅಭ್ಯರ್ಥಿಗಳು. ಒಟ್ಟು 4 ಅಭ್ಯರ್ಥಿಗಳಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 123 ಸದಸ್ಯ ಬಲ ಹೊಂದಿದೆ. ತಲಾ 30 ರಂತೆ 123 ಮತಗಳನ್ನು ಹಂಚಿಕೆ ಮಾಡಿದರೆ ಎಲ್ಲರೂ ಗೆಲುವು ಸಾಧಿಸಲಿದ್ದಾರೆ.
ಬಿಜೆಪಿಯ (44) : ಬಿಜೆಪಿ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೊದಲನೇ ಅಭ್ಯರ್ಥಿ ವಿ.ಸೋಮಣ್ಣ, 2ನೇ ಅಭ್ಯರ್ಥಿ ಲೆಹರ್ ಸಿಂಗ್. ಸೋಮಣ್ಣ ಅವರಿಗೆ 29 ಮತಗಳು ಹಂಚಿಕೆಯಾದ ಬಳಿಕ 15 ಮತಗಳು ಉಳಿಯುತ್ತವೆ. ಜೆಡಿಎಸ್ ಮೈತ್ರಿ ಇದ್ದರೆ ಇಬ್ಬರು ಗೆಲ್ಲಬಹುದು.
ಜೆಡಿಎಸ್ ಪಕ್ಷದಿಂದ ನಾರಾಯಣ ಸ್ವಾಮಿ, ಡಾ.ವೆಂಕಟಪತಿ ಅವರು ಕಣದಲ್ಲಿದ್ದಾರೆ. .ವಿಧಾನಸಭೆಯಲ್ಲಿ ಜೆಡಿಎಸ್‌ನ 40 ಶಾಸಕರಿದ್ದಾರೆ. ಮೊದಲ ಅಭ್ಯರ್ಥಿ ನಾರಾಯಣ ಸ್ವಾಮಿ ಅವರಿಗೆ 29 ಮತಗಳು ಹಂಚಿಕೆಯಾದರೆ 11 ಮತಗಳು ಉಳಿಯುತ್ತವೆ. ಬಿಜೆಪಿ ಮತ್ತು ಜೆಡಿಎಸ್ ತಮ್ಮ ಬಳಿ ಉಳಿಯುವ ಮತಗಳನ್ನು ಹಂಚಿಕೆ ಮಾಡಿಕೊಳ್ಳುವರೇ?[೬]
ದಿ:೧೦-೬-೨೦೧೬:ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್–4, ಬಿಜೆಪಿ–2, ಜೆಡಿಎಸ್‌ಗೆ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಜೆಡಿಎಸ್‌ನ ಡಾ.ವೆಂಕಟಪತಿ ಸೋತಿದ್ದಾರೆ.
ದಕ್ಷಿಣ ಪದವೀಧರ, ಪಶ್ಚಿಮ ಶಿಕ್ಷಕ, ವಾಯುವ್ಯ ಪದವೀಧರ, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ನಾಲ್ವರು ವಿಧಾನಪರಿಷತ್ ಸದಸ್ಯರ ಅವಧಿ ಜುಲೈ 4ಕ್ಕೆ ಅಂತ್ಯಗೊಳ್ಳಲಿದೆ, ಅವರಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಪಶ್ಚಿಮ ಶಿಕ್ಷಕರ ಕ್ಷೇತ್ರ ಬಸವರಾಜ ಹೊರಟ್ಟಿ ಗೆಲುವು (ಜೆಡಿಎಸ್)(ಶೇ 50+1) ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತ.
ದಕ್ಷಿಣ ಪದವೀಧರ ಕ್ಷೇತ್ರ:ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆಯ ನಂತರ ಜೆಡಿಎಸ್ 17,161, ಬಿಜೆಪಿ 16,853, ಕಾಂಗ್ರೆಸ್ 8,245 ಮತ ಗಳಿಸಿದ್ದವು. ಪಕ್ಷೇತರ ಅಭ್ಯರ್ಥಿ ಪ್ರೊ.ಕೆ.ಎಸ್.ಭಗವಾನ್ 2,396 ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ 741 ಮತ ಗಳಿಸಿದರು. ಸ್ವೀಕೃತಗೊಂಡ 47,057 ಮತಗಳ ಪೈಕಿ ಶೇ 50ಕ್ಕಿಂತ ಹೆಚ್ಚಿನ ಮತಗಳು ಯಾರಿಗೂ ಲಭಿಸದ ಕಾರಣ ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆಗೆ ನಡೆಯಿತು.
ಎಲ್ಲಾ ಅಭ್ಯರ್ಥಿಗಳ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಹಂಚಿಕೆ ಮಾಡಿದ ನಂತರ ಜೆಡಿಎಸ್ ಅಭ್ಯರ್ಥಿ 23,619 ಮತಗಳನ್ನು ಪಡೆದು ಗೆಲವು ಪಡೆದರು. ಬಿಜೆಪಿ ಗಳಿಸಿದ್ದ 16,853 ಮತಗಳು ಅಂತಿಮ ಸುತ್ತಿನಲ್ಲಿ ಜೆಡಿಎಸ್‌ಗೆ ಹಂಚಿಕೆಯಾದ ಕಾರಣ 14,753 ಮತಗಳಷ್ಟೆ ಉಳಿದವು.
5743 ಮತಗಳು ತಿರಸ್ಕೃತ: ಚುನಾವಣೆಯಲ್ಲಿ ಮತ ಚಲಾಯಿಸಿದ 52,800 ಮತಗಳ ಪೈಕಿ 5,743 ಮತಗಳು ತಿರಸ್ಕೃತಗೊಂಡವು. ಮೈಸೂರು ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನಲ್ಲಿ ಮಂಗಳವಾರ ಬೆಳಗ್ಗಿನ ಜಾವ 5.30ರ ಸುಮಾರಿಗೆ ಮತ ಎಣಿಕೆ ಕೊನೆಗೊಂಡಿತು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 21 ಸಾವಿರ.
ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪ್ತಿ ಹೊಂದಿರುವ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ (ಫೆ.3) ಮತದಾನ ನಡೆದಿದೆ. ಈ ಕ್ಷೇತ್ರ ಪ್ರತಿನಿಧಿಸಿದ್ದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆ ಆಗಿದ್ದರಿಂದ ಅವಧಿಗೆ ಮೊದಲೇ ಈ ಚುನಾವಣೆ ಬಂದಿದೆ.
ಕಾಂಗ್ರೆಸ್ ಟಿ.ಎಸ್. ನಿರಂಜನ್, ಬಿಜೆಪಿ ಪಿ.ಆರ್. ಬಸವರಾಜು, ಜೆಡಿಎಸ್ ರಮೇಶ್ ಬಾಬು ಅವರನ್ನು ಕಣಕ್ಕಿಳಿಸಿದೆ. ಅಲ್ಲದೆ, ಜೆಡಿಎಸ್‌ಗೆ ಬಂಡಾಯದ ಹರಿಹರದ ಜೆಡಿಎಸ್ ಶಾಸಕ ಎಚ್.ಎಸ್. ಶಿವಶಂಕರ್ ಅವರ ಸಹೋದರ ಅರವಿಂದ ಅವರು ಸ್ಪರ್ಧೆಯಲ್ಲಿದ್ದಾರೆ.[೧೩]
ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ರಮೇಶ್‌ಬಾಬು ಜಯಗಳಿಸಿದ್ದಾರೆ. ಈ ಕ್ಷೇತ್ರವನ್ನು ಬಿಜೆಪಿ ಯಿಂದ ಜೆಡಿಎಸ್ ಕಸಿದುಕೊಂಡಿದೆ. ಜೆಡಿಎಸ್‌ನ ರಮೇಶ್ ಬಾಬು 1,611 ಮತಗಳ ಅಂತರದಿಂದ ಸಮೀಪದ ಸ್ಪರ್ಧಿ ಬಿಜೆಪಿಯ ಪಿ.ಆರ್. ಬಸವರಾಜು (ಪೆಪ್ಸಿ) ಅವರನ್ನು ಸೋಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ನಿರಂಜನ್ ಠೇವಣಿ ಕಳೆದುಕೊಂಡರು. ರಮೇಶ್ ಬಾಬು 7,810 ಮತಗಳನ್ನು ಪಡೆದರೆ ಬಸವರಾಜು 6,199 ಮತ ಗಳಿಸಿದರು. ಮೊದಲ ಸುತ್ತಿನ ಪ್ರಾಶಸ್ತ್ಯ ಮತದಲ್ಲಿ ಯಾವ ಅಭ್ಯರ್ಥಿಯೂ ಶೇ 50ಕ್ಕಿಂತ ಹೆಚ್ಚು ಮತಗಳನ್ನು ಪಡೆಯದ ಕಾರಣ 2ನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಯಿತು.
ಅಂತಿಮವಾಗಿ ರಮೇಶ್ ಬಾಬು ಗೆಲುವು ಪಡೆದರು. ಮಂಗಳವಾರ ಬೆಳಗಿನ ಜಾವ ಫಲಿತಾಂಶ ಪ್ರಕಟಿಸಲಾಯಿತು. ಒಟ್ಟು 1,237 ಮತಗಳು ಅಸಿಂಧುವಾದವು. 22 ನೋಟಾ ಮತಗಳು ಚಲಾವಣೆಯಾಗಿದ್ದವು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ರಮೇಶಬಾಬು 20 ವರ್ಷದಿಂದ ಜೆಡಿಎಸ್‌ನಲ್ಲಿದ್ದು, ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದಾರೆ. ಏಳು ವರ್ಷದಿಂದ ಪಕ್ಷದ ರಾಜ್ಯ ವಕ್ತಾರರಾಗಿ ಕೆಲಸ ಮಾಡುತ್ತಿರುವ ಅವರು, ಜೆಡಿಎಸ್ ವಿದ್ಯಾರ್ಥಿ ಘಟಕ, ಯುವ ಘಟಕ, ವಕೀಲರ ಘಟಕಗಳಲ್ಲಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಟ್ಟಣ ಸಹಕಾರಿ ಬ್ಯಾಂಕುಗಳ ಮಹಾ ಮಂಡಳದಲ್ಲಿ ನಿರ್ದೇಶಕರೂ ಆಗಿದ್ದಾರೆ.[೧೪]