ಓಝೋನ್ ಪದರ
ಓಝೋನ್ ಪದರ ಸೂರ್ಯನಿಂದ ಹೊರಸೂಸುವ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುವ ಭೂಮಿಯ ವಾಯುಮಂಡಲದಲ್ಲಿ ಒಂದು ಪ್ರದೇಶವಾಗಿರುತ್ತದೆ[೧] . ಇದು ವಾಯುಮಂಡಲದಲ್ಲಿ ಓಝೋನ್ O3 ನ ಅನಿಲದ ಅಧಿಕ ಸಾಂದ್ರತೆಯನ್ನು ಹೊಂದಿದೆ. ಭೂಮಿಯ ಮೇಲೆ ಸುಮಾರು ೧೦ ಕಿ.ಮೀ ನಿಂದ ೪೦ ಕಿ.ಮೀ.ರ ವರೆಗೆ ವ್ಯಾಪಿಸಲ್ಪಟ್ಟಿರುವ ಈ ಪ್ರದೇಶವು ಸೂರ್ಯನಿಂದ ಬಿಡುಗಡೆಯಾಗುವ ನೇರಳಾತೀತ ವಿಕಿರಣಗಳನ್ನು ಹೀರಿಕೊಂಡು ಭೂಮಿಗೆ ಅವುಗಳು ತಲಪುವುದನ್ನು ತಡೆಗಟ್ಟುತ್ತವೆ. ಓಝೋನ್ ಪದರ ಹಾಗೂ ಅದಕ್ಕೆ ಆಗಿರುವ ಅನಾಹುತದ ಬಗ್ಗೆ ಜನರಲ್ಲಿ ಅರಿವಿಲ್ಲ. ಕೈಗಾರಿಕೋದ್ಯಮ, ಕಾರ್ಖಾನೆಗಳು ಹೆಚ್ಚುತ್ತಲೇ ಇವೆ. ಮತ್ತೊಂದೆಡೆ ಗೃಹೋಪಯೋಗಿ, ದಿನಬಳಕೆ ವಸ್ತುಗಳಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳು ಮತ್ತು ಪ್ರಮುಖವಾಗಿ ರೆಫ್ರೀಜರೇಟರ್ ಮತ್ತು ಏರ್ ಕಂಡೀಶನರ್‍ಗಳಲ್ಲಿ ಉಪಯೋಗದಿಂದ ಬಿಡುಗಡೆಯಾಗುವ ಕ್ಲೋರೋ ಫ್ಲೋರೋ ಕಾರ್ಬನ್ ಅನಿಲ ಓಝೋನ್ ಪದರಕ್ಕೆ ರಂಧ್ರ ಉಂಟು ಮಾಡುತ್ತಿದೆ. ಭೂಮಿಯ ಓಝೋನ್ ಪದರವೂ ಸೂರ್ಯನಿಂದ ಬರುವ ಕಾಸ್ಮಿಕ್ ಕಿರಣಗಳನ್ನು ಶೋಧಿಸಿ, ವಾತಾವರಣವನ್ನು ಶುದ್ಧವಾಗಿರಿಸಿದೆ. ಆದರೆ ಹೆಚ್ಚಿನ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ವಾತಾವರಣಕ್ಕೆ ಬಿಟ್ಟು ವಾಯುಮಂಡಲವನ್ನು ಮಲಿನಗೊಳಿಸುತ್ತಿದ್ದೇವೆ. ಸಕಲ ಜೀವರಾಶಿಗಳ ರಕ್ಷಾ ಕವಚ ಓಝೋನ್ ವಲಯ ಆಗಿದ್ದು, ಅದನ್ನು ಕಾಪಾಡಿಕೊಳ್ಳುವುದು ಮನುಷ್ಯನ ಆದ್ಯ ಕರ್ತವ್ಯವಾಗಿರುತ್ತದೆ. ಮನುಷ್ಯನ ಅಟ್ಟಹಾಸಕ್ಕೆ ಬಲಿಯಾದ ವಸ್ತು-ವಿಶೇಷಗಳ ಪಟ್ಟಿಯಲ್ಲಿ ಓಝೋನ್ ಪದರವು ಒಂದು. ಅದಿಲ್ಲದಿದ್ದರೆ ಭೂಮಿಯ ಜೀವಜಂತುಗಳು ಸೂರ್ಯನ ನೇರಳಾತೀತ ಕಿರಣಗಳ ನೇರ ಸ್ಪರ್ಶಕ್ಕೆ ಸಿಕ್ಕಿ ಕ್ಯಾನ್ಸರ್‌ನಂತಹ ಮಾರಕ ರೋಗಳಿಗೆ ಸಿಲುಕುತ್ತಿದ್ದವು ಎಂಬ ಆತಂಕವಿದೆ[೨].
ಬಾಹ್ಯ ಸಂಪರ್ಕ
[ಬದಲಾಯಿಸಿ]- ನಾಸಾ ಜಾಲತಾಣದಲ್ಲಿ ಓಝೋನ್ ಬಗ್ಗೆ Archived 2021-05-02 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ Lynch, David K.; Livingston, William Charles (2001). Color and Light in Nature (2nd ed.). Cambridge, UK: Cambridge University Press. p. 231. ISBN 978-0-521-77504-5. Retrieved 12 October 2013. "Limits of the eye's overall range of sensitivity extends from about 310 to 1050 nanometers"
- ↑ ಕ್ಯಾಂಪುಸೆನ್ KA, ಹೊಸ್ಕಿನ್WJ, Eds.ಪಜ್ದುರ್ ಆರ, ವ್ಯಾಗಮನ್ LD, Cancer Management: A Multidisciplinary Approach . 11th . ಕ್ಯಾನ್ಸರ್ ಮ್ಯಾನೇಜ್ ಮೆಂಟ: ಎ ಮಲ್ಟಿಡಿಸ್ಸಿಪ್ಲಿನರಿ ಅಪ್ರೊಚ 11 ಸಂ 2009.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |