ಒಂಟೆ (ಚದುರಂಗ)
ಗೋಚರ
ಒಂಟೆ ಚದುರಂಗದಲ್ಲಿ ಉಪಯೋಗಗೊಳ್ಳುವ ಕಾಯಿಗಳಲ್ಲಿ ಒಂದು.
ಅಂತರರಾಷ್ಟ್ರೀಯ ಮಟ್ಟದಲ್ಲಿನ ಪಂದ್ಯಾವಳಿಗಳಲ್ಲಿ ಒಂಟೆಯನ್ನು ಬಿಷಪ್ ಎಂದು ಕರೆಯಲಾಗುತ್ತದೆ.
ಇದು ತನ್ನ ಚೌಕದ(ಮನೆಯ) ಸುತ್ತಲಿನ ನಾಲ್ಕು ದಿಕ್ಕುಗಳಲ್ಲಿ(ಈಶಾನ್ಯ, ವಾಯುವ್ಯ, ನೈರುತ್ಯ, ಆಗ್ನೇಯ) ನೇರ ರೇಖೆಗಳಲ್ಲಿ, ತನ್ನ ಬಣ್ಣದ ಮನೆಗಳ ಮೂಲಕ, ಚಲಿಸುತ್ತದೆ.
ಬಿಳಿ ಮನೆಯಲ್ಲಿನ ಒಂಟೆ ಯಾವುದೇ ಸಂದರ್ಭದಲ್ಲಿ ಕಪ್ಪು ಮನೆಯ ಒಳಗೆ ಪ್ರವೇಶಿಸುವಂತಿಲ್ಲ.
ಇದೇ ರೀತಿ, ಕಪ್ಪು ಮನೆಯಲ್ಲಿನ ಒಂಟೆ ಯಾವುದೇ ಸಂದರ್ಭದಲ್ಲಿ ಬಿಳಿಯ ಮನೆಯ ಒಳಗೆ ಹೋಗುವಂತಿಲ್ಲ.