ವಿಷಯಕ್ಕೆ ಹೋಗು

ಕಬ್ಬಿನ ರಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಬ್ಬಿನ ರಸ
ಕಬ್ಬಿನ ರಸವನ್ನು ತೆಗೆಯಲು ಬಳಸಲಾಗುವ ಯಂತ್ರ

'ಕಬ್ಬಿನ ರಸವು (ಕಬ್ಬಿನ ಹಾಲು) ಹಿಸುಕಲಾದ ಕಬ್ಬಿನಿಂದ ತೆಗೆಯಲಾದ ದ್ರವ. ಇದನ್ನು ಅನೇಕ ಸ್ಥಳಗಳಲ್ಲಿ ಪಾನೀಯವಾಗಿ ಸೇವಿಸಲಾಗುತ್ತದೆ, ವಿಶೇಷವಾಗಿ ಕಬ್ಬನ್ನು ವಾಣಿಜ್ಯಿಕವಾಗಿ ಬೆಳೆಯುವ ಸ್ಥಳಗಳಲ್ಲಿ, ಉದಾಹರಣೆಗೆ, ಆಗ್ನೇಯ ಏಷ್ಯಾ, ಭಾರತೀಯ ಉಪಖಂಡ, ಉತ್ತರ ಆಫ್ರಿಕಾ ಮತ್ತು ಲ್ಯಾಟಿನ್ ಅಮೇರಿಕಾ.

ಸಿಪ್ಪೆ ತೆಗೆದ ಕಬ್ಬನ್ನು ಯಂತ್ರದಲ್ಲಿ ಜಜ್ಜಿ ಕಬ್ಬಿನ ರಸವನ್ನು ಪಡೆಯಲಾಗುತ್ತದೆ ಮತ್ತು ಇದು ರಮ್‍ನ ಮುಖ್ಯ ಪೂರ್ವಗಾಮಿಗಳಲ್ಲಿ ಒಂದಾಗಿದೆ.

ಬೀದಿ ಮಾರಾಟಗಾರರು ಭಾರತದಾದ್ಯಂತ ಕಬ್ಬಿನ ರಸವನ್ನು ಮಾರಾಟ ಮಾಡುತ್ತಾರೆ. ಇವರು ಕಬ್ಬನ್ನು ಒಂದು ಯಂತ್ರದಲ್ಲಿ ಹಾಕಿದಾಗ ಅದು ಕಬ್ಬನ್ನು ಜಜ್ಜಿ ಕಬ್ಬಿನ ರಸವನ್ನು ಹೊರತೆಗೆಯುತ್ತದೆ. ಕಬ್ಬಿನ ರಸಕ್ಕೆ ಸಾಮಾನ್ಯವಾಗಿ ಸ್ವಲ್ಪ ನಿಂಬೆ ರಸ ಮತ್ತು/ಅಥವಾ ಶುಂಠಿ ರಸವನ್ನು ಸೇರಿಸಿ ನೀಡಲಾಗುತ್ತದೆ.[]

ಪಾಕಿಸ್ತಾನ ಸರ್ಕಾರವು ಕಬ್ಬಿನ ರಸವನ್ನು ದೇಶದ ರಾಷ್ಟ್ರಪಾನೀಯವೆಂದು ಘೋಷಿಸಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Monisha Bharadwaj (16 July 2018). Indian Cookery Course. Octopus Books. pp. 1093–. ISBN 978-0-85783-593-2.
  2. "Govt declares sugarcane juice as 'national drink' of Pakistan". The Nation. 25 January 2019. Retrieved 10 February 2019.